Thursday, January 1, 2026

ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ

 ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಹಾಗೂ ಕಂಪಾನಿಯೋ ಇವರ ಸಹಯೋಗದೊಂದಿಗೆ  "ಉಚಿತ ಫುಟ್ ಪಲ್ಸ್ ಥೆರಪಿ " ಶಿಬಿರವನ್ನು ದೇವಾಲಯ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ರಕ್ತ ಪರಿಚಲನೆ, ಮಾಂಸಖಂಡಗಳ ಸೆಳೆತ, ಮತ್ತು ನರಗಳ ಯಾವುದೇ ಸರಳ ಮತ್ತು ದೀರ್ಘ ಕಾಲದ ಸಮಸ್ಯೆಗಳಿಗೆ ಔಷಧ ರಹಿತ ಹಾಗೂ ಅಡ್ಡ ಪರಿಣಾಮ ಇಲ್ಲದೆ ಚಿಕತ್ಸೆ ಸಲಹೆಗಳನ್ನು ನೀಡಲಾಗುವುದು.

ಶಿಬಿರವು ದಿನಾಂಕ 03-01-2026 ರಿಂದ 12-01-2026 ರವರೆಗೆ, ಬೆಳಗ್ಗೆ 9.30 ರಿಂದ ಸಂಜೆ 05:00 ಗಂಟೆಯ ತನಕ ನಡೆಯುತ್ತದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಪ್ರಕಟಣೆ ತಿಳಿಸಿದೆ.

ಆಸಕ್ತರು ವಿವರಗಳಿಗೆ ಮೇಲಿನ ಚಿತ್ರ ಕ್ಲಿಕ್‌ ಮಾಡಿನೋಡಬಹುದು ಅಥವಾ ಕಾರ್ತಿಕ್‌  (ಮೊಬೈಲ್‌ ನಂಬರ್‌ 9901612625) ಅವರನ್ನು ಸಂಪರ್ಕಿಸಬಹುದು.

No comments:

Advertisement