ಶರನ್ನವರಾತ್ರಿ ೨೦೨೬: ಉತ್ಸವದ ಮೊದಲ ದಿನ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ
ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ
ಮೊದಲ ದಿನವಾದ ಭಾನುವಾರ (೧೧ ಅಕ್ಟೋಬರ್ ೨೦೨೬) ವೆಂಕಟೇಶ್ವರ ಸ್ವಾಮಿಗೆ ಅರಿಶಿನ ಅಲಂಕಾರ ಮಾಡಲಾಯಿತು.
ಶ್ರೀ ಕೆ.ಎಂ. ನಾಗರಾಜ್, ಶ್ರೀಮತಿ ಶಕುಂತಲಾ ಮತ್ತು ಕುಟುಂಬದವರು
ಅಲಂಕಾರ ಸೇವೆಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ.





No comments:
Post a Comment