Showing posts sorted by relevance for query ಸೂರ್ಯ. Sort by date Show all posts
Showing posts sorted by relevance for query ಸೂರ್ಯ. Sort by date Show all posts

Saturday, February 16, 2008

Surya Namaskaa 'Yajna' for health !

The Sun , personification of energy and vitality was made the source of inspiration by our Rishis and thus the concept of Surya Namaskara was born. Reported benefits of Surya Namaskara are immense like loosening spine, relief from backache and muscular tension, correcting the bad posture and maintaining Balance. It also helps blood circulation and digestion which in turn improves quality of sleep. Satsanga Foundation of Kalyananagar, Bangalore is trying to popularize it by organizing Mass Surya Namaskara programmes.

ಸೂರ್ಯ ನಮಸ್ಕಾರ 'ಯಜ್ಞ'...!

ಕಲ್ಯಾಣ ನಗರದ ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಫೆಬ್ರುವರಿ 17ರ ಭಾನುವಾರ ಮುಂಜಾನೆ 6.30 ಗಂಟೆಗೆ 'ನೂರೆಂಟು ಸೂರ್ಯ ನಮಸ್ಕಾರ'ಕ್ಕಾಗಿ ನೂರಾರು ಮಂದಿ ಸಜ್ಜಾಗುತ್ತಿದ್ದಾರೆ. ಇದು ಆರೋಗ್ಯವೃದ್ಧಿಗಾಗಿ. ನೀವೂ ಪಾಲ್ಗೊಳ್ಳಬಹುದು.

ನೆತ್ರಕೆರೆ ಉದಯಶಂಕರ

ಬಸ್ಸಿನಲ್ಲಿ ಹೋದರೂ ಅಷ್ಟೇ, ಸ್ಕೂಟರ್ - ಬೈಕಿನಲ್ಲಿ ಹೋದರೂ ಅಷ್ಟೆ. ಗಮ್ಯ ಮುಟ್ಟುವಷ್ಟರಲ್ಲಿ ಸೊಂಟನೋವು, ಸುಸ್ತು. ಸಾಕಪ್ಪಾ ಸಾಕು ಎಂಬ ಅನುಭವ. ಹದಗೆಟ್ಟ ರಸ್ತೆ, ಟ್ರಾಫಿಕ್ ಜಾಮ್, ಧೂಳು, ಹೊಗೆ- ನಿಮ್ಮನ್ನು ಇಂತಹ ಪರಿಸ್ಥಿತಿಗೆ ತಂದು ಬಿಡುತ್ತದೆ.

ಕೈತುಂಬ ಸಂಬಳ ತರುವ ಐಟಿ, ಬಿಟಿ ಉದ್ಯೋಗವಾದರೂ ಅಷ್ಟೆ. ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಿ ಎದ್ದು ಬರುತ್ತಿದ್ದಂತೆಯೇ ಬೆನ್ನು ನೋವು- ಭುಜ ನೋವು!

ಕೆಲಸ ಮುಗಿಸಿ ಬಂದರೂ ಸುಸ್ತು, ರಸ್ತೆಯಲ್ಲಿ ಸಂಚರಿಸಿ ಬಂದರೂ ಸುಸ್ತು. ಬೆನ್ನುನೋವು, ಭುಜ ನೋವು ಜೊತೆಗೆ ಅಸ್ತಮಾ, ರಕ್ತದೊತ್ತಡದಂತಹ ತೊಂದರೆಗಳ ಉಪಟಳ.

ನಮ್ಮ ಜೀವನ ವಿಧಾನ, ಫಾಸ್ಟ್ ಫುಡ್ ಸಂಸ್ಕೃತಿಗಳಿಂದಲೂ ಹಲವಾರು ಬಗೆಯ ರೋಗಗಳಿಗೆ ಆಹ್ವಾನ..!

ಹಾಗೆಂದು ಇವೆಲ್ಲವುಗಳನ್ನು ಬಿಟ್ಟು ಬದುಕುವ ಹಾಗೂ ಇಲ್ಲ. ಇವುಗಳಿಗೆ ಪರಿಹಾರವಾದರೂ ಏನು?

ನೆತ್ತಿಯನ್ನು ನಿತ್ಯ ಸುಡುತ್ತಾನಲ್ಲ ಸೂರ್ಯ - ಅವನೇ ಪರಿಹಾರ ಎನ್ನುತ್ತದೆ ಬೆಂಗಳೂರು ಎಚ್.ಬಿ.ಆರ್. ಬಡಾವಣೆಯ ಸತ್ಸಂಗ ಫೌಂಡೇಷನ್. ಆ ಸೂರ್ಯನಿಗೆ ನಿತ್ಯ ನಮಸ್ಕಾರ ಮಾಡಿ- ನಿಮ್ಮ ಹತ್ತಾರು ರೋಗ, ಸಮಸ್ಯೆಗಳಿಗೆ ಪರಿಹಾರ ತಾನಾಗಿಯೇ ಲಭಿಸುತ್ತದೆ ಎಂಬುದು ಫೌಂಡೇಷನ್ ಭರವಸೆ.

ಅದಕ್ಕಾಗಿಯೇ ಸತ್ಸಂಗ ಫೌಂಡೇಷನ್ ಪ್ರತಿವರ್ಷವೂ 'ಸೂರ್ಯ ನಮಸ್ಕಾರ ಶಿಬಿರ'ವನ್ನು ಸಂಘಟಿಸುತ್ತಿದೆ. ಈ ವರ್ಷವೂ ಫೆಬ್ರುವರಿ 17ರ ಭಾನುವಾರ ಮೂರನೇ ವರ್ಷದ 'ಸೂರ್ಯ ನಮಸ್ಕಾರ- ಸೂರ್ಯ ಯಜ್ಞ' ಶಿಬಿರ ನಡೆಯಲಿದೆ ಕಲ್ಯಾಣ ನಗರದ ಎಚ್ಆರ್ಬಿಆರ್ ಬಡಾವಣೆಯ ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ.

'ಸೂರ್ಯ ನಮಸ್ಕಾರ' ಅತ್ಯಂತ ಸರಳವಾದ ವ್ಯಾಯಾಮ. ಒಟ್ಟು ಹನ್ನೆರಡು ಸರಳ ಭಂಗಿಗಳಲ್ಲಿ ಈ ನಮಸ್ಕಾರ ಕ್ರಿಯೆಯನ್ನು ಮಾಡಲಾಗುತ್ತದೆ. ವಾಸ್ತವವಾಗಿ ಇರುವುದು ಏಳು ಭಂಗಿಗಳು ಮಾತ್ರ. ಉಳಿದ ಐದು ಭಂಗಿಗಳು ಮೊದಲ ಐದು ಭಂಗಿಗಳ ಪುನರಾವರ್ತನೆ ಅಷ್ಟೆ. ಒಂದು ನಮಸ್ಕಾರದಲ್ಲಿ ಹಲವಾರು ಯೋಗಾಸನಗಳೂ ಸೇರಿರುವುದು ಸೂರ್ಯ ನಮಸ್ಕಾರದ ವಿಶೇಷ.

ಸೂರ್ಯ ನಮಸ್ಕಾರ ಮಾಡಲು ಯಾವ ಕಷ್ಟವೂ ಇಲ್ಲ, ಇದು ಮಹಾನ್ ಕಸರತ್ತೂ ಅಲ್ಲ. ಇದನ್ನು ಮಾಡಲು ಹೆಚ್ಚಿನ ಜಾಗದ ಅಗತ್ಯವೂ ಇಲ್ಲ.

ಸೂರ್ಯನನ್ನು ಆರಾಧಿಸುವ ಮಂತ್ರಗಳ ಸಹಿತವಾಗಿ ಈ ಸೂರ್ಯ ನಮಸ್ಕಾರ ಮಾಡುವುದರಿಂದ ಆಗುವ ಲಾಭಗಳು ಮಾತ್ರ ಅಪಾರ. ಬೆನ್ನು ಹುರಿಯ ಸಡಿಲಾಗುವಿಕೆ, ಬೆನ್ನು ನೋವು ನಿವಾರಣೆ, ಮಾಂಸಖಂಡಗಳ ಸಡಿಲಾಗುವಿಕೆ, ಮಾನಸಿಕ ತಳಮಳ, ದೇಹದ ಸಂತುಲನೆ ಇತ್ಯಾದಿ ಲಾಭ ಲಭ್ಯ. ರಕ್ತ ಪರಿಚಲನೆ, ಜೀರ್ಣ ಪದ್ಧತಿ, ರಾತ್ರಿಯ ನಿದ್ದೆ ಉತ್ತಮಗೊಳ್ಳುತ್ತದೆ. ಹೀಗಾಗಿ ಸರ್ವತೋಮುಖ ಆರೋಗ್ಯ ವೃದ್ಧಿ.

ನಮ್ಮ ಪ್ರಸ್ತುತ ವೈದ್ಯಕೀಯ ವಿಧಾನದಲ್ಲಿ ರೋಗಬಂದ ಮೇಲೆ ನಿರ್ದಿಷ್ಟ ರೋಗ ಪತ್ತೆ ಹಚ್ಚಿ ಗುಣಪಡಿಸುವ ಔಷಧಿ ನೀಡುತ್ತೇವೆ. ಆದರೆ ನಮ್ಮ ಋಷಿಗಳು ಪ್ರಕೃತಿಯ ಮೇಲೆ ವಿಶ್ವಾಸದಿಂದ, ಸೂರ್ಯನನ್ನೇ ಆಧಾರವಾಗಿ ಇಟ್ಟುಕೊಂಡು ಆರೋಗ್ಯ ಪಡೆಯುವ ಹಲವಾರು ವಿಧಾನಗಳನ್ನು ಕಂಡುಕೊಂಡಿದ್ದಾರೆ. ಸೂರ್ಯ ನಮಸ್ಕಾರ ಅವುಗಳಲ್ಲಿ ಒಂದು.

ರೋಗ ಬಂದ ಮೇಲೆ ಔಷಧಿಗಾಗಿ ಓಡುವ ಬದಲು ನಿತ್ಯ ಸೂರ್ಯ ನಮಸ್ಕಾರ ಮಾಡಿ ಅನಾರೋಗ್ಯ ಬರದಂತೆ ತಡೆಗಟ್ಟುವುದು ಉತ್ತಮ ಎನ್ನುತ್ತದೆ ಸತ್ಸಂಗ ಫೌಂಡೇಷನ್.

ಈ ಹಿನ್ನೆಲೆಯಲ್ಲಿಯೇ ಸೂರ್ಯ ನಮಸ್ಕಾರವನ್ನು ಜನಪ್ರಿಯಗೊಳಿಸಲು '108 ಸೂರ್ಯ ನಮಸ್ಕಾರ' ಮಾಡುವ 'ಸೂರ್ಯ ನಮಸ್ಕಾರ- ಸೂರ್ಯ ಯಜ್ಞ' ಕಾರ್ಯಕ್ರಮ ಸಂಘಟಿಸುತ್ತಿದೆ.

ಹತ್ತು ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಸೂರ್ಯ ನಮಸ್ಕಾರ ಯಜ್ಞದಲ್ಲಿ ಪಾಲ್ಗೊಳ್ಳಬಹುದು. ರಕ್ತದ ಒತ್ತಡ, ಮಧುಮೇಹ, ಹೃದಯ ತೊಂದರೆ ಮತ್ತು ಬೆನ್ನು ನೋವು ಇರುವವರು ವೈದ್ಯರ ಸಲಹೆ ಪಡೆದು ಪಾಲ್ಗೊಳ್ಳಬಹುದು. ಪಾಲ್ಗೊಳ್ಳುವ ಎಲ್ಲರೂ ಜಮಖಾನ ತರಬೇಕು, ಪುರುಷರು ಬಿಳಿಯ ಪೈಜಾಮ, ಅಂಗಿ, ಮಹಿಳೆಯರು ಬಿಳಿಯ ಚೂಡಿದಾರ್ ಧರಿಸಬೇಕು. ಉಪಾಹಾರದ ಚಿಂತೆ ಬೇಡ - ಅದನ್ನು ಫೌಂಡೇಷನ್ ಒದಗಿಸುತ್ತದೆ. ಶುಲ್ಕ: ಕೇವಲ 20 ರೂಪಾಯಿ.

ಬೆಳಗ್ಗೆ 6.30ಕ್ಕೆ ಸೂರ್ಯ ನಮಸ್ಕಾರ ಆರಂಭವಾಗುತ್ತದೆ. ಜೊತೆಗೆ ಸೂರ್ಯ ಯಜ್ಞ, ಶತ ನಾಮಾವಳಿಯೂ ಇರುತ್ತದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವ ಆಸಕ್ತರಿಗೆ ನಾಗವಾರದ ಆಯುಶ್ರೀ ಆಯುರ್ವೇದ ಮತ್ತು ಯೋಗಕೇಂದ್ರ, ಎಚ್ ಬಿ ಆರ್ ಬಡಾವಣೆಯ ಆಯುರ್ವೇದ ಕುಟೀರ, ಕಾಚರಕನಹಳ್ಳಿಯ ಶ್ರೀರಾಮ ಯೋಗ ಕೇಂದ್ರಗಳಲ್ಲಿ ಪ್ರತಿದಿನ ಮುಂಜಾನೆ 6.30ರಿಂದ 7.30ರವರೆಗೆ ನಿತ್ಯ ತರಬೇತಿ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇಲ್ಲಿ ಕಲಿತ ಸೂರ್ಯ ನಮಸ್ಕಾರವನ್ನು ಮುಂದೆ ಪ್ರತಿದಿನ ಮನೆಯಲ್ಲೇ ಮಾಡಬಹುದು.

ನೋಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ಸಂಘಟಕರಾದ ಡಾ. ಶ್ಯಾಮ ಪ್ರಸಾದ್ (25443636), ಡಾ. ರಾಜಾರಾಮ ಪ್ರಸಾದ್ (9448429885), ಸೀತಾರಾಮ (9945188081), ಸೌಮ್ಯ (9880649762), ಜಗನ್ನಾಥ (25448633), ಕೋದಂಡರಾಮ್ (9845206895) ಇವರನ್ನು ಸಂಪರ್ಕಿಸಬಹುದು.

(ಕೃಪೆ: ಪ್ರಜಾವಾಣಿ)

Saturday, January 31, 2009

ಆರೋಗ್ಯಕ್ಕಾಗಿ ಸೂರ್ಯ ನಮಸ್ಕಾರಕ್ಕೆ ಬನ್ನಿ...!

ಆರೋಗ್ಯಕ್ಕಾಗಿ ಸೂರ್ಯ ನಮಸ್ಕಾರ



ಮಂತ್ರ ಸಹಿತವಾಗಿ ಸೂರ್ಯನುದಯಿಸುವ ಹೊತ್ತಿನಲ್ಲಿ 108 ಬಾರಿ ಸಹಸ್ರಾರು ಮಂದಿ ಒಟ್ಟಿಗೆ ಸಾಮೂಹಿಕವಾಗಿ ಮಾಡುವ ಈ 'ಭಾಸ್ಕರ ನಮನ' ನೋಡುಗರ ಕಣ್ಣಿಗೂ ಒಂದು ಹಬ್ಬ. 
 
ನೆತ್ರಕೆರೆ ಉದಯಶಂಕರ

ಒಂದು ವರ್ಷದ ಹಿಂದೆ ನವದೆಹಲಿಯ ವೈದ್ಯರ ತಂಡವೊಂದು ಚಳಿಗಾಲದಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು ಎಂಬ ಸಂಗತಿಯನ್ನು ಬಹಿರಂಗಪಡಿಸಿತು. ಈ ವೈದ್ಯರ ತಂಡದ ಅಧ್ಯಯನದ ಪ್ರಕಾರ ಡಿಸೆಂಬರ್ - ಜನವರಿ ತಿಂಗಳ ಚಳಿ
ಗಾಲ ಹೃದ್ರೋಗಿಗಳಿಗೆ ತುಂಬಾ ಅಪಾಯಕಾರಿಯಂತೆ. ರಕ್ತನಾಳಗಳು  ದೇಹದ ಬಿಸಿ ಕಾಯ್ದುಕೊಳ್ಳಲು ಅಸಮರ್ಥವಾಗುವುದರಿಂದ ಈ ಅವಧಿಯಲ್ಲಿ ಹೃದ್ರೋಗ ಪ್ರಮಾಣ ಹೆಚ್ಚು. ದೇಹದ ಬಿಸಿ ಕಾಯ್ದುಕೊಳ್ಳಲು ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯದ ಮೇಲಿನ ಹೊರೆ ಹೆಚ್ಚಿ ಅಸ್ತಮಾ,  ಫ್ಲೂನಂತಹ ಕಾಯ್ದೆಗಳು ಹೆಚ್ಚುತ್ತವೆ ಎಂಬುದು ಅವರ ವಿಶ್ಲೇಷಣೆ.

ಈ ಋತುವಿನಲ್ಲಿನ ಸದಾ ಮೋಡ ಕವಿದ ವಾತಾವರಣ ಹಾಗೂ ಸೂರ್ಯನ ಬಿಸಿಲು ದೇಹಕ್ಕೆ ಬೀಳದೇ ಇರುವುದು ಕೂಡಾ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಧ್ಯಾಹ್ನದ ವೇಳೆಗಾದರೂ ಬಿಸಿಲಿಗೆ ಮೈ ಒಡ್ಡುವುದರಿಂದ ಖಿನ್ನತೆಯಂತಹ ಸಮಸ್ಯೆಯಿಂದ ಪಾರಾಗಬಹುದು ಎಂಬುದು ಅವರ ಸಲಹೆ.

ಇದು ಹೊಸ ಸಂಶೋಧನೆ ಏನಲ್ಲ. 19ನೆಯ ಶತಮಾನದಲ್ಲೇ  ಡಾ. ನೀಲ್ಸ್ ಫಿನ್ಸನ್ ಎಂಬ ವ್ಯಕ್ತಿ ತನ್ನ ವಿದ್ಯಾರ್ಥಿದೆಸೆಯಿಂದಲೇ ಸೂರ್ಯನ ಬೆಳಕಿನಲ್ಲಿ ಇರುವ ಶಕ್ತಿ ಕ್ಷಯರೋಗದ ಕ್ರಿಮಿಗಳನ್ನು ನಾಶಮಾಡಬಲ್ಲುದು ಎಂದು ಪ್ರಾಯೋಗಿಕವಾಗಿ ತೋರಿಸಿ ನೊಬೆಲ್ ಪ್ರಶಸ್ತಿಯನ್ನೇ ಪಡೆದಿದ್ದರು.

ವಿಜ್ಞಾನಿಗಳು ವಿವಿಧ ಅಧ್ಯಯನಗಳನ್ನು ಮಾಡಿ ಸೂರ್ಯನ ಬಿಸಿಲಿಗೆ ಎಂತೆಂತಹ ಶಕ್ತಿ ಉಂಟು ಎಂಬ ದೊಡ್ಡ ಪಟ್ಟಿಯನ್ನೇ ಮಾಡಿಟ್ಟಿದ್ದಾರೆ. ಅದರ ಪ್ರಕಾರ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ 'ಡಿ'ಯನ್ನು ಚರ್ಮದಲ್ಲಿ ತಯಾ
ರಿಸುವ ಕೆಲಸವನ್ನು ಮಾಡುವುದು ಸೂರ್ಯನ ಬೆಳಕೇ ಹೊರತು ಬೇರಾವುದೂ ಅಲ್ಲ.

ಎಲುಬಿನ ಕಾಯಿಲೆಗಳಾದ ರಿಕೆಟ್ಸ್, ಎಲುಬಿನ ನಿತ್ರಾಣ, ಸಕ್ಕರೆ ಸಮಸ್ಯೆಗಳನ್ನು ಸೂರ್ಯನ ಬಿಸಿಲು ನಿವಾರಿಸುತ್ತದೆ. ದೂಳಿನಲ್ಲಿರುವ ರೋಗಾಣುಗಳನ್ನು ಕೊಲ್ಲುತ್ತದೆ. ದೇಹದಲ್ಲಿ ಬಿಳಿ ಹಾಗೂ ಕೆಂಪು 
ರಕ್ತ ಕಣಗಳು ಹುಟ್ಟುವಂತೆ ಮಾಡಿ ಹಲವು ಬಗೆಯ ಕ್ಯಾನ್ಸರ್ ನಿವಾರಣೆಗೆ ಸಹಕರಿಸುತ್ತದೆ, ರಕ್ತದ ಒತ್ತಡ ನಿವಾರಿಸುತ್ತದೆ, 
ಗಾಯಗಳನ್ನು ಬೇಗನೆ ಗುಣಗೊಳಿಸುತ್ತದೆ...

ಹೀಗೆ ಸೂರ್ಯನ ಬೆಳಕಿನ ಉಪಯೋಗದ ಪಟ್ಟಿ ಒಂದೆರಡಲ್ಲ, ಬೇಗನೆ ಮುಗಿಯಲಾಗದಂತಹುದು. ಸೂರ್ಯ ಉದಯಿಸದೇ ಇದ್ದರೆ ಜಗತ್ತಿನ ಯಾವ ಜೀವಿಯಾಗಲೀ, ಗಿಡಮರಗಳಾಗಲೀ ತಮ್ಮ ಚಟುವಟಿಕೆಗಳನ್ನು ಮಾಡುವಂತೆಯೇ ಇಲ್ಲ. ಭೂಮಿಯ ಸಕಲ ಚೈತನ್ಯಕ್ಕೆ ಈ ಸೂರ್ಯನೇ ಮೂಲ.


ಇದನ್ನು ಕಂಡುಕೊಂಡೇ ನಮ್ಮ ಹಿರಿಯರು ಮುಂಜಾನೆಯ ವೇಳೆಯಲ್ಲಿ ಸೂರ್ಯನಿಗೆ ಅಭಿಮುಖವಾಗಿ ನಿಂತು ಅರ್ಘ್ಯ ಕೊಡುವ ಹಾಗೂ ಸುಮಾರು 13 ಬಗೆಯ ಯೋಗಾಸನಗಳನ್ನು ಒಳಗೊಂಡ ಸೂರ್ಯ ನಮಸ್ಕಾರವನ್ನು ಮುಂಜಾನೆ ಹಾಗೂ ಸಂಜೆ ಸೂರ್ಯೋದಯ, ಸೂರ್ಯಾಸ್ತದ ವೇಳೆಯಲ್ಲಿ ಮಾಡುವುದನ್ನು ರೂಢಿ ಮಾಡಿಕೊಂಡರು.

ಇದರಿಂದ ದೇಹ- ಮನಸ್ಸುಗಳಿಗೂ ಉಲ್ಲಾಸ, ಬಡವರ ಆರೋಗ್ಯಕ್ಕೂ ಒಂದು ರಕ್ಷಾ ಕವಚ! ಈ ವೇಳೆಯ ಎಳೆ ಬಿಸಿಲಂತೂ ಅತ್ಯಂತ ಅದ್ಭುತವಾದ ಶಕ್ತಿಯನ್ನು ಪಡೆದಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದರು.

ಬೆಂಗಳೂರಿನ ಕಲ್ಯಾಣನಗರದ ಎಚ್.ಬಿ.ಆರ್. ಬಡಾವಣೆಯ ಸತ್ಸಂಗ ಫೌಂಡೇಷನ್ ಆರೋಗ್ಯ ರಕ್ಷಣೆ ಹಾಗೂ ಲೋಕಶಾಂತಿಗಾಗಿ ಸೂರ್ಯ ನಮಸ್ಕಾರವನ್ನು ಜನಪ್ರಿಯಗೊಳಿಸುವ ಕೆಲಸವನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದು, ಸಾಮೂಹಿಕ ಸೂರ್ಯ ನಮಸ್ಕಾರ ಮತ್ತು ಸೂರ್ಯ ಯಜ್ಞ ಅವುಗಳಲ್ಲಿ ಒಂದು.

ಪ್ರತಿವರ್ಷ ರಥ ಸಪ್ತಮಿಯ ಸಂದರ್ಭದಲ್ಲಿ ಈ ಸೂರ್ಯ ನಮಸ್ಕಾರ- ಸೂರ್ಯ ಯಜ್ಞವನ್ನು ಸತ್ಸಂಗ ಫೌಂಡೇಷನ್ ಸಂಘಟಿಸುತ್ತದೆ. ಮಂತ್ರ ಸಹಿತವಾಗಿ ಸೂರ್ಯನುದಯಿಸುವ ಹೊತ್ತಿನ
ಲ್ಲಿ 108 ಬಾರಿ ಸಹಸ್ರಾರು ಮಂದಿ ಒಟ್ಟಿಗೆ ಸಾಮೂಹಿಕವಾಗಿ ಮಾಡುವ ಈ 'ಭಾಸ್ಕರ ನಮನ' ನೋಡುಗರ ಕಣ್ಣಿಗೂ ಒಂದು ಹಬ್ಬ. ಹತ್ತು ವರ್ಷ ಮೇಲ್ಪಟ್ಟ ಎಲ್ಲ ಪುರುಷರು, ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

ಈ ವರ್ಷ ಫೆಬ್ರುವರಿ 1ರ ಭಾನುವಾರ ಮುಂಜಾನೆ 6.30 ಗಂಟೆಗೆ ಕಲ್ಯಾಣ ನಗರ ಎಚ್.ಬಿ.ಆರ್. ಬಡಾವಣೆಯ ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸೂರ್ಯ ನಮಸ್ಕಾರ- ಸೂರ್ಯ ಯಜ್ಞ ನಡೆಯುತ್ತದೆ.

ಆಸಕ್ತರು ಡಾ. ಶ್ಯಾಮ್ ಪ್ರಸಾದ್ (ಫೋನ್: 25443636), ನಾಗಮಣಿ (9449853341), ಸೀತಾರಾಮ (9945188081),  ಸೌಮ್ಯ (9902326728) ಅವರನ್ನು ಸಂಪರ್ಕಿಸಬಹುದು 



Sunday, October 9, 2022

ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಮೊಧೇರಾ (ಗುಜರಾತ್): ಸೂರ್ಯ ದೇಗುಲದ ಮೂಲಕ ವಿಶ್ವ ಪ್ರಸಿದ್ಧವಾಗಿರುವ ಗುಜರಾತಿನ ಮೊಧೇರಾ ಈಗ ದೇಶದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈದಿನ 2022 ಅಕ್ಟೋಬರ್ 9 ರ ಭಾನುವಾರ ಮೊಧೇರಾವನ್ನು ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲ ಬ್ಯಾಟರಿ ಇಂಧನ ದಾಸ್ತಾನು ವ್ಯವಸ್ಥೆಯ (ಬಿಇಎಸ್ಎಸ್) ಬೆಂಬಲ ಹೊಂದಿದ ʼದೇಶದ ಪ್ರಪ್ರಥಮ  ಸೌರಶಕ್ತಿ ಚಾಲಿತ ಗ್ರಾಮʼ ಎಂದು ಘೋಷಿಸಿದರು.

ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಸಮಗ್ರ ಸೌರಶಕ್ತಿಯನ್ನು ಪ್ರಾರಂಭಿಸಿದೆ. ಸೂರ್ಯ ಮಂದಿರದಿಂದ ಕೇವಲ 6 ಕಿಮೀ ದೂರದಲ್ಲಿರುವ ಸುಜನಪುರ, ಮೆಹ್ಸಾನಾದಲ್ಲಿ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಯೊಂದಿಗೆ ಯೋಜನೆ ರೂಪುಗೊಂಡಿದೆ. ಮೊಧೇರಾದಲ್ಲಿ 24×7 ಸೌರಶಕ್ತಿ ಆಧಾರಿತ ವಿದ್ಯುತ್  ಒದಗಿಸುವ ಸಲುವಾಗಿಯೇ ಮೊಧೇರಾ ಸೂರ್ಯ ದೇಗುಲ ಮತ್ತು ಗ್ರಾಮವನ್ನು ಸಂಪೂರ್ಣ ʼಸೌರ ಶಕ್ತಿಮಯʼವಾಗಿ ಮಾಡುವ ಉಪಕ್ರಮ ಕೈಗೊಳ್ಳಲಾಗಿದೆ.

ಇಂಧನ ಯೋಜನೆಯ ಪಯಣ ಹೇಗಿತ್ತು ಗೊತ್ತಾ?

ಯೋಜನೆಯ ಅಭಿವೃದ್ಧಿಗಾಗಿ ಗುಜರಾತ್ ಸರ್ಕಾರವು 12 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡಿತು. ಅದೇ ಸಮಯದಲ್ಲಿ, ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಯೋಜನೆಗೆ 50:50 ಆಧಾರದ ಮೇಲೆ ಎರಡು ಹಂತಗಳಲ್ಲಿ 80.66 ಕೋಟಿ ರೂಪಾಯಿಗಳನ್ನು ಜಂಟಿಯಾಗಿ ಖರ್ಚು ಮಾಡಿದವು. ಅಂದರೆ ಹಂತ-1 ರಲ್ಲಿ 69 ಕೋಟಿ ಮತ್ತು ಹಂತ I. 2 ರಲ್ಲಿ 11.66 ಕೋಟಿ ರೂಪಾಯಿಗಳು. ಅಲ್ಲದೆ, ಮೋಧೇರಾದಲ್ಲಿ 1300 ಮನೆಗಳಿಗೆ ತಲಾ ಒಂದು ಕಿಲೋವ್ಯಾಟ್ ಸಾಮರ್ಥ್ಯದ ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಸೂರ್ಯನ ಬಿಸಿಲಿನ ಶಕ್ತಿಯಿಂದ ವಿದ್ಯುತ್ ಪಡೆಯುತ್ತದೆ. ಈ ಸೌರ ಫಲಕಗಳ ಮೂಲಕ ಹಗಲಿನಲ್ಲಿ ನೇರವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಸೂರ್ಯ ಮುಳುಗಿದ ಬಳಿಕ, ರಾತ್ರಿ ಬಿಇಎಸ್‌ ಎಸ್‌ (ಬ್ಯಾಟರಿ ಎನರ್ಜಿ ಸ್ಟೋರೇಜ್‌ ಸಿಸ್ಟಮ್)‌ ಮೂಲಕ ಮನೆಗಳಿಗೆ ವಿದ್ಯುತ್‌ ಸರಬರಾಜು ಆಗುತ್ತದೆ.

ಯೋಜನೆಯ ವಿಶೇಷತೆ ಏನು?

1. ಮೊಧೇರಾ ಈ ಯೋಜನೆಯ ಮೂಲಕ ಶುದ್ಧ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಭಾರತದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2. ಸೋಲಾರ್ ಆಧಾರಿತ ಅಲ್ಟ್ರಾ-ಆಧುನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳ ಸೌಲಭ್ಯವನ್ನು ಹೊಂದಿರುವ ಮೊದಲ ಆಧುನಿಕ ಗ್ರಾಮ ಎನಿಸಿತು.

3. ಭಾರತದ ಮೊದಲ ಗ್ರಿಡ್ ಸಂಪರ್ಕಿತ MWh ಪ್ರಮಾಣದ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.

4. ಇಲ್ಲಿನ ಸ್ಥಳೀಯ ಜನರ ವಸತಿ ವಿದ್ಯುತ್ ಬಿಲ್ಲಿನಲ್ಲಿ ಶೇ.60ರಿಂದ 100ರಷ್ಟು ಉಳಿತಾಯವಾಗುತ್ತಿದೆ.

ಸೌರಬೆಳಕಿನಿಂದ ಸೂರ್ಯ ದೇಗುಲ ಜಗಮಗ

ವಿಶ್ವಪ್ರಸಿದ್ಧ ಮೊಧೇರಾ ಸೂರ್ಯ ದೇವಾಲಯದಲ್ಲಿ ಸೌರಶಕ್ತಿ ಚಾಲಿತ 3-ಡಿ ಪ್ರೊಜೆಕ್ಷನ್ ಮೂಲಕ ಪ್ರವಾಸಿಗರಿಗೆ ಮೊಧೇರಾದ ಶ್ರೀಮಂತ ಇತಿಹಾಸವನ್ನು ತಿಳಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 3-ಡಿ ಪ್ರೊಜೆಕ್ಷನ್ ಪ್ರತಿದಿನ ಸಂಜೆ 7:00 ರಿಂದ 7:30 ರವರೆಗೆ ನಡೆಯುತ್ತದೆ. ದೇವಾಲಯದ ಸೌಂದರ್ಯವನ್ನು ಹೆಚ್ಚಿಸಲು ಸೌರಶಕ್ತಿ ಚಾಲಿತ ಪರಂಪರಾತ ದೀಪಗಳನ್ನು ಅದರ ಆವರಣದಲ್ಲಿ ಅಳವಡಿಸಲಾಗಿದೆ. ಸಂದರ್ಶಕರು ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ರವರೆಗೆ ಈ ಆಕರ್ಷಕ ಬೆಳಕನ್ನು ಆಸ್ವಾದಿಸಬಹುದು.

ವಸತಿ ವಿದ್ಯುತ್ ಬಿಲ್ ಸೊನ್ನೆ

ಮೊಧೇರಾ ಗ್ರಾಮದ ಸರಪಂಚ್ ಜತನ್‌ಬೆನ್ ಡಿ.ಟ್ಯಾಗೋರ್ ಪ್ರಕಾರ “ಕೇಂದ್ರ-ರಾಜ್ಯ ಯೋಜನೆಯಿಂದ ಗ್ರಾಮೀಣ ಜನರು ಸಂತೋಷಭರಿತರಾಗಿದ್ದಾರೆ. ಈ ಹಿಂದೆ ಗ್ರಾಮಸ್ಥರ ವಿದ್ಯುತ್ ಬಿಲ್ ತಿಂಗಳಿಗೆ ಸುಮಾರು 1000 ರೂಪಾಯಿ ಬರುತ್ತಿತ್ತು. ಈಗ ಅದು ಬಹುತೇಕ ಸೊನ್ನೆಗೆ ಇಳಿದಿದೆ.

ಯಾವುದೇ ವೆಚ್ಚವಿಲ್ಲದೆ ಎಲ್ಲ ಜನರ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಸೌರ ಫಲಕಗಳು ನಮಗೆ ಅಗತ್ಯಕ್ಕಿಂತ ಹೆಚ್ಚಿನ ಶಕ್ತಿಯನ್ನು ಒದಗಿಸಿ ಉಳಿಸಿದಾಗ ಸರ್ಕಾರವು ನಮಗೆ ಹೆಚ್ಚುವರಿ ಹಣವನ್ನು ನೀಡುತ್ತದೆಎನ್ನುತ್ತಾರೆ ಜತನ್‌ ಬೆನ್.

ಮೊಧೇರಾ ಈ ಸೌರ ವಿದ್ಯುತ್ ಯೋಜನೆಯ ಕುರಿತು ಮಾತನಾಡಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸ್ವಚ್ಛ ಮತ್ತು ಹಸಿರು ಇಂಧನವನ್ನು ಸೃಷ್ಟಿಸುವ ಪ್ರಧಾನಿಯವರ ಕನಸಿಗೆ ಗುಜರಾತ್ ಮತ್ತೊಮ್ಮೆ ಮಹತ್ವದ ಕೊಡುಗೆ ನೀಡಿರುವುದು ಸಂತೋಷವಾಗಿದೆ ಎಂದು ಹೇಳಿದರು..

ಇದೇ ವೇಳೆಗೆ, 2030 ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ ಭಾರತದ 50% ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳುವ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಪಟೇಲ್ ಹೇಳಿದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


Thursday, January 29, 2009

ಸೂರ್ಯ ನಮಸ್ಕಾರ ಯಜ್ಞ

ಸೂರ್ಯ ನಮಸ್ಕಾರ ಯಜ್ಞ


ಬೆಂಗಳೂರು: ಬೆಂಗಳೂರು ಕಲ್ಯಾಣನಗರ ಎಚ್ಬಿಆರ್ ಬಡಾವಣೆಯ ಸತ್ಸಂಗ ಫೌಂಡೇಷನ್ ಫೆಬ್ರುವರಿ 1ರ ಭಾನುವಾರ ಬೆಳಗ್ಗೆ 6.30 ಗಂಟೆಗೆ ಬಡಾವಣೆಯ ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮತ್ತು ಸೂರ್ಯ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಆರೋಗ್ಯ ರಕ್ಷಣೆ ಹಾಗೂ ಲೋಕಕಲ್ಯಾಣಕ್ಕಾಗಿ ಸೂರ್ಯೋದಯದ ಹೊತ್ತಿನಲ್ಲಿ 108 ಬಾರಿ ಮಾಡುವ ಈ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪುರುಷರು ಹಾಗೂ ಮಹಿಳೆಯರು ಪಾಲ್ಗೊಳ್ಳಬಹುದು. ಆಸಕ್ತರು ವಿವರಗಳಿಗೆ ಆಸಕ್ತರು ಡಾ. ಶ್ಯಾಮ್ ಪ್ರಸಾದ್ (ಫೋನ್: 25443636), ನಾಗಮಣಿ (9449853341), ಸೀತಾರಾಮ (9945188081), ಸೌಮ್ಯ (9902326728) ಅವರನ್ನು ಸಂಪರ್ಕಿಸಬಹುದು 

Wednesday, November 30, 2022

ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ

ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!

ಇದು ಸುವರ್ಣ ನೋಟ

ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಾನವಾಗುವುದು ಸೂರ್ಯನ ಪ್ರತಿನಿತ್ಯದ ಕಾಯಕ. ಇದರಲ್ಲಿ ವಿಶೇಷವೂ ಬದಲಾವಣೆಯೂ ಇಲ್ಲ.

ಆದರೆ ಕಾಣುವ ಕಣ್ಣುಗಳಿಗೆ ಇದೇ ಸೂರ್ಯ ಹೊಸ ಹೊಸ ರೂಪ ತಾಳುತ್ತಾನೆ.

೨೦೨೨ರ ನವೆಂಬರ್‌ ೨೯ರ ಮಂಗಳವಾರ ಸೂರ್ಯ ಇದೇ ರೀತಿ ತನ್ನ ಮಾರ್ಗದಲ್ಲಿ ಸಾಗಿದ್ದ. ಸಂಜೆಯ ಹೊತ್ತು ಇನ್ನೇನು ಮುಳುಗಬೇಕು. ಅಷ್ಟರಲ್ಲಿ….


ಅಲ್ಲಿಗೆ…. ಅಂದರೆ ಶಕ್ತಿಸೌಧದ ಬಳಿಗೆ ಬಂದದ್ದು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ. ದಿನವೂ ಅದೇ ಮಾರ್ಗದಲ್ಲಿ ಸಾಗಿ ಹೋಗುವ ಸೂರ್ಯ ಸುವರ್ಣರ ಕ್ಯಾಮರಾಕಣ್ಣುಗಳಿಗೆ ಬೇರೆಯೇ ರೀತಿಯಲ್ಲಿ ಕಾಣಿಸಿದ. ಅಷ್ಟೆ ಕೆಲವು ಕ್ಷಣಗಳು ಸುವರ್ಣರ ಕ್ಯಾಮರಾ ಅತ್ತಿಂದಿತ್ತ ಇತ್ತಿಂದತ್ತ ಚಲಿಸಿತು. ಅದರ ಫಲಿತಾಂಶ ಇದು.

ಇಲ್ಲಿ ಒಂದರೆಡು ಚಿತ್ರಗಳನ್ನು ಹಾಕುತ್ತಿದ್ದೇನೆ. ಪೂರ್ತಿ ನೋಡಬೇಕು ಎಂದರೆ ಕೆಳಗಿನ ಫೊಟೋ ಕ್ಲಿಕ್ಲಿಸಿ. ಅಥವಾ ಅದಕ್ಕೂ ಕೆಳಗಿರುವ ವಿಡಿಯೋ ಕ್ಲಿಕ್ಕಿಸಿ

-ನೆತ್ರಕೆರೆ ಉದಯಶಂಕರ  




Friday, February 7, 2020

ರಾಹುಲ್ ’ಬಡಿಗೆ ಏಟು’ ಬೆದರಿಕೆಗೆ ’ಸೂರ್ಯ ನಮಸ್ಕಾರ’ದ ಪ್ರತ್ಯಸ್ತ್ರ

ರಾಹುಲ್  ’ಬಡಿಗೆ ಏಟುಬೆದರಿಕೆಗೆ  ’ಸೂರ್ಯ  ನಮಸ್ಕಾರ ಪ್ರತ್ಯಸ್ತ್ರ ಸಂಸತ್ತಿನಲ್ಲಿ ವಿಪಕ್ಷಗಳನ್ನು ಜಗ್ಗಾಡಿದ  ಪ್ರಧಾನಿ ಮೋದಿ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ  ಬಡಿಗೆ ಏಟುಚಾಟಿಗೆ  ಸೂರ್ಯ ನಮಸ್ಕಾರ ಪ್ರತ್ಯಸ್ತ್ರ ಪ್ರಯೋಗ ಸೇರಿದಂತೆ ಕಾಶ್ಮೀರ, ಆಯೋಧ್ಯಾ, ಪೌರತ್ವ ತಿದ್ದುಪಡಿ ಕಾಯ್ದೆ ಸಹಿತವಾಗಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಉಭಯ ಸದನಗಳಲ್ಲೂ  2020 ಫೆಬ್ರುವರಿ 06ರ ಗುರುವಾರ ವಿರೋಧ ಪಕ್ಷಗಳನ್ನು ಹಿಗ್ಗಾಮುಗ್ಗಾ ಜಗ್ಗಾಡಿದರು.

ರಾಷ್ಟ್ರಪತಿಯವರ ಭಾಷಣಕ್ಕ ವಂದನಾ ನಿರ್ಣಯದ ಮೇಲೆ ಉಭಯ ಸದನಗಳಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಪ್ರಧಾನಿ ಎನ್ಡಿಎ ಸರ್ಕಾರದ ದೃಢನಿರ್ಧಾರವಲ್ಲದೇ ಹೋಗಿದ್ದರೆ ರಾಷ್ಟ್ರವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಲೂ ಇಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.

ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರಿಗೆ ದೇಶದ ಯುವಕರು ಬಡಿಗೆ ಏಟಿನಮೂಲಕ ಮುಂದಿನ ಆರು ತಿಂಗಳಲ್ಲಿದಂಡವಿಧಿಸಲಿದ್ದಾರೆ ಎಂಬುದಾಗಿ ನೀಡಿದ ಎಚ್ಚರಿಕೆಗೆಸೂರ್ ನಮಸ್ಕಾರ ಪ್ರತ್ಯಸ್ತ್ರ ಎಸೆದ ಮೋದಿ, ’ಕಳೆದ ೨೦ ವರ್ಷಗಳಿಂದ ನಾನು ಸಾಕಷ್ಟು ಅನುಭವಿಸಿದ್ದು ನನ್ನ ಬೆನ್ನುದಂಡ-ನಿರೋಧಕ (ದಂಡ-ಪ್ರೂಫ್)’ ಆಗಿದೆ ಎಂದು ಎದಿರೇಟು ನೀಡಿದರು.

ಕಾಂಗ್ರೆಸ್ ನಾಯಕರೊಬ್ಬರು ಯುವಕರು ಮುಂದಿನ ತಿಂಗಳಲ್ಲಿ ಮೋದಿಯವರನ್ನು ಬಡಿಗೆಗಳಿಂದ ಹೊಡೆಯಲಿದ್ದಾರೆ ಎಂಬುದಾಗಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಬಡಿಗೆ ಏಟುಗಳನ್ನು ತಾಳಿಕೊಳ್ಳುವಷ್ಟು ಬೆನ್ನು ಬಲವಾಗಲು ನಾನು ನನ್ನ  ಸೂರ್ಯ ನಮಸ್ಕಾರದ ವೇಗವನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದೇನೆಎಂದು ಪ್ರಧಾನಿ ಚುಚ್ಚಿದರು.

ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಮೇಲಿನ ತಮ್ಮ ದಾಳಿಯನ್ನು ಮುಂದುವರೆಸಿದ ಅವರುಕಳೆದ ೨೦ ವರ್ಷಗಳಲ್ಲಿ ನಾನು ಸಾಕಷ್ಟು ನಿಂದನೆಗಳನ್ನು ಕೇಳಿದ್ದೇನೆ ಮತ್ತು ನಿಂದನೆ ನಿರೋಧಕವಾಗಿದ್ದೇನೆ. ಈಗ ನಾನು ನನ್ನನ್ನುದಂಡ ನಿರೋಧಕವನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ರಾಷ್ಟ್ರದ ನಿರುದ್ಯೋಗ ಸಮಸ್ಯೆಯನನು ಬಗೆಹರಿಸದೇ ಇದ್ದಲ್ಲಿ ದೇಶದ ಯುವಕರು ಮುಂದಿನ ಆರು ತಿಂಗಳಲ್ಲಿ ನಿಮ್ಮನ್ನು ಬಡಿಗೆಗಳಿಂದ ಹೊಡೆಯಲಿದ್ದಾರೆಎಂದು ರಾಹುಲ್ ಗಾಂಧಿಯವರು ಬುಧವಾರ ದೆಹಲಿ ಸಭೆಯೊಂದರಲ್ಲಿ ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆ ನೀಡಿದ್ದರು.

ಪ್ರಧಾನಿಯವರು ಈಗ ಭಾಷಣಗಳನ್ನು ಮಾಡುತ್ತಿದ್ದಾರೆ. ಆದರೆ ಆರು ತಿಂಗಳ ನಂತರ ಅವರು ತಮ್ಮ ಮನೆಯಿಂದ ಹೊರಕ್ಕೆ ಬರಲೂ ಸಾಧ್ಯವಾಗುವುದಿಲ್ಲಎಂದು ರಾಹುಲ್ ಗಾಂಧಿ ಹೇಳಿದ್ದರು.

ಎನ್ಡಿಎ ದೃಢ ನಿರ್ಧಾರ:  ಎನ್ಡಿಎ ಸರ್ಕಾರದ ದೃಢ ನಿರ್ಧಾರ ಮತ್ತು ಖಚಿತತೆಯ ನಿಲುವು ದಶಕಗಳಷ್ಟು ಹಳೆಯದಾದ ರಾಮಜನ್ಮಭೂಮಿ ವಿಷಯ, ೩೭೦ನೇ ವಿಧಿ ಮತ್ತು ತ್ರಿವಳಿ ತಲಾಖ್ ನಂತಹ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿದೆ ಎಂದು ಪ್ರಧಾನಿ ನುಡಿದರು.

ದೇಶವು ೨೦೧೪-೨೦೧೯ರ ನಡುವಣ ತಮ್ಮ ಸರ್ಕಾರದ ಕೆಲಸವನ್ನು ನೋಡಿದೆ ಮತ್ತು ೨೦೧೯ರಲ್ಲಿ ಇನ್ನೂ ಹೆಚ್ಚಿನ ಬಹುಮತದ ಜನಾದೇಶವನ್ನು ನೀಡಿದೆ ಎಂದು ಮೋದಿ ಹೇಳಿದರು.

ನಾವು ಹಳೆಯ ಮಾರ್ಗದಲ್ಲೇ ಮುಂದುವರೆದಿದ್ದರೆ ಸಂವಿಧಾನದ ೩೭೦ನೇ ವಿಧಿ ರದ್ದಾಗುತ್ತಿರಲಿಲ್ಲ. ತ್ರಿವಳಿ ತಲಾಖ್ ಹೋಗುತ್ತಿರಲಿಲ್ಲ. ನಾವು ಹಳೆಯ ದಾರಿಯಲ್ಲೇ ಸಾಗಿದ್ದರೆ ರಾಮ ಜನ್ಮಭೂಮಿ ವಿಷಯವು ಪರಿಹಾರವಾಗುತ್ತಿರಲಿಲ್ಲ. ಕರ್ತಾರಪುರ ಕಾರಿಡಾರ್ ನನಸಾಗುತ್ತಿರಲಿಲ್ಲ. ಭಾರತ-ಬಾಂಗ್ಲಾದೇಶ ಭೂ ಒಪ್ಪಂದ ಇರುತ್ತಿರಲಿಲ್ಲಎಂದು ಪ್ರಧಾನಿ ಹೇಳಿದರು.

ನೂತನ ಪೌರತ್ವ ಕಾಯ್ದೆ ರೂಪಿಸಿದ ಕ್ರಮ ಮತ್ತು ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಿನ ಬಳಿಕ ಕಾಶ್ಮೀರಿ ನಾಯಕರನ್ನು ತಮ್ಮ ಸರ್ಕಾರವು ಬಂಧನದಲ್ಲಿ ಇಟ್ಟಿರುವುದನ್ನು ಪ್ರಶ್ನಿಸುತ್ತಿರುವುದಕ್ಕಾಗಿ ವಿಪಕ್ಷಗಳ ಮೇಲೆ ಪ್ರಧಾನಿ ಹರಿಹಾಯ್ದರು.

ಕಾಶ್ಮೀರದ ಅಸ್ಮಿತೆ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಓಮರ್ ಅಬ್ದುಲ್ಲ ಅವರು ೩೭೦ನೇ ವಿಧಿ ರದ್ದು ಪಡಿಸಿದ್ದಕ್ಕಾಗಿ ಮಾಡಿದ ಟೀಕೆಗಳಿಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ’ಉಗ್ರಗಾಮಿಗಳ ಹಾವಳಿಯಿಂದಾಗಿ ಕಾಶ್ಮೀರಿ ಪಂಡಿತರು ಕಣಿವೆಯನ್ನು ತ್ಯಜಿಸಲು ಆರಂಭಿಸಿದ ೧೯೯೦ರ ಜನವರಿ ೧೯ರಂದೇ ಕಾಶ್ಮೀರದ ಅಸ್ಮಿತೆಯು ಹುಗಿಯಲ್ಪಟಿದೆಎಂದು ಹೇಳಿದರು.

ಕಾಶ್ಮೀರವನ್ನು ಕೇವಲ ಕಬಳಿಕೆಯ ಭೂಮಿಯನ್ನಾಗಿ ಮಾಡಿದ್ದು ಯಾರು? ಬಾಂಬ್ಗಳು ಮತ್ತು ಬಂದೂಕುಗಳೇ ಕಾಶ್ಮೀರದ ಅಸ್ಮಿತೆಯಾಗುವಂತೆ ಮಾಡಿದ್ದು ಯಾರು? ಜನವರಿಯ ಕರಾಳ ರಾತ್ರಿಯನ್ನು ಯಾರಾದರೂ ಮರೆಯಲು ಸಾಧ್ಯವಿದೆಯೇ? ವಾಸ್ತವವಾಗಿ ಕಾಶ್ಮೀರದ ಅಸ್ಮಿತೆಯು ಸಾಮರಸ್ಯದ ಜೊತೆಗೆ ಅತ್ಯಂತ ನಿಕಟವಾಗಿ ಜೋಡಿಕೊಂಡಿದೆಎಂದು ಪ್ರಧಾನಿ ಹೇಳಿದರು.

ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಪ್ರಧಾನಿದೇಶದ ಜನರು ೨೦೧೪ರಿಂದ ೨೦೧೯ರವರೆಗಿನ ಅವಧಿಯಲ್ಲಿ ನನ್ನ ಸರ್ಕಾರದ ಕೆಲಸವನ್ನು ನೋಡಿದ್ದಾರೆ ಮತ್ತು ೨೦೧೯ರಲ್ಲಿ ಇನ್ನೂ ಪ್ರಚಂಡ ಬಹುಮತದ ಜನಾದೇಶ ನೀಡಿದ್ದಾರೆಎಂದು ನುಡಿದರು.

ಭಾರತದ ಜನರು ಐದು ವರ್ಷಗಳ ನಮ್ಮ ಕೆಲಸವನ್ನು ನೋಡಿದ್ದಾರೆ. ನಾವು ಇನ್ನಷ್ಟು ವೇಗವಾಗಿ ಕೆಲಸ ಮಾಡಬೇಕು ಎಂದು ಅವರು ನಮಗೆ ಪುನಃ ಆಶೀರ್ವಾದ ಮಾಡಿದ್ದಾರೆಎಂದು ಅವರು ನುಡಿದರು.

ಸಮಸ್ಯೆಗಳನ್ನು ನೆನೆಗುದಿಯಲ್ಲಿ ಇರಿಸಲು ಭಾರತ ಇನ್ನು ಸಿದ್ಧವಿಲ್ಲ ಎಂದು ಹೇಳಿದ ಮೋದಿ, ’ಹೀಗಾಗಿಯೇ ದೃಢ ನಿರ್ಧಾರ ಮತ್ತು ನಿರ್ಣಾಯಕತೆ, ಸೂಕ್ಷ್ಮತೆ ಮತ್ತು ಪರಿಹಾರವೇ ನಮ್ಮ ಗುರಿ ಮತ್ತು ಪ್ರಮಾಣವಾಗಿದೆಎಂದು ನುಡಿದರು.

ಭಾರತದ ಜನರು ಸರ್ಕಾರವನ್ನು ಮಾತ್ರವೇ ಬದಲಾಯಿಸಿಲ್ಲ. ಅವರುಸಾರೋಕಾರ (ವರ್ತನೆ) ಕೂಡಾ ಬದಲಾಗಬೇಕು ಎಂದು ಬಯಸಿದ್ದಾರೆ. ನಾವು ಹಳೆಯ ಮಾರ್ಗದಲ್ಲೆ ಕೆಲಸ ಮಾಡಿದ್ದರೆ ಸಂವಿಧಾನದ ೩೭೦ನೇ ವಿಧಿಯು ಇತಿಹಾಸವಾಗುತ್ತಿರಲೇ ಇಲ್ಲ, ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಪರಿಣಾಮವಾಗಿ ನರಳುತ್ತಲೇ ಇರಬೇಕಾಗುತ್ತಿತ್ತುಎಂದು ಮೋದಿ ಹೇಳಿದರು.

ಪೌರತ್ವ ಕಾಯ್ದೆಗೆ ಬಲವಾದ ಸಮರ್ಥನೆ
ತಮ್ಮ ಸರ್ಕಾರವು ನೆರೆಯ ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ರೂಪಿಸಿದ ಪೌರತ್ವ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿದ ಪ್ರಧಾನಿ, ’ಕಾಂಗ್ರೆಸ್ ಮತ್ತು ಅದರ ಪ್ರತಿಧ್ವನಿ ವ್ಯವಸ್ಥೆಯು ಭಾರತೀಯರಿಂದ ಪೌರತ್ವವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂಬ ಕಾಲ್ಪನಿಕ ಭೀತಿಗಳನ್ನು ಹರಡುತ್ತಿದೆಎಂದು ಟೀಕಿಸಿದರು.

ಯಾರೇ ಭಾರತೀಯ- ಅವರು ಹಿಂದುಗಳಿರಲಿ, ಮುಸ್ಲಿಮರಿರಲಿ, ಜೈನರಿರಲಿ, ಸಿಕ್ಖರಿರಲಿ, ಕ್ರೈಸ್ತರಿರಲಿ- ಕಾನೂನಿನ ಕಾರಣದಿಂದ ತಮ್ಮ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲಎಂದು ಪ್ರಧಾನಿ ಸದನದಲ್ಲಿ ಪುನರುಚ್ಚರಿಸಿದರು.

ತಮ್ಮ ೧೦೦ ನಿಮಿಷಗಳ ಭಾಷಣದ ಕೊನೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲಿನ ದಾಳಿಗಾಗಿ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ಪ್ರಧಾನಿ ಮೋದಿ, ತಮ್ಮ ನಿಲುವನ್ನು ಪುನರ್ ಪರಿಶೀಲನೆ ಮಾಡುವಂತೆ ವಿರೋಧ ಪಕ್ಷಗಳನ್ನು ಆಗ್ರಹಿಸಿದರು. ಪ್ರತಿಭಟನೆಗಳು ಮತ್ತು ಕಾನೂನು ಪಾಲನೆಗೆ ಜನರು ನಿರಾಕರಿಸಿದರೆ ರಾಷ್ಟ್ರವು ಅರಾಜಕತೆಯತ್ತ ಹೊರಳಬಹುದು ಎಂದೂ ಅವರು ಎಚ್ಚರಿಸಿದರು.

ರಾಜಸ್ಥಾನ ವಿಧಾನಸಭೆಯು ಕಾನೂನು ಒಂದನ್ನು ರಚಿಸಿದರೆ ಮತ್ತು ಯಾರೂ ಅದನ್ನು ಅಂಗೀಕರಿಸದಿದರೆ ಪರಿಸ್ಥಿತಿ ಏನಾಗುತ್ತದೆ? ಮಧ್ಯ ಪ್ರದೇಶ ವಿಧಾನಸಭೆ ಏನಾದರೂ ಒಂದನ್ನು ನಿರ್ಧರಿಸಿದರೆ ಮತ್ತು ಜನರು ಅದರ ವಿರುದ್ಧ ಬೀದಿಗೆ ಇಳಿದರೆ? ನೀವು ರೀತಿಯಲ್ಲಿ ರಾಷ್ಟ್ರವನ್ನು ನಡೆಸಲು ಬರುತ್ತದೆಯೇ? ಇದು ಅರಾಜಕತೆಯ ದಾರಿಯಾಗುತ್ತದೆಎಂದು ಪ್ರಧಾನಿ ನುಡಿದರು.

ಸಂವಿಧಾನದ ರಕ್ಷಣೆ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಹಲವಾರು ಸಂದರ್ಭಗಳಲ್ಲಿ ಸಂವಿಧಾನದ ಸ್ಫೂರ್ತಿಯನ್ನೇ ಉಲ್ಲಂಘಿಸಿದೆ. ಸಂವಿಧಾನದ ರಕ್ಷಣೆ ಬಗ್ಗೆ ಮಾತನಾಡಲಾಗುತ್ತಿದೆ.  ನಾನು ಒಪ್ಪುತ್ತೇನೆ. ಕಾಂಗ್ರೆಸ್ ಮಾತನ್ನು ದಿನಕ್ಕೆ ೧೦೦ ಬಾರಿ ಪಠಿಸಬೇಕು. ಆಗ ಅವರಿಗೆ ಅವರ ಹಿಂದಿನ ತಪ್ಪುಗಳು ಅರಿವಾಗಬಹುದು. ತುರ್ತು ಪರಿಸ್ಥಿತಿ ಕಾಲದ ಘೋಷಣೆಯನ್ನು ನೀವು ಮರೆತಿದ್ದೀರಾ? ಚುನಾಯಿತ ಸರ್ಕಾರಗಳನ್ನು ವಜಾಗೊಳಿಸಿದ್ದು ಮರೆತುಹೋಗಿದೆಯೇ? ಸಂಪುಟ ನಿರ್ಣಯಗಳನ್ನು ಹರಿದು ಹಾಕಿದ್ದು ಮರೆತುಹೋಯಿತೇ?’ ಎಂದು ಮೋದಿ ಚುಚ್ಚಿದರು.

೧೯೮೪ರಲ್ಲಿ ಸಿಖ್ ವಿರೋಧಿ ದಂಗೆಯಲ್ಲಿ ಸಹಸ್ರಾರು ಸಿಕ್ಖರನ್ನು ಕೊಲ್ಲಲಾಯಿತು, ಕೆಲವರನ್ನು ಜೀವಂತ ದಹಿಸಲಾಯಿತು. ಆದರೂ ಕಾಂಗ್ರೆಸ್ ದಂಗೆಗಳಲ್ಲಿ ಶಾಮೀಲಾದ ಆರೋಪ ಹೊತ್ತ ವ್ಯಕ್ತಿಯನ್ನೇ ರಾಜ್ಯ ಒಂದರ ಮುಖ್ಯಮಂತ್ರಿಯಗಿ ನೇಮಿಸಿತು ಎಂದು ಪ್ರಧಾನಿ ಛೇಡಿಸಿದರು.

ನೆಹರೂ ಏನು ಹೇಳಿದ್ದರು ಗೊತ್ತಾ?
ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪತ್ರವೊಂದನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿದರು. ಉಭಯ ರಾಷ್ಟ್ರಗಳ ಅಲ್ಪಸಂಖ್ಯತರನ್ನು ರಕ್ಷಿಸಲು ರೂಪಿಸಲಾದ ನೆಹರೂ-ಲಿಯಾಖತ್ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಜವಾಹರಲಾಲ್ ನೆಹರೂ ಅವರು ಅಸ್ಸಾಮಿನ ಮುಖ್ಯಮಂತ್ರಿ ಗೋಪಿನಾಥ್ ಬೋರ್ಡೋಲಿ ಅವರಿಗೆ ಪತ್ರ ಬರೆದಿದ್ದರು ಎಂದು ಮೋದಿ ಹೇಳಿದರು.

ಇದು ನಮ್ಮನ್ನು ಹಿಂದು-ಮುಸ್ಲಿಮ್ ಎಂಬುದಾಗಿ ಆರೋಪಿಸುವವರಿಗಾಗಿ. ’ನೀವು ಹಿಂದೂ ನಿರಾಶ್ರಿತರು ಮತ್ತು ಮುಸ್ಲಿಮ್ ವಲಸಿಗರ ನಡುವಣ ವ್ಯತ್ಯಾಸವನ್ನು ಗಮನಿಸಬೇಕು ಹಾಗೂ ರಾಷ್ಟ್ರವು ನಿರಾಶ್ರಿತರ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲೇಬೇಕು ಎಂದು ನೆಹರೂ ಅವರು ಪತ್ರದಲ್ಲಿ ಹೇಳಿದ್ದರು ಎಂದು ಮೋದಿ ವಿವರಿಸಿದರು.

ನೆಹರೂ -ಲಿಯಾಖತ್ ಒಪ್ಪಂದದ ಬಳಿಕ, ನೆಹರೂ ಅವರು ೧೯೫೦ರ ನವೆಂಬರ್ ೫ರಂದು ಲೋಕಸಭೆಯಲ್ಲಿ ತೊಂದರೆಗೆ ಒಳಗಾಗಿ ಭಾರತಕ್ಕೆ ಬಂದ ಜನರಿಗೆ ಪೌರತ್ವ ನೀಡಬೇಕು ಎಂಬ ವಿಷಯದಲ್ಲಿ ಸಂಶಯವೇ ಇಲ್ಲ ಮತ್ತು ಇದಕ್ಕೆ ಕಾನೂನು ಅನುಮತಿ ಕೊಡದಿದ್ದರೆ ಕಾನೂನನ್ನು ಬದಲಾಯಿಸಬೇಕು ಎಂದು ಹೇಳಿದ್ದರುಎಂದು ಪ್ರಧಾನಿ ಹೇಳಿದರು.

ಪಂಡಿತ್ ನೆಹರೂ ಅವರು ಕೋಮುವಾದಿಯಾಗಿದ್ದರೇ? ಅವರು ಹಿಂದೂ ರಾಷ್ಟ್ರವನ್ನು ಬಯಸಿದ್ದರೇ? ಎಂಬುದಾಗಿ ನಾನು ಕಾಂಗ್ರೆಸ್ಸನ್ನು ಪ್ರಶ್ನಿಸಬಯಸುತ್ತೇನೆಎಂದು ಪ್ರಧಾನಿ ಮೋದಿ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿರುವ ವಿಪಕ್ಷಗಳಿಗೆ ಎದಿರೇಟು ನೀಡಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ೩೭೦ನೇ ವಿಧಿ ರದ್ದು ಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಗೆತ್ತಿಕೊಂಡ ಕ್ರಮಗಳನ್ನು ಪಟ್ಟಿ ಮಾಡಿದರು. ೩೭೦ನೇ ವಿಧಿ ರದ್ದು ಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇದೇ ಮೊತ್ತ ಮೊದಲ ಬಾರಿಗೆ ಮೀಸಲಾತಿಯ ಸವಲತ್ತುಗಳು ಲಭಿಸಿವೆ. ಬ್ಲಾಕ್ ಅಭಿವೃದ್ಧಿ ಮಂಡಳಿಯ ಚುನಾವಣೆಗಳು ನಡೆದಿವೆ. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಜಾರಿಗೆ ಬಂದಿದೆ. ಭ್ರಷ್ಟಾಚಾರ ನಿಗ್ರಹ ಬ್ಯೂರೋ ರಚಿಸಲಾಗಿದೆಎಂದು ಮೋದಿ ವಿವರಿಸಿದರು.

ಗುಲಾಂ ನಬಿ ಆಜಾದ್ ಅವರು ಯಾವುದೇ ಚರ್ಚೆ ಇಲ್ಲದೆ ಜಮ್ಮು ಮತ್ತು ಕಾಶ್ಮೀರ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದು ಸರಿಯಲ್ಲ. ಇಡೀ ರಾಷ್ಟ್ರವೇ ವಿಷಯದ ಕುರಿತ ವಿಸ್ತೃತ ಚರ್ಚೆಯನ್ನು ನೋಡಿದೆ. ಸಂಸದರು ನಿರ್ಣಯಗಳ ಪರವಾಗಿ ಮತ ನೀಡಿದ್ದಾರೆಎಂದು ಪ್ರಧಾನಿ ಹೇಳಿದರು.

ನಿರ್ಣಯ ಅಂಗೀಕರಿಸಿದ ೨೦೧೯ರ ಆಗಸ್ಟ್ ೫ರ ದಿನವನ್ನುಕರಾಳ ದಿನಎಂಬುದಾಗಿ ಟೀಕಿಸಿದ್ದಕ್ಕಾಗಿ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ನಾಯಕ ವೈಕೋ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿವೈಕೋ ಜಿ, ಅದು ಜಮ್ಮು ಮತ್ತು ಕಾಶ್ಮೀರಕ್ಕೆ ಕರಾಳ ದಿನವಲ್ಲ, ಬದಲಿಗೆ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಬೆಳೆಸಿದವರ ಪಾಲಿಗೆ ಕರಾಳ ದಿನ. ಪ್ರತ್ಯೇಕತಾವಾದಿಗಳಿಗೆ ಕರಾಳ ದಿನಎಂದು ನುಡಿದರು.

ಗಾಂಧಿ ನಿಮಗೆ ಟ್ರೇಲರ್, ನಮಗೆ ಜೀವನ
ಲೋಕಸಭೆಯ ಭಾಷಣದ ಒಂದು ಹಂತದಲ್ಲಿ  ಪ್ರಧಾನಿ ಮೋದಿ ಅವರುರಾಜಕೀಯ ಪ್ರಚಾರಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿ ನಿಮಗೆ ಟ್ರೇಲರ್ ಆಗಿರಬಹುದು. ಆದರೆ ನಮಗೆ ಅವರು ಜೀವನಎಂದು ಹೇಳಿದರು.

ಪ್ರಧಾನಿ ಭಾಷಣದ ವೇಳೆಯಲ್ಲಿ ಸಂಸದ ಅನಂತ್ ಕುಮಾರ ಹೆಗಡೆ ಹೇಳಿಕೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿ ಸದನಲ್ಲಿ ಕೋಲಾಹಲವೆಬ್ಬಿಸಿದವು.

ಕಾಂಗ್ರೆಸ್ ನಾಯಕ ಅಧಿರ್ ರಂಜನ್, ’ಇದು ಟ್ರೇಲರ್ ಮಾತ್ರಎಂದರು. ಇದಕ್ಕೆ ತಿರುಗೇಟು ನೀಡಿದ ಮೋದಿ, ’ನಿಮಗೆ ಗಾಂಧಿ ಟ್ರೇಲರ್ ಆಗಿರಬಹುದು ಆದರೆ ನಮಗೆ ಅವರು ಜೀವನಎಂದರು.
ನಂತರ ಭಾಷಣ ಮುಂದುವರಿಸಿದ ಪ್ರಧಾನಿ, ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ನಮಗೆ ಸ್ಪೂರ್ತಿ ತುಂಬಿದ್ದು, ಮುಂದಿನ ದಿನಗಳಲ್ಲಿ ದೇಶ ಮುನ್ನಡೆಸುವ ನೀಲನಕ್ಷೆ  ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.

ರಾಹುಲ್ ಗಾಂದಿ ಟ್ಯೂಬ್ ಲೈಟ್
ಒಂದು ಹಂತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿ ಟ್ಯೂಬ್ ಲೈಟ್ಗೆ ಹೋಲಿಸಿದರು. ಮೂಲಕ ಮೋದಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನ ಕಾಲೆಳೆದರು.

ಲೋಕಸಭೆಯಲ್ಲಿ ರಾಷ್ಟ್ರಪತಿಗಳಿಗೆ ಧನ್ಯವಾದ ತಿಳಿಸುವ ಭಾಷಣದ ವೇಳೆ ಪ್ರಧಾನಿ ಮೋದಿ ಭಾಷಣ ಮಾತನಾಡಿದರು. ವೇಳೆ ಸ್ವಲ್ಪ ತಡವಾಗಿ ಮಾತನಾಡಲು ಎದ್ದು ನಿಂತ ರಾಹುಲ್ ಗಾಂಧಿಯವರನ್ನು ಮೋದಿ ಟ್ಯೂಬ್ ಲೈಟ್ಗೆ ಹೋಲಿಸಿದರು.

ಕಳೆದ ಸುಮಾರು ೩೦-೪೦ ನಿಮಿಷದಿಂದ ನಾನು ಇಲ್ಲಿ ಮಾತನಾಡುತ್ತಿದ್ದೇನೆ. ಆದರೆ ಅಲ್ಲಿಯತನಕ ಕರೆಂಟ್ ತಲುಪಲು ಇಷ್ಟು ಸಮಯ ಬೇಕಾಯಿತು. ಕೆಲವು ಟ್ಯೂಬ್ ಲೈಟ್ಗಳು ಹಾಗೆಯೇಎಂದು ರಾಹುಲ್ ಗಾಂಧಿಯವರನ್ನು ಮೋದಿ ಛೇಡಿಸಿದರು.

Advertisement