ಗ್ರಾಹಕರ ಸುಖ-ದುಃಖ

My Blog List

Sunday, December 2, 2007

Gou Samrakshanege Hosa Bhashya

ಗೋ

ಸಂರಕ್ಷಣೆಗೆ

ಹೊಸ ಭಾಷ್ಯ

ಬರೆದ

ಬೆಂಗಳೂರು

ದೀಪಾವಳಿಗೆ ಮೊದಲೇ ತಿಂಗಳುಗಟ್ಟಲೆ ದೀಪ ಸಂಭ್ರಮ. ಬೆಂಗಳೂರು ಬಡಾವಣೆಗಳಲ್ಲಿ ಗೋವುಗಳಿಗೆ ಆರತಿ, ಪೂಜೆ. ಗೋ ಸಂರಕ್ಷಣೆಯ ಪ್ರತಿಜ್ಞೆ. ಕಟ್ಟ ಕಡೆಗೆ ನವೆಂಬರ್ 18ರಂದು ಅರಮನೆ ಮೈದಾನದಲ್ಲಿ 'ಕೋಟಿ ನೀರಾಜನ'ದೊಂದಿಗೆ ಗೋ ಸಂರಕ್ಷಣಾ ಚಳವಳಿಗೆ ಬೆಂಗಳೂರು ಹೊಸ ಭಾಷ್ಯ ಬರೆಯಿತು.


ನೆತ್ರಕೆರೆ ಉದಯಶಂಕರ

ಪರೋಪಕಾರಾರ್ಥಂ ಇದಂ ಶರೀರಂ ಎಂಬ ಮಾತನ್ನು ಅಕ್ಷರಶಃ ಪಾಲಿಸುವ ಗೋವುಗಳಿಗೆ ಕೃತಯುಗದಲ್ಲಿ ಸಂಪೂರ್ಣ ಸಮೃದ್ಧಿ ಸ್ವಾತಂತ್ರ್ಯವಿತ್ತು. ಅದು ಅವುಗಳು ಖುಷಿಯಿಂದ ವಿಹರಿಸುತ್ತಿದ್ದ ಕಾಲ. ತ್ರೇತಾಯುಗದಲ್ಲಿ ಗೋವುಗಳ ಮೇಲೆ ಆಕ್ರಮಣ ಆರಂಭ. ಆದರೆ ಅವುಗಳು ತಮ್ಮ ಸ್ವರಕ್ಷಣೆಯ ಸಾಮಥ್ರ್ಯ ಹೊಂದಿದ್ದ ಕಾಲವದು. ಗೋವನ್ನು ಎಳೆದೊಯ್ಯಲು ಬಂದ ವಿಶ್ವಾಮಿತ್ರ ಪರಾಜಿತನಾಗಿ ಕೊನೆಗೆ ತಲೆಬಾಗಿ ನಮಿಸುತ್ತಾನೆ. ದ್ವಾಪರಯುಗದಲ್ಲಿ ಗೋವುಗಳು ತಮ್ಮ ಸಾಮಥ್ರ್ಯ ಕಳೆದುಕೊಂಡವು. ಆದರೆ ಅವುಗಳ ರಕ್ಷಣೆಗೆ ಶ್ರೀಕೃಷ್ಣ, ಪಾಂಡವರಿದ್ದರು. ಕಲಿಯುಗದಲ್ಲಿ ಗೋವುಗಳು ಸಂಪೂರ್ಣ ಅಸುರಕ್ಷಿತ. ಅವುಗಳಿಗೆ ರಕ್ಷಿಸಿಕೊಳ್ಳುವ ಸ್ವ ಸಾಮಥ್ರ್ಯವೂ ಇಲ್ಲ, ಅವುಗಳನ್ನು ರಕ್ಷಿಸುವವರೂ ಇಲ್ಲ. ಹಾಗಾಗಿಯೇ ಅವುಗಳು ಇಂದು ಸಹಜವಾಗಿ ಹುಟ್ಟುವ, ಸಹಜವಾಗಿ ಬದುಕುವ, ಸಹಜವಾಗಿ ಸಾಯುವ ಸ್ವಾತಂತ್ರ್ಯವನ್ನೂ ಕಳೆದುಕೊಂಡಿವೆ. ಮಾನವರಿಗೆ ಹಾಲು ನೀಡುವ, ಉಳುವ, ಭಾರ ಹೊರುವ ಯಂತ್ರಗಳಾಗಿ ಕಡೆಗೆ ಕಸಾಯಿಖಾನೆ ಸೇರಿ ಮಾಂಸದ ಮುದ್ದೆಗಳಾಗಿ ಅಂಗಡಿಗಳಲ್ಲಿ ಬಿಕರಿಯಾಗುತ್ತವೆ.

ಯಾರಿಗೂ ತೊಂದರೆ ಮಾಡದ, ಹಾಲು ನೀಡುವುದರಿಂದ ಹಿಡಿದು, ಗೊಬ್ಬರ ಒದಗಿಸುವರೆಗೆ ಪ್ರತಿ ಹಂತದಲ್ಲೂ ಮಾನವರಿಗೆ ಉಪಕಾರವನ್ನೇ ಮಾಡುವ ದನಗಳ ಈ ಪರಿಯ ದುರವಸ್ಥೆಯ ಕಥೆ ಅಂದು ನೃತ್ಯ ರೂಪಕದಲ್ಲಿ ಮೂಡಿ ಬಂದಾಗ ಲಕ್ಷಾಂತರ ಮಂದಿಯ ಕಣ್ಣುಗಳು ತೇವಗೊಂಡವು. ನೇರವಾಗಿ ನೋಡುತ್ತಿದ್ದವರಷ್ಟೇ ಅಲ್ಲ, ಟಿ.ವಿ.ಯ ಮೂಲಕ ನೋಡುತ್ತಿದ್ದವರ ಹೃದಯಗಳೂ ಕರಗಿದವು.ನೃತ್ಯದ ಕೊನೆಗೆ ಈ ಕಥೆಯನ್ನು ಕಣ್ಮುಂದೆ ಸೃಷ್ಟಿಸಿದ 'ಕಾಮಧೇನು' ಪಾತ್ರಧಾರಿ ಕರುಣೆಯ ಜ್ಯೋತಿಯನ್ನು ಸ್ವಾಮೀಜಿ ಕೈಯಲ್ಲಿ ಕೊಡುತ್ತಾರೆ. ಕ್ಷಣಮಾತ್ರದಲ್ಲಿ ಆ ಜ್ಯೋತಿ ಇಡೀ ಸಭೆಯಲ್ಲಿ ವ್ಯಾಪಿಸುತ್ತದೆ. ಲಕ್ಷ ಲಕ್ಷ ಜ್ಯೋತಿಗಳು ಭೂಮಿಯ ಮೇಲೊಂದು ನಕ್ಷತ್ರ ಲೋಕವನ್ನೇ ಸೃಷ್ಟಿಸುತ್ತವೆ. ಅದೇ ವೇಳೆಗೆ ಭೂಮಿಯಿಂದ ಬಾನಿನೆತ್ತರಕ್ಕೆ ಮೇಲೆದ್ದು ಬರುವ ಪುಣ್ಯಕೋಟಿಗೆ ಈ ಜ್ಯೋತಿಗಳೇ ಆರತಿಯಾಗುತ್ತವೆ. ಮಂತ್ರಘೋಷದ ಮಧ್ಯೆ 'ಗೋಮಾತೆಗೆ ಕೋಟಿ ನೀರಾಜನ' ಸಲ್ಲುತ್ತದೆ. ಜೊತೆಗೆ ಇಡೀ ಸಭೆ ಗೋವುಗಳ ಸಂರಕ್ಷಣೆ, ಸಂವರ್ಧನೆಗೆ ಕೈಜೋಡಿಸುವ ಪ್ರತಿಜ್ಞೆ ಕೈಗೊಳ್ಳುತ್ತದೆ.

ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗೋವಿಗೆ 'ಕೋಟಿ ಆರತಿ' ಬೆಳಗುವ ಮೂಲಕ ರಾಜ್ಯದ ಮಹಿಳೆಯರು ತಾವು ಗೋವುಗಳ ಅಸಹಾಯಕತೆ ಕೊನೆಗೊಳಿಸಲು ಶ್ರಮಿಸುವ ಸಂದೇಶವನ್ನು ವಿಶ್ವಕ್ಕೆ ನೀಡುತ್ತಾರೆ. ಗೋವುಗಳತ್ತ ಕರುಣೆಯ ದೀಪ ಬೆಳಗುತ್ತಾರೆ.ಶತಾವಧಾನಿ ಡಾ. ಆರ್. ಗಣೇಶ್ ಅವರ ಲೇಖನಿಯಲ್ಲಿ ಮೂಡಿ ಬಂದ 'ಗೋ ವಿಶ್ವರೂಪ ದರ್ಶನ'ದ ಈ ಕಥೆಯನ್ನು ನಿರುಪಮಾ ರಾಜೇಂದ್ರ ತಂಡದ ಕಲಾವಿದರು ನೃತ್ಯ ರೂಪಕದಲ್ಲಿ ಪ್ರದಶರ್ಿಸುವ ಮೂಲಕ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಮನದಾಳದ 'ಗೋ ಸಂರಕ್ಷಣೆಯ' ಅಭಿಯಾನಕ್ಕೆ ಹೊಸ ಆಯಾಮವನ್ನೇ ನೀಡುತ್ತಾರೆ. ಅದಕ್ಕೂ ಮುನ್ನ 'ಅಮೃತ ಕಿರಣ' ವೇದಿಕೆಯಲ್ಲಿ ಗೀರ್ ಮತ್ತು ಕನರ್ಾಟಕದ ಗೋ ತಳಿಗಳ ಸುಂದರ ಪ್ರತಿಕೃತಿಗಳ ಸಮ್ಮುಖದಲ್ಲಿ ಕಪಿಲೆ ದನಕ್ಕೆ 'ರಕ್ಷೆ' ಕಟ್ಟುವುದರೊಂದಿಗೆ ಆರಂಭವಾದ ಸಮಾವೇಶದಲ್ಲಿ ಸುಮಾರು ಆರು ತಾಸುಗಳ ಕಾಲ ಗೋ ಸಂರಕ್ಷಣೆ, ಗೋವೈಭವ, ಗೋವಿನ ಉಪಯುಕ್ತತೆ, ಅವುಗಳ ಇಂದಿನ ದಯನೀಯ ಪರಿಸ್ಥಿತಿಗಳ ಬಗ್ಗೆ ಉಪನ್ಯಾಸ, ಮಕ್ಕಳು, ಮಹಿಳೆಯರಿಂದ ನೃತ್ಯ, ಗೀತೆಗಳ ಕಾರ್ಯಕ್ರಮ. ಇಡೀ ಕಾರ್ಯಕ್ರಮಕ್ಕೆ ಸಂಗೀತ ನಿದರ್ೇಶಕ ವಿ. ಮನೋಹರ್ ಅವರ ನಿದರ್ೇಶನ.

ಬೆಂಗಳೂರಿನ ಮಂದಿ ತಮ್ಮ ಕಣ್ತುಂಬಿಕೊಂಡ ಈ ಅಪರೂಪದ 'ಕೋಟಿ ನೀರಾಜನ' ಕಾರ್ಯಕ್ರಮಕ್ಕೆ ಮೂರು ನಾಲ್ಕು ತಿಂಗಳುಗಳಿಂದಲೇ ಸಿದ್ಧತೆ ನಡೆದಿತ್ತು. ಸ್ವಾಮೀಜಿ ತಮ್ಮ ಚಾತುರ್ಮಾಸ್ಯವನ್ನು ಇದಕ್ಕಾಗಿ ಧಾರೆ ಎರೆದಿದ್ದರು.ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ 'ಗೋಸಂಧ್ಯಾ' ಕಾರ್ಯಕ್ರಮಗಳ ಮೂಲಕ ಗೋಧೂಳಿ ಹೊತ್ತಿನಲ್ಲಿ ಗೋವುಗಳಿಗೆ ಆರತಿ ಬೆಳಗುವ, ಗೋವಿನ ಪರಿಸ್ಥಿತಿ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯ ನಡೆದಿತ್ತು. ರಾಮಚಂದ್ರಾಪುರ ಮಠದ ಮೂಲಕ ಗೋವಿನ ಉಪಯುಕ್ತತೆಗಳ ಬಗ್ಗೆ ವೈದ್ಯರಿಂದ ತಂತ್ರಜ್ಞರವರೆಗೆ, ಶಿಕ್ಷಕರಿಂದ ಉದ್ಯಮಿಗಳವರೆಗೆ, ಕಲಾವಿದರಿಂದ ಪತ್ರಕರ್ತರವರೆಗೆ ವಿವಿಧ ಸ್ತರಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆದಿತ್ತು. ಬೆಂಗಳೂರಿನ ಎಚ್. ಬಿ. ಆರ್. ಬಡಾವಣೆಯ ಕಾಚರಕನಹಳ್ಳಿ, ರಾಜರಾಜೇಶ್ವರಿ ನಗರ, ರಾಜಾಜಿ ನಗರ, ಸಂಜಯ ನಗರ, ಆರ್.ಟಿ. ನಗರ, ಬಸವನಗುಡಿ, ವತರ್ೂರು, ಕೋರಮಂಗಲ, ಗಿರಿನಗರ ಮತ್ತಿತರ ಕಡೆಗಳಲ್ಲೂ ಇಂತಹ ಸಮಾವೇಶಗಳು ನಡೆದಿದ್ದವು. ಭಾರತದ 32ಕ್ಕೂ ಹೆಚ್ಚಿನ ವೈವಿಧ್ಯಮಯ ಗೋತಳಿಗಳ ಚಿತ್ರವನ್ನು ಕಣ್ಮುಂದೆ ತರುವಂತಹ ಗೋವುಗಳ ಪುಟ್ಟಪುಟ್ಟ ಮೂತರ್ಿಗಳನ್ನು ಒಳಗೊಂಡ 'ರಥಯಾತ್ರೆ' ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಚರಿಸಿತ್ತು. ಗೋವಿನ ಹಾಡು ಎಲ್ಲೆಡೆಗಳಲ್ಲಿ ಮಾರ್ದನಿಸಿತ್ತು. ಗವ್ಯ ಚಿಕಿತ್ಸೆ, ಗೋವುಗಳ ಪ್ರದರ್ಶನ, ಗೋಮೂತ್ರ- ಗೋಮಯದಿಂದ ತಯಾರಿಸಿದ ಔಷಧಿ, ಸೌಂದರ್ಯ ಸಾಧನಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾಪೂರ ನಡೆದಿತ್ತು.

ಎರಡನೆಯ ಸ್ವಾತಂತ್ರ್ಯ ಸಂಗ್ರಾಮ: ಗೋ ಸಂರಕ್ಷಣಾ ಚಳವಳಿಯನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂಬುದಾಗಿ ಬಣ್ಣಿಸುವ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಈ ಚಳವಳಿಯನ್ನು ಬೆಂಗಳೂರಿನಲ್ಲೇ ಆರಂಭಿಸಿದ್ದೇನಲ್ಲ. ಕೆಲವು ವರ್ಷಗಳ ಹಿಂದೆಯೇ 'ಕಾಮದುಘಾ' ಯೋಜನೆಯ ಮೂಲಕ ಹೊಸನಗರದಲ್ಲೇ ಅವರು ಈ ಚಳವಳಿಗೆ ಅಡಿಗಲ್ಲು ಹಾಕಿದ್ದಾರೆ.

ಸ್ವಾತಂತ್ರ್ಯ ಸಿಗುವುದಕ್ಕೂ ಪೂರ್ವದಲ್ಲಿ ಸುಮಾರು 70ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಭಾರತೀಯ ಗೋವುಗಳ ತಳಿಗಳು ಅಳಿಯುತ್ತಾ ಈಗ ಸುಮಾರು 27-30ರ ಅಂಚಿಗೆ ತಲುಪಿರುವುದು, ಸ್ವಾವಲಂಬಿಗಳಾಗಬೇಕಿದ್ದ ರೈತರು ಆತ್ಮಹತ್ಯೆ ಮಾಡುವಂತಹ ದುಃಸ್ಥಿತಿಗೆ ತಲುಪಿರುವುದು ಭಾರತೀಯ ಗೋವಿನ ಮಹತ್ವವನ್ನು ಮರೆತದ್ದರಿಂದಲೇ ಎಂಬುದು ಸ್ವಾಮೀಜಿ ಅವರ ಪ್ರತಿಪಾದನೆ. ಅದಕ್ಕಾಗಿಯೇ ಭಾರತೀಯ ಪರಿಸರಕ್ಕೆ ಒಗ್ಗಿಕೊಳ್ಳಬಲ್ಲಂತಹ, ಅತಿವೃಷ್ಟಿಯಿಂದ ಹಿಡಿದು ಅನಾವೃಷ್ಟಿಯವರೆಗೆ ಯಾವುದೇ ಪರಿಸ್ಥಿತಿಯನ್ನು ತಾಳಿಕೊಳ್ಳಬಲ್ಲಂತಹ ಭಾರತೀಯ ಗೋವುಗಳ ಸಂರಕ್ಷಣೆಯ ಕಾರ್ಯಕ್ಕೆ 'ಕಾಮದುಘಾ' ಮೂಲಕ ಅವರು ಕೈಹಾಕಿದರು.

ಅಳಿವಿನ ಅಂಚಿನಲ್ಲಿ ಇರುವ ಭಾರತೀಯ ಗೋವುಗಳ ಸಂರಕ್ಷಣೆ ಸಂವರ್ಧನೆಗಾಗಿ ಈ ಯೋಜನೆಯ ಅಡಿಯಲ್ಲಿ 27ಕ್ಕೂ ಹೆಚ್ಚು ಭಾರತೀಯ ಗೋ ತಳಿಗಳನ್ನು ದೇಶದಾದ್ಯಂತದಿಂದ ಸಂಗ್ರಹಿಸಿ ಸಂರಕ್ಷಿಸಲು 'ಅಮೃತಧಾರಾ'' ಗೋಶಾಲೆಗಳನ್ನು ಸ್ಥಾಪಿಸಿದರು. ಹೊಸನಗರ, ಬೆಂಗಳೂರಿನ ಕಗ್ಗಲಿಪುರ, ಮೈಸೂರು, ಮಂಗಳೂರಿನ ಮುಳಿಯ, ವಿಟ್ಲ ಸಮೀಪದ ಪೆರಾಜೆ, ಕೇರಳದ ಬಜಕ್ಕೂಡ್ಲು ಮತ್ತಿತರ ಸ್ಥಳಗಳು ಸೇರಿದಂತೆ 18 ಕಡೆಗಳಲ್ಲಿ ಈಗ 'ಅಮೃತಧಾರಾ' ಗೋಶಾಲೆಗಳಿವೆ. ಇವುಗಳ ಸಂಖ್ಯೆಯನ್ನು 108ಕ್ಕೆ ಏರಿಸುವ ಗುರಿ ಅವರದ್ದು.ಜೊತೆಗೆ ಸಂಕಷ್ಟ ಕಾಲದಲ್ಲಿ ರೈತರಿಗೆ ಅವರ ಗೋವುಗಳ ರಕ್ಷಣೆಗೆ ನೆರವಾಗಲು ವಿಶಿಷ್ಟ ಕಲ್ಪನೆಯ 'ಗೋ ಬ್ಯಾಂಕ್', ಸಾವಯವ ಗೊಬ್ಬರ ಬಳಸಿ ಮಾಡುವಂತಹ ಕೃಷಿ ವಿಧಾನ ಮೂಲಕ ಭೂಮಿಯ ಅಂತಃಸತ್ವ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿಗಾಗಿ 'ಅಮೃತಸತ್ವ'' ಯೋಜನೆ, ಕಸಾಯಿಖಾನೆಗೆ ಹೋಗುವ ಗೋವುಗಳ ರಕ್ಷಣೆಗಾಗಿ ಗೋ ರಕ್ಷಾ ಪರಿಷತ್ತು, 'ಗೋ ಸಂಜೀವಿನಿ' ಯೋಜನೆ, ಗೋಮೂತ್ರ ಖರೀದಿಗೆ ಗವ್ಯ ಡೈರಿಗಳನ್ನೂ ಮಠ ಆರಂಭಿಸಿದೆ.ಔಷಧೀಯ ಗುಣ ಹೊಂದಿರುವ ಗೋಮೂತ್ರದಿಂದ ಅರ್ಕ ಮತ್ತಿತರ ಔಷಧಿ, ಕೇಶ ಸಂರಕ್ಷಕ, ದಂತ ಮಂಜನ, ಶ್ಯಾಂಪೂ, ಸ್ನಾನದ ಸಾಬೂನು, ಧೂಪ ಮತ್ತಿತರ ನಿತ್ಯ ಬಳಕೆ ವಸ್ತುಗಳು, ಸೌಂದರ್ಯ ಸಾಧನಗಳು, ಎರೆಗೊಬ್ಬರ ಇತ್ಯಾದಿಗಳನ್ನು ತಯಾರಿಸಿ ಜನಪ್ರಿಯಗೊಳಿಸುತ್ತಿರುವ ಮಠ, ವಿವಿಧ ರೋಗಗಳನ್ನು ಗುಣಪಡಿಸಬಲ್ಲಂತಹ ಗವ್ಯ ಚಿಕಿತ್ಸಾ ಕೇಂದ್ರಗಳನ್ನೂ ತೆರೆದಿದೆ.

ಇದರ ಹೊರತಾಗಿ ಕನರ್ಾಟಕ, ಕೇರಳದಲ್ಲಿ 2005ರಲ್ಲಿ ಗೋರಥಯಾತ್ರೆ, 2007ರ ಏಪ್ರಿಲ್ನಲ್ಲಿ 9 ದಿನಗಳ 'ವಿಶ್ವ ಗೋ ಸಮ್ಮೇಳನ'ವನ್ನೂ ಹೊಸನಗರದಲ್ಲಿ ಸಂಘಟಿಸಿ, ಗೋ ಸಂರಕ್ಷಣಾ ಚಳವಳಿಗೆ ಹೊಸ ಆಯಾಮ ನೀಡಿದೆ.ಈ ಎಲ್ಲ ಕಾರ್ಯಕ್ರಮಗಳ ಫಲವಾಗಿ ಹಲವಾರು ವೈದ್ಯರು ಗವ್ಯ ಚಿಕಿತ್ಸೆ ನೀಡಲು, ಉದ್ಯಮಿಗಳು ಗೋ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬರುತ್ತಿದ್ದಾರೆ. ಇದು ಸಾಲದು, ಗೋಮೂತ್ರ ಸಂಗ್ರಹಕ್ಕೆ ಎಲ್ಲೆಡೆಗಳಲ್ಲಿ ಹಾಲಿನ ಡೈರಿ ಮಾದರಿಯಲ್ಲಿ ಗವ್ಯ ಡೈರಿಗಳ ಸ್ಥಾಪನೆ ಆಗಬೇಕು. ಗೋವಿನ ಮಹತ್ವದ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕು. ಗೋವಿನ ವಿಚಾರದಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಯೂ ಆಗಬೇಕು ಎನ್ನುತ್ತಾರೆ ರಾಘವೇಶ್ವರ ಭಾರತಿ ಸ್ವಾಮೀಜಿ. ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಘೋಷಣೆಯನ್ನೂ ಅವರು ಈಗಾಗಲೇ ಮಾಡಿದ್ದಾರೆ.

1 comment:

Anonymous said...

hi
Tumbaaa Chennagide!
Jayakishore

Advertisement