ಗೋಕರ್ಣ ಪುನರುತ್ಥಾನ:
ಇಂದು ಸೀಮೋಲ್ಲಂಘನ
ಇಂದು ಸೀಮೋಲ್ಲಂಘನ
ಸೋಮವಾರ ಭಾದ್ರಪದ ಶುಕ್ಲ ಪೂರ್ಣಿ,ಮೆ ಚಾತುರ್ಮಾಸ್ಯ ವ್ರತನಿಷ್ಠರ ಸೀಮೋಲ್ಲಂಘನ ದಿನವಾಗಿದ್ದು, ಇದೇ ಸಂದರ್ಭದಲ್ಲಿ ಗೋಕರ್ಣದ ಭದ್ರಕಾಳಿ ಮಹಾವಿದ್ಯಾಲಯದಲ್ಲಿ `ಶ್ರೀಕ್ಷೇತ್ರ ಗೋಕರ್ಣ ಪುನರುತ್ಥಾನ ಮಹಾಸಂಕಲ್ಪ ಸಮಾವೇಶ' ನಡೆಯಲಿದೆ. ಗೋಕರ್ಣ ಪುನರುತ್ಥಾನ ಮಹಾಸಂಕಲ್ಪ ಸಭೆಯ ಕಾರ್ಯಕ್ರಮಗಳು ದೂರದರ್ಶನ ಚಂದನ ವಾಹಿನಿಯಲ್ಲಿ ಈದಿನ ಸಂಜೆ 5.30ರಿಂದ ರಾತ್ರಿ 8 ಗಂಟೆಯವರೆಗೆ ನೇರ ಪ್ರಸಾರಗೊಳ್ಳಲಿದೆ.
ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಜ್ಯ ಸರ್ಕಾರವು ಶ್ರೀ ರಾಮಚಂದ್ರಪುರ ಮಠಕ್ಕೆ ಹಸ್ತಾಂತರಿಸಿದ ಬಳಿಕ ಇದೇ ಪ್ರಪ್ರಥಮ ಪ್ರಥಮ ಬಾರಿಗೆ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು 2008 ಸೆಪ್ಟೆಂಬರ್ 15ರ ಸೋಮವಾರ ಗೋಕರ್ಣಕ್ಕೆ ಭೇಟಿ ನೀಡಲಿದ್ದಾರೆ.
ಸೋಮವಾರ ಭಾದ್ರಪದ ಶುಕ್ಲ ಪೂರ್ಣಿ,ಮೆ ಚಾತುರ್ಮಾಸ್ಯ ವ್ರತನಿಷ್ಠರ ಸೀಮೋಲ್ಲಂಘನ ದಿನವಾಗಿದ್ದು, ಸ್ವಾಮೀಜಿಯವರು ಇದೇ ದಿನ ಬೆಂಗಳೂರಿನಲ್ಲಿ ಕೈಗೊಂಡಿದ್ದ ಚಾತುರ್ಮಾಸ್ಯ ಮುಗಿಸಿ ಗೋಕರ್ಣಕ್ಕೆ ಕಾಲಿರಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಗೋಕರ್ಣದ ಭದ್ರಕಾಳಿ ಮಹಾವಿದ್ಯಾಲಯದಲ್ಲಿ `ಶ್ರೀಕ್ಷೇತ್ರ ಗೋಕರ್ಣ ಪುನರುತ್ಥಾನ ಮಹಾಸಂಕಲ್ಪ ಸಮಾವೇಶ' ನಡೆಯಲಿದೆ.
'ಆತ್ಮಲಿಂಗ ವೇದಿಕೆ'ಯಲ್ಲಿ ನಡೆಯುವ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ಧ ಶ್ರೀ ಗುರು ಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮತ್ತು ದೀವಗಿಯ ಶ್ರೀ ರಾಮಾನದಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಚ್. ಹಾಲಪ್ಪ, ಆನಂದ್ ಅಸ್ನೋಟಿಕರ, ಸಂಸದ ಅನಂತಕುಮಾರ ಹೆಗಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜಶೆಟ್ಟಿ, ಕೆಎಸ್ಸಾರ್ಟಿಸಿ ಉಪಾಧ್ಯಕ್ಷ ಜಗ್ಗೇಶ್, ಮಾಜಿ ಸಚಿವ ಬಸವರಾಜ ಹೊರಟ್ಟಿ, ಶಾಸಕರಾದ ಜಿ.ಡಿ. ನಾಯ್ಕ, ವಿ.ಎಸ್. ಪಾಟೀಲ, ಮೋಹನ ಶೆಟ್ಟಿ, ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಡಾ. ಮಹೇಶ ಜೋಶಿ ಮತ್ತಿತರರು ಪಾಲ್ಗೊಳ್ಳುವರು.
ಈ ಭವ್ಯ ಸಮಾರಂಭದಲ್ಲಿ 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಹಸ್ರಾರು ವರ್ಷಗಳ ಇತಿಹಾಸ ಇರುವ ಗೋಕರ್ಣದ ಪುನರುತ್ಥಾನಕ್ಕಾಗಿ ಮಹಾಸಂಕಲ್ಪಕ್ಕೆ ಬದ್ಧರಾಗುವುದರೊಂದಿಗೆ ಸಮಾರಂಭ ಸಮಾರೋಪವಾಗುವುದು.
ಭದ್ರಕಾಳಿ ದೇವಾಲಯದಿಂದ ಪ್ರಾರಂಭವಾಗುವ ಭವ್ಯ ಮೆರವಣಿಗೆಯಲ್ಲಿ ಸಂತ ಮಹಂತರನ್ನು ಸ್ವಾಗತಿಸಲಾಗುವುದು. ಶ್ರೀ ಮಹಾಬಲೇಶ್ವರ ದೇವರ ದರ್ಶನದೊಂದಿಗೆ ಮೆರವಣಿಗೆ ಮುಕ್ತಾಯವಾಗುತ್ತದೆ ಎಂದು ಶ್ರೀಮಠದ ಮಠದ ಮಾಧ್ಯಮ ಕೇಂದ್ರದ ಪ್ರಕಟಣೆ ತಿಳಿಸಿದೆ.
ಚಂದನದಲ್ಲಿ ನೇರಪ್ರಸಾರ
ಗೋಕರ್ಣ ಪುನರುತ್ಥಾನ ಮಹಾಸಂಕಲ್ಪ ಸಭೆಯ ಕಾರ್ಯಕ್ರಮಗಳು ದೂರದರ್ಶನ ಚಂದನ ವಾಹಿನಿಯಲ್ಲಿ ಈದಿನ ನೇರ ಪ್ರಸಾರಗೊಳ್ಳಲಿದೆ.
ಸಂಜೆ 5.30ರಿಂದ ರಾತ್ರಿ 8 ಗಂಟೆಯವರೆಗೆ 50 ದೇಶಗಳಲ್ಲಿ ಇದು ಬಿತ್ತರಗೊಳ್ಳಲಿದೆ ಎಂದು ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ ಜೋಶಿ ತಿಳಿಸಿದ್ದಾರೆ.
ಗೋಕರ್ಣಕ್ಕೆ ಹೋಗಲಾಗದವರು ತಮ್ಮ ಮನೆಗಳಲ್ಲೇ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದು.
No comments:
Post a Comment