My Blog List

Sunday, November 23, 2008

ಶ್ರೀಪಡ್ರೆ 'ಪಾಠ' ನಿರಂತರವಾಗಿರಲಿ...!

ಶ್ರೀಪಡ್ರೆ 'ಪಾಠ' ನಿರಂತರವಾಗಿರಲಿ...!

ಇತ್ತೀಚೆಗೆ ಹಳೆಯ ಪುಸ್ತಕಗಳನ್ನು ಅವಲೋಕಿಸುತ್ತಿದ್ದಾಗ ಶಾಲಾ ಮಕ್ಕಳ ಪಠ್ಯ ಪುಸ್ತಕವೊಂದು ಸಿಕ್ಕಿತು. ಅದರ ಮೇಲೆ ಕಣ್ಣಾಡಿಸುತ್ತಿದ್ದಾಗ ಶ್ರೀಪಡ್ರೆ ಅವರ ಈ 'ಮಳೆಪಾಠ'ದ ಹಾಳೆ ಗಮನ ಸೆಳೆಯಿತು. ಶ್ರೀಪಡ್ರೆ ಅವರ ಜನ್ಮದಿನದ ಸಂದರ್ಭದಲ್ಲಿ ಈ 'ಮಳೆಪಾಠ'ದ ನೆನಪು ಮಾಡಬೇಕೆನ್ನಿಸಿತು.

ನೆತ್ರಕೆರೆ ಉದಯಶಂಕರ

ಶ್ರೀಪಡ್ರೆ ಅವರ ಮಳೆಪಾಠ ಕೇವಲ ಮಕ್ಕಳಿಗಷ್ಟೇ ಅಲ್ಲ, ಎಲ್ಲ ವಯೋಮಾನದ ಮಂದಿಗೂ ಅತ್ಯಗತ್ಯ. ಆ ಕೆಲಸವನ್ನು ಅವರು ನಿರಂತರ ಮಾಡುತ್ತಲೇ ಇದ್ದಾರೆ. ವಿವಿಧ ಪತ್ರಿಕೆ, ನಿಯತಕಾಲಿಕಗಳಲ್ಲಿ ನಿರಂತರವಾಗಿ ಮಳೆಕೊಯ್ಲು ಬಗ್ಗೆ, ನೀರುಳಿತಾಯ ಮಾಡುವ ಪರಂಪರಾಗತ ವಿಧಾನಗಳ ಬಗ್ಗೆ ಹೇಳುತ್ತಲೇ ಇದ್ದಾರೆ. ಕಟ್ಟ, ಸುರಂಗ, ಮದಕ, ಟಾಂಕಾ.... ಅವರು ಪತ್ತೆ ಹಚ್ಚಿದ ಮಳೆಕೊಯ್ಲಿನ ವಿಧಾನಗಳ ಪಟ್ಟಿ ಸುಲಭದಲ್ಲಿ ಮುಗಿಯುವಂತಹದ್ದಲ್ಲ.

 'ನೆಲ ಜಲ ಉಳಿಸಿ', 'ಮತ್ತೆ ರೂಪಾರೆಲ್ ಬತ್ತಲಿಲ್ಲ',  'ಹನಿಗೂಡಿಸುವ
 ಹಾದಿಯಲ್ಲಿ',  'ಗುಜರಾತಿನ ನೀರ ತಿಜೋರಿ ಟಾಂಕಾ', 'ನೀರ ನೆಮ್ಮದಿಗೆ ನೂರಾರು ಹಾದಿ' ಇತ್ಯಾದಿ ಪುಸ್ತಕಗಳೆಲ್ಲ ಅವರ ಆಳ ಅಧ್ಯಯನದ ಹೆಗ್ಗುರುತುಗಳು ಎಂದರೆ ಖಂಡಿತ ತಪ್ಪಲ್ಲ. ಕಾಸರಗೋಡು ಜಿಲ್ಲೆಯ ಪಡ್ರೆಯಂತಹ ಪುಟ್ಟ ಹಳ್ಳಿಯಲ್ಲಿ ಇದ್ದುಕೊಂಡೇ ಅವರು ಮಾಡುತ್ತಿರುವ ದೊಡ್ಡ ಕಾರ್ಯವನ್ನು ಸಮಾಜವೂ ಗುರುತಿಸಿದೆ ಎಂಬುದು ವಿಶೇಷ. ಹಾಗಾಗಿಯೇ ಒಂದೆರಡಲ್ಲ, ಏಳೆಂಟಕ್ಕೂ ಹೆಚ್ಚು ಪ್ರಶಸ್ತಿಗಳು ಅವರ ಹೆಗಲೇರಿವೆ.

ಶ್ರೀಪಡ್ರೆ ನೇತೃತ್ವದಲ್ಲಿ ಆರಂಭವಾದ 'ಅಡಿಕೆ ಪತ್ರಿಕೆ' ಎರಡು ದಶಕಗಳನ್ನು ಪೂರೈಸಿ ದಾಪು ಹಾಕುತ್ತಾ ಮುಂದುವರೆಯುತ್ತಿದ; ಪತ್ರಿಕೆಗಳಲ್ಲಿ ಈಗ ಕಂಡು ಬರುತ್ತಿರುವ ಕೃಷಿ ಅಂಕಣಗಳಿಗೆ ದಿಕ್ಕು ತೋರುತ್ತಿದೆ.

ಪ್ರಿಯ ಶ್ರೀಪಡ್ರೆ, ನಿಮಗೆ ಜನ್ಮದಿನದ ಅಭಿನಂದನೆಗಳು. ನಿಮ್ಮ 'ಮಳೆ ಕೊಯ್ಲಿನ ಪಾಠ' ನಿರಂತರವಾಗಿರಲಿ ಎಂದು 'ಪರ್ಯಾಯ' ಹಾರೈಸುತ್ತದೆ.
 


No comments:

Advertisement