'ಗೋವು ಉಳಿದರೆ ನಾವು ಉಳಿದೇವು'

ಗೋವಿನ ಅಳಿವು-ಉಳಿವಿನ ಮೇಲೆ ನಮ್ಮ ಮುಂದಿನ ಬದುಕು ನಿಂತಿದೆ. ಗೋವು ಉಳಿದರೆ ನಾವು ಉಳಿದೇವು - ಇದು ರಾಮ ಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಸ್ಪಷ್ಟ ನುಡಿ.
ಡಿಸೆಂಬರ್ 28ರ ಭಾನುವಾರ ಬೆಳಗ್ಗೆ ಬೆಂಗಳೂರಿನ ಜಿಗಣಿಯ ಸ್ವಾಮೀ ವಿವೇಕಾನಂದ ಯೋಗ ವಿಶ್ವವಿದ್ಯಾಲಯ ಆವರಣದ ಪ್ರಶಾಂತಿ ಕುಟೀರದಲ್ಲಿ 'ಯೋಗ, ಗೋವು ಮತ್ತು ಗ್ರಾಮ ಪುನರ್ ನಿರ್ಮಾಣ' ಕುರಿತ ಮೊತ್ತ ಮೊದಲ ಅಂತಾರಾಷ್ಟೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಯೋಗ ಮಂಡಳಿಯ ನಿರ್ದೇಶಕ ಡಾ. ಚಿದಾನಂದಮೂರ್ತಿ, ಜೋಧಪುರ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಲೋಕೇಶ್ ಶೇಖಾವತ್, ನೊಬೆಲ್ ಪ್ರಶಸ್ತಿಗೆ ನಾಮಾಂಕಿತರಾದ ಡಾ. ರಿಯೋ ರೆಬೆಲೋ, ಉದ್ಯಮಿ ದೇಶಬಂಧು ಗುಪ್ತಾ, ಪ್ರಶಾಂತಿ ಕುಟೀರದ ನಿರ್ದೇಶಕ ಡಾ. ಎಚ್.ಆರ್. ನಾಗೇಂದ್ರ ಮೊದಲಾದ ಗಣ್ಯರು ಹಾಜರಿದ್ದರು.
ಸಮ್ಮೇಳನ ಆರಂಭಕ್ಕೆ ಮೊದಲು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಗೋ ಪೂಜೆ ನೆರವೇರಿಸಿದರು. ಸಮ್ಮೇಳನದ
ನೆನಪಿಗಾಗಿ ಸ್ಮರಣಸಂಚಿಕೆಯೊಂದನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಮೂರು ದಿನಗಳ ಸಮ್ಮೇಳನ ಅವಧಿಯಲ್ಲಿ ಒಟ್ಟು 14 ವಿಷಯಗಳ
ಮೇಲೆ ವಿಚಾರಗೋಷ್ಠಿ ನಡೆಯುವುದು. ಯೋಗ, ಗೋವು, ಗೋವು-ಗವ್ಯೋತ್ಪನ್ನಗಳ ಉಪಯುಕ್ತತೆ, ಗ್ರಾಮಗಳನ್ನು ಪುನರ್ ನಿರ್ಮಿಸುವಲ್ಲಿ ಗೋವಿನ ಪಾತ್ರ - ಈ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಯುವುದು.
ಮಂಗಳವಾರ ಸಂಜೆ 4ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ನೆರವೇರುವುದು ಎಂದು ಶೀ ರಾಮಚಂದ್ರಾಪುರ ಮಠದ ಮಾಧ್ಯಮ ಕೇಂದ್ರ ತಿಳಿಸಿದೆ.
No comments:
Post a Comment