My Blog List

Sunday, June 14, 2009

ಪುಟಾಣಿಗಳ ಸ್ಕೇಟಿಂಗ್ ಮ್ಯಾರಥಾನ್..! Skating Marathan by children..!

Skating Marathan by children..!


Karnataka Roller Skating Club of Hubli has organised a Skating Marathan from Gadag to Badami recently. Children under the age group of six and half years to 12 years participated in the 75 km feat organised by Eranna Kadappanavar, the founder and brain behind the Club. PARYAYA presents the video of the feat here. Click the video below to view the event.

Nethrakere Udaya Shankara

ಪುಟಾಣಿಗಳ ಸ್ಕೇಟಿಂಗ್ ಮ್ಯಾರಥಾನ್..!

ಗದಗದಿಂದ ಬಾದಾಮಿಯವರೆಗೆ 75 ಕಿ,ಮೀ. ಸ್ಕೇಟಿಂಗ್ ಮ್ಯಾರಥಾನ್! ಅದೂ ಆರೂವರೆ ವರ್ಷದಿಂದ 12 ವರ್ಷಗಳವರೆಗಿನ ಪುಟ್ಟ ಮಕ್ಕಳಿಂದ. ಈ ಪುಟಾಣಿಗಳು ಪಾದಗಳಿಗೆ ಗಾಲಿಗಳನ್ನು ಕಟ್ಟಿಕೊಂಡು ದೇಶಭಕ್ತಿಯ ಘೋಷಣೆ ಕೂಗುತ್ತಾ, ಬೀಳುತ್ತಾ, ಏಳುತ್ತಾ ಕುಣಿಯುತ್ತಾ ಸಾಗಿದ ಪರಿ ಎಂತಹವರಲ್ಲೂ ರೋಮಾಂಚನ ಮೂಡಿಸುವಂತಹುದು.

ನೆತ್ರಕೆರೆ ಉದಯಶಂಕರ

ಈ ಸಾಹಸ ಯಾತ್ರೆ ನಡೆದದ್ದು ಕಳೆದ ಪ್ರೇಮಿಗಳ ದಿನದಂದು. ಈ ಸ್ಕೇಟಿಂಗ್ ಮ್ಯಾರಥಾನ್ ಸಂಘಟಿಸಿದ್ದು ಹುಬ್ಬಳ್ಳಿಯ ಕರ್ನಾಟಕ ರೋಲರ್ ಸ್ಕೇಟಿಂಗ್ ಕ್ಲಬ್.

ಕರ್ನಾಟಕ ರೋಲರ್ ಸ್ಕೇಟಿಂಗ್ ಕ್ಲಬ್ ಕಳೆದ 28 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ರೋಲರ್ ಸ್ಕೇಟಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸುವ ಕಾರ್ಯ ನಡೆಸುತ್ತಾ ಬಂದಿದೆ. ಈ ಕ್ಲಬ್ಬಿನ ರೂವಾರಿ ಈರಣ್ಣ ಕಾಡಪ್ಪನವರ ರಜಾದಿನಗಳಂದು ತರಬೇತಿ ಶಿಬಿರಗಳನ್ನು ಸಂಘಟಿಸುತ್ತಾ ರೋಲರ್ ಸ್ಕೇಟಿಂಗ್ ಕಲಿಸುವ ಕಾಯಕ ನಡೆಸುತ್ತಾ ಬಂದಿದ್ದಾರೆ.

1985ರ ಯುವ ವರ್ಷದಂದು ಇದೇ ಈರಣ್ಣ ಕಾಡಪ್ಪನವರ ಸಿಂಗಪುರಕ್ಕೆ ಸ್ಕೇಟಿಂಗ್ ಯಾತ್ರೆ ಮಾಡಿದ್ದರು. 13 ದಿನಗಳ ಕಾಲ ಸಿಂಗಪುರದಲ್ಲಿ ಸ್ಕೇಟಿಂಗ್ ಸಾಹಸ ನಡೆಸಿ 1300 ಕಿ.ಮೀ. ದೂರವನ್ನು ಸ್ಕೇಟಿಂಗ್ ಮೂಲಕ ಚಲಿಸಿ ದಾಖಲೆ ನಿರ್ಮಿಸಿದ್ದರು. ಕೆಲ ಸಮಯದ ಹಿಂದೆ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಸ್ಕೇಟಿಂಗ್, ಯೋಗಾಸನ ಕಲಿಸುವ ಸಾಹಸ ಮಾಡಿ ನಾನೂ ಪಾಟೀಲ ಎಂಬ ಅಂಧ ಪ್ರತಿಭೆಯನ್ನು ಬೆಳಕಿಗೆ ತಂದಿದ್ದರು.

ಕಾಡಪ್ಪನವರ ಮಾರ್ಗದರ್ಶನದಲ್ಲಿ ಸ್ಕೇಟಿಂಗ್ ಕಲಿತ ನಾನೂ ಪಾಟೀಲ ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೆದ್ದಾರಿಯಲ್ಲಿ ಸ್ಕೇಟಿಂಗ್ ಸಾಹಸ ಮಾಡಿ ಎಲ್ಲರನ್ನು ಅಚ್ಚರಿಯಲ್ಲಿ ಕೆಡವಿದ್ದ.

ರೋಲರ್ ಸ್ಕೇಟಿಂಗ್ 13ನೇ ಶತಮಾನಕ್ಕೂ ಹಿಂದೆ ಬಳಕೆಯಲ್ಲಿದ್ದ 'ಐಸ್' ಸ್ಕೇಟಿಂಗಿನ ಮುಂದುವರೆದ ಭಾಗ ಎಂಬ ನಂಬಿಕೆ ಉಂಟು.. ಹುಬ್ಬಳ್ಳಿಯಲ್ಲಿ ಕಾಡಪ್ಪನವರ ಅದನ್ನು 1982ರಿಂದ ಜನಪ್ರಿಯಗೊಳಿಸುವ ಸಾಹಸದಲ್ಲಿ ತೊಡಗಿದ್ದಾರೆ.

ಕರ್ನಾಟಕದ ಖ್ಯಾತ ಗುಹಾದೇವಾಲಯಗಳಿರುವ ಬಾದಾಮಿಗೆ ಗದಗದಿಂದ 75 ಕಿ.ಮೀ. ದೂರವನ್ನು ಪುಟಾಣಿಗಳಿಂದ ಸ್ಕೇಟಿಂಗ್ ಮೂಲಕ ಕರೆದೊಯ್ಯುವ ಸಾಹಸಕ್ಕೆ ಕಾಡಪ್ಪನವರ ಮುಂದಾದಾಗ ಈ ಮಕ್ಕಳ ಪಾಲಕರಿಗೆ ಇದು ಸಾಧ್ಯವೇ ಎಂಬ ಶಂಕೆ ಇತ್ತು. ಆದರೆ ಪುಟಾಣಿಗಳು ಅದನ್ನು ಸಾಧಿಸಿ ತೋರಿಸಿಯೇ ಬಿಟ್ಟರು.

'ಪರ್ಯಾಯ' ಈ ಪುಟಾಣಿಗಳ ಸ್ಕೇಟಿಂಗ್ ಮ್ಯಾರಥಾನ್ ಸಾಹಸದ ವಿಡಿಯೋವನ್ನು ಇಲ್ಲಿ ಸಾದರ ಪಡಿಸುತ್ತಿದೆ. ಪುಟಾಣಿಗಳ ಸಾಹಸಕ್ಕೆ ಈರಣ್ಣ ಕಾಡಪ್ಪನವರ ಅವರಿಗೆ ಮಲ್ಲಿಕಾರ್ಜುನ ಕಾಡಪ್ಪನವರ ನೆರವಾದರೆ, ಪುಟಾಣಿಗಳ ಈ ಸಾಹಸ ಯಾತ್ರೆಗೆ ಧ್ವನಿಯಾಗಿದ್ದಾರೆ ಭಾರತಿ.

ಸುಂದರ ವಿಡಿಯೋ ವೀಕ್ಷಿಸಲು ಕೆಳಗೆ ಕ್ಲಿಕ್ಕಿಸಿ (Video conversion help: www.madhubhat.blogspot.com)

No comments:

Advertisement