Thursday, January 21, 2010

ದೇಶದ ಪ್ರಥಮ ಗೋಮಯ ಕಾರ್ಖಾನೆ

ದೇಶದ ಪ್ರಥಮ ಗೋಮಯ ಕಾರ್ಖಾನೆಜನವರಿ 21ರಂದು ರಾಷ್ಟ್ರಕ್ಕೆ ಅರ್ಪಣೆಗೋಮೂತ್ರ ಮತ್ತು ಗೋಮಯ ಉತ್ಪನ್ನಗಳ ಜೊತೆಗೆ ವಿದ್ಯುತ್ತನ್ನೂ ಉತ್ಪಾದಿಸುವ ಭಾರತದ ಪ್ರಪ್ರಥಮ ಆಧುನಿಕ ಕಾರ್ಖಾನೆ ಕೋಲಾರ ಜಿಲ್ಲೆಯ ಮಾಲೂರಿ ನಲ್ಲಿರುವ ರಾಮ ಚಂದ್ರಪುರ ಮಠದ ಗೋಶಾಲೆ ಆವರಣದಲ್ಲಿ ಜನವರಿ 21ರ ಗುರುವಾರ ರಾಷ್ಟ್ರಕ್ಕೆ ಅರ್ಪಣೆಗೊಳ್ಳಲಿದೆ.
ಹಳ್ಳಿಗಳಲ್ಲಿ ನವಚೈತನ್ಯ ತುಂಬುವ ಸಲುವಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ನಡೆದ ರಾಷ್ಟ್ರವ್ಯಾಪಿ ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯ ಸಮಾರೋಪದ ಬೆನ್ನಲ್ಲೇ ಗೋಮೂತ್ರ ಮತ್ತು ಗೋಮಯ ಉತ್ಪನ್ನಗಳ ಜೊತೆಗೇ ವಿದ್ಯುತ್ತನ್ನೂ ಉತ್ಪಾದಿಸುವಂತಹ ಆಧುನಿಕ ಕಾರ್ಖಾನೆಯ ಕಾರ್ಯಾರಂಭದೊಂದಿಗೆ ಇದೀಗ ತಾನೇ ಸಮಾಪ್ತಿಗೊಂಡಿರುವ ಯಾತ್ರೆಯ ಆಶಯದ ಕನಸು ಕರ್ನಾಟಕದಲ್ಲೇ ನನಸಾಗುತ್ತಿದೆ.
ರಾಮಚಂದ್ರಪುರ ಮಠದ ಶಂಕರಾಚಾರ್ಯ ಶ್ರೀರಾಘ ವೇಶ್ವರ ಭಾರತೀ ಸ್ವಾಮೀಜಿ ಕಾರ್ಖಾನೆಗೆ ಚಾಲನೆ ನೀಡಲಿ ದ್ದಾರೆ. ಗೋ ಉತ್ಪನ್ನಗಳ ತಯಾ ರಿಕೆ ಮತ್ತು ಮಾರಾಟಕ್ಕೆ ಕಾರ್ಖಾನೆ ಸಹಕಾರಿಯಾಗಲಿದೆ ಎಂದು ಕಾರ್ಖಾನೆಯ ತಾಂತ್ರಿಕ ನಿರ್ದೇಶಕ ಎಂ.ಕೆ.ಜನಾರ್ದನ ತಿಳಿಸಿದ್ದಾರೆ.

'ಕಾರ್ಖಾನೆಯಲ್ಲಿ ಗೋಮಯ ಮತ್ತು ಗೋಮೂತ್ರದ ನೆರವಿ ನಿಂದ ಗೃಹಯೋಪಯೋಗಿ ವಸ್ತು ಗ ಳಾದ ಫಿನಾಯಿಲ್, ಸೊಳ್ಳೆ ಕೀಟನಾಶಕ ಧೂಪ, ಹಲ್ಲಿನ ಪುಡಿ, ನೋವು ನಿವಾರಕ ಮುಲಾಮು ಮತ್ತಿತರ ಜನೋಪಯೋಗಿ ಉತ್ಪನ್ನಗಳನ್ನು ತಯರಿಸ ಲಾಗುವುದು' ಎಂದು ಅವರು ತಿಳಿಸಿದರು.
‘ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಿಂದ ಗ್ರಾಮಸ್ಥರಿಗೆ ಉದ್ಯೋ ಗಾ ವಕಾಶ ದೊರೆಯಲಿದೆ. ಜೊತೆಗೇ ರೈತರು ಗೋವಂಶದಿಂದ ಹಾಲಿನಿಂದ ಗಳಿಸುವ ಆದಾಯದ ಜೊತೆಗೇ ಗೋಮೂತ್ರ ಮತ್ತು ಗೋಮಯದಿಂದಲೂ ಆದಾಯ ಗಳಿಸಲಿದ್ದಾರೆ' ಎಂದು ಅವರು ಹೇಳಿದರು.
ಕೇವಲ ಗೋವುಗಳಷ್ಟೇ ಅಲ್ಲ, ಎತ್ತುಗಳ ಮೂತ್ರ ಹಾಗೂ ಸೆಗಣಿ ಕೂಡಾ ಉಪಯುಕ್ತವೋ ಆಗಿರುವುದರಿಂದ, ರೈತರು ಅನುಪಯುಕ್ತವೆಂದು ಎತ್ತುಗಳನ್ನು ಇಲ್ಲವೇ ಮುದಿ ಜಾನುವಾರುಗಳನ್ನು ಕಸಾಯಿಖಾನೆ ಮಾರುವುದನ್ನು ತಡೆಯುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರು ಪಾಲ್ಗೊಳ್ಳುವರು.
( ಉದ್ಘಾಟನಾ ಕಾರ್ಯಕ್ರಮ ಹಾಗೂ ಗೋಮೂತ್ರ ಮತ್ತು ಗೋಮಯ ಡೈರಿಯ ವಿವರಗಳಿಗಾಗಿ ದಯವಿಟ್ಟು ಚಿತ್ರಗಳ ಹಾಗೂ ಇತರ ಕೊಂಡಿಗಳನ್ನು (Links) ತೆರೆದು ಓದಬೇಕಾಗಿ ಕೋರಿಕೆ. ಗೋಹತ್ಯೆ ನಿಷೇಧದ ಅಗತ್ಯ ಪ್ರತಿಪಾದಿಸಿರುವ ಕರ್ನಾಟಕದ ರಾಜ್ಯಪಾಲ ಎಚ್. ಆರ್. ಭಾರಧ್ವಾಜ್ ಅವರ ಅಭಿಪ್ರಾಯ ಕುರಿತ ಪ್ರಜಾವಾಣಿ ವರದಿ ಮತ್ತು ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಸಂಸದ ರಾಮಾ ಜೋಯಿಸ್ ಅವರು ಮಂಡಿಸಿರುವ ಗೋ ಹತ್ಯೆ ನಿಷೇಧ ನಿಟ್ಟಿನಲ್ಲಿ ಮಂಡಿಸಿರುವ ವಿಧೇಯಕ ಕುರಿತ ವಿಜಯ ಕರ್ನಾಟಕದ ವರದಿಗಳನ್ನೂ ಗಮನಿಸಿ)-ನೆತ್ರಕೆರೆ ಉದಯಶಂಕರ

No comments:

Advertisement