Monday, November 25, 2019

ಫಡ್ನವಿಸ್ ಪತ್ರ ಸಲ್ಲಿಕೆಗೆ ಕೇಂದ್ರಕ್ಕೆ ಸುಪ್ರೀಂ 1 ದಿನದ ಗಡುವು

ಫಡ್ನವಿಸ್ ಪತ್ರ  ಸಲ್ಲಿಕೆಗೆ  ಕೇಂದ್ರಕ್ಕೆ ಸುಪ್ರೀಂ  1 ದಿನದ ಗಡುವು
ದಾಖಲೆ ಪರಿಶೀಲನೆ ಬಳಿಕ ಬಲಾಬಲ ಪರೀಕ್ಷೆ ಆದೇಶ ಸಂಭವ
ನವದೆಹಲಿ: ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರಿಗೆ ಸರ್ಕಾರ ರಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಆಹ್ವಾನ ನೀಡಲು ಮತ್ತು ನವೆಂಬರ್ ೨೩ರಂದು ಪ್ರಮಾಣ ವಚನ ಬೋಧಿಸಲು ಕಾರಣವೇನು ಎಂಬುದರ ಬಗ್ಗೆ ಬೆಳಕು ಚೆಲ್ಲುವ ದಾಖಲೆಗಳನ್ನು ತಾನು ಪರಿಶೀಲಿಸುವವರೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ಶಿವಸೇನಾ-ಎನ್ಸಿಪಿ- ಕಾಂಗ್ರೆಸ್ ಮೈತ್ರಿಕೂಟ ಮಾಡಿದ ಮನವಿ ಬಗೆಗಿನ ಆದೇಶವನ್ನು ಸುಪ್ರೀಂಕೋರ್ಟ್  2019 ನವೆಂಬರ್ 24ರ ಭಾನುವಾರ ತಡೆಹಿಡಿಯಿತು.

ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿ ಫಡ್ನವಿಸ್ ಅವರು ಸಲ್ಲಿಸಿದ ಪತ್ರವನ್ನು ನವೆಂಬರ್ ೨೫ರ ಸೋಮವಾರ ಬೆಳಗ್ಗೆ ೧೦.೩೦ ಗಂಟೆಯ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರಿಗೆ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠವು ಆಜ್ಞಾಪಿಸಿತು.

ದಾಖಲೆಗಳನ್ನು ಸಲ್ಲಿಸಿಲು ನವೆಂಬರ್ ೨೬ರ ಮಂಗಳವಾರದವರೆಗೆ ಕಾಲಾವಕಾಶ ನೀಡುವಂತೆ ತುಷಾರ ಮೆಹ್ತ ಅವರು ಕೋರಿದರು. ಆದರೆ ಅದಕ್ಕೆ ಅವಕಾಶ ನೀಡದ ಪೀಠ ಸೋಮವಾರವೇ ಪತ್ರವನ್ನು ಹಾಜರು ಪಡಿಸಬೇಕು ಎಂದು ನಿರ್ದೇಶನ ನೀಡಿತು.

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಂದ ಎಲ್ಲ ದಾಖಲೆಗಳನ್ನು ಪಡೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂಬುದಾಗಿ ಮೆಹ್ತ ಅವರು ತಿಳಿಸಿದ ಬಳಿಕ ಪೀಠವು ಆದೇಶವನ್ನು ನೀಡಿತು.

ಕೆಲವು ಬಿಜೆಪಿ ಶಾಸಕರು ಮತ್ತು ಪಕ್ಷೇತರ ಶಾಸಕರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಮಹಾರಾಷ್ಟ್ರದಲ್ಲಿ ಮುಂದಿನ ೨೪ ಗಂಟೆಗಳ ಒಳಗಾಗಿ ಸದನ ಬಲಾಬಲ ಪರೀಕ್ಷೆ ನಡೆಸುವಂತೆತುರ್ತು ಮನವಿಮಾಡುವ ಮೂಲಕ ಸುಪ್ರೀಂಕೋರ್ಟ್ ಮತ್ತು ನಮಗೆ ತೊಂದರೆ ನೀಡಿದ್ದಾರೆ ಎಂದು ಶಿವಸೇನಾ- ಎನ್ಸಿಪಿ ಮೈತ್ರಿಕೂಟವನ್ನು ನಿಂದಿಸಿದರು. ’ಯಾವುದೇ ಅನುಬಂಧಗಳನ್ನೂ ಲಗತ್ತಿಸದೆಯೇ ಅವರು ಅರ್ಜಿ ಸಲ್ಲಿಸಿದ್ದಾರೆಎಂದು ರೋಹ್ಟಗಿ ಹೇಳಿದರು.

ಅವರ ಬಳಿ ಯಾವ ದಾಖಲೆಗಳೂ ಇಲ್ಲ. ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸುವಾಗ ಅವರುನಮಗೆ ಗೊತ್ತಿಲ್ಲಎಂದು ಹೇಳುತ್ತಾರೆ. ಅವರು ಯಾಕೆ ಮೊದಲು ರಾಜ್ಯಪಾಲರ ಬಳಿಗೆ ಹೋಗಿ ವಿವರಗಳನ್ನು ಕೇಳಬಾರದು? ಅವರು ಯಾಕೆ ಸುಪ್ರಿಂಕೋರ್ಟಿಗೆ ಧಾವಿಸಿ ಬರುತ್ತಾರೆ?’ ಎಂದು ಪ್ರಶ್ನಿಸಿದ ರೋಹ್ಟಗಿಪ್ರಕರಣವನ್ನು ಎರಡು ಅಥವಾ ಮೂರು ದಿನಗಳ ಬಳಿಕ ಚೆನ್ನಾಗಿ ಆಲಿಸಬಹುದುಎಂದು ನುಡಿದರು.

ಆದರೆ ಶಿವಸೇನಾ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರುಶಿವಸೇನಾ- ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟವು ಭಾನುವಾರವೇ ತನ್ನ ಬಹುಮತ ಸಾಬೀತು ಪಡಿಸಬಲ್ಲುದುಎಂದು ಪ್ರತಿಪಾದಿಸಿದರು.

ಎನ್ಸಿಪಿ ಮತ್ತು ಕಾಂಗ್ರೆಸ್ ಪರ ಹಾಜರಾದ ಹಿರಿಯ ವಕೀಲ .ಎಂ. ಸಿಂಘ್ವಿ ಅವರುತಾನು ಬಹುಮತ ಹೊಂದಿರುವುದಾಗಿ ಫಡ್ನವಿಸ್ ಮಾಡಿರುವ ಪ್ರತಿಪಾದನೆ ನಿಜವಾಗಿದ್ದರೆ, ೨೪ ಗಂಟೆಗಳ ಒಳಗೆ ಬಹುಮತ ಸಾಬೀತು ಪಡಿಸಲು ಅವರು ದಿಗಿಲು ಬೀಳುತ್ತಿರುವುದು ಏಕೆ?’ ಎಂದು ಪ್ರಶ್ನಿಸಿದರು.

ಎಲ್ಲವೂ ನಿಗೂಢ: ನವೆಂಬರ್ ೨೩ರಂದು ಬೆಳಗ್ಗೆ .೪೭ ಗಂಟೆಗೆ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದ ಸ್ವಲ್ಪ ಹೊತ್ತಿನಲ್ಲೇ ಸರ್ಕಾರ ರಚಿಸುವಂತೆ ಫಡ್ನವಿಸ್ ಅವರಿಗೆ ಅಹ್ವಾನ ನೀಡಲು ರಾಜ್ಯಪಾಲರು ದಿಢೀರನೆ ಮನಸ್ಸು ಮಾಡಿದ್ದರ ಹಿಂದೆನಿಗೂಢಅಡಗಿದೆ ಎಂದು ಸಿಂಘ್ವಿ ವಾದಿಸಿದರು.

ನಾವು (ಶಿವಸೇನಾ) ಸರ್ಕಾರ ರಚಿಸುವ ನಮ್ಮ ಇಂಗಿತವನ್ನು ನವೆಂಬರ್ ೨೨ರ ರಾತ್ರಿ ಗಂಟೆಗೆ ಪ್ರಕಟಿಸಿದೆವು. ಮರುದಿನ ನಸುಕಿನ .೪೭ ಗಂಟೆಗೆ ಕೇಂದ್ರ ಸಚಿವ ಸಂಪುಟದ ಸಭೆ ಕೂಡಾ ಇಲ್ಲದೇ ದಿಢೀರನೆ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯಲಾಯಿತು, ಏಕೆ? ಇದು ರಾಷ್ಟ್ರೀಯ ತುರ್ತುಪರಿಸ್ಥಿತಿಯ ವಿಷಯವೇ? ಬಳಿಕ ರಹಸ್ಯ ಸಮಾರಂಭದಲ್ಲಿ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದು ನಮಗೆ ಕಂಡಿತು.’ ಎಂದು ಸಿಂಘ್ವಿ ವಾದಿಸಿದರು.

ಅಜಿತ್
ಪವಾರ್ ನೇತೃತ್ವದ ಎನ್ಸಿಪಿ ಬೆಂಬಲದೊಂದಿಗೆ ಬಹುಮತ ಇರುವುದಾಗಿ ಬಿಜೆಪಿ ಪ್ರತಿಪಾದಿಸಿದೆ. ಆದರೆ ಹಿಂದಿನ ದಿನ (ನವೆಂಬರ್ ೨೨) ಎನ್ಸಿಪಿಯ ೫೪ ಚುನಾಯಿತ ಸದಸ್ಯರ ಪೈಕಿ ೪೧ ಮಂದಿ ಅಜಿತ್ ಪವಾರ್ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನಾಗಿ ಸ್ವೀಕರಿಸಲು ನಿರಾಕರಿಸಿದ್ದರು. ೪೧ ಮಂದಿ ಎನ್ಸಿಪಿ ಸದಸ್ಯರು ತಿರಸ್ಕರಿಸಿದ್ದಾಗ ಅಜಿತ್ ಪವಾರ್ ಅವರು ಎನ್ಸಿಪಿ ನಾಯಕ ಎಂಬುದಾಗಿ ಬಿಜೆಪಿ ಹೇಗೆ ಪ್ರತಿಪಾದಿಸುತ್ತದೆ? ಇದು ರಾಜ್ಯಪಾಲರು ತಮ್ಮ ಮನಸ್ಸನ್ನು ಅನ್ವಯಿಸಿಲ್ಲ ಎಂಬುದನ್ನು ತೋರಿಸುತ್ತದೆಎಂದು ಸಿಂಘ್ವಿ ಹೇಳಿದರು.

ಮೇಲಿನಿಂದ ಸೂಚನೆ:ವಾಸ್ತವಾಂಶಗಳು ಏನು? ನಿರ್ಣಯಗಳೇ? ಫಡ್ನವಿಸ್ ಅವರಿಗೆ ಮೇಲ್ನೋಟಕ್ಕೆ ಬಹುಮತ ಇದೆ ಎಂಬುದಾಗಿ ಎಂಬುದಾಗಿ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟು, ಅವರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರ ಸ್ವರೂಪ ಏನು? ಯಾವುದೂ ಬಹಿರಂಗ ದಾಖಲೆಗಳಲ್ಲಿ ಕಾಣುತ್ತಿಲ್ಲ. ಇದು ವಿಲಕ್ಷಣ.  ಇದು ರಾಜ್ಯಪಾಲರುಮೇಲಿನಿಂದಬಂದ ನೇರ ಸೂಚನೆ ಪ್ರಕಾರ ಕೆಲಸ ಮಾಡಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಸಿಬಲ್ ನ್ಯಾಯಾಲಯಕ್ಕೆ ಹೇಳಿದರು.

ರಾಜ್ಯಪಾಲರ ಕ್ರಮವೇ ಸಂಶಯಾಸ್ಪದಎಂದು ಹೇಳಿದ ಸಿಂಘ್ವಿ, ’ಇಂತಹ ಸಂದರ್ಭಗಳಲ್ಲಿ ಯಾವಾಗಲೂ ಸುಪ್ರೀಂಕೋರ್ಟ್ ತತ್ ಕ್ಷಣ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ಆಜ್ಞಾಪಿಸಿದೆಎಂದು ವಾದಿಸಿದರು.

ಇದನ್ನು ವಿರೋಧಿಸಿದ ರೋಹ್ಟಗಿ ಅವರು೩೨ನೇ ಪರಿಚ್ಛೇದದ (ನಾಗರಿಕರ ಮೂಲಭೂತ ಹಕ್ಕುಗಳನ್ನು ರಾಜ್ಯವು ಉಲ್ಲಂಘಿಸಿದಾಗ ಬಳಸುವ ಪರಿಚ್ಛೇದ) ಅಡಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಯು ವಿಚಾರಣಾರ್ಹವೇ ಅಲ್ಲ, ಏಕೆಂದರೆ ಇಲ್ಲಿನ ಅರ್ಜಿದಾರರು ರಾಜಕೀಯ ಪಕ್ಷಗಳು, ಮಾನವ ಜೀವಿಗಳಲ್ಲಎಂದು ವಾದಿಸಿದರು.

ಆದರೆ ನ್ಯಾಯಮೂರ್ತಿ ಸಂಜೀವ ಖನ್ನಾ ಅವರುಇದು ತಾಂತ್ರಿಕ ಆರೋಪವಷ್ಟೆ. ಪ್ರಜಾಪ್ರಭುತ್ವದ ಮೂಲಭೂತ ತತ್ವಗಳನ್ನು ಗೌಣಗೊಳಿಸಿ ಹೊಸ ರಚನೆಗೆ ಕಾರಣವಾಗುವಂತಹ ಸರಣಿ ಘಟನೆಗಳ ಬಗ್ಗೆ ಪರಿಶೀಲಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆಎಂದು ಹೇಳಿದರು.

ಆಗ ರಾಷ್ಟ್ರಪತಿ ಮತ್ತು ರಾಜ್ಯಪಾಲರು ತಮ್ಮ ಅಧಿಕೃತ ಕರ್ತವ್ಯವನ್ನು ನಿಭಾಯಿಸಿ ಮಾಡುವ ಕೆಲಸಗಳು ನ್ಯಾಯಾಲಯಗಳ ಕಾನೂನು ಕ್ರಮದಿಂದ ವಿನಾಯ್ತಿ ಹೊಂದಿವೆ ಎಂದು ರೋಹ್ಟಗಿ ಅವರು ಸಂವಿಧಾನದ ೩೬೧ನೇ ಪರಿಚ್ಛೇದವನ್ನು ಉಲ್ಲೇಖಿಸಿ ವಾದಿಸಿದರು.

ನ್ಯಾಯಾಲಯವು ಸದನದಲ್ಲಿ ಬಲಾಬಲ ಪರೀಕ್ಷೆಗೆ ಆದೇಶ ನೀಡುವಂತಿಲ್ಲ. ಸದನಗಳು ಸುಪ್ರೀಂಕೋರ್ಟನ್ನು ಗೌರವಿಸುವಂತೆಯೇ  ಸುಪ್ರೀಂಕೋರ್ಟ್ ಸದನವನ್ನು ಗೌರವಿಸಬೇಕುಎಂದು ರೋಹ್ಟಗಿ ಹೇಳಿದರು.

ತತ್ ಕ್ಷಣವೇ ಸದನ ಪರೀಕ್ಷೆ ನಡೆಯಬೇಕು ಎಂಬುದಾಗಿ ಅರ್ಜಿದಾರ ಪಕ್ಷಗಳು ಮಾಡಿದ ಮನವಿಯನ್ನು ಪ್ರಸ್ತಾಪಿಸಿದ ರೋಹ್ಟಗಿಚುನಾವಣೆ ಅಕ್ಟೋಬರ್ ೨೪ಕ್ಕೆ ಮುಗಿದುಹೋಗಿದೆ ಮತ್ತು ೧೯ ದಿನಗಳ ಕಾಲ ಅವರು ನಿದ್ರ ಮಾಡುತ್ತಿದ್ದರು. ಈಗ ಈದಿನವೇ ಸದನ ಪರೀಕ್ಷೆ ನಡೆಯಬೇಕು ಎಂದು ಅವರು ಬಯಸಿದ್ದಾರೆಎಂದು ರೋಹ್ಟಗಿ ನುಡಿದರು.

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಶನಿವಾರ ನಸುಕಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದ ಬಳಿಕ ಬಿಜೆಪಿಯ ನಾಯಕ ದೇವೇಂದ್ರ ಫಡ್ನವಿಸ್ ಅವರಿಗೆ ಮುಖ್ಯಮಂತ್ರಿಯಾಗಿಯೂ, ಎನ್ಸಿಪಿ ನಾಯಕ ಅಜಿತ್ ಪವಾರ್ ಅವರಿಗೆ ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣ ವಚನ ಬೋಧಿಸಿದ್ದನ್ನು ಪ್ರಶ್ನಿಸಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟವು ಶನಿವಾರವೇ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ, ೨೪ ಗಂಟೆಗಳ ಒಳಗಾಗಿ ಸದನ ಪರೀಕ್ಷೆ ನಡೆಸಲು ಆಜ್ಞಾಪಿಸುವಂತೆ ಕೋರಿತ್ತು. ಬಿಜೆಪಿಯು ತನ್ನ ೧೦೫ ಮಂದಿ ಸದಸ್ಯ ಬಲದ ಜೊತೆಗೆ ಎನ್ಸಿಪಿಯ ಎಲ್ಲ ೫೪ ಸದಸ್ಯರು ಮತ್ತು ೧೧ ಮಂದಿ ಪಕ್ಷೇತರರ ಬೆಂಬಲ ಸೇರಿದಂತೆ ೨೮೮ ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ೧೭೦ಕ್ಕೂ ಹೆಚ್ಚು ಶಾಸಕರ ಬೆಂಬಲ ಹೊಂದಿರುವುದಾಗಿ ಬಿಜೆಪಿ ಪ್ರತಿಪಾದಿಸಿತ್ತು.

ದಿಢೀರ್ ಬೆಳವಣಿಗೆಯಿಂದ ಆಘಾತಗೊಂಡಿದ್ದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿ ಶನಿವಾರವೇ ತಮ್ಮ ಶಾಸಕರನ್ನು ಬೇರೆ ರಾಜ್ಯಗಳಿಗೆ ರೆಸಾರ್ಟ್ಗಳಿಗೆ ಕಳುಹಿಸಲು ಆರಂಭಿಸಿದ್ದವು. ಶನಿವಾರ ರಾತ್ರಿ ನಡೆದ ಎನ್ಸಿಪಿ ಶಾಸಕಾಂಗ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರೂ ಸೇರಿದಂತೆ ೫೦ ಮಂದಿ ಶಾಸಕರು ಪಾಲ್ಗೊಂಡಿದ್ದರು. ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಲವು ಸದಸ್ಯರೂ ಎನ್ಸಿಪಿ ಶಾಸಕಾಂಗ ಸಭೆಗೆ ಹಾಜರಾಗಿದ್ದರು. ಆದರೆ ಒಟ್ಟು ೧೮ ಮಂದಿ ಶಾಸಕರು ಗೈರುಹಾಜರಾಗಿದ್ದರು ಎಂದು ಪಕ್ಷ ಮೂಲಗಳು ಹೇಳಿದ್ದವು. ಪಕ್ಷವು ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಕಿತ್ತು ಹಾಕಿ, ಜಯಂತ ಪಾಟೀಲ್ ಅವರನ್ನು ನೂತನ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಿತ್ತು.

No comments:

Advertisement