My Blog List

Monday, November 25, 2019

ಅಜಿತ್ ಪವಾರ್ ಹೇಳಿಕೆ ಸುಳ್ಳು, ಬಿಜೆಪಿ ಜೊತೆ ಮೈತ್ರಿ ಇಲ್ಲ: ಶರದ್ ಪವಾರ

ಅಜಿತ್ ಪವಾರ್ ಹೇಳಿಕೆ ಸುಳ್ಳು, ಬಿಜೆಪಿ
ಜೊತೆ ಮೈತ್ರಿ ಇಲ್ಲ: ಶರದ್ ಪವಾರ
ಮುಂಬೈ: ತಾವು ಈಗಲೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿ  (ಎನ್ಸಿಪಿ) ಇರುವುದಾಗಿಯೂ, ಎನ್ಸಿಪಿ-ಬಿಜೆಪಿ ಮೈತ್ರಿಕೂಟವು ಮಹಾರಾಷ್ಟ್ರಕ್ಕೆ ಸ್ಥಿರ ಸರ್ಕಾರವನ್ನು ನೀಡುವುದಾಗಿಯೂ ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ನೀಡಿದ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತಮ್ಮ ಅಳಿಯನ ಹೇಳಿಕೆ ಸುಳ್ಳು, ದಾರಿ ತಪ್ಪಿಸುವಂತಹುದು ಮತ್ತು ಜನರಲ್ಲಿ ಗೊಂದಲ ಮೂಡಿಸುವ ಹಾಗೂ ತಪ್ಪಭಿಪ್ರಾಯ ಮೂಡಿಸುವ ಉದ್ದೇಶದ್ದುಎಂದು 2019 ನವೆಂಬರ್  24ರ ಭಾನುವಾರ ಹೇಳಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಎನ್ಸಿಪಿಯು ಸರ್ಕಾರ ರಚನೆಗಾಗಿ ಶಿವಸೇನಾ ಮತ್ತು ಭಾರತ ರಾಷ್ಟ್ರೀಯ ಕಾಂಗ್ರೆಸ್ ಮಹಾರಾಷ್ಟ್ರ ಘಟಕದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸರ್ವಾನುಮತದ ನಿರ್ಧಾರ ಕೈಗೊಂಡಿದೆಎಂದು ಶರದ್ ಪವಾರ್ ಸ್ಪಷ್ಟ ಪಡಿಸಿದರು.

ಶ್ರೀ ಅಜಿತ್ ಪವಾರ್ ಅವರ ಹೇಳಿಕೆಯು ಸುಳ್ಳು ಮತ್ತು ಜನರನ್ನು ದಾರಿತಪ್ಪಿಸುವ ಹಾಗೂ ಗೊಂದಲ ಸೃಷ್ಟಿ ಮತ್ತು ತಪ್ಪಭಿಪ್ರಾಯ ಮೂಡಿಸುವ ಉದ್ದೇಶದ್ದುಎಂದು ಪವಾರ್ ಅವರು ಭಾನುವಾರ ಸಂಜೆ ತಮ್ಮ ಟ್ವೀಟಿನಲ್ಲಿ ತಿಳಿಸಿದರು.

ಇದಕ್ಕೆ ಮುನ್ನ ಅಜಿತ್ ಪವಾರ್ ಅವರು ತಾವು ಈಗಲೂ ಎನ್ಸಿಪಿಯಲ್ಲೇ ಇರುವುದಾಗಿಯೂ, ತಮ್ಮ ಮಾವ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರುನಮ್ಮನಾಯಕ ಎಂಬುದಾಗಿಯೂ ಟ್ವೀಟ್ ಮಾಡಿದ್ದರು. ಬಿಜೆಪಿ-ಎನ್ಸಿಪಿ ಮೈತ್ರಿಕೂಟವು ಮುಂದಿನ ಐದು ವರ್ಷಗಳ ಅವಧಿಗೆ ಮಹಾರಾಷ್ಟ್ರಕ್ಕೆ ಸ್ಥಿರ ಸರ್ಕಾರವನ್ನು ನೀಡುವುದು ಮತ್ತು ಜನರ ಕಲ್ಯಾಣಕ್ಕಾಗಿ ಶ್ರಮಿಸುವುದು ಎಂದೂ ಅವರು ಟ್ವೀಟಿನಲ್ಲಿ ತಿಳಿಸಿದ್ದರು.

ಶನಿವಾರ ಬೆಳಗ್ಗೆ ಅಚ್ಚರಿಕರವಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ಜೊತೆಗೇ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಮಧ್ಯೆ, ಪತ್ರಕರ್ತರೊಂದಿಗೆ ಮಾತನಾಡಿದ ಎನ್ಸಿಪಿ ವಕ್ತಾರ ನವಾಬ್ ಮಲಿಕ್ ಅವರುಪವಾರ್ ಸಾಹೇಬ್ ಅವರು ಶಾಸಕರ ಜೊತೆ ಮಾತನಾಡಿದ್ದಾರೆ ಮತ್ತು ತಮ್ಮ ಮುಂದಿನ ತಂತ್ರವನ್ನು ಸೋಮವಾರ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಅನುಸರಿಸಿ ರೂಪಿಸಲಾಗುವುದು ಎಂದು ಹೇಳಿದ್ದಾರೆಎಂದು ನುಡಿದರು.

ಸದನದಲ್ಲಿ ವಿಶ್ವಾಸ ಮತದ ಮೇಲೆ ಮತದಾನ ನಡೆದರೆ ನಾವು ನಿರ್ಣಯವನ್ನು ಪರಾಭವಗೊಳಿಸುತ್ತೇವೆ. ರಾಜ್ಯದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ಬರುತ್ತದೆಎಂಬುದಾಗಿ ಶರದ್ ಪವಾರ್ ಹೇಳಿದ್ದಾರೆ ಎಂದು ಮಲಿಕ್ ಪುನರುಚ್ಚರಿಸಿದರು.

ಶಿವಸೇನಾ
ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೂ ಸಭೆಯಲ್ಲಿ ಹಾಜರಿದ್ದರು.

ಅಜಿತ್ ಪವಾರ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಮಲಿಕ್ ಅವರುಅಜಿತ್ ಪವಾರ್ ಅವರು ಸ್ವತಃ ಟ್ವೀಟ್ ಮಾಡುತ್ತಾರೆಯೇ? ಅಥವಾ ಅದಕ್ಕಾಗಿ ಕಂಪೆನಿಯೊಂದನ್ನು ನೇಮಿಸಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲಎಂದು ನುಡಿದರು.

ಅವರು (ಅಜಿತ್) ಪವಾರ್ ಸಾಹೇಬ್ (ಶರದ್ ಪವಾರ್) ತಮ್ಮ ನಾಯಕ ಎಂಬುದಾಗಿ ಒಪ್ಪಿದ್ದಾರೆ. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ನಾವು ಬಯಸುತ್ತೇವೆಎಂದು ಮಲಿಕ್ ಹೇಳಿದರು.

ಇದಕ್ಕೆ ಮುನ್ನ ಭಾನುವಾರ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನೀಡಿದ ಪತ್ರ ಮತ್ತು ಫಡ್ನವಿಸ್ ಅವರು ರಾಜ್ಯಪಾಲರಿಗೆ ಸಲ್ಲಿಸಿದ ಸರ್ಕಾರ ರಚನೆಯ ಹಕ್ಕು ಮಂಡನೆ ಪತ್ರ ಮತ್ತು ಶಾಸಕರ ಬೆಂಬಲಪತ್ರಗಳನ್ನು ನವೆಂಬರ್ ೨೫ರ ಸೋಮವಾರ ಹಾಜರು ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಆಜ್ಞಾಪಿಸಿತ್ತು.

2019 ನವೆಂಬರ್ 25ರ ಸೋಮವಾರ ಬೆಳಗ್ಗೆ ೧೦.೩೦ರ ಒಳಗಾಗಿ ಪತ್ರಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನ್ಯಾಯಾಲಯವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರಿಗೆ ಆಜ್ಞಾಪಿಸಿತ್ತು. ಮೆಹ್ತ ಅವರು ಎರಡು ದಿನಗಳ ಕಾಲಾವಕಾಶ ಕೋರಿದರಾದರೂ, ನ್ಯಾಯಾಲಯ ಅವರ ಮನವಿಯನ್ನು ನಿರಾಕರಿಸಿತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.

No comments:

Advertisement