My Blog List

Sunday, November 3, 2019

ದೆಹಲಿ ಕೋರ್ಟ್ ಆವರಣದಲ್ಲೇ ಪೊಲೀಸ್-ವಕೀಲರ ನಡುವೆ ಘರ್ಷಣೆ

ದೆಹಲಿ ಕೋರ್ಟ್ ಆವರಣದಲ್ಲೇ ಪೊಲೀಸ್-
ವಕೀಲರ ನಡುವೆ ಘರ್ಷಣೆ
ನವದೆಹಲಿ:  ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಮತ್ತು ವಕೀಲರ ನಡುವೆ 2019 ನವೆಂಬರ್ 02ರ ಶನಿವಾರ  ಘರ್ಷಣೆಯಲ್ಲಿ ಓರ್ವ ವಕೀಲ ತೀವ್ರ ಗಾಯಗೊಂಡರು.

ಶನಿವಾರ ಮಧ್ಯಾಹ್ನ ನ್ಯಾಯಲಯದ ಆವರಣದಲ್ಲಿ ಪಾರ್ಕಿಂಗ್ ವಿಚಾರವಾಗಿ ಪೊಲೀಸ್ ಮತ್ತು ವಕೀಲರ ನಡುವೆ ಘರ್ಷಣೆ ನಡೆದಿದ್ದು, ಗೋಲಿಬಾರ್ ಮಾಡಲಾಗಿದ್ದು, ಪೊಲೀಸರ ಗುಂಡೇಟಿಗೆ ವಕೀಲರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವರದಿ ತಿಳಿಸಿತು.
ಕೋರ್ಟ್ ಆವರಣದೊಳಗೆ ಆಗಮಿಸುವಾಗ ಪೊಲೀಸರ ವಾಹನ ವಕೀಲರಿಗೆ  ಗುದ್ದಿತು. ವೇಳೆ ಪೊಲೀಸರ ವಿರುದ್ಧ ವಕೀಲರು ಕಿರುಚಾಡಿದರು. ಆಗ ಪೊಲೀಸರು ವಕೀಲರನ್ನು ವಾಹನದೊಳಗೆ ಹಾಕಿ ಹಿಗ್ಗಾಮುಗ್ಗಾ ಥಳಿಸಿದರು. ಒಟ್ಟು ಆರು ಮಂದಿ ಪೊಲೀಸರು ವಕೀಲರಿಗೆ ಮನಬಂದತೆ ಥಳಿಸಿದರು ಎಂದರು ತೀಸ್ ಹಜಾರಿ ಅಸೊಸಿಯೇಷನ್ ಪದಾಧಿಕಾರಿ ಜೈ ಬಿಸ್ವಾಲ್ ಆಪಾದಿಸಿದರು.

ಘಟನಾ ಸ್ಥಳಕ್ಕೆ ಯಾರನ್ನೂ ಬಿಡುತ್ತಿಲ್ಲ. ಸ್ಥಳೀಯ ಪೊಲೀಸರು ನಮ್ಮನ್ನು ಕೋರ್ಟ್ ಆವರಣದೊಳಗೆ ಬಿಡದೇ ತಡೆಯುತ್ತಿದ್ದಾರೆ. ವಿಚಾರ ನಾವು ದೆಹಲಿ ಹೈಕೋರ್ಟಿಗೆ ತಿಳಿಸಿದ್ದೇವೆ. ಆರು ಮಂದಿ ವಕೀಲರನ್ನು ಒಳಗೊಂಡ  ನಿಯೋಗ ಹೈಕೋರ್ಟಿಗೆ ತೆರಳಿದೆ ಎಂದು ಜೈ ಬಿಸ್ವಾಲ್ ತಿಳಿಸಿದರು.

ಇನ್ನೊಂದೆಡೆ ವಾಹನ ಪಾರ್ಕಿಂಗ್ ವಿಚಾರಕ್ಕೆ ಪೊಲೀಸರು ಮತ್ತು ವಕೀಲರ ಮಧ್ಯೆ ಕೋರ್ಟ್ ಆವರಣದಲ್ಲೇ ವಾಗ್ವಾದ ನಡೆದು, ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ವಕೀಲರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ವಕೀಲರು ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ವಾಹನಗಳು ಸುಟ್ಟು ಕರಕಲಾಗಿವೆ. ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನ್ಯಾಯಲಯದ ಆವರಣದಲ್ಲಿ ಜಮಾಯಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು ಎಂದು ವರದಿ ತಿಳಿಸಿತು.

No comments:

Advertisement