Sunday, November 17, 2019

ಮೊಬೈಲ್ ವಿಕಿರಣದಿಂದ ರಕ್ಷಣೆಗೆ ತುಳಸಿ: ರಾಮದೇವ್

ಮೊಬೈಲ್ ವಿಕಿರಣದಿಂದ ರಕ್ಷಣೆಗೆ ತುಳಸಿ: ರಾಮದೇವ್
ಉಡುಪಿಮೊಬೈಲ್ಕವರಿನ  ಹಿಂದೆ ತುಳಸಿ ದಳಗಳನ್ನು ಇಟ್ಟುಕೊಂಡರೆ ವಿಕಿರಣದಿಂದ ರಕ್ಷಣೆ ಪಡೆಯಬಹುದು ಎಂದು ಯೋಗಗುರು ಬಾಬಾ ರಾಮದೇವ್  2019 ನವೆಂಬರ್ 16ರ ಶನಿವಾರ ಇಲ್ಲಿ ಬಹಿರಂಗ ಪಡಿಸಿದರು.
ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಬೃಹತ್ ಯೋಗ ಶಿಬಿರದಲ್ಲಿ, ವಿಕಿರಣದಿಂದ (ರೇಡಿಯೇಷನ್)  ಹೇಗೆ ರಕ್ಷಣೆ ಪಡೆಯಬಹುದು ಎಂಬುದನ್ನು ಮಠದ ಸಿಬ್ಬಂದಿಯೊಬ್ಬರ ಮೊಬೈಲ್ಪಡೆದುಕೊಂಡು ಪ್ರಾತ್ಯಕ್ಷಿಕೆ ಮೂಲಕ  ರಾಮದೇವ್ ತೋರಿಸಿದರು.

ಮನೆಯಲ್ಲಿರುವ ಟಿವಿ, ಲ್ಯಾಪ್ಟಾಪ್‌, ಮೊಬೈಲ್ಹಾಗೂ ಎಲೆಕ್ಟ್ರಾನಿಕ್ವಸ್ತುಗಳು ವಿಕಿರಣಗಳನ್ನು ಹೊರಸೂಸುತ್ತವೆ. ಇದರಿಂದ ರಕ್ಷಣೆ ಪಡೆಯಬೇಕಾದರೆ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ತುಳಸಿ ದಳ ಬಳಸಿ ವಿಕಿರಣದಿಂದ ರಕ್ಷಣೆ ಪಡೆಯಬಹುದು ಎಂಬ ವಿಚಾರವನ್ನು ಇದೇ ಮೊದಲ ಬಾರಿಗೆ ಬಹಿರಂಗ ಗೊಳಿಸುತ್ತಿರುವುದಾಗಿಯೂ ಬಾಬಾ ರಾಮದೇವ್ಹೇಳಿದರು

No comments:

Advertisement