My Blog List

Tuesday, November 26, 2019

ಫಡ್ನವಿಸ್ ಸರ್ಕಾರದ ’ಮಹಾ’ ಪತನ, ಉದ್ಧವ್ ಠಾಕ್ರೆ ದಾರಿ ಸುಗಮ

ಫಡ್ನವಿಸ್ ಸರ್ಕಾರದಮಹಾಪತನ, ಉದ್ಧವ್ ಠಾಕ್ರೆ ದಾರಿ ಸುಗಮ
ಮುಂಬೈ: ಮಹಾರಾಷ್ಟ್ರದಲ್ಲಿ ನಾಟಕೀಯ ಬೆಳವಣಿಗೆಯಲ್ಲಿ 2019 ನವೆಂಬರ್ 23ರ ಶನಿವಾರ ಬೆಳಗ್ಗೆ ಅಧಿಕಾರಕ್ಕೆ ಏರಿದ್ದ ಭಾರತೀಯ ಜನತಾ ಪಕ್ಷದ ಸರ್ಕಾರವು, ಸದನದಲ್ಲಿ ಬಲಾಬಲ ಪರೀಕ್ಷೆಗೆ ಸುಪ್ರೀಂಕೋರ್ಟ್ ಗಡುವು ವಿಧಿಸಿದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆಯೊಂದಿಗೆ 2019 ನವೆಂಬರ್ 27ರ ಮಂಗಳವಾರ ಪತನಗೊಂಡಿತು.

ಫಡ್ನವಿಸ್ ಸರ್ಕಾರದ ಪತನದೊಂದಿಗೆ ಶಿವಸೇನಾ-ನ್ಯಾಷನಲಿಸ್ಟ್ ಕಾಂಗೆಸ್ ಪಕ್ಷ (ಎನ್ಸಿಪಿ)- ಕಾಂಗ್ರೆಸ್ ಪಕ್ಷಗಳಮಹಾ ವಿಕಾಸ್ ಆಘಾಡಿಮೈತ್ರಿಕೂಟದ ಅಧಿಕಾರದ ಹಾದಿ ಸುಗಮಗೊಂಡಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ಎನ್ಸಿಪಿ ಮುಖಂಡ ಶರದ್ ಪವಾರ್ ಘೋಷಿಸಿದ್ದಾರೆ. 
ಇದರೊಂದಿಗೆ ಅತ್ಯಂತ ಕಡಿಮೆ ಅವಧಿಯ ಮುಖ್ಯಮಂತ್ರಿಗಳ ಪಟ್ಟಿಗೆ ಕೇವಲ ೮೦ ಗಂಟೆಗಳ ಆಡಳಿತ ನಡೆಸಿದ ಫಡ್ನವಿಸ್ ಅವರೂ ಸೇರ್ಪಡೆಯಾದರು.

ಸದನದಲ್ಲಿ ವಿಶ್ವಾಸಮತ ಯಾಚಿಸುವಂತೆ ಫಡ್ನವಿಸ್ ಅವರಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಬಿಜೆಪಿಯ ಉನ್ನತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ಮಾತನಾಡಿದ ಬಳಿಕ ಮುಖ್ಯಮಂತ್ರಿ ಫಡ್ನವಿಸ್ ಅವರು ಪದತ್ಯಾಗದ ವಿಚಾರವನ್ನು ಬಹಿರಂಗ ಪಡಿಸಿದರು.

ಅಧಿಕಾರಕ್ಕೆ ಏರಿದ ಮೂರೇ ದಿನದಲ್ಲಿ ಅಜಿತ್ ಪವಾರ್ ರಾಜೀನಾಮೆ ಬೆನ್ನಲ್ಲೇ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪದತ್ಯಾಗವನ್ನು ಪ್ರಕಟಿಸಿದ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಫಡ್ನವಿಸ್ಅಜಿತ್ ಪವಾರ್ ಅವರು ನನಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕುದುರೆ ವ್ಯಾಪಾರ ನಡೆಸಬಾರದು ಎಂದು ನಾವು ಮೊದಲ ದಿನವೇ ತೀರ್ಮಾನಿಸಿದ್ದೆವು. ಎನ್ಸಿಪಿ ನಮ್ಮ ಜೊತೆಗಿದೆ ಎಂಬ ಏಕೈಕ ಕಾರಣಕ್ಕೆ ನಾವು ಸರ್ಕಾರ ರಚಿಸಲು ನಿರ್ಧರಿಸಿದೆವು. ಪವಾರ್ ಅವರು ರಾಜೀನಾಮೆ ನೀಡಿದ್ದರಿಂದ ನಾನು ಕೂಡಾ ಪದತ್ಯಾಗ ಮಾಡುವೆಎಂದು ಹೇಳಿದರು.

 ಬಿಜೆಪಿಗೆ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ಲಭಿಸಿತ್ತು. ಜನಾದೇಶದಂತೆ ಸರ್ಕಾರ ರಚಿಸಲು ನಾವು ಯತ್ನಿಸಿದೆವು. ಆದರೆ ಇದು ಸಂಖ್ಯಾ ಆಟ ಎಂಬುದನ್ನು ಶಿವಸೇನೆ ಅರ್ಥಮಾಡಿಕೊಂಡಿತು ಮತ್ತು ಅವರ ಚೌಕಾಸಿ ಶಕ್ತಿ ಹೆಚ್ಚಿದೆ ಎಂಬುದು ನಮಗೂ ಅರ್ಥವಾಯಿತುಎಂದು ವಿವರಿಸಿದರು.

ಇದಕ್ಕೆ ಮುನ್ನ ಬುಧವಾರ ಸಾಯಂಕಾಲದೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ಸುಪ್ರೀಂ ಕೋರ್ಟ್ ಫಡ್ನವಿಸ್ ಅವರಿಗೆ ನಿರ್ದೇಶನ ನೀಡುತ್ತಿದ್ದಂತೆಯೇ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಎನ್.ಸಿ.ಪಿ.ನಾಯಕ ಅಜಿತ್ ಪವಾರ್ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು.

ಮಧ್ಯಾಹ್ನ .೩೦ಕ್ಕೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತಮ್ಮ ರಾಜೀನಾಮೆ  ವಿಚಾರವನ್ನು ಪ್ರಕಟಿಸಿದರು.

ಮಹಾರಾಷ್ಟ್ರದ ಜನತೆ ಹೇಗೆ ಬಿಜೆಪಿ-ಶಿವಸೇನೆಯ ಮಹಾಯುತಿಗೆ ಸಂಪೂರ್ಣ ಬಹುಮತವನ್ನು ನೀಡಿದ್ದರು ಎಂಬುದನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಫಡ್ನವಿಸ್, ಬಳಿಕ ಶಿವಸೇನೆ ಅಧಿಕಾರಕ್ಕಾಗಿ ಚೌಕಾಸಿ ನಡೆಸಿ ನಮ್ಮ ಮೈತ್ರಿಯಿಂದ ಹೊರನಡೆಯಿತು ಎಂದು ಆರೋಪಿಸಿದರು.

ಭಾರತೀಯ ಜನತಾ ಪಕ್ಷವನ್ನು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ದೂರವಿರಿಸುವುದೇ ಮೂರು ಭಿನ್ನ ಸಿದ್ಧಾಂತಗಳನ್ನು ಹೊಂದಿದ್ದ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಸಾಮಾನ್ಯ ಗರಿಷ್ಠ ಉದ್ದೇಶವಾಗಿತ್ತು ಎಂದು ಫಡ್ನವಿಸ್ ಟೀಕಿಸಿದರು.

ಅಜಿತ್ ಪವಾರ್ ರಾಜೀನಾಮೆಯ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷದ ಬಳಿ ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾಬಲ ಇಲ್ಲದೇ ಇರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಘೋಷಿಸಿದರು.

ಶಿವಸೇನೆಗೆ ಭರವಸೆ ಕೊಟ್ಟಿರಲಿಲ್ಲ: ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತೇವೆ ಎಂದು ನಾವೆಂದೂ ಮಾತು ಕೊಟ್ಟಿರಲಿಲ್ಲ. ಆದರೆ ಫಲಿತಾಂಶ ಪ್ರಕಟವಾದ ದಿನದಿಂದ ಶಿವಸೇನಾ ಇದೇ ಮಾತು ಆಡುತ್ತಾ ಬಂತು. ಶಿವಸೇನಾ ನಾಯಕರಮಾತೋಶ್ರೀಬಾಗಿಲು ಬಿಜೆಪಿಗೆ ಎಂದೂ ತೆರೆಯಲಿಲ್ಲ. ನಮ್ಮೊಡನೆ ಅವರು ಸರಿಯಾಗಿ ಮಾತನ್ನೂ ಆಡಲಿಲ್ಲ. ಆದರೆ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರ ಜೊತೆಗೆ ತಾವಾಗಿಯೇ ಹೊರಗೆ ಹೋಗಿ ಮಾತನಾಡಿದರುಎಂದು ಫಡ್ನವಿಸ್ ಹೇಳಿದರು.

ಬಿಜೆಪಿ-ಶಿವಸೇನಾ ಮೈತ್ರಿಯಮಹಾಯುತಿಗೆ ಮಹಾರಾಷ್ಟ್ರದ ಜನರು ಬಹುಮತ ಕೊಟ್ಟಿದ್ದರು. ನಮ್ಮ ಹಿಂದಿನ ಆಡಳಿತ ಮೆಚ್ಚಿ ಜನರು ನಮಗೆ ಜನಾದೇಶ ಕೊಟ್ಟಿದ್ದರು. ಅದಕ್ಕಾಗಿ ಅವರಿಗೆ ನಾವು ಅಭಾರಿಗಳು. ಬಿಜೆಪಿ ಸ್ಪರ್ಧಿಸಿದ್ದ ಶೇ ೭೦ ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ ದುರ್ದೈವದಿಂದ ಸಂಖ್ಯಾ ಆಟದಲ್ಲಿ ನಮಗೆ ಅಧಿಕಾರ ತಪ್ಪಿತು. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಶಿವಸೇನಾ ಬೇರೆ ಪಕ್ಷದೊಂದಿಗೆ ಈಗ ಮೈತ್ರಿ ಮಾಡಿಕೊಂಡಿದೆಎಂದು ಫಡ್ನವಿಸ್ ದೂರಿದರು.

ಕಳೆದ ಐದು ವರ್ಷಗಳಲ್ಲಿ ನನ್ನ ಆಡಳಿತ ನನಗೆ ತೃಪ್ತಿ ಕೊಟ್ಟಿದೆ. ರೈತರು, ಗ್ರಾಮೀಣಾಭಿವೃದ್ಧಿ, ನೀರಾವರಿ, ಮುಂಬೈ ಮಹಾನಗರ ಅಭಿವೃದ್ಧಿಯ ವಿಚಾರದಲ್ಲಿ ನಾನು ಮಾಡಿದ ಕೆಲಸ ನನಗೆ ತೃಪ್ತಿ ಕೊಟ್ಟಿದೆ. ನನಗೆ ಅವಕಾಶ ಕೊಟ್ಟದ್ದಕ್ಕೆ ಮಹಾರಾಷ್ಟ್ರದ ಜನರಿಗೆ ನಾನು ಅಭಾರಿಯಾಗಿದ್ದೇನೆ ಎಂದು ಫಡ್ನವಿಸ್ ಹೇಳಿದರು.

ನಾವೆಂದೂ ಕುದುರೆ ವ್ಯಾಪಾರವನ್ನು ಉತ್ತೇಜಿಸಿಲ್ಲ, ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ನಾನು ಅಧಿಕಾರದಿಂದ ಪಕ್ಕಕ್ಕೆ ಸರಿಯುತ್ತಿದ್ದೇನೆ. ನಾವು ಸರ್ಕಾರ ರಚಿಸುವುದಿಲ್ಲ. ಬೇರೆ ಯಾರು ಬೇಕಾದರೂ ಸರ್ಕಾರ ರಚಿಸಲಿ. ನಾನು ಶುಭ ಕೋರುತ್ತೇನೆ.  ಅವರಿಗೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಷ್ಟೇ ಮುಖ್ಯ. ಆದರೆ ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆಎಂದು ಬಿಜೆಪಿ ನಾಯಕ ನುಡಿದರು.

ಅಜಿತ್ ಪವಾರ್ ರಾಜೀನಾಮೆ ಕೊಟ್ಟ ನಂತರ ನಮಗೆ ಬೇರೆ ಮಾರ್ಗವಿಲ್ಲ. ಹೀಗಾಗಿ ನಾನೂ ರಾಜೀನಾಮೆ ಕೊಡುತ್ತಿದ್ದೇನೆ. ಈಗಲೇ ರಾಜ್ಯಪಾಲರ ಬಳಿಗೆ ಹೋಗಿ ರಾಜೀನಾಮೆ ಕೊಡುತ್ತೇನೆ ಎಂದು ಅವರು ಹೇಳಿದರು.

ರಾಜ್ಯಪಾಲರು ಮೊದಲು ನಮಗೆ ಸರ್ಕಾರ ರಚಿಸಲು ಆಹ್ವಾನಿಸಿದರು. ನಂತರ ಶಿವಸೇನಾ, ಎನ್ಸಿಪಿಗೆ ಆಹ್ವಾನ ಕೊಟ್ಟರು. ವಿಫಲವಾದ ನಂತರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು. ಮೂರೂ ಪಕ್ಷಗಳು ಪ್ರತ್ಯೇಕ ಸಿದ್ಧಾಂತ ಹೊಂದಿವೆ. ಈಗ ಅವರು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಹೆಸರಿನಲ್ಲಿ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದು ಕನಿಷ್ಠ ಕಾರ್ಯಕ್ರಮವೂ ಅಲ್ಲ, ಗರಿಷ್ಠ ಕಾರ್ಯಕ್ರಮವೂ ಅಲ್ಲ. ಮೂರು ಪಕ್ಷಗಳು ಒಟ್ಟಿಗೆ ಇರಲು ಸಾಧ್ಯವೂ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಷ್ಟೇ ಅವರ ಉದ್ದೇಶ ಎಂದು ಫಡ್ನವಿಸ್ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ನಾವು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ನಮ್ಮ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತುಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಿಕ್ಕಿರಿದ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಪ್ರಮುಖ ಬಿಜೆಪಿ ನಾಯಕರೂ ಹಾಜರಿದ್ದರು.

ಸದನದಲ್ಲಿ ಬಹುಮತ ಸಾಬೀತಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ ಗರಿಗೆದರಿದ ರಾಜಕೀಯ ಚಟುವಟಿಕೆಗಳ ಮಧ್ಯೆ, ಮುಖ್ಯಮಂತ್ರಿ ಫಡ್ನವಿಸ್ ರಾಜೀನಾಮೆಯೊಂದಿಗೆ ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಬಿಜೆಪಿ ಕನಸು ಕನಸಾಗಿಯೇ ಉಳಿಯಿತು.

ಸಂಖ್ಯಾ ಆಟದಲ್ಲಿ ಶಿವಸೇನೆ, ಎನ್ಸಿಪಿ ಕಾಂಗ್ರೆಸ್ ಮಹಾಮೈತ್ರಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಉದ್ಧವ್ ಠಾಕ್ರೆ ಅವರನ್ನು ಮೂರೂ ಪಕ್ಷಗಳ ನಾಯಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಉದ್ಧವ್ ಠಾಕ್ರೆ ಅವರೇ ಮುಖ್ಯಮಂತ್ರಿ ಆಗಿ ಇರಬೇಕು ಎಂಬ ಒಪ್ಪಂದಕ್ಕೂ ಮೂರೂ ಪಕ್ಷಗಳು ಬಂದಿವೆ.

ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಭಾರತೀಯ ಜನತಾ ಪಕ್ಷ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮೈತ್ರಿ ಸರ್ಕಾರ ರಚನೆ ಮಾಡಿದ್ದವು.  ನವೆಂಬರ್ ೨೨ರ ರಾತ್ರಿ ಬಿಜೆಪಿಗೆ ಎನ್ಸಿಪಿ ಬೆಂಬಲವನ್ನು ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಘೋಷಿಸಿದ ಕಾರಣ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ರಾಷ್ಟ್ರಪತಿ ಆಳ್ವಿಕೆ ರದ್ದಿಗೆ ಶಿಫಾರಸು ಮಾಡಿದ್ದರು. ಶನಿವಾರ ನಸುಕಿನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.

ಬಳಿಕ ಶನಿವಾರ ಬೆಳಗ್ಗೆ ಗಂಟೆಯ ವೇಳೆಗೆ ದೇವೇಂದ್ರ ಫಡ್ನವಿಸ್  ಅವರು  ಎರಡನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ಜೊತೆಗೇ ಉಪಮುಖ್ಯಮಂತ್ರಿಯಾಗಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್ ಕೂಡ ಪ್ರಮಾಣ ವಚನ ಸ್ವೀಕರಿಸಿದ್ದರು.

ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಎನ್ಸಿಪಿ ಶಿವಸೇನೆ ಮತ್ತು ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಭಾನುವಾರ ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠ ರಚಿಸಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಬುಧವಾರ ಸಂಜೆ ಗಂಟೆಯ ಒಳಗೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ಆದೇಶ ನೀಡಿತ್ತು.

ಮಧ್ಯೆ, ಎನ್ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಶಾಸಕರು ತಂಗಿರುವ ಹೋಟೆಲಿನಲ್ಲಿ ಮಾತನಾಡಿರುವ ಶರದ್ ಪವಾರ್ ಅವರು ಉದ್ಧವ್ ಠಾಕ್ರೆ ಮುಂದಿನ ಮುಖ್ಯಮಂತ್ರಿ ಎಂದು ಪುನುರಚ್ಚರಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.

"ಉದ್ಧವ್ ಠಾಕ್ರೆ ಮಹಾಮೈತ್ರಿ ಸರ್ಕಾರದ ಮುಂದಾಳುತ್ವ ವಹಿಸುತ್ತಾರೆ. ಅವರೇ ಮೂರೂ ಪಕ್ಷಗಳ ನಾಯಕರಾಗಿ ಸರ್ಕಾರವನ್ನು ಪ್ರತಿನಿಧಿಸುತ್ತಾರೆ. ಉದ್ಧವ್ ನನ್ನ ಮಾತನ್ನು ಗೌರವಿಸಬೇಕು. ಮುಂದಿನ ಮುಖ್ಯಮಂತ್ರಿ ಉದ್ಧವ್," ಎಂದು ಹೇಳಿದ್ದಾರೆ ಎಂದು ವರದಿಗಳು ತಿಳಿಸಿದವು.

ಇದೇ ವೇಳೆಯಲ್ಲಿ ಉದ್ಧವ್ ಅವರು ಮುಂದಿನ ದಿನಗಳಲ್ಲಿ ತಮ್ಮ ಮಾತನ್ನು ಮೀರುವಂತಿಲ್ಲ ಎಂಬ ಷರತ್ತನ್ನು ಕೂಡಾ ಶರದ್ ಪವಾರ್ ವಿಧಿಸಿದ್ದಾರೆ ಎಂದು ಹೇಳಲಾಗಿದೆ.

ಹಂಗಾಮಿ ಸ್ಪೀಕರ್ ಆಗಿ ಕಾಳಿದಾಸ್ ಕೋಲಂಬ್ಕರ್ :  ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಹಂಗಾಮಿ ಸ್ಪೀಕರ್ ಆಗಿ ಆರು ಬಾರಿ ಬಿಜೆಪಿ ಶಾಸಕರಾದ ಕಾಳಿದಾಸ್ ಕೋಲಂಬ್ಕರ್ ಅವರನ್ನು ನೇಮಕ ಮಾಡಿದ್ದಾರೆ.

ವಿಧಾನಸಭೆಯ ಕಾಯಂ ಸಭಾಧ್ಯಕ್ಷರ ನೇಮಕವಾಗುವವರೆಗೆ ಕೋಲಂಬ್ಕರ್ ಅವರು ಸದನದಲ್ಲಿ ಕರ್ತವ್ಯ ನಿಭಾಯಿಸಲಿದ್ದಾರೆ.

ಬುಧವಾರ ಮಹಾರಾಷ್ಟ್ರದಲ್ಲಿ ವಿಧಾನಸಭಾ ಅಧಿವೇಶನ ಪ್ರಾರಂಭವಾಗಲಿದ್ದು, ಕಾಳಿದಾಸ್ ಕೋಲಂಬ್ಕರ್ ಅವರು ನೂತನ ಶಾಸಕರೆಲ್ಲರಿಗೂ ಪ್ರಮಾಣವಚನ ಬೋಧಿಸಲಿದ್ದಾರೆ.

ಇದೇ ವೇಳೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದೇವೇಂದ್ರ ಫಡ್ನವಿಸ್ ಅವರು ಮುಂದಿನ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ರಾಜ್ಯಪಾಲರ ಸೂಚನೆ ಮೇರೆಗೆ ಕರ್ತವ್ಯ ನಿಭಾಯಿಸುವರು.

No comments:

Advertisement