Monday, November 4, 2019

ಅಜಿತ್ ಪವಾರ್‌ಗೆ ಸಂಜಯ್ ರಾವತ್ ’ಮೊದಲ ಫೋನ್ ಸಂದೇಶ’

ಅಜಿತ್ ಪವಾರ್ಗೆ ಸಂಜಯ್ ರಾವತ್
'ಮೊದಲ ಫೋನ್ ಸಂದೇಶ
ಮುಂಬೈ: ಮುಖ್ಯಮಂತ್ರಿ ಸ್ಥಾನ ಮತ್ತು ಅಧಿಕಾರದ ಸಮಾನ ಹಂಚಿಕೆಗಾಗಿ ಮಿತ್ರ ಪಕ್ಷ ಬಿಜೆಪಿ ಜೊತೆಗಿನ ತನ್ನ ಪಟ್ಟನ್ನು 2019 ನವೆಂಬರ್ 3ರ ಭಾನುವಾರ ಇನ್ನಷ್ಟು ಬಿಗಿಗೊಳಿಸಿದ ಶಿವಸೇನೆಯು, ಇದೇ ಮೊದಲನೇ ಬಾರಿಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಅಜಿತ್ ಪವಾರ್ ಅವರಿಗೆಮೊಬೈಲ್ ಸಂದೇಶಕಳುಹಿಸಿತು.  ಇದೇ ವೇಳೆಗೆ ಶಿವಸೇನೆಯು ಮೊದಲು ಸರ್ಕಾರ ರಚಿಸುವುದಿಲ್ಲ ಎಂದು ಸೇನಾ ಮುಖವಾಣಿಸಾಮ್ನಾಸಂಪಾದಕೀಯದಲ್ಲಿ ಬರೆಯಿತು.
ಶಿವಸೇನೆಯಿಂದ ತನಗೆ ಮೊತ್ತ ಮೊದಲ ಸಂದೇಶ ಬಂದಿರುವುದನ್ನು ಅಜಿತ್ ಪವಾರ್ ಅವರು ದೃಢ ಪಡಿಸಿದ್ದು, ಸಂಜಯ್ ರಾವತ್ ಅವರನ್ನು ಸಂಪರ್ಕಿಸುವುದಾಗಿ ಹೇಳಿದರು.
ಮುಖ್ಯಮಂತ್ರಿ ಸ್ಥಾನ ಮತ್ತು ಅಧಿಕಾರದ ಸಮಾನ ಹಂಚಿಕೆಗಾಗಿ ಬಿಜೆಪಿ-ಶಿವಸೇನೆ ನಡುವಣ ಹಗ್ಗ ಜಗ್ಗಾಟವು ಈದಿನ ೧೦ನೇ ದಿನಕ್ಕೆ ಕಾಲಿರಿಸಿದ್ದು, ತನ್ನ ಬೇಡಿಕೆ ಈಡೇರಿಕೆಗೆ ಬಿಜೆಪಿ ಸಿದ್ಧವಿಲ್ಲವಾದರೆ ಬೇರೆ ಆಯ್ಕೆಗಳನ್ನು ತಾನು ಪರಿಶೀಲಿಸುವುದಾಗಿ ಹೇಳಿದೆ. ಕಾಂಗ್ರೆಸ್ ಮತ್ತು ಎನ್ಸಿಪಿ ಹಾಗೂ ಕೆಲವು ಪಕ್ಷೇತರರ ಜೊತೆಗೆ ಬಹುಮತ ಗಳಿಸಲು ತಾನು ಹೊಂದಬಹುದಾದ ಸಂಖ್ಯಾಬಲವನ್ನು ಉಲ್ಲೇಖಿಸಿದ ಸೇನೆಯ ಮುಖವಾಣಿಸಾಮ್ನಾ, ಆದರೆ ಸೇನೆಯು ಮೊದಲ ಸರ್ಕಾರ ರಚಿಸುವುದಿಲ್ಲ ಎಂದು ಸಂಪಾದಕೀಯದಲ್ಲಿ ಘೋಷಿಸಿತು.
ರಾಷ್ಟ್ರಪತಿ ಆಳ್ವಿಕೆ ಹೇರುವ ಧೈರ್ಯ ಮಾಡಿ, ಅಥವಾ ಸದನದಲ್ಲಿ ಬಹುಮತ ಸಾಬೀತು ಪಡಿಸಿಎಂದು ಸೇನೆಯು ತನ್ನ ಮುಖವಾಣಿಯ ಸಂಪಾದಕೀಯದಲ್ಲಿ ಬಿಜೆಪಿಗೆ ಸವಾಲು ಹಾಕಿತು.

ಬಿಜೆಪಿಯು ಸದನದಲ್ಲಿ ಬಹುಮತ ಸಾಬೀತು ಪಡಿಸಲು ವಿಫಲವಾದರೆ ಅಗ ಸೇನೆಯು ಎರಡನೇ ದೊಡ್ಡ ಪಕ್ಷವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದುಎಂದು ಸಂಪಾದಕೀಯ ಹೇಳಿತು.
ಎನ್ಸಿಪಿಯ ೫೪, ಕಾಂಗ್ರೆಸ್ ಪಕ್ಷದ ೪೪ ಮತ್ತು ಕೆಲವು ಪಕ್ಷೇತರರ ಜೊತೆಗೆ ನಾವು ಬಹುಮತ ಪಡೆಯಬಲ್ಲೆವು. ಸೇನೆಯು ಇತರ ಮೂರು ಪಕ್ಷಗಳ ಸ್ವತಂತ್ರ ತತ್ವಗಳೊಂದಿಗೆ ಎಲ್ಲರಿಗೂ ಅಂಗೀಕಾರಾರ್ಹವಾದ ನೀತಿಗಳನ್ನು ರಚಿಸಿಕೊಂಡು ತನ್ನದೇ ಮುಖ್ಯಮಂತ್ರಿಯನ್ನು ಮುಂದಿಡಬಲ್ಲುದುಎಂದುಸಾಮ್ನಾಹೇಳಿತು. ೨೮೮ ಸದಸ್ಯಬಲದ ವಿಧಾನಸಭೆಯಲಿ ಬಿಜೆಪಿಯು ೧೦೫ ಸ್ಥಾನಗಳನ್ನು ಗೆದ್ದಿದ್ದರೆ, ಸೇನೆಯು ೫೬ ಸ್ಥಾನಗಳನ್ನು ಪಡೆದಿದೆ.

ಅಲ್ಪ ಕಾಲದ ಬಿರುಕಿನ ಬಳಿಕ ಬಿಜೆಪಿ ಮತ್ತು ಸೇನೆ ೨೦೧೪ರಲ್ಲಿ ಅಸ್ಥಿರ ವಿಧಾನಸಭೆಯ ಹಿನ್ನೆಲೆಯಲ್ಲಿ ಒಟ್ಟಾದಾಗ ನಾವು ಬಿಜೆಪಿ ಮುಂದಿಟ್ಟ ಶರತ್ತುಗಳನ್ನು ಒಪ್ಪಿದ್ದೆಎಂದು ಪಕ್ಷವು ಹೇಳಿತು.
ಆದ್ದರಿಂದ ಸೇನೆಯು ಈಗಲೂ ಹಾಗೆಯೇ ನಡೆದುಕೊಳ್ಳಬೇಕು ಎಂದು ಪ್ರತಿಯೊಬ್ಬರೂ ನಿರೀಕ್ಷಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಉದ್ಧವ್ ಠಾಕ್ರೆ ಅವರು ಫಲಿತಾಂಶ ಬಂದ ಗಂಟೆಗಳ ಒಳಗಾಗಿ ಸ್ಪಷ್ಟ ಪಡಿಸಿದ್ದಾರೆ. ಆದರೆ, ಸೇನೆಯೇ ಮೊದಲುಕಣ್ಣು ಮಿಟುಕಿಸುವುದಿಲ್ಲಎಂದು ಸಂಪಾದಕೀಯ ಹೇಳಿತು.
ಮುಖ್ಯಮಂತ್ರಿ ಸ್ಥಾನ ಮತ್ತು ಅಧಿಕಾರದ ಸಮಾನ ಹಂಚಿಕೆಗಾಗಿ ಸೇನೆ ಬೇಡಿಕೆ ಮುಂದಿಟ್ಟ ದಿನದಿಂದಲೇ ಉಭಯ ಪಕ್ಷಗಳು ಘರ್ಷಣೆಯ ಹಾದಿ ಹಿಡಿದಿದ್ದವು.  ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿತ್ತು.
ಕಳೆದ ವಾರಾಂತ್ಯದಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್ ಅವರುಬಿಜೆಪಿ ಹೊರತಾದಛತ್ರಪತಿ ಶಿವಾಜಿ ಮಹಾರಾಜ್ಅವರ ಕಲ್ಪನೆಯ  ಜನತಾ ಸರ್ಕಾರರಚನೆಗೆ ಸೇನೆಯು ಸಿದ್ಧವಿದ್ದರೆ, ಎನ್ಸಿಪಿಯುಧನಾತ್ಮಕದೃಷ್ಟಿಯನ್ನು ಹೊಂದುವುದು ಎಂದು ಹೇಳಿದ್ದರು.

ಜನಾದೇಶದಂತೆ ತಮ್ಮ ಪಕ್ಷವು ವಿರೋಧಿ ಸ್ಥಾನದಲ್ಲಿ ಕೂರುವುದು ಎಂಬುದಾಗಿ ಹೇಳಿದ್ದರೂ, ಸೇನಾ ಬೇಡಿಕೆಯಲ್ಲಿ ತಪ್ಪೇನೂ ಇಲ್ಲ ಎಂಬ ಮಾತನ್ನೂ ಶರದ್ ಪವಾರ್ ಹೇಳಿದ್ದರು.

ಕಳೆದ ವಾರ ಶಿವಸೇನಾ ಹಿರಿಯ ನಾಯಕ ಸಂಜಯ್ ರಾವತ್ ಅವರು ಶರದ್ ಪವಾರ್ ಅವರನ್ನು ಭೇಟಿ ಮಾಡುವುದರೊಂದಿಗೆ ಊಹಾಪೋಹಗಳು ಶುರುವಾಗಿದ್ದವು. ಅದರೆ ರಾವತ್ ಅವರು ಅದು ದೀಪಾವಳಿ ಹಿನ್ನೆಲೆಯ ಸೌಜನ್ಯದ ಭೇಟಿ ಮಾತ್ರ ಎಂದು ಹೇಳಿದ್ದರು.

ಅಜಿತ್ ಪವಾರ್ಗೆ ಸಂದೇಶ: ಮಧ್ಯೆ, ಮಹಾರಾಷ್ಟ್ರ ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಸಂಜಯ್ ರಾವತ್ ಅವರು ತಮಗೆ ಸಂದೇಶ ಕಳುಹಿಸಿರುವುದನ್ನು ಎನ್ಸಿಪಿ ನಾಯಕ ಅಜಿತ್ ಪವಾರ್ ವರದಿಗಾರರಿಗೆ ತೋರಿಸಿದ್ದು, ಶರದ್ ಪವಾರ್ ಅವರು ದೆಹಲಿಗೆ ಸೋನಿಯಾ ಅವರ ಜೊತೆಗೆ ಮಾತುಕತೆಗೆ ತೆರಳುವ ಮುನ್ನ ಹೊಸ ಊಹಾಪೋಹಗಳಿಗೆ ದಾರಿ ಮಾಡಿತು.
ತಮಗೆ ಫೋನಿನಲ್ಲಿ ಬಂದ ರಾವತ್ ಸಂದೇಶವನ್ನು ಪತ್ರಕರ್ತರಿಗೆ ತೋರಿಸಿದ ಅಜಿತ್ ಪವಾರ್ಸ್ವಲ್ಪ ಸಮಯದ ಹಿಂದೆ ನನಗೆ ಸಂದೇಶ ಬಂದಿದೆ.. ನಾನು ಸಭೆಯಲ್ಲಿ ಇದ್ದುದರಿಂದ ತತ್ ಕ್ಷಣ ಸ್ಪಂದಿಸಲಿಲ್ಲ. ಚುನಾವಣೆಯ ಬಳಿಕ ನನ್ನನ್ನು ಅವರು ಸಂಪರ್ಕಿಸಿರುವುದು ಇದೇ ಮೊದಲು.. ಅವರು ಯಾಕೆ ಸಂದೇಶ ಕಳುಹಿಸಿದ್ದಾರೋ ಗೊತ್ತಿಲ್ಲ. ನಾನು ಆಮೇಲೆ ಮಾತನಾಡುವೆಎಂದು ಹೇಳಿದರು.

ನಮಸ್ಕಾರ, ನಾನು ಸಂಜಯ್ ರಾವತ್. ಜೈ ಮಹಾರಾಷ್ಟ್ರಎಂಬುದಾಗಿ ಸಂಜಯ್ ರಾವತ್ ತಮ್ಮ ಸಂದೇಶದಲ್ಲಿ ಬರೆದಿದ್ದರು. ’ನಾನು ಅವರಿಗೆ ಕರೆ ಮಾಡಬೇಕು ಎಂಬುದು ಸಂದೇಶದ ಅರ್ಥ. ನಾನು ಅವರನ್ನು ಸಂಪರ್ಕಿಸಿ ವಿಚಾರಿಸುವೆಎಂದು ಅಜಿತ್ ಹೇಳಿದರು.

ಇದಕ್ಕೆ ಮುನ್ನ ರಾವತ್ ಅವರು ಸೇನೆಯು ಶೀಘ್ರದಲ್ಲೇ ೧೭೦ ಮಂದಿ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿಯನ್ನು ಹೊಂದಲಿದೆ ಎಂದು ಪ್ರತಿಪಾದಿಸಿದ್ದರು. ’ಸೇನಾ ನಾಯಕನಿಗೆ ಸಂಖ್ಯೆ ಹೇಗೆ ಲಭಿಸಿತು ಎಂಬ ಬಗ್ಗೆ ನನಗೆ ಅರಿವಿಲ್ಲಎಂದು ಪವಾರ್ ಹೇಳಿದರು.

ಕಾಂಗ್ರೆಸ್-ಎನ್ಸಿಪಿ ಮತ್ತು ಇತರ ಮಿತ್ರ ಪಕ್ಷಗಳು ಸೇರಿ ನಾವು ೧೧೦ ಸ್ಥಾನಬಲ ಹೊಂದಿದ್ದೇವೆ ಮತ್ತು ಮತದಾರರು ನಮಗೆ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲು ಆದೇಶ ಕೊಟ್ಟಿದ್ದಾರೆ ಎಂದು ಅಜಿತ್ ಪವಾರ್ ನುಡಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೂ ಸ್ಪರ್ಧೆಯಲ್ಲಿದ್ದಾರೆ ಎಂಬುದನ್ನು ಅವರು ಅಲ್ಲಗಳೆದರು.

ಇದಕ್ಕೆ ಮುನ್ನ ಸಂಜಯ್ ರಾವತ್ ಅವರುಶರದ್ ಪವಾರ್ ಅವರು ಪ್ರಧಾನಿ ಸ್ಥಾನದ ಸಂಭಾವ್ಯ ಅಭ್ಯರ್ಥಿ, ಅವರ ಸ್ಥಾನವು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕಿಂತ ತುಂಬಾ ದೊಡ್ಡದುಎಂದು ಹೇಳಿದ್ದರು.

No comments:

Advertisement