Tuesday, November 12, 2019

ಹಣಕಾಸು ಸ್ಥಾಯೀ ಸಮಿತಿ: ದಿಗ್ವಿಜಯ್ ಸಿಂಗ್ ಸ್ಥಾನಕ್ಕೆ ಮನಮೋಹನ್ ಸಿಂಗ್

ಹಣಕಾಸು ಸ್ಥಾಯೀ ಸಮಿತಿ: ದಿಗ್ವಿಜಯ್ ಸಿಂಗ್ ಸ್ಥಾನಕ್ಕೆ ಮನಮೋಹನ್ ಸಿಂಗ್
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರನ್ನು ಸಂಸತ್ತಿನ ಹಣಕಾಸು ಸ್ಥಾಯೀ ಸಮಿತಿಗೆ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು 2019 ನವೆಂಬರ್ 11ರ ಸೋಮವಾರ ನಾಮನಿರ್ದೇಶನ ಮಾಡಿದರು. ಪಕ್ಷ ಸಹೋದ್ಯೋಗಿ ದಿಗ್ವಿಜಯ್ ಸಿಂಗ್ ಬದಲಿಗೆ ಮನಮೋಹನ್ ಸಿಂಗ್ ಅವgನ್ನು ನಾಮನಿರ್ದೇಶನ ಮಾಡಲಾಯಿತು.
ರಾಜ್ಯಸಭಾ ಬುಲೆಟಿನ್ ಪ್ರಕಾರ ದಿಗ್ವಿಜಯ್ ಸಿಂಗ್ ಅವರನ್ನು ಈಗ ನಗರಾಭಿವೃದ್ಧಿ ಸಂಸದೀಯ ಸ್ಥಾಯೀ ಸಮಿತಿಗೆ ಮೇಲ್ಮನೆ ಸಭಾಪತಿಯವರು ನಾಮನಿರ್ದೇಶನ ಮಾಡಿದ್ದಾರೆ.

ರಾಜ್ಯಸಭಾ ಸಭಾಪತಿಯವರು ರಾಜ್ಯಸಭೆಯ ಸದಸ್ಯ ಮನಮೋಹನ್ ಸಿಂಗ್ ಅವರನ್ನು ಸಂಸದೀಯ ಸ್ಥಾಯಿ ಸಮಿತಿಗೆ ದಿಗ್ವಿಜಯ್ ಸಿಂಗ್ ಅವರ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದಾರೆ. ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಅವರನ್ನು ಕೂಡಾ ನಗರಾಭಿವೃದ್ಧಿ ಸ್ಥಾಯಿ ಸಮಿತಿಗೆ ಸಭಾಪತಿಯವರು ನಾಮನಿರ್ದೇಶನ ಮಾಡಿದ್ದಾರೆಎಂದು ಬುಲೆಟಿನ್ ಹೇಳಿತು.ಮೂಲಗಳ ಪ್ರಕಾರ, ಮಾಜಿ ಪ್ರಧಾನಿ ಹಾಗೂ ೧೯೯೧-೧೯೯೬ರಲ್ಲಿ ಹಣಕಾಸು ಸಚಿವರೂ, ೨೦೧೪ ಸೆಪ್ಟೆಂಬರ್ನಿಂದ ೨೦೧೯ ಮೇವರೆಗೆ ಸಮಿತಿಯ ಸದಸ್ಯರೂ ಆಗಿದ್ದ ಮನಮೋಹನ್ ಸಿಂಗ್ ಅವರನ್ನು ನಾಮನಿರ್ದೇಶನ ಮಾಡಲು ಅನುವಾಗುವಂತೆ ದಿಗ್ವಿಜಯ್ ಸಿಂಗ್ ಅವರು ಹಣಕಾಸು ಸ್ಥಾಯೀ ಸಮಿತಿಗೆ ರಾಜೀನಾಮೆ ನೀಡಿದ್ದರು.

೨೦೧೯ರ ಜೂನ್ ತಿಂಗಳಲ್ಲಿ ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿದಿದ್ದ ಮನಮೋಹನ್ ಸಿಂಗ್ ಅವರನ್ನು ಆಗಸ್ಟ್ ತಿಂಗಳಲ್ಲಿ ರಾಜಸ್ಥಾನದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು.

ಹಿಂದಿನ ಅವಧಿಯಲ್ಲಿ ಹಣಕಾಸು ಸ್ಥಾಯೀ ಸಮಿತಿಯು ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸೇರಿದಂತೆ ಹಲವಾರು ವಿವಾದಾತ್ಮಕ ವಿಷಯಗಳನ್ನು ಅಧ್ಯಯನಕ್ಕಾಗಿ ತೆಗೆದುಕೊಂಡಿತ್ತು. ಕಾರ್ಯದಲ್ಲಿ ಮನಮೋಹನ್ ಸಿಂಗ್ ಅವರು ಅತ್ಯಂತ ಸಕ್ರಿಯ ಪಾತ್ರ ವಹಿಸಿದ್ದರು.

No comments:

Advertisement