My Blog List

Sunday, November 3, 2019

ಭಾರತ, ಥಾಯ್ಲೆಂಡ್ ನಡುವಣ ಬಾಂಧವ್ಯ ಚಾರಿತ್ರಿಕ: ಪ್ರಧಾನಿ ಮೋದಿ

ಭಾರತ, ಥಾಯ್ಲೆಂಡ್ ನಡುವಣ ಬಾಂಧವ್ಯ ಚಾರಿತ್ರಿಕವಾದದ್ದು
ಬ್ಯಾಂಕಾಕ್ ಭಾರತೀಯ ಸಮುದಾಯದಸ್ವಾಸ್ದೀ ಮೋದಿಸಭೆಯಲ್ಲಿ ಪ್ರಧಾನಿ
ಬ್ಯಾಂಕಾಕ್/ ನವದೆಹಲಿ:ಭಾರತದ ಮೌಲ್ಯಗಳು ಮುಂಬರುವ ವರ್ಷಗಳಲ್ಲಿ ವಿಶ್ವವನ್ನು ರೂಪಿಸುವುದರಲ್ಲಿ ಮಹತ್ವದ ಕಾಣಿಕೆ sಸಲ್ಲಿಸಲಿವೆಎಂದು ಥಾಯ್ಲೆಂಡ್ ಭೇಟಿಯ ತಮ್ಮ ಮೊದಲ ದಿನವೇ (2019 ನವೆಂಬರ್ 02ರ ಶನಿವಾರ) ಪ್ರತಿಪಾದಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಸಂಭ್ರಮಿಸಿದರು.

ಇದು ಥಾಯ್ಲೆಂಡಿಗೆ ನನ್ನ ಮೊದಲ ಅಧಿಕೃತ ಭೇಟಿ. ಇಲ್ಲಿ ಭಾರತೀಯತೆಯ ಅಗಾಧ ಅನುಭವ ನನಗೆ ಆಗುತ್ತಿದೆ. ಇಡೀ ವಿಶ್ವವೇ ಭಾರತದ ಜೊತೆಗೆ ದೀಪಾವಳಿಯನ್ನು ಆಚರಿಸಿದೆ, ಇಲ್ಲಿ ಕೂಡಾ ಅದೇ ಮರುಕಳಿಸಿರುವುದು ನನಗೆ ಕಾಣುತ್ತಿದೆಎಂದು ಬ್ಯಾಂಕಾಕಿನಲ್ಲಿಸ್ವಾಸ್ದೀ ಪಿಎಂ ಮೋದಿಸಮಾರಂಭದಲ್ಲಿ ಭಾರತೀಯ ಸಮುದಾಯದ ಸದಸ್ಯರ ಜೊತೆ ಸಂವಹನ ನಡೆಸುತ್ತಾ ಮೋದಿ ಹೇಳಿದರು.

ಥಾಯ್ಲೆಂಡ್ ಜೊತೆಗೆ ಭಾರತವು ಪ್ರಬಲ ಬಾಂಧವ್ಯವನ್ನು ಹೊಂದಿದೆ. ರಾಣಿ ಮಹಾಚಕ್ರಿ ಸಿರಿಂಧೋರ್ನ್ ಅವರು ಕೂಡಾ ಸಂಸ್ಕೃತ ವಿದ್ವಾಂಸರಾಗಿದ್ದು ಭಾರತದೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದರು ಎಂದು ಪ್ರಧಾನಿ ನುಡಿದರು.

ಗೆಳೆಯರೇ, ನಮ್ಮ ಬಾಂಧವ್ಯವು ಭಾರತದ ಜೊತೆಗೆ ಇಷ್ಟೊಂದು ಪ್ರಬಲವಾಗಿರುವುದು ಹೇಗೆ? ಇದಕ್ಕೆ ಕಾರಣವೇನು ಎಂದು ಯೋಚಿಸಿದ್ದೀರಾ? ಇದಕ್ಕೆ ಸರಳವಾದ ಉತ್ತರ ಇದೆ: ನಮ್ಮ ಬಾಂಧವ್ಯವು ಸರ್ಕಾರಗಳ ನಡುವೆ ಇರುವ ಬಾಂಧವ್ಯ ಅಲ್ಲ. ಇತಿಹಾಸದ ಮೂಲಕ ಬೆಸೆದಿರುವ ಬಾಂಧವ್ಯ ಅದು. ಏಕೆಂದರೆ ಪ್ರತಿಯೊಂದು ಚಾರಿತ್ರಿಕ ಘಟನೆಯೂ ನಮ್ಮ ಬಾಂಧವ್ಯಗಳನ್ನು ಹೊಸ ಎತ್ತರಕ್ಕೆ ಏರಿಸಿದೆ’ ಎಂದು ಪ್ರಧಾನಿ ಹೇಳುತ್ತಿದ್ದಂತೆಯೇ ಜನ ಸಮೂಹವುಮೋದಿ, ಮೋದಿಮಂತ್ರದೊಂದಿಗೆ ಸ್ಪಂದಿಸಿತು..

ನೀವು  ನನ್ನನ್ನು ಸ್ವಾಸ್ದೀ ಮೋದಿ  ಎಂಬುದಾಗಿ ಹರಸಿದಿರಿ. ಆದರೆ ಅದರ ಅರ್ಥ ಏನು ಎಂಬುದು ನಿಮಗೆ ಗೊತ್ತಿದೆಯೇ? ಇದು ಸಂಸ್ಕೃತ ಪದ- ಸು ಮತ್ತು ಅಸ್ತಿ ಪದಗಳ ಜೋಡಣೆ- ’ಸ್ವಸ್ತಿಇದರ ಅರ್ಥಕಲ್ಯಾಣಎಂಬುದಾಗಿ ಮೋದಿ ವಿವರಿಸಿದರು.

ರಾಷ್ಟ್ರವು ಈಗ ಪೂರ್ಣ ವೇಗದೊಂದಿಗೆ ಮುನ್ನಡೆಯುತ್ತಿರುವುದರಿಂದ ಭಾರತೀಯರು ಇಂದು ನಮ್ಮ ರಾಷ್ಟ್ರೀಯತೆಯನ್ನು ವಿದೇಶೀಯರ ಎದುರು ಹೆಮ್ಮೆಯಿಂದ ಘೋಷಿಸಿಕೊಳ್ಳಬಹುದು ಎಂದು ಪ್ರಧಾನಿ ಹೇಳಿದರು.

ಭಾರತೀಯರು ಈಗ ಏನಾದರೂ ಹೇಳುತ್ತಿದ್ದರೆ, ಜಗತ್ತು ಅದನ್ನು ಆತ್ಮೀಯವಾಗಿ ಆಲಿಸುತ್ತದೆ. ನೀವು ಇದನ್ನು ಥಾಯ್ಲೆಂಡಿನಲ್ಲೂ ಗಮನಿಸಿರಬಹುದುಎಂದು ಪ್ರಧಾನಿ ನುಡಿದರು. ’೧೩೦ ಕೋಟಿ ಭಾರತೀಯರು ರಾಷ್ಟ್ರವನ್ನು ವೈಭವದ ಸ್ಥಾನಕ್ಕೆ ಏರಿಸಲು ಶ್ರಮಿಸುತ್ತಿದ್ದಾರೆಎಂದೂ ಅವರು ಹೇಳಿದರು.

ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಪ್ರಚಂಡ ಗೆಲುವು ಸಾಧಿಸಿದುದನ್ನೂ ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ’ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ವರ್ಷದ ಚುನಾವಣೆಯಲ್ಲಿ ನಮ್ಮ ಜನರು ನನ್ನನ್ನು ಕಳೆದ ಬಾರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಶೀರ್ವದಿಸಿದರು. ನಮ್ಮ ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಜನರು ಬಾರಿ ಮತದಾನ ಮಾಡಲು ಬಂದಿದ್ದರು ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆಎಂದು ಅವರು ನುಡಿದರು.

ಪ್ರಧಾನಿ ಮೋದಿಯವರು ಥಾಯ್ಲೆಂಡ್ ರಾಜಧಾನಿಗೆ ಮೂರು ದಿನಗಳ ಪ್ರವಾಸದ ಸಲುವಾಗಿ ಶನಿವಾರ ಆಗಮಿಸಿದರು. ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ವಲಯ ಸೃಷ್ಟಿಸುವ ಸಲುವಾಗಿ ೧೬ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳ ಮಹಾ ವ್ಯಾಪಾರ ಒಪ್ಪಂದವನ್ನು ಭಾರತ ಬೆಂಬಲಿಸುತ್ತಿದೆ ಎಂಬುದಾಗಿ ಹೊಸ ರಾಜತಾಂತ್ರಿಕ ಯತ್ನಗಳ ಮಧ್ಯೆ ತಿಳಿಸಲು ಅವರು ಥಾಯ್ಲೆಂಡಿಗೆ ಆಗಮಿಸಿದ್ದಾರೆ.

ಪ್ರಧಾನಿಯವರು ೧೬ನೇ ಅಸಿಯಾನ್-ಭಾರತ ಶೃಂಗಸಭೆ, ೧೪ನೇ ಪೂರ್ವ ಏಷ್ಯಾ ಶೃಂಗಸಭೆ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಯ ಮೂರನೇ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದಲ್ಲದೆ, ವಾರ್ಷಿಕ ಪೂರ್ವ ಏಷ್ಯಾ ಶೃಂಗ ಸಭೆಯಲ್ಲೀ ಪ್ರಧಾನಿಯವರು ಭಾಗವಹಿಸಲಿದ್ದಾರೆ. ಶೃಂಗಸಭೆಯು ಭಯೋತ್ಪಾದನೆ ಮತ್ತು ತೀವ್ರಗಾಮೀಕರಣದ ಬೆದರಿಕೆಗಳ ಜೊತೆ ವ್ಯವಹರಿಸುವ ಮಾರ್ಗಗಳ ಬಗ್ಗೆ ಪರಿಶೀಲಿಸಲಿದೆ. ಬಳಿಕ ಮೋದಿಯವರು ಥಾಯ್ ಪ್ರಧಾನಿ ಪ್ರಯೂತ್ ಚನ್ ಚಾ ಅವರು ಸೋಮವಾರ ಏರ್ಪಡಿಸಿರುವ ವಿಶೇಷ ನಾಯಕರ ಭೋಜನಕೂಟದಲ್ಲೂ ಪಾಲ್ಗೊಳ್ಳಲಿದ್ದಾರೆ.

ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ ಜರ್ಮನ್ ಚಾನ್ಸಲರ್ ಅಂಗೇಲಾ ಮರ್ಕೆಲ್ ಅವರಿಗೆ ಆತಿಥ್ಯ ನೀಡಿದ ಬಳಿಕ ಪ್ರಧಾನಿ ಮೋದಿ ನವದೆಹಲಿಯಿಂದ ಬ್ಯಾಂಕಾಕಿಗೆ ತೆರಳಿದ್ದರು. ಉಭಯ ನಾಯಕರೂ ಶುಕ್ರವಾರ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದರು.

No comments:

Advertisement