Saturday, November 16, 2019

ಕಡುವೈರಿ ಶಿವಸೇನೆ ಬಗ್ಗೆ ಕಾಂಗ್ರೆಸ್ ಮನಸ್ಸು ಬದಲಾದದ್ದು ಹೇಗೆ ಗೊತ್ತಾ?

ಕಡುವೈರಿ ಶಿವಸೇನೆ ಬಗ್ಗೆ ಕಾಂಗ್ರೆಸ್ ಮನಸ್ಸು
ಬದಲಾದದ್ದು ಹೇಗೆ ಗೊತ್ತಾ?
ನವದೆಹಲಿ/ ಮುಂಬೈ: ಬದ್ಧ ರಾಜಕೀಯ ಹಾಗೂ ಸೈದ್ಧಾಂತಿಕ ವಿರೋಧಿಯಾದ ಶಿವಸೇನೆಯ ಜೊತೆ ಸೇರಿ ಸರ್ಕಾರ ರಚಿಸುವ ಮಾತುಕತೆ ಪ್ರಕ್ಷುಬ್ಧ ಪರಿಸರವನ್ನು ನಿರ್ಮಿಸಿತ್ತು. ಮಹಾರಾಷ್ಟ್ರದ ಕಾಂಗ್ರೆಸಿನ ಒಂದು ವರ್ಗ ಮತ್ತು ಹೊರಗಿನ ಇನ್ನೊಂದು ವರ್ಗ ಶಿವಸೇನೆ ಜೊತೆಗೆ ಮೈತ್ರಿಗೆ ಕಡುವಿರೋಧ ವ್ಯಕ್ತ ಪಡಿಸಿದ್ದವು.


ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಯ್ಲೂಸಿ) ಕೇರಳದ ನಾಯಕರು ಹೊಸ ಮೈತ್ರಿಕೂಟವು ಮುಂದಿನ ಕೇರಳ ವಿಧಾನಸಭಾ ಚುನಾವಣೆ ಕಾಲದಲ್ಲಿ ಎಡಪಕ್ಷದ ಜೊತೆಗೆ ಸ್ಪರ್ಧೆಗೆ ಇಳಿಯಲು ಮುಜುಗರದ ಪರಿಸ್ಥಿತಿಯನ್ನು ಸೃಷ್ಟಿ ಮಾಡಬಹುದು ಎಂದು ಆತಂಕ ವ್ಯಕ್ತ ಪಡಿಸಿದ್ದರು.

ನಿಧಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪ್ರತಿಯೊಂದು ಹಂತದಲ್ಲೂ ಅತ್ಯಂತ ಆಳವಾದ ವಿಶ್ಲೇಷಣೆಯಲ್ಲಿ ತೊಡಗಿದ್ದಾಗ ಮಹಾರಾಷ್ಟ್ರದ ನಾಯಕರು ತಮ್ಮ ಚಿಂತನೆಗೆ ಹೆಚ್ಚಿನ ತೂಕ ನೀಡಿದರು. ಅದಕ್ಕೂ ತೀವ್ರವಾದ ವಿರೋಧ ವ್ಯಕ್ತವಾಯಿತು. ಎಲ್ಲರಲ್ಲೂ ಚುನಾವಣಾ ರಾಜಕೀಯದ ಚಿಂತೆ ಪ್ರಬಲವಾಗಿತ್ತು.

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸರ್ಕಾರ ರಚನೆಗೆ ಬೇಕಾದ ಅಗತ್ಯ ಸಂಖ್ಯಾಬಲ ತನ್ನ ಬಳಿ ಇದೆ ಎಂದು ಸಾಬೀತು ಪಡಿಸಲು ಶಿವಸೇನೆಗೆ ರಾತ್ರಿ .೩೦ರವರೆಗೆ ಸಮಯ ನೀಡಿದ್ದರು. ಗಡುವು ಸಮೀಪಿಸಿದರೂ ಬಿಕ್ಕಟ್ಟು ಇತ್ಯರ್ಥ ಇನ್ನೂ ದೂರದಲ್ಲಿಯೇ ಇತ್ತು.

ಆದರೆ ವೇಳೆಯಲ್ಲಿ ಪಕ್ಷದ ಹಿರಿಯ ನಾಯಕರೊಬ್ಬರು ಸರ್ಕಾರ ರಚನೆಯ ಪರವಾಗಿ ವಾದಿಸುತ್ತಾ ಉಲ್ಲೇಖಿಸಿದ ಉದಾಹರಣೆಯೊಂದು ಕಾಂಗ್ರೆಸ್ ಪಕ್ಷದ ಚರ್ಚೆಯ ದಿಕ್ಕನ್ನು ಬದಲಿಸಿತು.
ಕಾಂಗ್ರೆಸ್ಸಿನ ಮಾಜಿ ಶಾಸಕ ಮತ್ತು ಸಚಿವರೊಬ್ಬರು ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಪಕ್ಷವನ್ನು ತ್ಯಜಿಸಿ ಶಿವಸೇನೆ ಸೇರಿ ಉತ್ತಮ ಅಂತರದೊಂದಿಗೆ ತನ್ನ ಕ್ಷೇತ್ರದಲ್ಲಿ ವಿಜಯಗಳಿಸಿದ್ದ ವ್ಯಕ್ತಿಯ ಉದಾಹರಣೆ ಅದಾಗಿತ್ತು.

ಮರಾಠಾವಾಡ ಪ್ರದೇಶದ ಔರಂಗಾಬಾದ್ ಜಿಲ್ಲೆಯ ಸಿಲ್ಲೋಡ್, ಮಾಜಿ ಪಶುಸಂಗೋಪನಾ ಸಚಿವ ಅಬ್ದುಲ್ ಸತ್ತಾರ್ ಅವರ ಉದಾಹರಣೆ ಅದಾಗಿತ್ತು. ಲೋಕಸಭಾ ಚುನಾವಣೆಗೆ ಮುನ್ನ ತಮಗೆ ಔರಂಗಾಬಾದಿನಲ್ಲಿ ಸ್ಪರ್ಧಿಸಲು ಕಾಂಗೆಸ್ ಟಿಕೆಟ್ ನಿರಾಕರಿಸಿದ್ದಕ್ಕಾಗಿ ರೊಚ್ಚಿಗೆದ್ದು ಅವರು ಪಕ್ಷ ತ್ಯಜಿಸಿದ್ದರು.

ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿದ ಬಳಿಕ, ಅಬ್ದುಲ್ ಸತ್ತಾರ್ ಅವರು ಬಿಜೆಪಿ ಸೇರುವರೆಂಬ ವರದಿಗಳಿದ್ದವು.  ಆದರೆ ಅಂತಿಮವಾಗಿ ಅವರು ಶಿವಸೇನೆ ಸೇರಿದ್ದಷ್ಟೇ ಅಲ್ಲ ವಿಧಾನಸಭಾ ಚುನಾವಣೆಯಲ್ಲಿ ಸಿಲ್ಲೋಡ್ ಕ್ಷೇತ್ರದಿಂದ ಶಿವಸೇನಾ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.

ಉದ್ಧವ್
ಠಾಕ್ರೆ ಸಮ್ಮುಖದಲ್ಲಿ ಭರ್ಜರಿ ಪ್ರಚಾರ, ಸಂಭ್ರಮದೊಂದಿಗೆ ಅವರು ಶಿವಸೇನೆ ಸೇರಿದ್ದರು.

ಅಲ್ಪಸಂಖ್ಯಾತ ಪ್ರಾಬಲ್ಯದ ಪ್ರದೇಶದಲ್ಲಿ ಸತ್ತಾರ್ ಅವರು ತಮ್ಮ ಸ್ಥಾನ ಗೆದ್ದದ್ದಷ್ಟೇ ಅಲ್ಲ, ೧೦,೦೦೦ ಮತಗಳ ಭಾರೀ ಅಂತರವನ್ನೂ ದಾಖಲಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದರು. ೯೦,೦೦೦ ಮತಗಳನ್ನು ಪಡೆದ ಪಕ್ಷೇತರ ಅಭ್ಯರ್ಥಿ ಎರಡನೇ ಸ್ಥಾನಕ್ಕೆ ಏರಿದ್ದರು.

ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆಯನ್ನು ಪ್ರತಿಪಾದಿಸಿದ ನಾಯಕರು ಬುಡಮಟ್ಟದಲ್ಲಿ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳು ಕಳೆದ ಕೆಲವು ವರ್ಷಗಳಲ್ಲಿ ಹೇಗೆ ಬದಲಾಗಿವೆ ಎಂಬುದನ್ನು ಸೂಚಿಸಲು ಸತ್ತಾರ್ ಪ್ರಕರಣವನ್ನು ಉಲ್ಲೇಖಿಸಿದರು. ಕೋಮುವಾದ ವರ್ಸಸ್ ಜಾತ್ಯತೀತತೆಯ ಹಳೆಯ ಮಾನದಂಡ ಈಗ ಅಪ್ರಸ್ತುತವಾಗಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಅವರು ವಾದಿಸಿದರು.

ಮುಸ್ಲಿಮನಾದ ಮಾಜಿ ಕಾಂಗ್ರೆಸ್ ನಾಯಕನೊಬ್ಬ ಶಿವಸೇನೆ ಸೇರಿ, ಅಲ್ಪಸಂಖ್ಯಾತ ಕ್ಷೇತ್ರದಲ್ಲಿ ಸಾಕಷ್ಟು ಅಂತರದೊಂದಿಗೆ ತನ್ನ ಸ್ಥಾನವನ್ನು ಗೆಲ್ಲುತ್ತಾನೆ ಎಂಬುದು ರಾಜಕೀಯ ಹೇಗೆ ಬದಲಾಗಿದೆ ಎಂಬುದನ್ನು ಸೂಚಿಸುತ್ತದೆಎಂದು ತಮ್ಮ ವಾದವನ್ನು ಮುಂದಿಟ್ಟ ಮಹಾರಾಷ್ಟ್ರದ ನಾಯಕ ಹೇಳಿದ್ದರು.

ಮಹಾರಾಷ್ಟ್ರದ ನಾಯಕರು ಸೇನೆ ಜೊತೆಗೆ ಮೈತ್ರಿಗೆ ಒಲವು ವ್ಯಕ್ತ ಪಡಿಸಿ ಮುಂದಿಟ್ಟ ಇತರ ವಾದಗಳು ಮುಂದಿನ ಐದು ವರ್ಷ ವಿರೋಧ ಪಕ್ಷದಲ್ಲಿ ಕೂರಲು ಇದ್ದ ಅಸಮಾಧಾನವನ್ನು ಹೊರಹಾಕಿದ್ದವು. ಅವರು ಸೇನೆ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದೇ ಮೇಲು ಎಂಬ ದೃಢ ಅಭಿಪ್ರಾಯ ಹೊಂದಿದ್ದರು.

ಚುನಾವಣೆಗೆ ಮುನ್ನ ವಿರೋಧಿ ನಾಯಕರನ್ನು ಬೇಟೆಯಾಡುತ್ತಿದ್ದ ಬಿಜೆಪಿ ಚುನಾವಣೆಯ ಬಳಿಕ ಮಹಾರಾಷ್ಟ್ರದಲ್ಲೂ ಕರ್ನಾಟಕ ಮಾದರಿ ಯತ್ನ ನಡೆಸದೆ ಇರಲಾರದು ಎಂಬ ಭೀತಿಯನ್ನೂ ಅವರು ಹೊರಹಾಕಿದರು.

ವಾದಗಳು ಮಹಾರಾಷ್ಟ್ರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪಕ್ಷದಲ್ಲಿದ್ದ ಪ್ರಾಥಮಿಕ ಮನಃಸ್ಥಿತಿಯನ್ನು ಬದಲಾಯಿಸಿತು. ಬೆಂಬಲ ಪತ್ರವನ್ನು ತತ್ ಕ್ಷಣವೇ ನೀಡದೇ ಇದ್ದರೂ, ಪಕ್ಷವು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕನಿಷ್ಠ ಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಯ ಸಾಧ್ಯತೆಗಳನ್ನು ಶೋಧಿಸುವ ನಿರ್ಧಾರಕ್ಕೆ ಬಂದಿತ್ತು.

No comments:

Advertisement