My Blog List

Saturday, November 16, 2019

೫ ವರ್ಷಗಳ ಅವಧಿಗೆ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರ

ವರ್ಷಗಳ ಅವಧಿಗೆ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ
ಸೇನೆಗೆ ಮುಖ್ಯಮಂತ್ರಿ ಹುದ್ದೆ ಪರಿಗಣನೆಯಲ್ಲಿ: ಶರದ್ ಪವಾರ್
ನಾಗಪುರ: ಶಿವಸೇನೆ, ಎನ್ಸಿಪಿ  ಮತ್ತು ಕಾಂಗ್ರೆಸ್ ಜಂಟಿಯಾಗಿ ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ರಚಿಸಲಿವೆ ಎಂದು 2019 ನವೆಂಬರ್ 15ರ ಶುಕ್ರವಾರ ಇಲ್ಲಿ ದೃಢ ಪಡಿಸಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್  ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕಿದರು. ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಕೊಡುವ ವಿಚಾರವೂ ಪರಿಗಣನೆಯಲಿದೆ ಎಂದು ಅವರು ಸುಳಿವು ನೀಡಿದರು.

ಅಕಾಲಿಕ ಮಳೆಯಿಂದಾಗಿ ಬೆಳೆಗಳಿಗೆ ಆಗಿರುವ ಹಾನಿಯನ್ನು ಅಂದಾಜು ಮಾಡುವ ಸಲುವಾಗಿ ನಾಗಪುರಕ್ಕೆ ಭೇಟಿ ನೀಡಿದ ಶರದ್ ಪವಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಬಿಜೆಪಿಯು ಸರ್ಕಾರ ರಚನೆಯ ಹಕ್ಕು ಮಂಡಿಸಲು ವಿಫಲವಾದ ಬಳಿಕ ನೂತನ ರಾಜಕೀಯ ಮೈತ್ರಿಕೂಟಕ್ಕೆ ಬೆದರಿಕೆ ಉಂಟಾಗಿದೆ ಎಂಬುದನ್ನು ಅಲ್ಲಗಳೆದರು.

‘ ಪ್ರಕ್ರಿಯೆ ನಡೆಯುತ್ತಿದೆ. ಇವತ್ತು ಅಥವಾ ನಾಳೆ ಸರ್ಕಾರ ರಚನೆಯಾಗಲಿದೆ. ಸರ್ಕಾರವು ಐದು ವರ್ಷಗಳ ಅವಧಿಯನ್ನು ಪೂರೈಸುತ್ತದೆ ಎಂದು ನಾವು ಖಚಿತ ಪಡಿಸುತ್ತೇವೆ. ನಮ್ಮ ಮಾತುಕತೆಗಳು ನಡೆಯುತ್ತಿವೆಎಂದು ಅವರು ಹೇಳಿದರು.

ರಾಷ್ಟ್ರಪತಿ ಆಳ್ವಿಕೆ ದೀರ್ಘ ಕಾಲ ಇರುವುದಿಲ್ಲ ಮತ್ತು ಹೊಸ ಚುನಾವಣೆಗಳೂ ನಡೆಯುವುದಿಲ್ಲಎಂದು ಹಿರಿಯ ನಾಯಕ ನುಡಿದರು.

ಸರ್ಕಾರವು ಸ್ಥಿರವೂ, ಅಭಿವೃದ್ಧಿ ಆಧಾರಿತವೂ ಆಗಲಿದ್ದು, ಜನರ ಸಮಸ್ಯೆಗಳನ್ನು ಬಗೆ ಹರಿಸಲಿದೆ. ನಾವೆಲ್ಲರೂ ಇದು ಆಗಬೇಕೆಂದು ಬಯಸುತ್ತಿದ್ದೇವೆಎಂದು ಅವರು ಹೇಳಿದರು.

ನೂತನ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರುವ ಶಿವಸೇನೆಯ ಬೇಡಿಕೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದೂ ಪವಾರ ಸುಳಿವು ನೀಡಿದರು. ’ಯಾರಾದರೂ ಮುಖ್ಯಮಂತ್ರಿ ಸ್ಥಾನವನ್ನು ಕೇಳುತ್ತಿದ್ದರೆ, ಅದನ್ನು ಪರಿಗಣಿಸಲಾಗುವುದುಎಂದು ಎನ್ಸಿಪಿ ಮುಖ್ಯಸ್ಥ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಇದಕ್ಕೆ ಮುನ್ನ ಎನ್ಸಿಪಿಯ ಮುಂಬೈ ಘಟಕದ ಮುಖ್ಯಸ್ಥ ನವಾಬ್ ಮಲಿಕ್ ಅವರು ಮುಂದಿನ ಮುಖ್ಯಮಂತ್ರಿ ಶಿವಸೇನೆಯಿಂದ ಆಗಲಿದ್ದಾರೆ ಎಂದು ಹೇಳಿದ್ದರು.

ಮುಂದಿನ ಮುಖ್ಯಮಂತ್ರಿ ಸೇನೆಯಿಂದ ಆಗಲಿದ್ದಾರೆ. ಏಕೆಂದರೆ, ಹಳೆ ಮೈತ್ರಿಕೂಟವನ್ನು ಬಿಟ್ಟು ಬಂದ ಪಕ್ಷದ (ಶಿವಸೇನೆ) ಆತ್ಮಗೌರವದ ರಕ್ಷಣೆ ಮಾಡುವುದು ನಮ್ಮ ಹೊಣೆಗಾರಿಕೆಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭಾಗಿಯಾಗುವುದೇ ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದುಎಂದು ನವಾಬ್ ಮಲಿಕ್ ಹೇಳಿದ್ದರು.

ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಹೊರತುಪಡಿಸಿ ಯಾವುದೇ ಸರ್ಕಾರ ಸಾಧ್ಯವಿಲ್ಲ, ಯಾವುದಾದರೂ ಪಕ್ಷವು ಅಧಿಕಾರಕ್ಕೆ ಬಂದರೂ ಅದು ಆರೇ ತಿಂಗಳಲ್ಲಿ ಉರುಳುತ್ತದೆಎಂಬುದಾಗಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನೀಡಿದ ಹೇಳಿಕೆಯನ್ನು  ಪವಾರ್ ಲೇವಡಿ ಮಾಡಿದರು.

ನಾನು ಮತ್ತ್ತೆ ಬರುತ್ತೇನೆ, ನಾನು ಮತ್ತೆ ಬರುತ್ತೇನೆಎಂಬುದಾಗಿ ಅವರು (ದೇವೇಂದ್ರ ಫಡ್ನವಿಸ್) ನೀಡಿದ್ದ ಹೇಳಿಕೆ ಯಾವಾಗಲೂ ನನ್ನ ತಲೆಯಲ್ಲಿ ಗುನುಗುನಿಸುತ್ತಿರುತ್ತದೆ. ನನಗೆ ಹಲವು ವರ್ಷಗಳಿಂದ ಅವರು ಗೊತ್ತು, ಆದರೆ ಅವರು ಜ್ಯೋತಿಷಿ ಎಂಬುದು ನನಗೆ ಗೊತ್ತಿರಲಿಲ್ಲಎಂದು ಎನ್ಸಿಪಿ ಮುಖ್ಯಸ್ಥ ಛೇಡಿಸಿದರು.

ಶಿವಸೇನೆಯು ಅನುಸರಿಸುವ ಉಗ್ರ ಹಿಂದುತ್ವದ ಬಗ್ಗೆ ಕೇಳಲಾದ ಪ್ರಶ್ನೆಯೊಂದನ್ನು ಉತ್ತರಿಸಿದ ಪವಾರ್, ’ಎನ್ಸಿಪಿ ಮತ್ತು ಕಾಂಗ್ರೆಸ್ ಯಾವಾಗಲೂ ಜಾತ್ಯತೀತ ಸಿದ್ಧಾಂತಕ್ಕೆ ಅಂಟಿಕೊಂಡಿವೆ. ಸರ್ಕಾರ ನಡೆಸುವಾಗ ಅವುಗಳು ಸಿದ್ಧಾಂತವನ್ನೇ ಅನುಸರಿಸುತ್ತವೆಎಂದು ನುಡಿದರು.

ಎನ್ಸಿಪಿ ಮತ್ತು ಕಾಂಗ್ರೆಸ್ ಜಾತ್ಯತೀತ ಪಕ್ಷಗಳು ಎಂಬುದು ಸತ್ಯ, ಆದರೆ ನಾವು ಇಸ್ಲಾಮ್ ಅಥವಾ ಹಿಂದುತ್ವದ ವಿರೋಧಿಗಳಲ್ಲ. ಸರ್ಕಾರ ನಡೆಸುವಾಗ, ನಾವು ಜಾತ್ಯತೀತತೆಯ ಆಧಾರದಲ್ಲಿ ಅದನ್ನು ನಡೆಸಲು ಒತ್ತು ನೀಡುತ್ತೇವೆಎಂದು ಪವಾರ್ ಹೇಳಿದರು.

ವಿಧಾನಸಭಾ ಚುನಾವಣೆಯ ಫಲತಾಂಶ ಪ್ರಕಟಗೊಂಡ ೧೯ ದಿನಗಳ ಬಳಿಕವೂ ಯಾವುದೇ ಪಕ್ಷಕ್ಕೆ ಸರ್ಕಾರ ರಚನೆಗೆ ಅಗತ್ಯ ಸಂಖ್ಯೆಯ ಬೆಂಬಲ ಪಡೆಯಲು ವಿಫಲವಾದ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ನವೆಂಬರ್ ೧೨ರ ಮಂಗಳವಾರ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಲಾಗಿದೆ.

ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಈಗ ರಾಜ್ಯದಲ್ಲಿ ಸರ್ಕಾರ ರಚನೆಗಾಗಿಅಸಂಗತ ಮೈತ್ರಿರಚಿಸುವ ಸಾಧ್ಯತೆಗಳನ್ನು ಶೋಧಿಸುತ್ತಿವೆ.

ಮೂರೂ ಪಕ್ಷಗಳ  ಜಂಟಿ ಸಮನ್ವಯ ಸಮಿತಿಯೊಂದು ಮೈತ್ರಿಕೂಟಕ್ಕೆ ಆಧಾರವಾಗಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡು ಒಂದನ್ನು ಸಿದ್ಧ ಪಡಿಸುತ್ತಿದೆ.

ಮೂರೂ ಪಕ್ಷಗಳ ಮಧ್ಯೆ ಅಧಿಕಾರ ಹಂಚಿಕೆಯ ವಿಧಿ ವಿಧಾನಗಳ ಬಗ್ಗೆಯೂ ಮಾತುಕತೆಗಳು ನಡೆಯುತ್ತಿವೆ.

ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಭಾನುವಾರ ದೆಹಲಿಯಲ್ಲಿ ಕಾಂಗ್ರೆಸ್ಸಿನ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡುವ ನಿರೀಕ್ಷೆಯಿದ್ದು, ಬಳಿಕ ಸರ್ಕಾರ ರಚನೆಯ ಪ್ರಕ್ರಿಯೆ ತೀವ್ರಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಬೆಳವಣಿಗೆಗಳ ಬಗ್ಗೆ ಮೊದಲಿಗೆ ರಹಸ್ಯ ಮಾತುಕತೆ ನಡೆಸಲಿರುವ ಸೋನಿಯ ಗಾಂಧಿ ಮತ್ತು ಪವಾರ್ ಅವರು ತಮ್ಮ ನಿಗದಿತ ಮೊದಲ ಭೇಟಿಯ ಬಳಿಕ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆಗೆ ಮಾತುಕತೆ ನಡೆಸುವರು ಎನ್ನಲಾಗಿದೆ.

ಸಭೆಯು ನಿರ್ಣಾಯಕವಾಗುವ ಸಾಧ್ಯತೆಗಳಿದ್ದು, ಮೂರು ಪಕ್ಷಗಳ ನಡುವಣ ಅಧಿಕಾರ ಹಂಚಿಕೆ ಸೂತ್ರ ಕುರಿತ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಲಿದೆ ಎಂದು ಹೇಳಲಾಗುತ್ತಿದೆ.

No comments:

Advertisement