ಅಜಿತ್ ಪವಾರ್ ಎನ್ ಸಿಪಿ ನಾಯಕತ್ವಕ್ಕೆ ಕೊಕ್
ಮುಂಬೈ: ಮುಂಬೈಯಲ್ಲಿ 2019 ನವೆಂಬರ್ 23ರ ಶನಿವಾರ ರಾತ್ರಿ ಸಭೆ ಸೇರಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಶಾಸಕಾಂಗ ಸಭೆಯು ಅಜಿತ್ ಪವಾರ್ ಅವರನ್ನು ಶಾಸಕಾಂಗ ನಾಯಕನ ಸ್ಥಾನದಿಂದ ಕಿತ್ತು ಹಾಕಿದ್ದು, ಆ ಸ್ಥಾನಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ
ಜಯಂತ
ಪಾಟೀಲ್ ಅವರನ್ನು ಶರದ್ ಪವಾರ್ ನೇಮಕ ಮಾಡಿದರು.
ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಜಿತ್ ಪವಾರ್ ಅವರಿಗೆ ಸಂದೇಶ ರವಾನಿಸಲಾಗಿದೆ. ನಿರ್ಧಾರ ಕೈಗೊಳ್ಳಲು ಅಜಿತ್ ಪವಾರ್ ಅವರು ಕಾಲಾವಕಾಶ ಕೋರಿದ್ದಾರೆ ಎಂದೂ ಮೂಲಗಳು ಹೇಳಿದವು.
ಎನ್ಸಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರೂ ಸೇರಿದಂತೆ ಸುಮಾರು ೫೦ ಮಂದಿ ಪಾಲ್ಗೊಂಡಿದ್ದು, ಅಜಿತ್ ಪವಾರ್ ಸೇರಿದಂತೆ ಸುಮಾರು ೧೭ ಶಾಸಕರು ಗೈರು ಹಾಜರಾಗಿದ್ದಾರೆ ಎಂದೂ ಮೂಲಗಳು ತಿಳಿಸಿದವು.
ಶನಿವಾರ ಬೆಳಗ್ಗೆ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ೭ ಮಂದಿ ಶಾಸಕರು ಎನ್ಸಿಪಿ ಶಾಸಕಾಂಗ ಸಭೆಗೆ ಹಾಜರಾಗಿದ್ದಾರೆ ಎಂದೂ ಮೂಲಗಳು ತಿಳಿಸಿದವು.
ಅಜಿತ್ ಪವಾರ್ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರವನ್ನು ಶರದ್ ಪವಾರ್ ಮತ್ತು ಜಯಂತ್ ಪಾಟೀಲ್ ಅವರಿಗೆ ಸಭೆಯು ನೀಡಿತು ಎಂದೂ ವರದಿಗಳು ಹೇಳಿವೆ.
No comments:
Post a Comment