Tuesday, December 24, 2019

ಕಾಂಗ್ರೆಸ್ ‘ಪೌರತ್ವ’ ಸತ್ಯಾಗ್ರಹದಲ್ಲಿ ಸಂವಿಧಾನ ಪಠಣ

ಕಾಂಗ್ರೆಸ್ ‘ಪೌರತ್ವ’ ಸತ್ಯಾಗ್ರಹದಲ್ಲಿ ಸಂವಿಧಾನ ಪಠಣ
ನವದೆಹಲಿ: ಪೌರತ್ವ ಕಾಯ್ದೆಯ ವಿರುದ್ಧ ದೆಹಲಿಯ ರಾಜಘಾಟ್ ಮಹಾತ್ಮ ಗಾಂಧಿ ಸಮಾಧಿಸ್ಥಳದಲ್ಲಿ ಸಂಘಟಿಸಲಾದ ಪ್ರತಿಭಟನಾಸತ್ಯಾಗ್ರಹದಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2019 ಡಿಸೆಂಬರ್ 23ರ ಸೋಮವಾರ ಸಂವಿಧಾನದ ಪೀಠಿಕೆಯನ್ನು ಓದಿ ಹೇಳಿದರು.

ಮುಖ್ಯಮಂತ್ರಿಗಳಾದ ಕಮಲ್ನಾಥ್ (ಮಧ್ಯಪ್ರದೇಶ) ಮತ್ತು ಅಶೋಕ್ ಗೆಹ್ಲೋಟ್ (ರಾಜಸ್ಥಾನ) ಅವರು ಕಾಂಗ್ರೆಸ್ಸತ್ಯಾಗ್ರಹದಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ರಕ್ಷಿಸುವಂತೆ ಕರೆ ನೀಡಿದರು.

ಬಿಜ್ನೋರಿನಲ್ಲಿ ಕಣ್ಣಾಲಿ ತುಂಬಿದ ತಾಯಿಯೊಬ್ಬಳುನನ್ನ ಮಗ ರಾಷ್ಟ್ರಕ್ಕಾಗಿ ಸತ್ತಿದ್ದಾನೆಎಂದು ಹೇಳಿದಳು. ಕ್ರಾಂತಿಯಲ್ಲಿ ಮೃತರಾದ ಜನರ ಹೆಸರಿನಲ್ಲಿ, ಬಿಜ್ನೋರಿನಲ್ಲಿ ಐದು ಮಕ್ಕಳ ತಂದೆಯೊಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾರೆ, ಮಕ್ಕಳು ಅವರಿಗಾಗಿ ಕಾಯುತ್ತಿದ್ದಾರೆ - ಇವರ ಹೆಸರಿನಲ್ಲಿ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ನಾವು ಭರವಸೆ ನೀಡುತ್ತೇವೆಎಂದು ಪ್ರಿಯಾಂಕಾ ಗಾಂಧಿ ವಾದ್ರಾ ರಾಜಘಾಟ್ನಲ್ಲಿ ಹೇಳಿದರು.

ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ವ್ಯಾಪಕ ಅಸಮಾಧಾನ ಇದೆ. ರಾಷ್ಟ್ರಾದ್ಯಂತ ಜನರು, ವಿಶೇಷವಾಗಿ ಯುವಜನರು, ಭಾರತದಲ್ಲಿ ಇದೇ ಮೊದಲ ಬಾರಿಗೆ ಪೌರತ್ವಕ್ಕೆ  ಧರ್ಮವನ್ನು ಆಧಾರವನ್ನಾಗಿ ಮಾಡಿದ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿತು.

ತಾನು ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಅವರು ೨೦೧೫ಕ್ಕೆ  ಮುನ್ನ ಧಾರ್ಮಿಕ ಕಿರುಕುಳದ ಕಾರಣಕ್ಕಾಗಿ ಅಲ್ಲಿಂದ ಪರಾರಿಯಾಗಿ ಭಾರತಕ್ಕೆ ವಲಸೆ ಬಂದಿದ್ದರೆ ಭಾರತೀಯ ಪೌರತ್ವ ನೀಡುವ ಮೂಲಕ ತಾನು ನೆರವಾಗುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆಇದು ಮುಸ್ಲಿಮರ ವಿರುದ್ಧದ ತಾರತಮ್ಯವಾಗಿದ್ದು ಸಂವಿಧಾನದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಕಾಯ್ದೆಯ ಟೀಕಾಕಾರರು ಹೇಳುತ್ತಾರೆ.

ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳನ್ನೂ ಕಾಂಗ್ರೆಸ್ ಬೆಂಬಲಿಸಿದೆ ಮತ್ತುಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಜನ ಸಾಮಾನ್ಯರ ವಿರುದ್ಧ ವಿವೇಚನೆ ರಹಿತವಾಗಿ ಪೊಲೀಸ್ ಬಲ ಪ್ರಯೋಗಿಸುತ್ತಿರುವುದನ್ನು ಖಂಡಿಸಿದೆ.

ಇದಕ್ಕೆ ಮುನ್ನ ಸೋಮವಾರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರ ಅವರು ಪ್ರತಿಭಟನೆಗೆ ಸೇರುವಂತೆ ಯುವ ಜನತೆಗೆ ಕರೆ ನೀಡಿದ್ದರು ಮತ್ತು ಸಂವಿಧಾನವನ್ನು ಓದಿ ಹೇಳಿದ್ದರು.

ಭಾರತದ ಪ್ರೀತಿಯ ಯುವಕರೇ ಮತ್ತು ವಿದ್ಯಾರ್ಥಿಗಳೇ, ಭಾರತ ಎಂಬುದಾಗಿ ಕೇವಲ ಸಹಾನುಭೂತಿ ತೋರಿದರೆ ಸಾಲದು. ಇಂತಹ ಸಂದರ್ಭಗಳಲ್ಲಿ ನೀವು ಭಾರತ ಎಂಬುದಾಗಿ ತೋರಿಸುವುದು ಮತ್ತು ಭಾರತವನ್ನು ದ್ವೇಷದ ಮೂಲಕ ನಾಶ ಪಡಿಸಲು ಅವಕಾಶ ನೀಡದೇ ಇರುವುದು ನಿರ್ಣಾಯಕವಾಗುತ್ತದೆ. ಭಾರತದ ಮೇಲೆ ಮೋದಿ-ಶಾ ಅವರು ಹರಿಯಬಿಟ್ಟಿರುವ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ  ಪ್ರತಿಭಟಿಸಲು ಸೋಮವಾರ ಮಧ್ಯಾಹ್ನ ಗಂಟೆಗೆ ರಾಜಘಾಟ್ನಲ್ಲಿ ನನ್ನ ಜೊತೆ ಸೇರಿರಿಎಂದು ರಾಹುಲ್ ಗಾಂಧಿ ಬೆಳಗ್ಗೆ ಟ್ವೀಟ್ ಮಾಡಿದ್ದರು.

ಪ್ರಿಯಾಂಕಾ ಗಾಂಧಿಯವರೂ ಟ್ವೀಟ್ ಮಾಡಿರಾಷ್ಟ್ರವೆಂದರೆ ಹಂಚಿಕೊಂಡಿರುವ ಬಂಧುತ್ವ ಮತ್ತು ಕನಸುಎಂದು ಹಿಂದಿಯಲ್ಲಿ ತಿಳಿಸಿದ್ದರು.

No comments:

Advertisement