My Blog List

Friday, December 27, 2019

ಜನಸಮೂಹವನ್ನು ಅಗ್ನಿಸ್ಪರ್ಶ, ಹಿಂಸೆಗೆ ಮುನ್ನಡೆಸುವವರು ನಾಯಕರಲ್ಲ

ಜನಸಮೂಹವನ್ನು ಅಗ್ನಿಸ್ಪರ್ಶ, ಹಿಂಸೆಗೆ
ಮುನ್ನಡೆಸುವವರು ನಾಯಕರಲ್ಲ
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ, ವಿಪಕ್ಷಗಳು ಕೆಂಡಾಮಂಡಲ
ನವದೆಹಲಿ: ’ಜನಸಮೂಹವನ್ನು ಕಿಚ್ಚಿಡುವಿಕೆ ಮತ್ತು ಹಿಂಸಾಚಾರಕ್ಕೆ ಮುನ್ನಡೆಸುವವರು ನಾಯಕರಲ್ಲಎಂಬುದಾಗಿ ಹೇಳುವ ಮೂಲಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು 2019 ಡಿಸೆಂಬರ್ 26ರ ಗುರುವಾರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಚರ್ಚೆಗೆ ಮಧ್ಯಪ್ರವೇಶ ಮಾಡಿದ್ದು, ಅವರ ಹೇಳಿಕೆಗೆ ವಿರೋಧ ಪಕ್ಷಗಳು ಕೆಂಡಾಮಂಡಲ ಸಿಟ್ಟು ಪ್ರದರ್ಶಿಸಿದವು.

ದೆಹಲಿಯಲ್ಲಿ ಸಮಾರಂಭ ಒಂದರಲ್ಲಿ ಮಾತನಾಡುತ್ತಿದ್ದ ರಾವತ್ ಅವರುನಾಯಕತ್ವ ಎಂದರೆ ಮುನ್ನಡೆಸುವುದಕ್ಕೆ ಸಂಬಂಧಿಸಿದ್ದು. ನೀವು ಮುಂದಕ್ಕೆ ಸಾಗಿದಾಗ ಎಲ್ಲರೂ ಪ್ರತಿಯೊಬ್ಬರೂ ಹಿಂಬಾಲಿಸುತ್ತಾರೆ.. ಅದು ಅಷ್ಟೊಂದು ಸರಳವಲ್ಲ, ಸಂಕೀರ್ಣ ವಿಚಾರಎಂದು ನುಡಿದರು.

ಜನರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವವರು ನಾಯಕರು. ಜನರನ್ನು ನಾವು ಈಗ ನೋಡುತ್ತಿರುವಂತೆ ವಿಶ್ವ ವಿದ್ಯಾಲಯ ಮತ್ತು ಕಾಲೇಜು ವಿದಾರ್ಥಿಗಳ ದೊಡ್ಡ ಸಮೂಹವನ್ನು ಅಸಮರ್ಪಕ ದಿಕ್ಕಿಗೆ ಮುನ್ನಡೆಸುವವರು ನಾಯಕರಲ್ಲ.  ನಮ್ಮ ನಗರಗಳು ಮತ್ತು ಪಟ್ಟಣಗಳಲ್ಲಿ ಜನ ಸಮೂಹವನ್ನು ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದತ್ತ ಮುನ್ನಡೆಸುತ್ತಿರುವ ಮಾರ್ಗ, ಇದು ನಾಯಕತ್ವ ಅಲ್ಲಎಂದು ರಾವತ್ ಹೇಳಿದರು.

ಡಿಸೆಂಬರ್
೩೧ರಂದು ನಿವೃತ್ತರಾಗಲಿರುವ ರಾವತ್ ಅವರು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳ ವಿರುದ್ಧ ಮಾತನಾಡಿರುವುದು ಇದೇ ಪ್ರಥಮ.

ವಿವಾದಾತ್ಮಕ
ಕಾಯ್ದೆ ವಿರುದ್ಧ ನಡೆದಿರುವ ದೇಶವ್ಯಾಪಿ ಪ್ರತಿಭಟನೆಗಳಲಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಸಂಭವಿಸಿದ ಘರ್ಷಣೆಗಳಲ್ಲಿ ಸುಮಾರು ೨೦ ಮಂದಿ ಮೃತರಾಗಿದ್ದು, ಬಹುತೇಕ ಸಾವುಗಳು ಉತ್ತರಪ್ರದೇಶದಲ್ಲಿ ಸಂಭವಿಸಿವೆ. ಕರ್ನಾಟಕದಲ್ಲಿಯೂ ಇಬ್ಬರು ಸಾವನ್ನಪ್ಪಿದ್ದಾರೆ.

ಪಾಕಿಸ್ತಾನ
, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ೨೦೧೪ರ ಡಿಸೆಂಬರ್ ೩೧ಕ್ಕೆ ಮುನ್ನ ಧಾರ್ಮಿಕ ಕಿರುಕುಳದ ಕಾರಣ ಭಾರತಕ್ಕೆ ವಲಸೆ ಬಂದಿರುವ ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವ ಕಾಯ್ದೆಯನ್ನು ವಿರೋಧಿಸುತ್ತಿರುವವರು ಕಾಯ್ದೆಯುತಾರತಮ್ಯ ಕಾಯ್ದೆ ಎಂದು ಆಪಾದಿಸುತ್ತಿದ್ದಾರೆ.

ಸೇನಾ
ಮುಖ್ಯಸ್ಥರ ಹೇಳಿಕೆ ಸ್ವಲ್ಪ ಹೊತ್ತಿನಲ್ಲೇ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಯಿತು.

'ನಾನು
ಒಪ್ಪುತ್ತೇನೆ ಜನರಲ್ ಸಾಹೇಬ್, ಆದರೆ ತಮ್ಮ ಅನುಯಾಯಿಗಳನ್ನು ಜನಾಂಗ ಹತ್ಯೆಯ ಕೋಮುಹಿಂಸೆಯಲ್ಲಿ ಪಾಲ್ಗೊಳ್ಳಲು ಬಿಡುವವರು ಕೂಡಾ ನಾಯಕರಲ್ಲ. ನೀವು ನನ್ನ ಮಾತನ್ನು ಒಪ್ಪುವಿರಾ ಜನರಲ್ ಸಾಹೇಬ್?’ ಎಂಬುದಾಗಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಜನರಲ್ ರಾವತ್ ಅವರ ಹೇಳಿಕೆ ವಿರುದ್ಧ ಸಿಟ್ಟು ಪ್ರದರ್ಶಿಸಿದರು.

ಕಾಂಗ್ರೆಸ್ ವಕ್ತಾರ ಬೃಜೇಶ್ ಕಾಳಪ್ಪ ಅವರುಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳ ವಿರುದ್ಧ ಮಾತನಾಡುವುದು ಸಂಪೂರ್ಣವಾಗಿ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ವಿರುದ್ಧ. ಇಂದು ರಾಜಕೀಯ ವಿಷಯಗಳ ಬಗ್ಗೆ ಮಾತನಾಡಲು ಸೇನಾ ಮುಖ್ಯಸ್ಥರಿಗೆ ಅನುಮತಿ ನೀಡಿದರೆ, ಅದು ನಾಳೆ ಅವರಿಗೆ ಸೇನೆಯು ಅಧಿಕಾರ ವಶಪಡಿಸಿಕೊಳ್ಳಲೂ ಅನುಮತಿ ನೀಡುತ್ತದೆ!’ ಎಂದು ಹೇಳಿದರು.

ಎಐಎಂಐಎಂ
ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕೂಡಾ ರಾವತ್ ಅವರತ್ತ ಟ್ವೀಟ್ ಚಾಟಿ ಬೀಸಿದರು. ’ಒಬ್ಬನ ಕಚೇರಿಯ ಮಿತಿಯನ್ನು ತಿಳಿದುಕೊಳ್ಳುವುದು ನಾಯಕತ್ವ. ನಾಗರಿಕ ಪಾರಮ್ಯದ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ನೀವು ಮುಖ್ಯಸ್ಥರಾಗಿರುವ ಸಂಸ್ಥೆಯ ಸಮಗ್ರತೆಯನ್ನು ರಕ್ಷಿಸುವುದು ನಾಯಕತ್ವಎಂದು ಓವೈಸಿ ಟ್ವೀಟ್ ಮಾಡಿದರು.

ಇತರ
ಕೆಲವರು ಜನರಲ್ ರಾವತ್ ಅವರನ್ನುರಾಜಕೀಯ ಸೇನಾ ಮುಖ್ಯಸ್ಥಎಂದು ಕರೆದರು.

ಭಾರತದ  ಸೇನೆಗೆ ವಿಶ್ವಾದ್ಯಂತ ಉನ್ನತ ಗೌರವ ಪ್ರಾಪ್ತವಾಗಲು ಕಾರಣವಾದದ್ದು ಅದರ ರಾಜಕೀಯ ರಹಿತತೆ. ಇಂತಹ ರಾಜಕೀಯ ಹೇಳಿಕೆಗಳು ಸೇನಾ ಮುಖ್ಯಸ್ಥರಿಗೆ ಯೋಗ್ಯವಲ್ಲ. ಭಾರತೀಯ ಸೇನೆಯ ರಾಜಕೀಯ ತಾಟಸ್ಥ್ಯದ ಜೊತೆಗೆ ಯಾವುದೇ ಸಂದರ್ಭದಲ್ಲೂ ರಾಜಿ ಸರಿಯಲ್ಲ!’ ಎಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಮಾಧ್ಯಮ ತಂಡದ ಶಾಮಾ ಮೊಹಮ್ಮದ್ ಟ್ವೀಟ್ ಮಾಡಿದರು.

ಡಿಸೆಂಬರ್ ೩೧ರಂದು ಸೇನಾ ಮುಖ್ಯಸ್ಥರಾಗಿ ನಿವೃತ್ತರಾಗಲಿರುವ ಜನರಲ್ ರಾವತ್ ಅವರ ಹೆಸರು ಭಾರತದ ಪ್ರಪ್ರಥಮ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಹುದ್ದೆಗೆ ಕೇಳಿ ಬರುತ್ತಿದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು (ಸಿಡಿಎಸ್) ರಕ್ಷಣಾ ಸಚಿವಾಲಯದಲ್ಲಿ ಸೇನಾ ವಿಭಾಗದ ಮುಖ್ಯಸ್ಥರಾಗಲಿದ್ದಾರೆ. ಸರ್ಕಾರವು ರಾವತ್ ಅವರನ್ನು ಮಹತ್ವದ ಹುದ್ದೆಗೆ ಹೆಸರಿಸಬಹುದು ಎಂದು ಹೇಳಲಾಗುತ್ತಿದೆ.

No comments:

Advertisement