Saturday, December 28, 2019

೧೪೫ ದಿನಗಳ ಬಳಿಕ ಕಾರ್ಗಿಲ್‌ನಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ

೧೪೫ ದಿನಗಳ ಬಳಿಕ ಕಾರ್ಗಿಲ್ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ
ಸಹಜ ಸ್ಥಿತಿಗೆ ಮರಳಿದ ಲಡಾಖ್
ನವದೆಹಲಿ: ಕೇಂದ್ರ ಸರ್ಕಾರವು ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಕಡಿತಗೊಂಡಿದ್ದ ಮೊಬೈಲ್ ಇಂಟರ್ ನೆಟ್ ಸೇವೆಗಳು, ಲಡಾಖ್ ಜಿಲ್ಲೆಯು ಸಹಜ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾರ್ಗಿಲ್ನಲ್ಲಿ 2019 ಡಿಸೆಂಬರ್ 27ರ ಶುಕ್ರವಾರ ಪುನಾರಂಭಗೊಂಡವು.

ಕಾರ್ಗಿಲ್
ನಲ್ಲಿ ಕಳೆದ ನಾಲ್ಕು ತಿಂಗಳುಗಳಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದೇ ಪರಿಸ್ಥಿತಿ ಸಂಪೂರ್ಣವಾಗಿ ಸಹಜಗೊಂಡಿರುವ ಕಾರಣ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಪುನಃಸ್ಥಾಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಸ್ಥಳೀಯ
ಧಾರ್ಮಿಕ ನಾಯಕರು ಸವಲತ್ತನ್ನು ದುರುಪಯೋಗ ಮಾಡದಂತೆ ಜನರಿಗೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ಕಾರ್ಗಿಲ್ನಲ್ಲಿ ಬ್ರಾಡ್ ಬ್ಯಾಂಡ್ ಸೇವೆಗಳು ಮುನ್ನವೇ ಆರಂಭಗೊಂಡಿದ್ದವು.

ಸಂವಿಧಾನದ
೩೭೦ನೇ ವಿಧಿ ರದ್ದುಪಡಿಸುವ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಪ್ರಕಟಿಸುವುದಕ್ಕೆ ಕೆಲವು ಗಂಟೆಗಳ ಮುನ್ನ ಆಗಸ್ಟ್ ೫ರಂದು ಅಧಿಕಾರಿಗಳು ಸ್ಥಿರ ದೂರವಾಣಿ ಮತ್ತು ಮೊಬೈಲ್ ಫೋನ್ ಸೇವೆಗಳ ಸಂಪರ್ಕ ಲೈನುಗಳನ್ನು ಕಿತ್ತು ಹಾಕಿದ್ದರು.

ಪ್ರತ್ಯೇಕತಾವಾದಿ ರಾಜಕಾರಣಿಗಳ ಉನ್ನತ ಮತ್ತು ಎರಡನೇ ಹಂತದ ನಾಯಕರನ್ನೂ ಮುಂಜಾಗರೂಕತಾ ಕ್ರಮವಾಗಿ ವಶಕ್ಕೆ ಪಡೆದರೆ, ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲ ಮತ್ತು ಮೆಹಬೂಬ ಮುಫ್ತಿ ಸೇರಿದಂತೆ ಮುಖ್ಯಪ್ರವಾಹದ ನಾಯಕರನ್ನು ಸ್ಥಾನಬದ್ಧತೆ ಇಲ್ಲವೇ ಗೃಹಬಂಧನಕ್ಕೆ ಒಳಪಡಿಸಲಾಗಿತ್ತು.

ಕ್ರಮೇಣ ಪರಿಸ್ಥಿತಿ ಸಹಜಗೊಳ್ಳುತ್ತಿದ್ದಂತೆಯೇ ಮೊದಲಿಗೆ ಸ್ಥಿರದೂರವಾಣಿಗಳನ್ನು ಪುನಃಸ್ಥಾಪನೆ ಮಾಡಿದರೆ, ಮೊಬೈಲ್ ದೂರವಾಣಿ ಸೇವೆಗಳು ಬಳಿಕ ಪುನರಾಂಭಗೊಂಡವು. ಆದಾಗ್ಯೂ, ಪೂರ್ವ ಪಾವತಿ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆಗಳು ಇಡೀ ಕಣಿವೆಯಲ್ಲಿ ಇನ್ನೂ ಪುನರಾಂಭವಾಗಬೇಕಾಗಿವೆ.

ತಮ್ಮ
ವೃತ್ತಿಯ ಕರ್ತವ್ಯಗಳನ್ನು ನೆರವೇರಿಸಲು ಸಾಧ್ಯವಾಗುವಂತೆ ಕನಿಷ್ಠ ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಪುನಃಸ್ಥಾಪನೆ ಮಾಡುವಂತೆ ಮಾಧ್ಯಮ ಮಂದಿ ಆಗ್ರಹಿಸುತ್ತಿದ್ದಾರೆ.

No comments:

Advertisement