My Blog List

Saturday, December 21, 2019

೨೦೦೮ರ ಜೈಪುರ ಸರಣಿ ಸ್ಫೋಟ: ೪ ಮಂದಿಗೆ ಮರಣದಂಡನೆ

೨೦೦೮ರ ಜೈಪುರ ಸರಣಿ ಸ್ಫೋಟ: ಮಂದಿಗೆ ಮರಣದಂಡನೆ
೮೦ ಜನರ ಸಾವು, ೧೭೦ ಜನ ಗಾಯಗೊಂಡಿದ್ದ ಭೀಕರ ಕೃತ್ಯ
ಜೈಪುರ: ೨೦೦೮ರಲ್ಲಿ ಜೈಪುರದಲ್ಲಿ ೮೦ರ ಸಾವಿಗೆ ಕಾರಣವಾಗಿದ್ದ ಸರಣಿ ಬಾಂಬ್ ಸ್ಫೋಟಗಳಲ್ಲಿ ಶಾಮೀಲಾಗಿದ್ದುದು ಸಾಬೀತಾದ ಹಿನ್ನೆಲೆಯಲ್ಲಿ ನಾಲ್ಕು ಮಂದಿಗೆ ರಾಜಸ್ಥಾನದ ರಾಜಧಾನಿಯ ನ್ಯಾಯಾಲಯವು 2019 ಡಿಸೆಂಬರ್ 20ರ ಶುಕ್ರವಾರ ಮರಣದಂಡನೆಯನ್ನು ವಿಧಿಸಿತು. ಪ್ರಕರಣದ ಆರೋಪಿಗಳ ಪೈಕಿ ಒಬ್ಬನನ್ನು ಖುಲಾಸೆ ಮಾಡಲಾಯಿತು.

೧೧
ವರ್ಷಗಳ ಹಿಂದೆ ಸಂಭವಿಸಿದ್ದ ಭೀಕರ ದಾಳಿಗಳಿಗೆ ೮೦ ಮಂದಿ ಬಲಿಯಾಗಿದ್ದುದರ ಹೊರತಾಗಿ ಇತರ ೧೭೦ ಮಂದಿ ಗಾಯಗೊಂಡಿದ್ದರು.

ಮೊಹಮ್ಮದ್ ಸೈಫ್, ಸರ್ವಾರ್ ಆಜ್ಮಿ, ಸಲ್ಮಾನ್ ಮತ್ತು ಸೈಫುರ್ ರಹಮಾನ್ ಅವರು ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳಾಗಿದ್ದು, ಶಾಬಾಜ್ ಹುಸೈನ್ ಹೆಸರಿನ ಐದನೇ ಆರೋಪಿಯನ್ನು ಖುಲಾಸೆ ಮಾಡಲಾಯಿತು.

ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಮೂವರು ಆರೋಪಿಗಳು ದೆಹಲಿಯ ತಿಹಾರ್ ಸೆರೆಮನೆಯಲ್ಲಿ ಇದ್ದಾರೆ.

ಜೈಪುರ ಸ್ಫೋಟಗಳ ಸಂಪೂರ್ಣ ಸಂಚನ್ನು ಉತ್ತರಪ್ರದೇಶದ ಮೊಹಮ್ಮದ್ ಅತಿನ್ ಎಂಬಾತ ಯೋಜಿಸಿದ್ದ ಎಂದು ನಂಬಲಾಗಿದೆ. ಈತ ದೆಹಲಿಯಲ್ಲಿ ನಡೆದ ಬಾಟ್ಲ ಹೌಸ್ ಎನ್ ಕೌಂಟರಿನಲ್ಲಿ ಸಾವನ್ನಪ್ಪಿದ್ದ.

ಗಲ್ಲು ಶಿಕ್ಷೆಗೆ ಗುರಿಯಾಗಿರುವ ಎಲ್ಲ ನಾಲ್ವರೂ ಉತ್ತರ ಪ್ರದೇಶದ ನಿವಾಸಿಗಳಾಗಿದ್ದು ಅತಿನ್ ಸೂಚನೆ ಮೇರೆಗೆ ಸ್ಫೋಟ ಕಾರ್ಯಾಚರಣೆಗಳನ್ನು ನಡೆಸಿದ್ದರು. ಅವರು ಸ್ಫೋಟಕಗಳಾದ ಅಮೋನಿಯಯಂ ನೈಟ್ರೇಟ್ನ್ನು ತಂದು ಅದನ್ನು ಸಿಡಿದ ಬಾಂಬ್ ಚೂರುಗಳ ಜೊತೆ ಸೇರಿಸಿ ನಗರದ ಒಂಬತ್ತು ಕಡೆಗಳಲ್ಲಿ ನಿಲ್ಲಿಸಲಾಗಿದ್ದ ಸೈಕಲ್ಗಳಲ್ಲಿ ಇರಿಸಿದ್ದರು. ಎಲ್ಲ ಬಾಂಬ್ಗಳೂ ರಾತ್ರಿ .೨೦ರಿಂದ .೪೫ರ ನಡುವಣ ಅವಧಿಯಲ್ಲಿ ಸ್ಫೋಟಗೊಂಡಿದ್ದವು.

ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ದೆಹಲಿಯ ಬಾಟ್ಲಾ ಹೌಸ್ನಲ್ಲಿ ನಡೆದ ಘರ್ಷಣೆಯಲ್ಲಿ ಸತ್ತಿದ್ದಾರೆ ಎಂಬ ಪ್ರಾಸೆಕ್ಯೂಷನ್ ವಾದವನ್ನು ನ್ಯಾಯಾಲಯವು ಗುರುವಾರ ಎತ್ತಿ ಹಿಡಿದಿತ್ತು.

ಜೈಪುರದಲ್ಲಿ ೨೦೦೮ರ ಮೇ ತಿಂಗಳಲ್ಲಿ ಸಂಭವಿಸಿದ್ದ ಸ್ಫೋಟಗಳು ಇಂಡಿಯನ್ ಮುಜಾಹಿದೀನ್ ಕಾರ್ಯಾಚರಿಸಿದ ದಾಳಿಗಳಲ್ಲೇ ಅತ್ಯಂತ ಮಾರಕ ದಾಳಿಯಾಗಿತ್ತು. ೧೦ ಸುಧಾರಿತ ಸ್ಫೋಟಕ ಸಾಧನಗಳನ್ನು ದಾಳಿಗಳ ಸಲುವಾಗಿ ಹುಗಿದು ಇಡಲಾಗಿತ್ತು. ಅವುಗಳ ಪೈಕಿ ಸ್ಫೋಟಕ ಸಾಧನಗಳೂ ಸ್ಫೋಟಗೊಂಡಿದ್ದವು.

ಆರೋಪಿಗಳಲ್ಲಿ ಒಬ್ಬನಾದ ಶಾಬಾಜ್ ಹುಸೈನ್ನನ್ನು ಗುರುವಾರ ಖುಲಾಸೆ ಮಾಡಲಾಗಿತ್ತು.  ಈತನ ವಿರುದ್ಧ ಮಿಂಚಂಚೆ (-ಮೇಲ್) ಕಳುಹಿಸುತ್ತಿದ್ದ ಆರೋಪ ಹೊರಿಸಲಾಗಿತ್ತು. ಇಂಡಿಯನ್ ಮುಜಾಹಿದೀನ್ ಕೃತ್ಯದ ಹೊಣೆ ಹೊತ್ತಿರುವುದಾಗಿ ಶಾಬಾಜ್ ಹುಸೈನ್ ಮಿಂಚಂಚೆಗಳನ್ನು ಕಳುಹಿಸಿದ್ದಾಗಿ ಆಪಾದಿಸಲಾಗಿತ್ತು. ಆದರೆ ಸಾಹಿಬಾಬಾದಿನ ಸೈಬರ್ ಕೆಫೆಯೊಂದರಿಂದ ಈತ ಮಿಂಚಂಚೆ ಕಳುಹಿಸಿದ್ದ ಎಂಬುದನ್ನು ಸಾಬೀತು ಪಡಿಸುವ ಯಾವುದೇ ಸಾಕ್ಷ್ಯಾಧಾರ ಇರಲಿಲ್ಲ. ಶಾಬಾಜ್ ಹುಸೈನ್ ಕಂಪ್ಯೂಟರ್ ವಿಜ್ಞಾನದಲ್ಲಿ ಎಂಟೆಕ್ ಪದವೀಧರನಾಗಿದ್ದು, ಲಕ್ನೋದಲ್ಲಿ ಸೈಬರ್ ಕೆಫೆ ನಡೆಸುತ್ತಿದ್ದ.

No comments:

Advertisement