Sunday, December 8, 2019

ಉನ್ನಾವೋ ಅತ್ಯಾಚಾರ: ವಿಚಾರಣೆಗೆ ‘ತ್ವರಿತ ವಿಚಾರಣಾ ನ್ಯಾಯಾಲಯ’

ಉನ್ನಾವೋ ಅತ್ಯಾಚಾರ: ವಿಚಾರಣೆಗೆ ‘ತ್ವರಿತ ವಿಚಾರಣಾ ನ್ಯಾಯಾಲಯ’
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕಟಣೆ, ಸಚಿವರಿಗೆ ಗ್ರಾಮಸ್ಥರ ಘೇರಾವ್
ಲಕ್ನೋ: ಉನ್ನಾವೋ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳು ಹಚ್ಚಿದ ಕಿಚ್ಚಿನಿಂದ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಜೀವನ್ಮರಣ ಹೋರಾಟದ ಬಳಿಕ ಸಾವನ್ನಪ್ಪಿದ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಸಾವಿನ ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯ ವಿಚಾರಣೆ ನಡೆಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2019 ಡಿಸೆಂಬರ್ 07ರ ಶನಿವಾರ ಪ್ರಕಟಿಸಿದರು.

ಯುವತಿಯ ಕುಟುಂಬಕ್ಕೆ ೨೫ ಲಕ್ಷ ರೂಪಾಯಿಗಳ ಪರಿಹಾರ ಮತ್ತು ಒಂದು ಮನೆಯನ್ನೂ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಸಾವನ್ನಪ್ಪಿದ ಯುವತಿಯ ಮನೆಯವು ಬಯಸುವ ಯಾವುದೇ ರೀತಿಯ ತನಿಖೆಯನ್ನು ಮಾಡಲಾಗುವುದು, ಯುವತಿ ಹೇಳಿರುವ ಹೆಸರಿನ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವ ಅಪರಾಧಿಗಳನ್ನೂ ಬಿಡಲಾಗುವುದಿಲ್ಲ. ಇದು ರಾಜಕೀಯದ ವಿಷಯವಲ್ಲ ಎಂದು ಯುವತಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಬಳಿಕ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದರು.

ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಸಾವು ತೀವ್ರ ನೋವು ತಂದಿದೆ ಎಂದು ಹೇಳಿದ ಮುಖ್ಯಮಂತ್ರಿ ಮೃತಳ ಕುಟುಂಬಕ್ಕೆ ತಮ್ಮ ಸಂತಾಪ ವ್ಯಕ್ತಪಡಿಸಿದರು. ಎಲ್ಲ ಐವರೂ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಆದಿತ್ಯನಾಥ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.

2019 ಡಿಸೆಂಬರ್ 05ರ ಗುರುವಾರ ಬೆಳಗ್ಗೆ ರಾಯ್ ಬರೇಲಿ ನ್ಯಾಯಾಲಯಕ್ಕೆ ವಿಚಾರಣೆ ಸಲುವಾಗಿ ಹೊರಟಿದ್ದ ಸಂತ್ರಸ್ಥ ಮಹಿಳೆಗೆ ಐವರು ಆರೋಪಿಗಳು ಬೆಂಕಿ ಹಚ್ಚಿದ್ದರು. ಅವರ ಪೈಕಿ ಇಬ್ಬರು ಬೆಂಕಿ ಹಚ್ಚುವುದಕ್ಕೆ ಮುನ್ನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಅಪಾದಿಸಲಾಗಿದೆ.

ಶೇಕಡಾ ೯೦ರಷ್ಟು ಸುಟ್ಟ ಗಾಯಕ್ಕೆ ಒಳಗಾಗಿದ್ದ ಆಕೆಯನ್ನು ಏರ್ ಆಂಬುಲೆನ್ಸ್ ಮೂಲಕ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಹೃದಯಾಘಾತಕ್ಕೆ ಈಡಾಗಿ ಆಕೆ ಸಾವನ್ನಪ್ಪಿದ್ದರು. ಸಾವಿನ ಬಳಿಕ ಆಕೆಯ ಮೃತ ದೇಹವನ್ನು ಆಸ್ಪತ್ರೆಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.

ಸಾವಿಗೆ ಮುನ್ನ ಮಹಿಳೆನನ್ನನ್ನು ಬದುಕಿಸಿ, ದುಷ್ಕರ್ಮಿಗಳನ್ನು ಬಿಡಬೇಡಿ, ಗಲ್ಲಿಗೇರಿಸಿಎಂದು ಮೊರೆಯಿಟ್ಟಿದ್ದರು.

ತೆಲಂಗಾಣದ ಹೈದರಾಬಾದಿನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಬೆಂಕಿಹಚ್ಚಿ ಕೊಂದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ಕೌಂಟರಿನಲ್ಲಿ ಗುಂಡಿಟ್ಟು ಕೊಂದ ದಿನವೇ ರಾತ್ರಿ, ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ಥೆ ಸಾವನ್ನಪ್ಪಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಿರೋಧ ಪಕ್ಷಗಳು ಕಿಡಿಕಾರಿದವು.

ಆದಿತ್ಯನಾಥ್ ಅವರು ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗುವಂತೆ ತಮ್ಮ ಸಂಪುಟದ ಕಮಲ್ ರಾಣಿ ವರುಣ್ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ಆದಿತ್ಯನಾಥ್ ಸೂಚಿಸಿದ್ದರು. ಮುಖ್ಯಮಂತ್ರಿ ಸೂಚನೆ ಮೇರೆಗೆ ಉನ್ನಾವೋಗೆ ತೆರಳಿದ ಸಚಿವರಿಗೆ ಸ್ಥಳದಲ್ಲಿ ಗ್ರಾಮಸ್ಥರಿಂದ ತೀವ್ರ ಪ್ರತಿಭಟನೆ ಎದುರಾಯಿತು.

ಲಕ್ನೋದಿಂದ ೬೫ ಕಿಲೋ ಮೀಟರ್ ದೂರದಲ್ಲಿರುವ ಉನ್ನಾವ್ ಗ್ರಾಮಕ್ಕೆ ಸಚಿವರ ಕಾರು ಆಗಮಿಸುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿ ಒಗ್ಗೂಡಿದ ಗ್ರಾಮಸ್ಥರುಈಗ ಯಾಕೆ ಬಂದಿದ್ದೀರಿ?’ ಎಂದು ಪ್ರಶ್ನಿಸಿ ಘೋಷಣೆ ಕೂಗಲು ಆರಂಭಿಸಿದರು. ವೇಳೆಯಲ್ಲಿ ಪೊಲೀಸರು ಉದ್ರಿಕ್ತ ಗ್ರಾಮಸ್ಥರು ಕಾರನ್ನು ತಡೆಯದಂತೆ ಪ್ರಯತ್ನಿಸಿದರು ಎಂದು ವರದಿ ತಿಳಿಸಿತು.

ಕೊನೆಗೂ ಸಂತ್ರಸ್ತೆ ಮಹಿಳೆ ಮನೆಗೆ ಭೇಟಿ ನೀಡಿ ಮಾತನಾಡಿದ ಸಚಿವ ಮೌರ್ಯ ಅವರು, ಆರೋಪಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಯಾವ ರೀತಿಯ ತನಿಖೆ ನಡೆಸಬೇಕೆಂದು ನೀವು (ಕುಟುಂಬ) ಬಯಸುತ್ತಿರೋ ಅದೇ ರೀತಿ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಇದು ರಾಜಕೀಯ ಮಾಡುವ ವಿಚಾರವಲ್ಲ ಎಂದೂ ಸಚಿವರು ತಿಳಿಸಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.

ಸಂತ್ರಸ್ಥೆಯ ತಂದೆಐವರೂ ಆರೋಪಿಗಳನ್ನು ಹೈದರಾಬಾದ್ ಮಾದರಿಯಲ್ಲಿ  ಎನ್ಕೌಂಟರಿನಲ್ಲಿ ಕೊಂದು ಹಾಕಿ, ಅವರ ಹೆಸರುಗಳನ್ನು ನೆಲದಿಂದಲೇ ಅಳಿಸಿಹಾಕಬೇಕುಎಂದು ಆಗ್ರಹಿಸಿದರು ಎಂದು ವರದಿ ಹೇಳಿತು.

ಉಪ್ರ ಎನ್ಕೌಂಟರ್ಗಳಲ್ಲಿ ೧೦೩ ಹತ್ಯೆ: ಮಧ್ಯೆ, ಕಳೆದ ಎರಡು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ೧೦೩ ಶಂಕಿತ ಕ್ರಿಮಿನಲ್ ಅಪರಾಧಿಗಳನ್ನು ಎನ್ಕೌಂಟರ್ಗಳಲ್ಲಿ ಕೊಲ್ಲಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಶನಿವಾರ ಪ್ರತಿಪಾದಿಸಿದರು.

ಉತ್ತರ ಪ್ರದೇಶದ ಪೊಲೀಸರು ಕ್ರಿಮಿನಲ್ಗಳನ್ನುರಾಜ್ಯ ಅತಿಥಿಗಳಂತೆ ಇಟ್ಟುಕೊಂಡಿದ್ದಾರೆಎಂಬುದಾಗಿ ಬಹುಜನ ಸಮಾಜ ಪಕ್ಷವು ಮಾಡಿದ ಟೀಕೆಗೆ ರಾಜ್ಯ ಪೊಲೀಸರು ಉತ್ತರಿಸುತ್ತಾ ವಿಷಯವನ್ನು ಬಹಿರಂಗ ಪಡಿಸಿದರು.

ಹೈದರಾಬಾದಿನಲ್ಲಿ ಪೊಲೀಸರು ಎನ್ ಕೌಂಟರಿನಲ್ಲಿ ನಾಲ್ವರು ಆರೋಪಿಗಳನ್ನು ಹತ್ಯೆ ಮಾಡಿದ್ದನ್ನು ಶ್ಲಾಘಿಸುತ್ತಾ ಮಾಯಾವತಿ ಅವರುಉತ್ತರ ಪ್ರದೇಶದ ಪೊಲೀಸರು ತೆಲಂಗಾಣ ಪೊಲೀಸರಿಂದ ಸ್ಫೂರ್ತಿ ಪಡೆಯಬೇಕುಎಂದು ಹೇಳಿದ್ದರು.

ಹೈದರಾಬಾದ್ ಪೊಲೀಸರಿಂದ ಸ್ಫೂರ್ತಿ ಪಡೆದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಪೊಲೀಸರಿಗೆ ಹೇಳಲು ನಾನು ಬಯಸುತ್ತೇನೆ. ಆದರೆ, ದುರದೃಷ್ಟ ಏನೆಂದರೆ ದೆಹಲಿ ಮತ್ತು ಉತ್ತರ ಪ್ರದೇಶದ ಪೊಲೀಸರು ಆರೋಪಿಗಳನ್ನುಸರ್ಕಾರಿ ಅತಿಥಿಗಳಂತೆ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ನನಗೆ ನಾಚಿಕೆಯಾಗುತ್ತಿದೆಎಂದು ಮಾಯಾವತಿ ಟೀಕಿಸಿದ್ದರು.

ಮಹಿಳೆಯರ ವಿರುದ್ಧದ ಅತ್ಯಾಚಾರ ಮತ್ತು ಮಾನಭಂಗದ ಘಟನೆಗಳು ಇಡೀ ಉತ್ತರಪ್ರದೇಶದಲ್ಲಿ ಸಾಮಾನ್ಯವಾಗುತ್ತಿವೆ. ಇಲ್ಲಿನ ಬಿಜೆಪಿ ಸರ್ಕಾರ ನಿದ್ರಿಸುತ್ತಿದೆಎಂದು ಅವರು ಹೇಳಿದ್ದರು.

ಮಾಯಾವತಿ ಹೇಳಿಕೆಗೆ ಟ್ವಿಟ್ಟರಿನಲ್ಲಿ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸರುಇಲಾಖೆಯು ೨೦೧೭ರ ಮಾರ್ಚ್ ತಿಂಗಳಿನಿಂದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಕಳೆದ ಎರಡು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ,೧೭೮ ಪ್ರಕರಣಗಳು ಹಾಗೂ ಎನ್ಕೌಂಟರ್ಗಳಲ್ಲಿ ೧೦೩ ಕ್ರಿಮಿನಲ್ಗಳನ್ನು ಕೊಂದಿದ್ದು, ,೮೫೯ ಮಂದಿ ಗಾಯಗೊಂಡಿದ್ದಾರೆಎಂದು ಪ್ರಕಟಿಸಿತು.

೧೭,೭೪೫ ಕ್ರಿಮಿನಲ್ಗಳು ಶರಣಾಗತರಾಗಿದ್ದಾರೆ ಅಥವಾ ತಮ್ಮ ಜಾಮೀನುಗಳನ್ನು ಸ್ವತಃ ರದ್ದು ಪಡಿಸಿಕೊಂಡು ಸೆರೆಮನೆಗಳಿಗೆ ತೆರಳಿದ್ದಾರೆ ಎಂದೂ ಪೊಲೀಸರು ಹೇಳಿದರು.

ಎಂತಹ ಸರ್ಕಾರಿ ಅತಿಥಿಗಳು.. ಅಂಕಿ ಸಂಖ್ಯೆಗಳೇ ಮಾತನಾಡುತ್ತವೆ. ಕಾಡಿನ ಸಾಮ್ರ್ಯಾಜ್ಯ (ಜಂಗಲ್ ರಾಜ್) ಭೂತಕಾಲದ ವಿಷಯವಾಗಿವೆ, ಈಗ ಇಲ್ಲಎಂದು ಪೊಲೀಸರು ನುಡಿದರು.

No comments:

Advertisement