ಪ್ರತಿಯೊಬ್ಬ
ಪಾಕಿಸ್ತಾನಿ ನಾಗರಿಕನಿಗೆ ಪೌರತ್ವ, ೩೭೦ನೇ ವಿಧಿ ವಾಪಸ್: ವಿಪಕ್ಷಗಳಿಗೆ
ಪ್ರಧಾನಿ ಮೋದಿ
ಸವಾಲು
ನವದೆಹಲಿ: ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್ ಪಕ್ಷವು ’ಸುಳ್ಳುಗಳನ್ನು ಹರಡುತ್ತಿದೆ’ ಮತ್ತು
ರಾಷ್ಟ್ರದ ಮುಸ್ಲಿಮರಲ್ಲಿ ಭಯದ ವಾತಾವರಣವನ್ನುಸೃಷ್ಟಿ ಮಾಡುತ್ತಿದೆ ಎಂಬುದಾಗಿ 2019 ಡಿಸೆಂಬರ್ 17ರ ಮಂಗಳವಾರ ಆಪಾದಿಸಿದ
ಪ್ರಧಾನಿ ನರೇಂದ್ರ ಮೋದಿ ಅವರು ’ಧೈರ್ಯ ಇದ್ದರೆ, ಪ್ರತಿಯೊಬ್ಬ ಪಾಕಿಸ್ತಾನಿ ಪ್ರಜೆಗೆ ಭಾರತೀಯ ಪೌರತ್ವ ನೀಡುವುದಾಗಿಯೂ, ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿ ೩೭೦ನೇ ವಿಧಿಯನ್ನು ವಾಪಸ್ ತರುವುದಾಗಿಯೂ ಘೋಷಿಸಿ ಎಂದು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಸವಾಲೆಸೆದರು.
ಜಾರ್ಖಂಡ್ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ
ಮಾತನಾಡುತ್ತಿದ್ದ ಪ್ರಧಾನಿ, ’ಪೌರತ್ವ ಕಾಯ್ದೆಯು ಭಾರತದ ಯಾವುದೇ ನಾಗರಿಕನ ಯಾವುದೇ ಹಕ್ಕನ್ನೂ ಕಿತ್ತು ಕೊಳ್ಳುವುದಿಲ್ಲ’ ಎಂಬುದಾಗಿ
ಹೇಳಿ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಭೀತಿಗಳನ್ನು ನಿವಾರಿಸಲು ಯತ್ನಿಸಿದರು.
‘ಕಾಯ್ದೆಯಿಂದ
ಈ ರಾಷ್ಟ್ರದ ಯಾವ ನಾಗರಿಕನ ಮೇಲೂ ದುಷ್ಪರಿಣಾಮ ಆಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರಾಜಕೀಯ ಉದ್ದೇಶಕ್ಕಾಗಿ ಮುಸ್ಲಿಮರನ್ನು ಪ್ರಚೋದಿಸುತ್ತಿವೆ’ ಎಂದು
ಅವರು ಆಪಾದಿಸಿದರು.
‘ಕಾಂಗ್ರೆಸ್
ಮತ್ತು ಮಿತ್ರ ಪಕ್ಷಗಳು ಧೈರ್ಯ ಇದ್ದಲ್ಲಿ ಪ್ರತಿಯೊಬ್ಬ
ಪಾಕಿಸ್ತಾನಿ ಪ್ರಜೆಗೂ ಭಾರತೀಯ ಪೌರತ್ವ ನೀಡುವುದಾಗಿಯೂ, ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿ ೩೭೦ನೇ ವಿಧಿಯನ್ನು ಮತ್ತೆ ತರುವುದಾಗಿಯೂ ಬಹಿರಂಗ ಘೋಷಣೆ ಮಾಡಲಿ ಎಂದು ನಾನು ಸವಾಲು ಹಾಕುವೆ’ ಎಂದು ಪ್ರಧಾನಿ ನುಡಿದರು.
ಪೌರತ್ವ
ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಿವಿಮಾತು ಹೇಳಿದ ಪ್ರಧಾನಿ ನರೇಂದ್ರ ಮೋದಿ ’ಈ ಗೆರಿಲ್ಲಾ ರಾಜಕೀಯ
ನಿಲ್ಲಿಸಿ. ಭಾರತೀಯ ಸಂವಿಧಾನ ನಮ್ಮ ಪವಿತ್ರ ಗ್ರಂಥ. ಕಾಲೇಜುಗಳಲ್ಲಿನ ಯುವ ಜನತೆಗೆ ನಾನು ನಮ್ಮ ನೀತಿಗಳ ಬಗ್ಗೆ ಚರ್ಚೆ ನಡೆಸುವಂತೆ ಮತ್ತು ಪ್ರಜಾತಾಂತ್ರಿಕವಾಗಿ ಪ್ರತಿಭಟಿಸುವಂತೆ ಮನವಿ ಮಾಡುತ್ತೇನೆ. ನಾವು ನಿಮ್ಮನ್ನು ಆಲಿಸುತ್ತೇವೆ. ಆದರೆ ಕೆಲವು ಪಕ್ಷಗಳು, ನಗರ ನಕ್ಸಲರು ನಿಮ್ಮ ಭುಜಗಳಿಗೆ ಕಿಚ್ಚಿಡುತ್ತಿದ್ದಾರೆ’ ಎಂದು
ಹೇಳಿದರು.
ಪಾಕಿಸ್ತಾನ,
ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಆರು ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯು ಭಾನುವಾರ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಹಿಂಸೆಗೆ ತಿರುಗಿದ್ದು ಪೊಲೀಸರು ಹಲವಾರು ವಿದ್ಯಾರ್ಥಿಗಳ ಮೇಲೆ ಬೆತ್ತ ಪ್ರಹಾರ ನಡೆಸಿದ್ದರು.
ಪ್ರತಿಭಟನಾ
ಮೆರವಣಿಗೆಯ ಬಳಿಕ ಪೊಲೀಸರು ಜಾಮೀಯ ವಿಶ್ವವಿದ್ಯಾಲಯ ಆವರಣದ ಒಳಕ್ಕೆ ಬಂದರು ಎಂದು ಆಪಾದಿಸಲಾಗಿದ್ದು ಅದಕ್ಕಾಗಿ ಪೊಲೀಸರನ್ನು ಖಂಡಿಸಲಾಗಿದೆ.
ಪೊಲೀಸ್
ಕಾರ್ಯಾಚರಣೆಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಜಾಮೀಯಾದ ಮುಖ್ಯ ಪ್ರಾಕ್ಟರ್ ವಸೀಮ್ ಅಹ್ಮದ್ ಖಾನ್ ಅವರು ’ಪೊಲೀಸ್ ಸಿಬ್ಬಂದಿ ಬಲವಂತವಾಗಿ ವಿಶ್ವವಿದ್ಯಾಲಯವನ್ನು ಪ್ರವೇಶಿಸಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಥಳಿಸಿದರು’
ಎಂದು ಆಪಾದಿಸಿದರು. ಪೊಲೀಸರು ಗ್ರಂಥಾಲಯಕ್ಕೂ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಕ್ಕೆ ಎಳೆದು ಥಳಿಸಿದರು ಎಂದು ವಿದ್ಯಾರ್ಥಿಗಳೂ ದೂರಿದರು.
ಭಾರತದ
ಸಂಸತ್ತು ಪೌರತ್ವ (ತಿದ್ದುಪಡಿ) ಕಾಯ್ದೆ, ೨೦೧೯ಕ್ಕೆ ಕಳೆದ ವಾರ ತನ್ನ ಅನುಮೋದನೆ ನೀಡಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತದೊಂದಿಗೆ ಅದು ಕಾಯ್ದೆಯಾಗಿ ಜಾರಿಗೆ ಬಂದಿದೆ.
ಕಾಯ್ದೆ
ಜಾರಿಯಾದಂದಿನಿಂದ ದೇಶದ ವಿವಿಧ ಭಾಗಗಳಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ವರದಿಯಾಗುತ್ತಿದ್ದು, ಭಾನುವಾರ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕ್ರಮ ಕೈಗೊಂಡ ಬಳಿಕ ಹಲವಾರು ವಿಶ್ವ ವಿದ್ಯಾಲಯ ಆವರಣಗಳಲ್ಲೂ ಜಾಮಿಯಾ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತ ಪಡಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಪಾಕಿಸ್ತಾನ,
ಆಫ್ಘಾನಿಸ್ಥಾನ ಮತು ಬಾಂಗ್ಲಾದೇಶಗಳ ಹಿಂದು, ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯಗಳ ನಿರಾಶ್ರಿತರಿಗೆ ಅವರು ೨೦೧೪ರ ಡಿಸೆಂಬರ್ ೩೧ರ ಒಳಗಾಗಿ ಧಾರ್ಮಿಕ ಕಿರುಕುಳದ ಕಾರಣಕ್ಕಾಗಿ ತಮ್ಮ ದೇಶ ಬಿಟ್ಟು ಭಾರತಕ್ಕೆ ಬಂದಿದ್ದರೆ ಭಾರತದ ಪೌರತ್ವವನ್ನು ಕಾಯ್ದೆಯು ನೀಡುತ್ತದೆ.
ತಾನು
ಸಂವಿಧಾನದ ರಕ್ಷಣೆಗಾಗಿ ಹೋರಾಡುತ್ತಿರುವುದಾಗಿ ಪ್ರತಿಪಾದಿಸಿರುವ ಕಾಂಗ್ರೆಸ್ ಪಕ್ಷವು ಬಿಜೆಪಿಯು ತನ್ನು ವಿಭಜಕ ರಾಜಕಾರಣದ ಮೂಲಕ ಸಂವಿಧಾನವನ್ನು ಉಲ್ಲಂಘಿಸಿ, ಬೆದರಿಕೆ ಹಾಕಿದೆ’ ಎಂದು ಆಪಾದಿಸಿದೆ.
ಅಧ್ಯಕ್ಷೆ
ಸೋನಿಯಾ ಗಾಂಧಿ, ಸಂಸತ್ ಸದಸ್ಯ ರಾಹುಲ್ ಗಾಂಧಿ, ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪೌರತ್ವ ಕಾಯ್ದೆಯನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ದಾಳಿ ನಡೆಸಲು ಮುಗಿಬಿದ್ದಿದಾರೆ.
ಸೋಮವಾರ
ಟ್ವೀಟ್ ಮಾಡಿದ ರಾಹುಲ್ ಗಾಂಧಿ ಅವರು ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಭಾರತದಲ್ಲಿ ಫ್ಯಾಸಿಸ್ಟರು ಹೂಡಿರುವ ಸಾಮೂಹಿಕ ಧ್ರುವೀಕರಣದ ಅಸ್ತ್ರಗಳಾಗಿವೆ ಎಂದು ಟೀಕಿಸಿ, ಪಕ್ಷವು ಇವುಗಳ ವಿರುದ್ಧದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ಇರುತ್ತದೆ’
ತಿಳಿಸಿದ್ದರು.
‘ಇಡೀ
ಸಮಾಜವನ್ನು ಒಡೆಯುವುದು, ಹಿಂಸೆಗೆ ಪ್ರಚೋದನೆ ನೀಡುವುದು, ಯುವಕರ ಹಕ್ಕುಗಳನ್ನು ಕಿತ್ತುಕೊಳ್ಳವುದು, ಕೋಮು ಅಸಾಮರಸ್ಯದ ವಾತಾವರಣ ಹುಟ್ಟು ಹಾಕುವುದು ಮತ್ತು ಇವೆಲ್ಲವನ್ನೂ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುವುದು ಮೋದಿ ಸರ್ಕಾರದ ಉದ್ದೇಶ ಎಂಬುದು ಸ್ಪಷ್ಟವಾಗಿದೆ. ಈ ಸಂಚಿನ ಶಿಲ್ಪಿಗಳು
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಲ್ಲದೆ ಬೇರೆ
ಯಾರೂ ಅಲ್ಲ’ ಎಂದು ಸೋನಿಯಾ ಗಾಂಧಿ ದೂರಿದ್ದಾರೆ.
ವಿದ್ಯಾರ್ಥಿಗಳಿಗೆ
ಬೆಂಬಲ ವ್ಯಕ್ತ ಪಡಿಸಿಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಹಿರಿಯ ನಾಯಕರು ಸೋಮವಾರ ಇಂಡಿಯಾ ಗೇಟ್ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು
ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯ ವಿದಾರ್ಥಿಗಳ ಮೇಲಣ ’ದೌರ್ಜನ್ಯವನ್ನು’ ಪ್ರತಿಭಟಿಸಿದ್ದರು.
ತೃಣಮೂಲ
ಕಾಂಗ್ರೆಸ್, ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಎಡ ಪಕ್ಷಗಳು, ತೆಲಂಗಾಣ
ರಾಷ್ಟ್ರೀಯ ಸಮಿತಿ, ಅಸಾಮ್ ಆದ್ಮಿ ಪಾರ್ಟಿ ಮತ್ತು ಜನತಾದಳ (ಜಾತ್ಯತೀತ) ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿವೆ.
ಜಾರ್ಖಂಡ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ’ಜಾರ್ಖಂಡಿನ ಜನತೆ ಹಾಲಿ ವಿಧಾನಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ನಿರ್ಭೀತಿಯಿಂದ ಮತದಾನ ಮಾಡಿದ್ದಾರೆ’ ಎಂದು
ಹೇಳಿದರು.
‘ರಾಜ್ಯದಲ್ಲಿ
ಒಂದೇ ದನಿ ಇದೆ- ’ಜಾರ್ಖಂಡ್ ಪುಕಾರ, ಬಿಜೆಪಿ ದುಬಾರ’ ಅಥವಾ ಭಾರತೀಯ ಜನತಾ ಪಕ್ಷಕ್ಕೆ ಎರಡನೇ ಅವಧಿ ನೀಡಲು ಜಾರ್ಖಂಡ್ ಕರೆ ಕೊಟ್ಟಿದೆ ಎಂದು ಮೋದಿ ನುಡಿದರು.
ರಾಜ್ಯದಲ್ಲಿ
ಅಭಿವೃದ್ಧಿಯ ಖಾತರಿನನ್ನು ಕಮಲ ನೀಡಿದ್ದರಿಂದ ಈ ದನಿ ಪ್ರಬಲಗೊಂಡಿದೆ.
’ಕಮಲ’ ಅರಳಿದಾಗ,
ಯುವಕರು, ಮಹಿಳೆಯರು, ಮುದುಕರು, ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳಿಗೆ ಅನುಕೂಲವಾಗುತ್ತದೆ’ ಎಂದು
ಪ್ರಧಾನಿ ಹೇಳಿದರು.
‘ಬಿಜೆಪಿಗೆ
ನಿಮ್ಮ ಆಶೀರ್ವಾದ ಕಾಂಗ್ರೆಸ್, ಜೆಎಂಎಂ, ಆರ್ ಜೆಡಿ ಮತ್ತು ಎಡ ಪಕ್ಷಗಳಿಗೆ ನಿದ್ದೆ
ರಹಿತ ರಾತ್ರಿಗಳನ್ನು ಉಂಟು ಮಾಡಿದೆ’ ಎಂದು ಮೋದಿ ಹೇಳಿದರು.
ಜಾರ್ಖಂಡ್
ವಿಧಾನಸಭೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಚುನಾವಣೆ ನವೆಂಬರ್ ೩೦ರಂದು ನಡೆದಿತ್ತು. ಐದನೆಯ ಹಾಗೂ ಕೊನೆಯ ಹಂತದ ಚುನಾವಣೆ ಡಿಸೆಂಬರ್ ೨೦ರಂದು ನಡೆಯಲಿದೆ. ಡಿಸೆಂಬರ್ ೨೩ರಂದು ಮತಗಳ ಎಣಿಕೆ ನಡೆಯಲಿದೆ.
No comments:
Post a Comment