Thursday, December 5, 2019

ಪರಿಷ್ಕೃತ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಪುಟ ಅಸ್ತು

ಪರಿಷ್ಕೃತ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಪುಟ ಅಸ್ತು
ಡಿಸೆಂಬರ್ 9ರ ಸೋಮವಾರ ಸಂಸತ್ತಿನಲ್ಲಿ ಮಂಡನೆ ಸಂಭವ
ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ನಾಗರಿಕ ಹಕ್ಕು ನೀಡುವ ಪರಿಷ್ಕೃತ ಪೌರತ್ವ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಚಿವ ಸಂಪುಟವು 2019 ಡಿಸೆಂಬರ್ 4ರ ಬುಧವಾರ ಅನುಮೋದನೆ ನೀಡಿತು.
ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಂಗಳನ್ನು ತಿದ್ದುಪಡಿ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಯಿತು.
ಈಶಾನ್ಯ ಭಾಗದಲ್ಲಿನ ಆರನೇ ಶೆಡ್ಯೂಲಿನ ಅಡಿಯಲ್ಲಿ ಬರುವ ಪ್ರದೇಶಗಳನ್ನು ಕೂಡಾ ಕರಡು ಮಸೂದೆಯು ರಕ್ಷಿಸಿತು.
ಕಳೆದ ಲೋಕಸಭೆಯಲ್ಲಿ ವಿವಾದಿತ ಮಸೂದೆಯನ್ನು ಮಂಡಿಸಲಾಗಿತ್ತು. ಆದರೆ ಅದಕ್ಕೆ ಸದನ ಅನುಮೋದನೆ ಲಭಿಸಿರಲಿಲ್ಲ. ಹೀಗಾಗಿ ಮುಂದಿನ ಸೋಮವಾರ ಸಂಸತ್ತಿನಲ್ಲಿ  ಪರಿಷ್ಕೃತ ಕರಡು ಮಸೂದೆ ಮಂಡನೆಯಾಗುವ ನಿರೀಕ್ಷೆ ಇದೆ.

ಮಂಗಳವಾರ ಬಿಜೆಪಿ ಸಂಸದರಿಗೆ ಬಗ್ಗೆ ಸೂಚನೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಸೂದೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿಯನ್ನು ರದ್ದುಗೊಳಿಸುವಷ್ಟೇ ಮಹತ್ವದ ಮಸೂದೆ ಇದಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಪೌರತ್ವ ತಿದ್ದುಪಡಿ ಮಸೂದೆ?

ಪೌರತ್ವ ತಿದ್ದುಪಡಿ ಮಸೂದೆ ಪ್ರಕಾರ ಹಿಂದೂಗಳು, ಕ್ರೈಸ್ತರು, ಸಿಕ್ಖರು, ಜೈನರು, ಬೌದ್ಧರು ಹಾಗೂ ಪಾರ್ಸಿ ಸಮುದಾಯಕ್ಕೆ ಭಾರತದ ಪೌರತ್ವ ಸಿಗಲಿದೆ. ಆಯ್ದ ಅಕ್ರಮ ವಲಸಿಗರಿಗೆ ನಾಗರಿಕ ಹಕ್ಕು ನೀಡಲು ಮಸೂದೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ ಮಸೂದೆಯಲ್ಲಿ ಮುಸ್ಲಿಮರನ್ನು ಹೊರಗಿಟ್ಟಿರುವುದು ಸಂವಿಧಾನ ವಿರೋಧಿ ಕ್ರಮ ಎಂದು ವಿಪಕ್ಷಗಳು ಆರೋಪಿಸಿವೆ.

ಪ್ರಸ್ತುತ ಇರುವ ಪೌರತ್ವ ಕಾಯ್ದೆ ಪ್ರಕಾರ ಬಾಂಗ್ಲಾ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳು, ಬೌದ್ಧರು, ಸಿಖ್ಖ, ಜೈನರು, ಕ್ರೈಸ್ತರ ವಲಸಿಗರು ಭಾರತದಲ್ಲಿ ೧೨ ವರ್ಷಕ್ಕಿಂತ ಹೆಚ್ಚು ಭಾರತದಲ್ಲಿ ವಾಸವಿದ್ದರೆ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ. ಆದರೆ ತಿದ್ದುಪಡಿ ಮಸೂದೆಯಲ್ಲಿ ಭಾರತದಲ್ಲಿ ಆರು ವರ್ಷ ವಾಸವಿದ್ದರೆ ಅವರು ದೇಶದ ಪೌರತ್ವ ಪಡೆಯಬಹುದಾಗಿದೆ. ಅದಕ್ಕೆ ಸೂಕ್ತ ದಾಖಲೆಯ ಅಗತ್ಯತೆಯೂ ಇಲ್ಲ ಎಂದು ವರದಿ ತಿಳಿಸಿದೆ.

ಪರಿಷ್ಕೃತ ಕರಡು ಮಸೂದೆಯಲ್ಲಿನ ಬದಲಾವಣೆಗಳು ಏನು?

ಅಸ್ಸಾಮ್, ಮೇಘಾಲಯ, ಮಿಜೋರಂ ಮತ್ತು ತ್ರಿಪುರಾಕ್ಕೆ ಅವುಗಳು ಸಂವಿಧಾನದ ೬ನೇ ಶೆಡ್ಯೂಲಿಗೆ ಸೇರ್ಪಡೆಯಾಗಿರುವ ಕಾರಣ ಮತ್ತು ಬಂಗಾಳ ಪೂರ್ವ ಗಡಿ ನಿಯಂತ್ರಣ, ೧೮೭೩ರ ಅಡಿಯಲ್ಲಿ ಘೋಷಿತವಾದ ಒಳರೇಖಾ ಅನುಮತಿ ಪ್ರದೇಶಗಳಿಗೆ ವಿಧಿಯ ಅಡಿಯಲ್ಲಿನ ಯಾವುದು ಕೂಡಾ ಅನ್ವಯವಾಗುವುದಿಲ್ಲ ಎಂದು ಪರಿಷ್ಕೃತ ಕರಡು ಮಸೂದೆ ಹೇಳಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಆರನೇ ಶೆಡ್ಯೂಲು ಮತ್ತು ಒಳ ರೇಖಾ ಅನುಮತಿ ಪ್ರದೇಶಗಳ ಪಾವಿತ್ರ್ಯ ರಕ್ಷಣೆಯಾಗುವುದೇ ಇಲ್ಲವೇ ಎಂಬುದು ಪೌರತ್ವ ತಿದ್ದು ಪಡಿ ಮಸೂದೆಯನ್ನು ವಿರೋಧಿಸುತ್ತಿದ್ದವರು ಪ್ರಮುಖವಾಗಿ ವ್ಯಕ್ತ ಪಡಿಸಿದ್ದ ಕಳವಳದ ಅಂಶವಾಗಿತ್ತು.

ಮೂಲ ಕಾಯ್ದೆಗೆ ವಿಧಿಯನ್ನು ಸೆಕ್ಷನ್ ೬ಎ ಎಂಬುದಾಗಿ ಸೇರ್ಪಡೆ ಮಾಡಲಾಗಿದೆ. ಆಗಿನ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭೆಯಲ್ಲಿ ಮಂಡಿಸಿದ್ದ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಒಳರೇಖಾ ಅನುಮಿತಿ ಪ್ರದೇಶ ಮತ್ತು ಆರನೇ ಶೆಡ್ಯೂಲು ಪ್ರದೇಶಗಳಿಗೆ ರಕ್ಷಣೆಯ ಪ್ರಸ್ತಾಪ ಇರಲಿಲ್ಲ.

೨೦೧೪ ಡಿಸೆಂಬರ್ ೩೧ರಂದು ಅಥವಾ ಅದಕ್ಕೆ ಮುನ್ನ ಆಫ್ಘಾನಿಸ್ಥಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಭಾರತವನ್ನು ಪ್ರವೇಶಿಸಿದ ಹಿಂದು, ಸಿಖ್, ಜೈನ,  ಅಥವಾ ಕ್ರೈಸ್ತ ಸಮುದಾಯದ ಯಾರೇ ವ್ಯಕ್ತಿಯು ೧೯೨೦ರ ಇಂಡಿಯಾ ಕಾಯ್ದೆ ಅಥವಾ ೧೯೪೬ರ ವಿದೇಶೀಯರ ಕಾಯ್ದೆಯ ವಿಧಿಗಳ ಅನ್ವಯ ಅಥವಾ ಅವುಗಳ ಅಡಿಯಲ್ಲಿನ ಯಾವುದೇ ನಿಯಮಾವಳಿಯಿಂದ ಪಾಸ್ ಪೋರ್ಟ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿನಾಯ್ತಿ ಪಡೆದಿದ್ದಾರೆ ಮತ್ತು ಅವರನ್ನು ಕಾಯ್ದೆಯ ಪ್ರಕಾರ ಅಕ್ರಮ ವಲಸಿಗ ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂದು ತಿದ್ದುಪಡಿ ಮಸೂದೆ ಹೇಳಿದೆ.

ಮಸೂದೆಯು ೨೦೧೪ರ ಡಿಸೆಂಬರ್ ೩೧ನ್ನು ಮಸೂದೆ ಜಾರಿಗೆ ಗಡುವು ದಿನಾಂಕ ಎಂಬುದಾಗಿ ನಿರ್ದಿಷ್ಟ ಪಡಿಸಿದೆ.

ಕರಡು
ಮಸೂದೆಯ ಇತರ ವಿಧಿಗಳು ಸಾಗರದಾಚೆಯ ಭಾರತೀಯ ಪೌರ (ಒಸಿಐ) ಕಾರ್ಡುದಾರರಿಗೆ ಸಂಬಂಧಿಸಿದೆ. ಒಸಿಐ ಕಾರ್ಡುದಾರರು ಯಾವುದಾದರೂ ಕಾನೂನಿನ ಉಲ್ಲಂಘನೆ ಮಾಡಿದ್ದು ಕಂಡುಬಂದರೆ ಅವರನ್ನು ವಿಚಾರಣೆಗೆ ಕರೆಸುವುದಕ್ಕಾಗಿ ಸಿಎಬಿ ಮಾತುಕತೆಗಳಗೆ ಸಂಪುಟ ಒಪ್ಪಿಗೆ ನೀಡಿದೆ. ೨೦೧೬ರ ಮಸೂದೆಯಲ್ಲಿ ಅಂಶ ಇರಲಿಲ್ಲ.

ಒಸಿಐ
ಕಾರ್ಡುದಾರನಿಗೆ ಆಲಿಕೆಯ ನ್ಯಾಯೋಚಿತ ಅವಕಾಶ ನೀಡದ ಹೊರತು ವಿಧಿಯ ಅಡಿಯಲ್ಲಿ ಯಾವುದೇ ಆದೇಶ ಹೊರಡಿಸಲಾಗದುಎಂದು ಕರಡು ಮಸೂದೆ ಸ್ಪಷ್ಟ ಪಡಿಸಿದೆ.
ಗೃಹ ಸಚಿವ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ನಾಗರಿಕ ಸಮಾಜ ಮತ್ತು ಸಮೂಹಗಳ ಜೊತೆಗೆ ಸರಣಿ ಮಾತುಕತೆಗಳನ್ನು ನಡೆಸಿದ ಬಳಿಕ ಅಂತಿಮ ಕರಡನ್ನು ರೂಪಿಸಿ ಬುಧವಾರ ಸಂಪುಟದ ಅನುಮೋದನೆಗಾಗಿ ಮಂಡಿಸಲಾಗಿತ್ತು.

ಮಸೂದೆಯನ್ನು ಡಿಸೆಂಬರ್ 9ರ ಸೋಮವಾರ ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆಗಳಿವೆ.

No comments:

Advertisement