Thursday, December 5, 2019

ಚಿದಂಬರಂ ಸೆರೆವಾಸ, ಬಿಡುಗಡೆ: ಕಾಂಗ್ರೆಸ್ - ಬಿಜೆಪಿ ವಾಕ್ಸಮರ

ಚಿದಂಬರಂ ಸೆರೆವಾಸ, ಬಿಡುಗಡೆ: ಕಾಂಗ್ರೆಸ್ - ಬಿಜೆಪಿ ವಾಕ್ಸಮರ
ಸೇಡಿನ ಕ್ರಮ: ರಾಹುಲ್ಗಾಂಧಿ, ಸಾಕ್ಷ್ಯಾಧಾರವಿದೆ: ಗಡ್ಕರಿ
ನವದೆಹಲಿ: ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠದಿಂದ ಜಾಮೀನು ಮಂಜೂರಾಗುತ್ತಿದ್ದಂತೆಯೇ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಚಿದಂಬರಂ ಸೆರೆವಾಸಕ್ಕೆ ಸಂಬಂಧಿಸಿದಂತೆ 2019 ಡಿಸೆಂಬರ್ 04ರ ಬುಧವಾರ ಪರಸ್ಪರ ವಾಕ್ ಸಮರ ನಡೆಸಿದವು.

ಪಿ.ಚಿದಂಬರಂ ಅವರ ೧೦೬ ದಿನಗಳ ಸೆರೆವಾಸವುಸೇಡಿನ ಕ್ರಮವಾಗಿತ್ತು  ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಹರಿಹಾಯ್ದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರುಸೇಡಿನ ರಾಜಕಾರಣ ಆರೋಪವನ್ನು ತಳ್ಳಿಹಾಕಿ, ಚಿದಂಬರಂ ವಿರುದ್ಧ ಸಾಕ್ಷ್ಯಾಧಾರಗಳಿವೆ ಎಂದು ಪ್ರತಿಪಾದಿಸಿದರು.

ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರುಕಡೆಗೂ ಚಿದಂಬರಂ ಅವರುಸುದೀರ್ಘವಾದ ಒಬಿಸಿಸಿ (ಔಟ್ ಆನ್ ಬೇಲ್ ಕ್ಲಬ್- ಜಾಮೀನಿನಲ್ಲಿ ಹೊರಗಿರುವವರ ಕ್ಲಬ್) ಪಟ್ಟಿಗೆ ಸೇರಿದರುಎಂದು ಟ್ವೀಟ್ ಮಾಡಿ ಚುಚ್ಚಿದರು.

ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರ ಟ್ವೀಟ್ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕಾಂಗ್ರೆಸ್ ಮತ್ತು ಅದರ ನಾಯಕತ್ವದ ವಿರುದ್ಧ ಭ್ರಷ್ಟಾಚಾರ ಮತ್ತು ಇತರ ತಪ್ಪುಗಳಿಗಾಗಿ ದಾಖಲಾದ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿ ಮಾಡಿದ್ದ ನಿರಂತರ ದಾಳಿಯನ್ನು ಪ್ರತಿಧ್ವನಿಸಿತು.

ಪ್ರಸ್ತುತ, ಅವರ ಉನ್ನತ ನಾಯಕತ್ವವು ಪ್ರಮುಖ ಹಗರಣಗಳಿಗೆ ಸಂಬಂಧಿಸಿದಂತೆ ಜಾಮೀನಿನ ಅಡಿಯಲ್ಲಿದೆಎಂದು ಪ್ರಧಾನಿ ಮೋದಿ ರಾಷ್ಟ್ರೀಯ ಚುನಾವಣೆಗೆ ಮುನ್ನ ತಮ್ಮ ಬ್ಲಾಗ್ ಬರಹದಲ್ಲಿ ಬರೆದಿದ್ದರು.

ಕಳೆದ ವರ್ಷ ರಾಜಸ್ಥಾನ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರುಕೆಲವು ವ್ಯಕ್ತಿಗಳು ಕಾಂಗ್ರೆಸ್ ಪಕ್ಷವನ್ನುಎತ್ತಿನ ಗಾಡಿಯಲ್ಲ, ಬೇಲ್ ಗಾಡಿಎಂಬುದಾಗಿ ಕರೆಯುತ್ತಿದ್ದಾರೆ. ಏಕೆಂದರೆ ಅದರ ಕೆಲವು ಉನ್ನತ ನಾಯಕರು ಮತ್ತು ಮಾಜಿ ಸಚಿವರು ಜಾಮೀನು (ಬೇಲ್) ಅಡಿಯಲ್ಲಿ ಇದ್ದಾರೆಎಂದು ಟೀಕಿಸಿದ್ದರು.

ಅವರು (ಚಿದಂಬರಂ) ದುರಾಶೆ ಪಡುವವರ ಕ್ಲಬ್ ಸೇರಿದ್ದಾರೆಎಂದು ಪಾತ್ರ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ನಾಯಕರಾದ ರಾಹುಲ್ ಗಾಂಧಿ, ರಾಬರ್ಟ್ ವಾದ್ರ, ಭೂಪಿಂದರ್ ಹೂಡಾ ಮತ್ತು ಶಶಿ ತರೂರ್ ಅವರು ಕ್ಲಬ್ಬಿನ ಇತರ ಕೆಲವು ಸದಸ್ಯರಾಗಿದ್ದಾರೆಎಂಬುದಾಗಿ ಪಟ್ಟಿ ಮಾಡುವ ಮುನ್ನ ಟ್ವೀಟಿನಲ್ಲಿ ಬರೆದರು.

ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಬಳಿಕ ಜಾರಿ ನಿರ್ದೇಶನಾಲಯ (ಇಡಿ) ಬಂಧನಕ್ಕೆ ಒಳಗಾಗಿ ಕಳೆದ ೧೦೬ ದಿನಗಳಿಂದ ಚಿದಂಬರಂ ಅವರು ಸೆರೆಮನೆಯಲ್ಲಿದ್ದರು. ಅವರನ್ನು ತಿಹಾರ್ ಸೆರೆಮನೆಯಲ್ಲಿ ಇರಿಸಲಾಗಿತ್ತು.

ಚಿದಂಬರಂ ಅವರ ಕುಟುಂಬ ಮತ್ತು ಕಾಂಗ್ರೆಸ್ ನಾಯಕರು ಚಿದಂಬರಂ ಅವರ ಬಂಧನ ಮತ್ತು ಅವರ ವಿರುದ್ಧದ ಪ್ರಕರಣವನ್ನುಸೇಡಿನ ರಾಜಕಾರಣಎಂಬುದಾಗಿ ಆಪಾದಿಸಿದ್ದರು. ಚಿದಂಬರಂ ಅವರು ಸರ್ಕಾರದ ಕಟು ಟೀಕಾಕಾರಲ್ಲಿ ಒಬ್ಬರಾಗಿದ್ದುದೇ ಅವರ ವಿರುದ್ಧದ ಸೇಡಿನ ರಾಜಕಾರಣಕ್ಕೆ ಕಾರಣ ಎಂದು ಅವರು ಹೇಳಿದ್ದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಆರೋಪವನ್ನು ತಳ್ಳಿಹಾಕಿದರು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಸಮ್ಮಿಶ್ರ ಸರ್ಕಾರವು ಎಂದೂ ಸೇಡಿನ ರಾಜಕಾರಣ ನಡೆಸಿಲ್ಲ ಎಂದು ಗಡ್ಕರಿ ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಾ ಹೇಳಿದರು. ಚಿದಂಬರಂ ವಿರುದ್ಧ ಸಾಕ್ಷ್ಯಾಧಾರಗಳು ಇವೆ ಎಂದು ರಸ್ತೆ ಸಾರಿಗೆ ಸಚಿವ ನುಡಿದರು. ’ಈಗ ವಿಷಯವು ನ್ಯಾಯಾಂಗದ ಆಧೀನದಲ್ಲಿದೆ ಮತ್ತು ನ್ಯಾಯಾಲಯವು ನಿರ್ಧಾರ ಕೈಗೊಳ್ಳುತ್ತದೆಎಂದು ಅವರು ನುಡಿದರು.

ತಾನು ಅಧಿಕಾರದಲ್ಲಿ ಇದ್ದಾಗ ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳು ದಾಖಲಾಗಿದ್ದುದನ್ನು ಸಚಿವರು ಕಾಂಗ್ರೆಸ್ಸಿಗೆ ನೆನಪಿಸಿದರು. ’ಕಾಂಗ್ರೆಸ್ ಆಡಳಿತದಲ್ಲಿ ಚಿದಂಬರಂ ಜಿ ಅವರು ಗೃಹ ಸಚಿವರಾಗಿದ್ದಾಗ ಅವರು ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು. ಅವರು ಮೋದಿ ಜಿ ಮತ್ತು ಅಮಿತ್ ಶಾ ಜಿ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿದ್ದರು. ಬಳಿಕ ನಾವೆಲ್ಲರೂ ನಿರಪರಾಧಿಗಳು ಎಂಬುದು ಸಾಬೀತಾಯಿತುಎಂದು ಗಡ್ಕರಿ ಹೇಳಿದರು.

ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಟ್ವೀಟ್ ಮಾಡಿ ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ ಪಿ. ಚಿದಂಬರಂಅವರ ಕಾರಾಗೃಹವಾಸವು ಸೇಡಿನ ಕ್ರಮವಾಗಿತ್ತು ಎಂದು ಟ್ವೀಟ್ ಮಾಡಿದರು.

ಪಿ. ಚಿದಂಬರಂ ಅವರ ೧೦೬ ದಿನಗಳ ಸೆರೆವಾಸವು ಸೇಡು ಮತ್ತು ಛಲ ಸಾಧನೆಯ ಕ್ರಮವಾಗಿತ್ತು. ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿದ್ದಕ್ಕಾಗಿ ನಾನು ಹರ್ಷಗೊಂಡಿದ್ದೇನೆ. ಪ್ರಾಮಾಣಿಕ ವಿಚಾರಣೆಯಲ್ಲಿ ಅವರು ತಮ್ಮ ನಿರಪರಾಧಿತ್ವವನ್ನು ಸಾಬೀತು ಪಡಿಸಲು ಅವರು ಸಮರ್ಥರಾಗುವರು ಎಂಬ ವಿಶ್ವಾಸ ನನಗಿದೆಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು.

No comments:

Advertisement