Saturday, December 7, 2019

ತೆಲಂಗಾಣ: ಪಶುವೈದ್ಯೆ ಮೇಲಿನ ಅತ್ಯಾಚಾರ:ನಾಲ್ಕೂ ಆರೋಪಿಗಳು ಎನ್‌ಕೌಂಟರಿಗೆ ಬಲಿ

ತೆಲಂಗಾಣ: ಪಶುವೈದ್ಯೆ ಮೇಲಿನ ಅತ್ಯಾಚಾರ:ನಾಲ್ಕೂ  ಆರೋಪಿಗಳು ಎನ್ಕೌಂಟರಿಗೆ ಬಲಿ
ಹೈದರಾಬಾದ್: ತೆಲಂಗಾಣದ ಪಶುವೈದ್ಯೆ, ೨೬ರ ಹರೆಯದ ದಿಶಾ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಜೀವಂತವಾಗಿ ದಹಿಸಿ ಕೊಂದ ಪೈಶಾಚಿಕ ಘಟನೆಯ ಕ್ಷಿಪ್ರ ತನಿಖೆಗಾಗಿ ತ್ವರಿತ ನ್ಯಾಯಾಲಯ ರಚಿಸುವಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಆಜ್ಞಾಪಿಸಿದ್ದರ ನಡುವೆಯೇ, ಘಟನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದಿನಲ್ಲಿ ಅತ್ಯಾಚಾರ ಹಾಗೂ ಕೊಲೆ ನಡೆದ ತಾಣದಲ್ಲಿಯೇ  2019 ಡಿಸೆಂಬರ್ 06ರ ಶುಕ್ರವಾರ ನಸುಕಿನಲ್ಲಿ ಪೊಲೀಸರು ಎನ್ಕೌಂಟರಿನಲ್ಲಿ ಗುಂಡು ಹಾರಿಸಿ ಕೊಲೆಗೈದರು.

ಘಟನೆಯ ಬಗ್ಗೆ ಒಂದೆಡೆ ದೇಶವ್ಯಾಪಿ ಸಂಭ್ರಮ ಮನೆ ಮಾಡಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ತೀವ್ರವಾಗಿ ನಡೆಯಿತು.  ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯವು ಘಟನೆ ಬಗ್ಗೆ ವರದಿ ನೀಡುವಂತೆ ತೆಲಂಗಾಣ ಸರ್ಕಾರಕ್ಕೆ ಸೂಚನೆ ನೀಡಿತು. ಮಾನವ ಹಕ್ಕುಗಳ ಆಯೋಗ ಕೂಡಾ ಘಟನೆಯ ಬಗ್ಗೆ ಅನುಮಾನಗಳನ್ನು ವ್ಯಕ್ತ ಪಡಿಸಿದ್ದು, ಸ್ವ ಇಚ್ಛೆಯ ಪ್ರಕರಣ ದಾಖಲಿಸಿಕೊಂಡಿತು.

ಈದಿನ ನಸುಕಿನಲ್ಲಿ ಸಂಭವಿಸಿದ ಘಟನಾವಳಿಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸೈಬರಾಬಾದ್ ಪೊಲೀಸ್ ಕಮೀಷನರ್ ವಿಸಿ ಸಜ್ಜನರ್ ಅವರು ಮಾನವ ಹಕ್ಕುಗಳ ಆಯೋಗದ ಅನುಮಾನ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ’ಕಾನೂನು ತನ್ನ ಕರ್ತವ್ಯ ನಿರ್ವಹಿಸಿದೆ ಎಂದಷ್ಟೇ ನಾನು ಹೇಳಬಲ್ಲೆಎಂದು ನುಡಿದರು.

ಘಟನೆಯ ಬಗ್ಗೆ ರಾಜ್ಯ ಸರ್ಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೇರಿದಂತೆ ಸಂಬಂಧ ಪಟ್ಟ ಎಲ್ಲರಿಗೂ ನಾವು ಉತ್ತರ ನೀಡಬಲ್ಲೆವುಎಂದು ಸಜ್ಜನರ್ ಹೇಳಿದರು.

ನಸುಕಿನಲ್ಲಿ ಸಂಭವಿಸಿದ ಘಟನೆಯ ಬಗ್ಗೆ ವಿವರಗಳನ್ನು ನೀಡಿದ ಸಜ್ಜನರ್ಪೊಲೀಸರು ಆರೋಪಿಗಳನನ್ನು ತನಿಖೆಯ ಅಂಗವಾಗಿ ಘಟನಾ ಸ್ಥಳಕ್ಕೆ ಕರೆತಂದಿದ್ದರು ಎಂದು ಹೇಳಿದರು.

ಅತ್ಯಾಚಾರ, ಕೊಲೆ ಘಟನೆಯಲ್ಲಿ ಸಾವನ್ನಪ್ಪಿದ ೨೬ರ ಹರೆಯದ ಮಹಿಳೆಯು ಬಿಟ್ಟಿರಬಹುದಾಗ ವಸ್ತುಗಳನ್ನು ಪತ್ತೆ ಹಚ್ಚುವ ಸಲುವಾಗಿ ನಾವು ಅವರನ್ನು ನುಸುಕಿನಲ್ಲಿ ಘಟನಾ ಸ್ಥಳಕ್ಕೆ ಕರೆತಂದಿದ್ದೆವು. ನಮಗೆ ಅಲ್ಲಿ ಮಹಿಳೆಯ ಸೆಲ್ ಫೋನ್, ಕೈಗಡಿಯಾರ ಮತ್ತು ಪವರ್ ಬ್ಯಾಂಕ್ ಲಭಿಸಿತುಎಂದು ಅವರು ನುಡಿದರು.

ಬಳಿಕ ಆರೋಪಿಗಳು ದಿಢೀರನೆ ಪೊಲೀಸರ ಮೇಲೆ ಬಡಿಗೆ, ಕಲ್ಲು ಹಾಗೂ ನಮ್ಮಿಂದಲೇ ಕಸಿದುಕೊಂಡ ಶಸ್ತ್ರಗಳಿಂದ ದಾಳಿ ನಡೆಸಲು ಆರಂಭಿಸಿದರು. ಕಿತ್ತುಕೊಂಡಿದ್ದ ಬಂದೂಕಿನಿಂದ ಪೊಲೀಸರತ್ತ ಗುಂಡನ್ನೂ ಹಾರಿಸಿದರು. ಅಧಿಕಾರಿಗಳು ಶರಣಾಗತರಾಗುವಂತೆ ಅವರಿಗೆ ಆಜ್ಞಾಪಿಸಿದರು. ಆದರೆ ಆರೋಪಿಗಳು ಗುಂಡು ಹಾರಿಸುವುದನ್ನು ಮುಂದುವರೆಸಿದರು ಮತ್ತು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಆಗ ಪೊಲೀಸರು ಅವರತ್ತ ಗುಂಡುಹಾರಿಸಿದರು ಮತ್ತು ಘರ್ಷಣೆಯಲ್ಲಿ ಅವರು ಸಾವನ್ನಪ್ಪಿದರುಎಂದು ಸಜ್ಜನರ್ ವಿವರಿಸಿದರು. ಸಂಪೂರ್ಣ ಘಟನಾವಳಿ ೧೦-೧೫ ನಿಮಿಷಗಳ ಕಾಲ ನಡೆಯಿತುಎಂದು ಪೊಲೀಸ್ ಕಮೀಷನರ್ ಹೇಳಿದರು.

ಘಟನೆ ನಡೆದ ವೇಳೆಯಲ್ಲಿ ಆರೋಪಿಗಳ ಜೊತೆಗೆ ಸುಮಾರು ೧೦ ಮಂದಿ ಪೊಲೀಸರು ಇದ್ದರು. ಅವರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಜ್ಜನರ್ ನುಡಿದರು.

ಆರೋಪಿಗಳು ಹಿಂದೆಯೂ ಅಪರಾಧಗಳನ್ನು ಎಸಗಿದ ಬಗೆಗಿನ ದಾಖಲೆಗಳಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕೂಡಾ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ಉದಾಹರಣೆಗಳು ಇವೆ. ಇಂತಹ ಘಟನೆಗಳಲ್ಲಿ ನಾಲ್ವರು ಆರೋಪಿಗಳ ಕೈವಾಡ ಇದ್ದಿರಬಹುದು ಎಂಬ ಗುಮಾನಿ ನಮಗಿದೆಎಂದು ಅವರು ನುಡಿದರು.

ಎನ್ ಕೌಂಟರಿನಲ್ಲಿ ಹತರಾದ ನಾಲ್ವರು ಆರೋಪಿಗಳನ್ನು ಮೊಹಮ್ಮದ್ ಆರಿಫ್, ನವೀನ್, ಶಿವ, ಮತ್ತು ಚೆನ್ನಕೇಶವಲು ಎಂಬುದಾಗಿ ಗುರುತಿಸಲಾಗಿದೆ. ಶಾದ್ ನಗರದ ಚತನಪಲ್ಲಿಯಲ್ಲಿ ನಸುಕಿನ ಸುಮಾರು ೩ರಿಂದ .೩೦ ಗಂಟೆ ನಡುವಣ ಅವಧಿಯಲ್ಲಿ ಘಟನೆ ಘಟಿಸಿದೆ.

ನವೆಂಬರ್ ೨೯ರಂದು ನಾಲ್ಕೂ ಮಂದಿ ಆರೋಪಿಗಳನ್ನು ಬಂಧಿಸಿ, ಚೆರ್ಲಪಲ್ಲಿಯ ಕೇಂದ್ರೀಯ ಸೆರೆಮನೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಅತ್ಯುನ್ನತ ಭದ್ರತೆಯಲ್ಲಿ ಇರಿಸಲಾಗಿತ್ತು.
ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ೩೦೨ (ಕೊಲೆ), ೩೭೫ (ಅತ್ಯಾಚಾರ) ಮತ್ತು ೩೬೨ (ಅಪಹರಣ) ವಿಧಿಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು. ಜನರಿಂದ ಪಡೆದ ಮಾಹಿತಿ, ಘಟನಾ ಸ್ಥಳದಲ್ಲಿನ ಸುಳಿವುಗಳು ಸಿಸಿಟವಿ ವಿಡಿಯೋ ನೆರವು ಪಡೆದು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಕಳೆದ ವಾರ ಹೈದರಾಬಾದಿನ ಸಮೀಪ ಸುಟ್ಟು ಕರಟಿಹೋಗಿದ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಬಳಿಕ ಹೊರಬಂದ ಅತ್ಯಾಚಾರ, ಕೊಲೆ ಕೃತ್ಯದ ವಿವರಗಳು ದೇಶಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿದ್ದವು. ನವೆಂಬರ್ ೨೮ರಂದು ಟ್ರಕ್ ಚಾಲಕರು ಮತ್ತು ಕ್ಲೀನರ್ಗಳಾಗಿದ್ದು ಆರೋಪಿತ ವ್ಯಕ್ತಿಗಳು ಯುವತಿ ತನ್ನ ಸ್ಕೂಟರನ್ನು ಟೋಲ್ ಬೂತ್ ಬಳಿ ನಿಲ್ಲಿಸಿ ಹೋಗಿದ್ದುದನ್ನು ಗಮನಿಸಿದ್ದರು. ಅವರು ಸ್ಕೂಟರ್ ಟೈರುಗಳನ್ನು ಪಂಕ್ಷರ್ ಮಾಡಿ ಕಾದಿದ್ದರು. ಆಕೆ ಹಿಂತಿರುಗಿ ಬಂದಾಗ ನೆರವಾಗುವವರಂತೆ ನಟಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯ ಕತ್ತು ಬಿಗಿದು, ಸಾಕ್ಷ್ಯವನ್ನು ನಾಶ ಮಾಡುವ ಸಲುವಾಗಿ ಬೆಂಕಿ ಹಚ್ಚಿ ಸಜೀವವಾಗಿ ದಹಿಸಿ ಕೊಂದು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದರು.

ನಾಲ್ವರೂ ಆರೋಪಿಗಳು ೧೦ ದಿನಗಳಿಂದ ಪೊಲೀಸ್ ವಶದಲ್ಲಿ ಇದ್ದರು. ನಾವು ಅವರೆಲ್ಲರ ತನಿಖೆಯನ್ನೂ ನಡೆಸಿದ್ದೆವು. ತಾವು ಅಪರಾಧ ಎಸಗಿದ್ದನ್ನು ಅವರು ಒಪ್ಪಿಕೊಂಡಾಗ, ನಾವು ಅವರನ್ನು ಅತ್ಯಾಚಾg-ಹತ್ಯೆ ನಡೆದ ಘಟನಾ ಸ್ಥಳಕ್ಕೆ ಘಟನಾವಳಿಯ ಮರುಸೃಷ್ಟಿಗಾಗಿ ಕರೆದೊಯ್ದೆವು. ಸ್ಥಳಕ್ಕೆ ತಲುಪಿದ ಬಳಿಕ ಆರೋಪಿಗಳು ನಮ್ಮ ಮೇಲೆಯೇ ಕಲ್ಲುಗಳನ್ನು ಎಸೆಯುತ್ತಾ ಹಲ್ಲೆ ನಡೆಸಲು ಆರಂಭಿಸಿದರು ಮತ್ತು ನಮ್ಮ ಬಂದೂಕುಗಳನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು. ಆರೋಪಿಗಳು ಇನ್ನೂ ಶಸ್ತ್ರಾಸ್ತ್ರಗಳೊಂದಿಗೆ ಬಿದ್ದಿರುವುದನ್ನು ನೀವು ನೋಡಬಹುದು. ಪರಿಣಾಮವಾಗಿ ಆತ್ಮರಕ್ಷಣೆಗಾಗಿ ನಾವು ಅವರ ವಿರುದ್ಧ ಎನ್ ಕೌಂಟರ್ ನಡೆಸಬೇಕಾಯಿತು. ಎನ್ ಕೌಂಟರಿನಲ್ಲಿ ಅವರನ್ನು ಗುಂಡಿಟ್ಟು ಕೊಲ್ಲಲಾಯಿತುಎಂದು ಸೈದರಾಬಾದ್ ಪೊಲೀಸ್ ಕಮೀಷನರ್ ಸಜ್ಜನರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪೊಲೀಸರು ನಡೆಸಿದ ಎನ್ ಕೌಂಟರ್ ಬಗ್ಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಘಟನೆಯು ಅಪರಾಧಿಗಳಿಗೆ ತತ್ ಕ್ಷಣದ ಪಾಠ ಕಲಿಸುವ ಮಾರ್ಗಗಳನ್ನು ಹುಡುಕಲು ರಾಜ್ಯಗಳಿಗೆ ನೆರವಾಗಲಿದೆ ಎಂದು ಹಲವು ರಾಜಕಾರಣಿಗಳೂ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮಹಿಳೆಯ ಕುಟುಂಬದ ಧನ್ಯವಾದ: ಅತ್ಯಾಚಾರ, ಹತ್ಯೆ ಆರೋಪಿಗಳನ್ನು ಕೊಂದುಹಾಕಿದ ಪೊಲೀಸರುಗೆ ಮಹಿಳೆಯ ಕುಟುಂಬ ಧನ್ಯವಾದ ಅರ್ಪಿಸಿತು.

ಮಾಧ್ಯಮದ ಜೊತೆಗೆ ಮಾತನಾಡಿದ ಮೃತ ಪಶುವೈದ್ಯೆಯ ಸಹೋದರಿಎನ್ಕೌಂಟರಿನಲ್ಲಿ ನಾಲ್ವರು ಆರೋಪಿಗಳೂ ಹತರಾಗಿರುವುದಕ್ಕೆ ನನಗೆ ಸಂತಸವಾಗಿದೆ. ಘಟನೆಯು ಮಾದರಿಯಾಗಲಿದೆ. ನಮಗೆ ನೀಡಿದ ಬೆಂಬಲಕ್ಕಾಗಿ ಪೊಲೀಸರು ಮತ್ತು ಮಾಧ್ಯಮಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆಎಂದು ಹೇಳಿದರು.

ಅತ್ಯಾಚಾರ, ಹತ್ಯೆಗೆ ಗುರಿಯಾದ ಮಹಿಳೆಯ ತಂದೆ ತನ್ನ ಪುತ್ರಿಯ ಆತ್ಮಕ್ಕೆ ಈಗ ಶಾತಿ ಲಭಿಸಲಿದೆ ಎಂದು ಹೇಳಿ, ತೆಲಂಗಾಣ ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು.

ತನಿಖೆಗೆ ಮಾನವ ಹಕ್ಕು ಆಯೋಗ ಆದೇಶ: ಮಧ್ಯೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಎನ್ ಕೌಂಟರ್ ಕುರಿತ  ಸುದ್ದಿ ಸಂಸ್ಥೆ ವರದಿಗಳನ್ನು ಆಧರಿಸಿ ಸ್ವ ಇಚ್ಛೆಯ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆಜ್ಞಾಪಿಸಿತು.

ಪೊಲೀಸರು ಸಂಭಾವ್ಯ ಅಹಿತಕರ ಘಟನೆ ಬಗ್ಗೆ ಎಚ್ಚರ ವಹಿಸಿರಲಿಲ್ಲ ಮತ್ತು ಸಿದ್ಧರಾಗಿರಲೂ ಇಲ್ಲ ಎಂಬುದು ವರದಿಗಳಿಂದ ಸ್ಪಷ್ಟವಾಗಿದೆ ಎಂಬುದನ್ನು ಘಟನಾವಳಿಗಳು ಸ್ಪಷ್ಟವಾಗಿ ಸೂಚಿಸಿದೆ ಎಂದು ಹೇಳಿಕೆಯೊಂದರಲ್ಲಿ ಎನ್ಎಚ್ಆರ್ಸಿ ಹೇಳಿತು.

ಮೃತ ವ್ಯಕ್ತಿಗಳನ್ನು ಪೊಲೀಸರು ತನಿಖೆಯ ವೇಳೆಯಲ್ಲಿ ಬಂಧಿಸಿದ್ದರು ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ನ್ಯಾಯಾಲಯದಿಂದ ತೀರ್ಪು ಇನ್ನೂ ಪ್ರಕಟಗೊಂಡಿಲ್ಲ. ಬಂಧಿತ ವ್ಯಕ್ತಿಗಳು ನಿಜವಾಗಿಯೂ ತಪ್ಪಿತಸ್ಥರಾಗಿದ್ದರೆ, ಸಂಬಂಧಪಟ್ಟ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕಾನೂನಿಗೆ ಅನುಗುಣವಾಗಿ ಅವರನ್ನು ಶಿಕ್ಷಿಸಬೇಕಾಗಿತ್ತು ಎಂದು ಎನ್ಎಚ್ಆರ್ಸಿ ಹೇಳಿತು.

ವಿಷಯದ ಬಗ್ಗೆ ಅತ್ಯಂತ ಎಚ್ಚರಿಕೆಯ ತನಿಖೆಯ ಅಗತ್ಯವಿದೆ ಎಂಬುದು ಆಯೋಗದ ಅಭಿಪ್ರಾಯ. ಅದಕ್ಕೆ ಅನುಗುಣವಾಗಿ ತನ್ನ ಮಹಾ ನಿರ್ದೇಶಕರಿಗೆ (ತನಿಖೆಗಳು) ತತ್ ಕ್ಷಣವೇ ಘಟನಾ ಸ್ಥಳಕ್ಕೆ ತಂಡವೊಂದನ್ನು ಕಳುಹಿಸಿ ವಾಸ್ತವಾಂಶ ಸಂಗ್ರಹಿಸಲು ಆಯೋಗವು ಸೂಚಿಸಿದೆಎಂದು ಹೇಳಿಕೆ ತಿಳಿಸಿತು.

ವರದಿ ಕೇಳಿದ ಕೇಂದ್ರ: ತೆಲಂಗಾಣ ಪಶುವೈದ್ಯೆಯ ಮೇಲಿನ ಅತ್ಯಾಚಾರ ಆರೋಪಿಗಳನ್ನು ಪೊಲೀಸ್ ವಶದಲ್ಲಿ ಇದ್ದಾಗಲೇ ಕೊಂದ ಘಟನೆಯ ಬಗ್ಗೆ ಕೇಂದ್ರ ಸರ್ಕಾರವು ತೆಲಂಗಾಣ ಸರ್ಕಾರದಿಂದ ವರದಿಯನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಇದು ಪೊಲೀಸರ ವಶದಲ್ಲಿ ನಡೆದ ಹತ್ಯೆ. ಹಾಲಿ ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾಜ್ಯವು ಗೃಹ ವ್ಯವಹಾರಗಳ ಸಚಿವಾಲಯದ ಮೂಲಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್ಎಚ್ಆರ್ಸಿ) ಮಾಹಿತಿ ನೀಡಬೇಕು. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಸಚಿವರಿಗೆ ಪ್ರಶ್ನೆಗಳು ಬರಬಹುದು. ಗೃಹ ವ್ಯವಹಾರಗಳ ಸಚಿವಾಲಯವು ವಾಸ್ತವಾಂಶಗಳೊಂದಿಗೆ ಸಿದ್ಧವಾಗಿರಬೇಕಾಗುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಮೂಲವೊಂದು ತಿಳಿಸಿತು.

ಅನುಮಾನ ಮೂಡಿಸಿದ ಸಮಯ: ಏತನ್ಮಧ್ಯೆ, ಎನ್ಕೌಂಟರ್ ಸಮಯದ ವಿವರಗಳ ಬಗ್ಗೆ ಕೆಲವೊಂದು ಲೋಪದೋಷಗಳು ಕಂಡು ಬಂದಿವೆ ಎಂದು ವರದಿಗಳು ಹೇಳಿವೆ. ಸೈಬರಾಬಾದ್ ಪೊಲೀಸರು ಮೊದಲಿಗೆ ನಸುಕಿನ .೩೦ ಗಂಟೆಗೆ ಎನ್ ಕೌಂಟರ್ ನಡೆದಿದೆ ಎಂದು ಹೇಳಿದ್ದರು.

ಶಂಶಾಬಾದ್
ಉಪ ಪೊಲೀಸ್ ಕಮೀಷನರ್ ಎನ್ ಪ್ರಕಾಶ ರೆಡ್ಡಿ ಅವರು ಬಳಿಕ ಅಧಿಕೃತ ಹೇಳಿಕೆಯಲ್ಲಿ ಬೆಳಗ್ಗೆ ೬ರಿಂದ .೩೦ರ ನಡುವಣ ಅವಧಿಯಲ್ಲಿ ನಮ್ಮ ಸಿಬ್ಬಂದಿ ಘಟನಾವಳಿಯ ಪುನರ್ ಸೃಷ್ಟಿಗಾಗಿ ಅಪರಾಧ ಸ್ಥಳಕ್ಕೆ ಬಂದರು ಮತ್ತು ಆರೋಪಿಗಳು ಅವರ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳಲು ಯತ್ನಿಸಿದರು, ಆಗ ಪರಸ್ಪರ ಗುಂಡು ಹಾರಾಟ ನಡೆಯಿತುಎಂದು ತಿಳಿಸಿದ್ದರು.

ಜನರ
ಹರ್ಷ, ಸಂಭ್ರಮ: ಎನ್ ಕೌಂಟರ್ ಸುದ್ದಿ ಹರಡುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದರು. ಜನರ ಗುಂಪೊಂದು ಘಟನಾ ಸ್ಥಳದಲ್ಲಿತೆಲಂಗಾಣ ಪೊಲೀಸ್ ಜಿಂದಾಬಾದ್ನಮಗೆ ನ್ಯಾಯ ಸಿಕ್ಕಿತುಎಂದು ಘೋಷಣೆಗಳನ್ನು ಕೂಗುತ್ತಾ ಪೊಲೀಸರನ್ನು ಅಭಿನಂದಿಸಿದರು. ಘಟನೆಯು ಇಂತಹ ಅಪರಾಧಗಳನ್ನು ಎಸಗದಂತೆ ಮುನ್ನೆಚ್ಚರಿಕೆಯಾಗಲಿದೆ ಮತ್ತು ಇಂತಹ ಅಪರಾಧಗಳಿಗೆ ತಡೆ ಹಾಕಲಿದೆ ಎಂದು ಅವರು ಹೇಳಿದರು. ಮಹಿಳೆಯರು ಪೊಲೀಸರಿಗೆ ಸಿಹಿ ವಿತರಿಸುತ್ತಿದ್ದ ದೃಶ್ಯಗಳೂ ಕಂಡು ಬಂದವು.

ನಗರದ ಇತರ ಭಾಗಗಳಲ್ಲಿ ಪೊಲೀಸ್ ಸಿಬ್ಬಂದಿ ಪಟಾಕಿ ಸಿಡಿಸಿ ಆರೋಪಿಗಳ ಹತ್ಯೆಯನ್ನು ಸಂಭ್ರಮಿಸಿದರು. ’ಇದು ದಿಶಾ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಟ್ಟಿದೆ. ಅವರು (ಪೊಲೀಸರು) ಎನ್ ಕೌಂಟರ್ ನಡೆಸಿರುವುದಕ್ಕೆ ನಮಗೆ ನಿಜವಾಗಿಯೂ ಸಂತಸವಾಗಿದೆ. ಇದು ಇಂತಹ ಅಪರಾಧಕ್ಕೆ ಇನ್ನು ಮುಂದೆ ತಡೆಯಾಗಿ ಕೆಲಸ ಮಾಡಲಿದೆ. ಇಂತಹ ಅಪರಾಧಕ್ಕೆ ಮುಂದಾಗುವವರು ಭಯಪಡಲಿದ್ದಾರೆ. ಪೊಲೀಸರು ಅತ್ಯಂತ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೈದರಾಬಾದ್ ನಿವಾಸಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿದವು.

ನವೆಂಬರ್ ೨೮ರಂದು ಭಯಾನಕ ರೀತಿಯಲ್ಲಿ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಆಕೆಯನ್ನು ಜೀವಂತ ಸುಟ್ಟು ಹಾಕಿದ ಘಟನೆ ಘಟಿಸಿದ ಕೆಲವು ದಿನಗಳ ಬಳಿಕ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಘಟನೆಯ ಕ್ಷಿಪ್ರ ತನಿಖೆಗಾಗಿತ್ವರಿತ ನ್ಯಾಯಾಲಯಸ್ಥಾಪನೆಗೆ ಭಾನುವಾರ ಆದೇಶ ನೀಡಿದ್ದರು. ಆದರೆ ಅವರ ಪುತ್ರ -ಸಚಿವ ಕೆಟಿ ರಾಮರಾವ್ ಅವರು ನಾಲ್ಕೂ ಮಂದಿ ಆರೋಪಿಗಳಿಗೆ ತತ್ ಕ್ಷಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದರು.


ಈದಿನ  ಬೆಳಗ್ಗೆ ಘಟಿಸಿರುವ ಎನ್ ಕೌಂಟರ್ ಪ್ರಕರಣವು ೨೦೦೮ರಲ್ಲಿ ಹಿಂದಿನ ಆಂಧ್ರಪ್ರದೇಶದಲ್ಲಿ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಮೂವರು ಯುವಕರನ್ನು ಪೊಲೀಸರು ಗುಂಡಿಟ್ಟು ಕೊಂದ ಘಟನೆಯನ್ನು ನೆನಪಿಗೆ ತಂದಿತು.

No comments:

Advertisement