My Blog List

Wednesday, December 18, 2019

ನಿರ್ಭಯಾ ಅತ್ಯಾಚಾರ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಬೋಬ್ಡೆ

ಮರಣದಂಡನೆ ಪುನರ್ ಪರಿಶೀಲನಾ ಅರ್ಜಿ
ನಿರ್ಭಯಾ ಅತ್ಯಾಚಾರ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಬೋಬ್ಡೆ
ನವದೆಹಲಿ: ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಬೋಬ್ಡೆ2019 ಡಿಸೆಂಬರ್ 17ರ  ಮಂಗಳವಾರ ಹಿಂದೆ ಸರಿದರು ಮತ್ತು ವಿಷಯದ ವಿಚಾರಣೆಯನ್ನು 2019 ಡಿಸೆಂಬರ್  18ರ ಬುಧವಾರಕ್ಕೆ ಮುಂದೂಡಿದರು.

ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಗೆ ಬುಧವಾರ ಬೆಳಗ್ಗೆ ೧೦.೩೦ಗಂಟೆಗೆ ಪೀಠ ರಚಿಸುವುದಾಗಿಯೂ, ನೂತನ ಪೀಠವು ಮಧ್ಯಾಹ್ನ ಗಂಟೆಗೆ ಮರಣದಂಡನೆ ವಿರುದ್ಧ ಅಕ್ಷಯ್ ಕುಮಾರ್ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿಯೂ ಸಿಜೆಐ ತಿಳಿಸಿದರು.

ಒಮ್ಮೆ ತಮ್ಮ ಸಹೋದರ ಸಂಬಂಧಿ ಸಂತ್ರಸ್ಥೆಯ ಪರವಾಗಿ ಹಾಜರಾಗಿದ್ದರು. ಆದ್ದರಿಂದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವೆ ಎಂದು ಸಿಜೆಐ ನುಡಿದರು.

ನ್ಯಾಯಮೂರ್ತಿಗಾದ ಆರ್. ಭಾನುಮತಿ ಮತ್ತು ಆಶೋಕ ಭೂಷಣ್ ಅವರು ಮಂಗಳವಾರ ಸುಪ್ರೀಂಕೋರ್ಟ್ ಪೀಠದಲ್ಲಿದ್ದ ಇತರ ಇಬ್ಬರು ನ್ಯಾಯಮೂರ್ತಿಗಳಾಗಿದ್ದರು.

ತನ್ನ ಅರ್ಜಿಯಲ್ಲಿ ಅಕ್ಷಯ್ ಕುಮಾರ್ ವಿಲಕ್ಷಣ ನೆಲೆಯಲ್ಲಿ ಕ್ಷಮಾದಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ. ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ಜಲಮಾಲಿನ್ಯದ ಕಾರಣ ಹೇಗಿದ್ದರೂ ಆಯುಸ್ಸು ಕುಗ್ಗಿದೆ. ಆದ್ದರಿಂದ ತನ್ನನ್ನು ಹಾಗೂ ತನ್ನ ಇತರ ಮೂವರು ಸಹಚರರನ್ನು ಗಲ್ಲಿಗೇರಿಸುವುದರಲ್ಲಿ ಅರ್ಥವಿಲ್ಲ. ಕಾರಣದಿಂದ ತಮಗೆ ಮರಣದಂಡನೆಯಿಂದ ಕ್ಷಮೆ ನೀಡಬೇಕು ಎಂದು ಅಕ್ಷಯ್ ಕುಮಾರ್ ಅರ್ಜಿಯಲ್ಲಿ ಕೋರಿದ್ದಾನೆ. ಪೀಠವು ಅಕ್ಷಯ್ ಕುಮಾರ್ ಅರ್ಜಿಯನ್ನು ವಿರೋಧಿಸಿರುವ ಸಂತ್ರಸ್ಥೆಯ ತಾಯಿಯ ಪರವಾಗಿ ಹಾಜರಾಗಲಿರುವ ವಕೀಲರ ವಾದವನ್ನೂ ಆಲಿಸಲಿದೆ.

ಮಂಗಳವಾರ ವಿಚಾರಣೆ ನಡೆದಾಗ ನಿರ್ಭಯಾಳ ತಂದೆ, ತಾಯಿ ಸುಪ್ರೀಂಕೋರ್ಟಿನಲ್ಲಿ ಹಾಜರಿದ್ದರು.

ನಿರ್ಭಯಾ ಎಂಬುದಾಗಿ ಕರೆಯಲಾದ ೨೩ರ ಹರೆಯದ ಫಿಸಿಯೋ ಥೆರೆಪಿ ವಿದ್ಯಾರ್ಥಿನಿಯ ಮೇಲೆ ಭೀಕರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಹಾಗೂ ಬಳಿಕ ಗಾಯಗಳಿಂದಾಗಿ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ಅಕ್ಷಯ್ ಕುಮಾರ್ಗೆ ಪವನ್ ಗುಪ್ತ, ವಿನಯ್ ಶರ್ಮ, ಮುಖೇಶ್ ಸಿಂಗ್ ಮತ್ತು ರಾಮ್ ಸಿಂಗ್ ಜೊತೆಗೆ ಮರಣ ದಂಡನೆ ವಿಧಿಸಲಾಗಿದೆ.

ನಾಲ್ವರು ಅಪರಾಧಿಗಳ ಪೈಕಿ ಅಕ್ಷಯ್ ಕುಮಾರ್ ಮಾತ್ರ ಈವರೆಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾನೆ.

೨೦೧೮ರ ಜುಲೈ ೯ರಂದು ಸುಪ್ರೀಂಕೋರ್ಟ್ ಇತರ ಮೂವರು ಅಪರಾಧಿಗಳಾದ ಮುಖೇಶ್ ಸಿಂಗ್ (೩೦), ಪವನ್ ಗುಪ್ತ (೨೩) ಮತ್ತು ವಿನಯ್ ಶರ್ಮ (೨೪) ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು  ವಜಾಗೊಳಿಸಿತ್ತು. ೨೦೧೭ರ ತೀರ್ಪಿನ ಪುನರ್ ಪರಿಶೀಲನೆಗೆ ಯಾವುದೇ ನೆಲೆಯೂ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಪ್ರಕರಣದ ಇನ್ನೊಬ್ಬ ಅಪರಾಧಿ ರಾಮ್ ಸಿಂಗ್ ನವದೆಹಲಿಯ ತಿಹಾರ್ ಸೆರೆಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆಪಾದಿಸಲಾಗಿತ್ತು.

೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬-೧೭ರ ನಡುವಣ ರಾತ್ರಿ ದಕ್ಷಿಣ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲೇ ಮಂದಿ ಸಾಮೂಹಿಕ ಅತ್ಯಾಚಾರ  ಎಸಗಿ ಬಳಿಕ ಆಕೆಯನ್ನು ರಸ್ತೆಗೆ ಎಸೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆಕೆ ೨೦೧೨ರ ಡಿಸೆಂಬರ್ ೨೯ರಂದು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಅಸು ನೀಗಿದ್ದಳು.

No comments:

Advertisement