My Blog List

Wednesday, December 4, 2019

ಚಿದಂಬರಂ ಜಾಮೀನು ಅರ್ಜಿ, ಬುಧವಾರ ಸುಪ್ರೀಂ ತೀರ್ಪು

ಚಿದಂಬರಂ ಜಾಮೀನು ಅರ್ಜಿ, ಬುಧವಾರ ಸುಪ್ರೀಂ ತೀರ್ಪು
ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣ
ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಕೋರಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಸಲ್ಲಿಸಿರುವ ಅರ್ಜಿಯ ಮೇಲಿನ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ 2019 ಡಿಸೆಂಬರ್ 04ರ ಬುಧವಾರ ಪ್ರಕಟಿಸಲಿದೆ.

ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠವು, ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ ನವೆಂಬರ್ ೧೫ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಮೇಲಿನ ವಾದ- ಪ್ರತಿವಾದ ಆಲಿಸಿದ ಬಳಿಕ ನವೆಂಬರ್ ೨೮ರಂದು  ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ವಿಚಾರಣೆಯ ಕಾಲದಲ್ಲಿ ೭೪ರ ಹರೆಯದ ಮಾಜಿ ವಿತ್ತ ಸಚಿವರು ಈಗಲೂ ಪ್ರಭಾವಶಾಲಿಯಾಗಿದ್ದು ಕಸ್ಟಡಿಯಲ್ಲಿ ಇದ್ದಾಗಲೇ ಪ್ರಕರಣದ ನಿರ್ಣಾಯಕ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಲ್ಲವರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ವಾದಿಸಿತ್ತು. ಸಂಸ್ಥೆಯು ಬುಡರಹಿತ ಆರೋಪಗಳನ್ನು ಮಾಡುವ ಮೂಲಕ ತನ್ನ ವೃತ್ತಿ ಮತ್ತು ಗೌರವವನ್ನು ನಾಶ ಪಡಿಸಲು ಸಾಧ್ಯವಿಲ್ಲ ಎಂದು ಚಿದಂಬರಂ ಉತ್ತರಿಸಿದ್ದರು.

ಜಾರಿ ನಿರ್ದೇಶನಾಲಯ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಚಿದಂಬರಂ ಮನವಿಯನ್ನು ವಿರೋಧಿಸಿ, ಹಣ ವರ್ಗಾವಣೆಯಂತಹ ಆರ್ಥಿಕ ಅಪರಾಧಗಳು ಗಂಭೀರ ಸ್ವರೂಪದವಾಗಿವೆ. ಅವುಗಳು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲ, ವ್ಯವಸ್ಥೆ ಮೇಲಿನ ಜನರ ನಂಬಿಕೆಯನ್ನೇ ಅಲುಗಾಡಿಸುತ್ತವೆ. ಅದರಲ್ಲೂ ಅಧಿಕಾರದಲ್ಲಿ ಇರುವವರು ಇಂತಹ ಅಪರಾಧ ಎಸಗಿದಾಗ ಅದರ ಪರಿಣಾಮ ಇನ್ನೂ ಹೆಚ್ಚು ಎಂದು ವಾದಿಸಿದ್ದರು.

ಕೇಂದ್ರದ ಮಾಜಿ ವಿತ್ತ ಸಚಿವರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ವಾದಿಸಿ, ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರ ಅಹವಾಲನ್ನು ವಿರೋಧಿಸಿದ್ದರು. ಚಿದಂಬರಂ ಅವರಿಗೆ ಆರೋಪಿತ ಅಪರಾಧಕ್ಕೆ ಸಂಬಂಧಿಸಿದತೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಇದೆ ಎಂಬುದನ್ನು ಸಾಬೀತು ಪಡಿಸುವ ಯಾವ ಸಾಕ್ಷ್ಯಾಧಾರಗಳೂ ಇಲ್ಲ ಅಥವಾ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಕ್ಕೆ ಇಲ್ಲವೇ ಯಾವುದಾದರೂ ಸಾಕ್ಷ್ಯದಲ್ಲಿ ಕೈಯಾಡಿಸಿದ್ದಕ್ಕೆ ಸಾಕ್ಷ್ಯಾಧಾರವಿಲ್ಲ ಎಂದು ವಕೀಲದ್ವಯರು ವಾದಿಸಿದ್ದರು.

ಚಿದಂಬರಂ
ಅವರನ್ನು ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಮೊದಲಿಗೆ ಆಗಸ್ಟ್ ೨೧ರಂದು ಸಿಬಿಐ ಬಂಧಿಸಿತ್ತು. ಅಕ್ಟೋಬರ್ ೨೨ರಂದು ಸುಪ್ರೀಂಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಜಾರಿ ನಿರ್ದೇಶನಾಲವಯ ಅಕ್ಟೋಬರ್ ೧೬ರಂದು ಅವರನ್ನು ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು. ಸಿಬಿಐ ೨೦೧೭ರ ಮೇ ೧೫ರಂದು ತನ್ನ ಪ್ರಕರಣವನ್ನು ದಾಖಲಿಸಿ, ಎಫ್ಐಪಿಬಿಯು ಐಎನ್ಎಕ್ಸ್ ಮೀಡಿಯಾ ಸಮೂಹಕ್ಕೆ ೩೦೫ ಕೋಟಿ ರೂಪಾಯಿ ವಿದೇಶೀ ಹಣ ಪಡೆಯಲು ಅನುಮತಿ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ಆಪಾದಿಸಿತ್ತು. ವೇಳೆಯಲ್ಲಿ ಚಿದಂಬರಂ ಅವರು ಕೇಂದ್ರ ವಿತ್ತ ಸಚಿವರಾಗಿದ್ದರು.

  ಬಳಿಕ ಜಾರಿ ನಿರ್ದೇಶನಾಲಯವುಯ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.

No comments:

Advertisement