ಕರ್ನಾಟಕದ ರಂಗಪ್ಪ ಸೇರಿ ೩೨ ರೈತರಿಗೆ ಕೃಷಿ ಕರ್ಮಣ್ ಪ್ರಶಸ್ತಿ
ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ 2020 ಜನವರಿ 02ರ ಗುರುವಾರ ಕೇಂದ್ರ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ವಿವಿಧ ರಾಜ್ಯಗಳ ೩೨ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕರ್ಮಣ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿ ಮಧುಗಿರಿ ದೊಡ್ಡೇರಿ ಹೋಬಳಿಯ ಗೊದ್ದನಪಾಳ್ಯದ ರೈತ ರಂಗಪ್ಪ ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಅಲ್ಲದೇ ಮಧ್ಯಪ್ರದೇಶದ ರೈತ ಕರಣ್ ದೇವ್ ಸಿಂಗ್, ಬಿಹಾರದ ಗೋಪಾಲ್ ಪ್ರಸಾದ್, ಮಹಾರಾಷ್ಟ್ರದ ನರೇಂದ್ರ ಗೋವಲ್ ಪಾಟೀಲ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ೩೨ ರೈತರು ಪ್ರಶಸ್ತಿ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕೃಷಿ ಕರ್ಮಣ್ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ
ಮುಖ್ಯಮಂತ್ರಿ
ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿ ಮಧುಗಿರಿ ದೊಡ್ಡೇರಿ ಹೋಬಳಿಯ ಗೊದ್ದನಪಾಳ್ಯದ ರೈತ ರಂಗಪ್ಪ ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಅಲ್ಲದೇ ಮಧ್ಯಪ್ರದೇಶದ ರೈತ ಕರಣ್ ದೇವ್ ಸಿಂಗ್, ಬಿಹಾರದ ಗೋಪಾಲ್ ಪ್ರಸಾದ್, ಮಹಾರಾಷ್ಟ್ರದ ನರೇಂದ್ರ ಗೋವಲ್ ಪಾಟೀಲ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ೩೨ ರೈತರು ಪ್ರಶಸ್ತಿ ಸ್ವೀಕರಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯನ್ನು ಎಲ್ಲಾ ರಾಜ್ಯಗಳಲ್ಲಿಯೂ ಅನುಷ್ಠಾನ:
ಪವಿತ್ರ ಸಿದ್ದಗಂಗಾಶ್ರೀಗಳ ನೆಲದಲ್ಲಿ ರೈತರನ್ನು ಸನ್ಮಾನಿಸುವ, ಪ್ರಶಸ್ತಿ ನೀಡುವ ಸೌಭಾಗ್ಯ ನನಗೆ ಒದಗಿ ಬಂದಿರುವುದು ಖುಷಿ ಕೊಟ್ಟಿದೆ. ಈಗಾಗಲೇ ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಅಡಿಯಲ್ಲಿ ೮ ಕೋಟಿ ರೈತರ ಖಾತೆಗೆ ದುಡ್ಡು ಜಮೆಯಾಗಿದೆ. ಅಲ್ಲದೇ ಕಿಸಾನ್ ಸಮ್ಮಾನ್ ಯೋಜನೆಯನ್ನು ಎಲ್ಲಾ ರಾಜ್ಯಗಳಲ್ಲಿಯೂ ಅನುಷ್ಠಾನಗೊಳಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದಶಕಗಳಿಂದ ನನೆಗುದಿಗೆ ಬಿದ್ದಿದ್ದ ನೀರಾವರಿ, ಮಣ್ಣು ಪರೀಕ್ಷೆ, ಬೆಂಬಲ ಬೆಲೆಯಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಅಲ್ಲದೇ ಚಿಕ್ಕಮಗಳೂರಿನ ಕಾಫಿ ಬೆಳೆಗೆ, ಚಿಕ್ಕಬಳ್ಳಾಪುರ, ಬೆಂಗಳೂರಿನ ಗುಲಾಬಿ ಹೂ, ಬೆಳಗಾವಿ ದಾಳಿಂಬೆಗೆ ಕ್ಲಸ್ಟರ್ ನಿರ್ಮಾಣ ಮಾಡುವ ಯೋಜನೆ ಇದ್ದಿರುವುದಾಗಿ ತಿಳಿಸಿದರು.
ದಕ್ಷಿಣ ಭಾರತದಲ್ಲಿ ತೆಂಗು, ಕಾಫಿ, ಗೋಡಂಬಿ ಹೆಚ್ಚಾಗಿ ಬೆಳೆಯುತ್ತಿದ್ದು, ಗೋಡಂಬಿ, ತೆಂಗು ಬೆಳೆಗೆ ಹೆಚ್ಚಿನ ಬೆಲೆ ಜತೆಗೆ, ಹೆಚ್ಚು ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು. ರಬ್ಬರ್ ಬೆಳೆಗಾರರಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ರಬ್ಬರ್ ಬೆಳೆಗಾರರಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ ಎಂದರು.
ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗುತ್ತಿದ್ದು, ಆಳ ಸಮುದ್ರ ಮೀನುಗಾರಿಕೆಗೆ ಅನುಕೂಲವಾಗಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಇಸ್ರೋ ನೆರವು ನೀಡುತ್ತಿದ್ದು, ದೋಣಿಗಳ ಮೇಲ್ದರ್ಜೆಗೆ ೨ ಸಾವಿರ ಕೋಟಿ ರೂಪಾಯಿ ನೀಡಲಾಗುತ್ತಿದೆ ಎಂದು ಮೋದಿ ಹೇಳಿದರು.
No comments:
Post a Comment