My Blog List

Wednesday, January 15, 2020

ಬಿಜೆಪಿಯ ಪೌರತ್ವ ಕಾಯ್ದೆ ಪರ ರಾಲಿಗೆ ದೀದಿ ತಡೆ

ಬಿಜೆಪಿಯ ಪೌರತ್ವ ಕಾಯ್ದೆ ಪರ  ರಾಲಿಗೆ  ದೀದಿ ತಡೆ
ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕ ಆಜ್ಞೆ ಜಾರಿ
ಕೋಲ್ಕತ: ಪೌರತ್ವ (ತಿದ್ದುಪಡಿ) ಕಾಯ್ದೆಯು (ಸಿಎಎ) ಸರಣಿ ಪ್ರತಿಭಟನೆಗಳಿಗೆ ಕಾರಣವಾದ ಬಳಿಕ ಇದೇ ಮೊತ್ತ ಮೊದಲ ಬಾರಿಗೆ ಪಶ್ಚಿಮ ಬಂಗಾಳ ರಾಜ್ಯ ಪೊಲೀಸರು ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಯ್ದೆಯನ್ನು ಬೆಂಬಲಿಸಿ ಮೆರವಣಿಗೆಗಳನ್ನು ನಡೆಸದಂತೆ ತಡೆಯುವ ಸಲುವಾಗಿ ಅಪರಾಧ ದಂಡ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕ ಆಜ್ಞೆಯನ್ನು ಜಾರಿಗೊಳಿಸಿದ್ದಾರೆ.

2020 ಜನವರಿ 12ರ ಭಾನುವಾರದಿಂದಲೇ ಪ್ರತಿಬಂಧಕ ಆಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಅದನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳನ್ನೂ ದಾಖಲಿಸಲಾಗಿದೆ.

೨೦೧೯ರ
ಚುನಾವಣೆಯಲ್ಲಿ ರಾಜ್ಯದ ೪೨ ಲೋಕಸಭಾ ಸ್ಥಾನಗಳ ಪೈಕಿ ೧೮ ಸ್ಥಾನಗಳನ್ನು ತೃಣಮೂಲ ಕಾಂಗ್ರೆಸ್ಸಿನಿಂದ (ಟಿಎಂಸಿ) ಬಿಜೆಪಿಯು ಕಿತ್ತುಕೊಂಡಿರುವ ಉತ್ತರ ಬಂಗಾಳ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ.

ಜನವರಿ ೧೨ರಂದು, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಸಯಾಂತನ್ ಬಸು ಮತ್ತು ಪಕ್ಷದ ಕೂಚ್ ಬೆಹಾರ್ ಜಿಲ್ಲಾ ಘಟಕದ ಅಧ್ಯಕ್ಷೆ ಮಾಲತಿ ರೇವಾ ರೇ ಅವರನ್ನು ಜಿಲ್ಲೆಯ ಸೀತಾಲ್ಕುಚಿಗೆ ಸಾಗದಂತೆ ತಡೆಯಾಯಿತು. ಅವರು ಬಿಜೆಪಿಯು ಸಂಘಟಿಸಿದ್ದ ಸಿಎಎ ಪರ ಅಭಿನಂದನ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಹೊರಟಿದ್ದರು.

ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕ ಆಜ್ಞೆ ಇರುವುದಾಗಿಯೂ ಮುಂದೆ ಸಾಗಿದರೆ ಬಂಧಿಸಲಾಗುವುದು ಎಂದೂ ನಮಗೆ ತಿಳಿಸಲಾಯಿತು. ನಾವು ಮುಂದಕ್ಕೆ ಸಾಗಿದೆವು ಮತ್ತು ಎಲ್ಲಿ ನಮ್ಮನ್ನು ತಡೆಯಲಾಯಿತೋ ಅಲ್ಲಿಯೇ ಸಭೆ ನಡೆಸಿದೆವು. ಸರ್ಕಾರದ ತಂತ್ರಗಾರಿಕೆಗಳ ವಿರುದ್ಧ ನಾವು ಕಲ್ಕತ್ತ ಹೈಕೋರ್ಟಿಗೆ ಹೋಗುತ್ತೇವೆ. ಟಿಎಂಸಿಯು ನಮ್ಮ ದನಿ ಅಡಗಿಸಲು ಸಾಧ್ಯವಿಲ್ಲ. ಅವರಿಗೆ ಬಿಜೆಪಿಯ ಬಗ್ಗೆ ಹೆದರಿಕೆ ಹುಟ್ಟಿದೆ. ನಮ್ಮನ್ನು ತಡೆಯುವ ಯತ್ನವು ಒಂದು ರೀತಿಯ ಸಮರಕ್ಕೆ ಕಾರಣವಾಗಬಹುದುಎಂದು ಬಸು ನುಡಿದರು.

ದಕ್ಷಿಣ ದೀನಾಪುರ ಜಿಲ್ಲೆಯ ಸಮೀಪದ ಮಲಗಾಪುರ ಪ್ರದೇಶದಲ್ಲಿ ಕೂಡಾ ಇನ್ನೊಂದು ಅಭಿನಂದನಾ ಯಾತ್ರೆಗೆ ಸಿದ್ಧತೆ ನಡೆಸಲಾಗಿತ್ತು. ಬಸು ಮತ್ತು ಬೆಂಗಾಳ ಬಿಜೆಪಿ ಯುವ ಮೋರ್ಚಾ (ಯುವ ವೇದಿಕೆ) ಅಧ್ಯಕ್ಷ ದೇಬಜಿತ್ ಸರ್ಕಾರ್ ಅವರನ್ನು ತಡೆದ ಪೊಲೀಸರು ಸೆಕ್ಷನ್ ೧೪೪ ಜಾರಿಯಲ್ಲಿ ಇರುವುದರಿಂದ ಜನರಿಗೆ ಸಭೆ ಸೇರಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ್ದರು.

ಅದಾಗಲೇ ಸೇರಿದ್ದ ಭಾರೀ ಸಂಖ್ಯೆಯ ಮಂದಿ ರಸ್ತೆ ತಡೆ ನಡೆಸಿದರು. ರಸ್ತೆತಡೆ ನಡೆಸಿದ್ದಕ್ಕಾಗಿ ಬಸು ಮತ್ತು ಸರ್ಕಾರ್ವಿರುದ್ಧ ಪ್ರಕರಣ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

No comments:

Advertisement