My Blog List

Saturday, January 4, 2020

ದೆಹಲಿಗೂ ಬಂತು ಚೀನಾ ಮಾದರಿ ಗಾಳಿ ಶುದ್ಧೀಕರಣ ಗೋಪುರ..!

ದೆಹಲಿಗೂ ಬಂತು ಚೀನಾ ಮಾದರಿ ಗಾಳಿಶುದ್ಧೀಕರಣ ಗೋಪುರ..!
ನವದೆಹಲಿ: ಚೀನಾ ಕ್ಷಿಯಾನ್ ನಲ್ಲಿ ಇರುವ ೬೦ ಮೀಟರ್ ಎತ್ತರದ ಗಾಳಿ ಶುದ್ಧೀಕರಣ ಗೋಪುರದ ಮಾದರಿಯ ಗಾಳಿ ಶುದ್ಧೀಕರಣ ಗೋಪುರವನ್ನು  ಗ್ಯಾಸ್ ಚೇಂಬರಿನಂತಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಾಳಿಯನ್ನು ಶುದ್ಧೀಕರಿಸುವ ಸಲುವಾಗಿ ಇದೇ ಮೊದಲ ಬಾರಿಗೆ ನಿರ್ಮಿಸಲಾಯಿತು.
ಲಜಪತ್ ನಗರದ ಕೇಂದ್ರೀಯ ಮಾರುಕಟ್ಟೆಯಲ್ಲಿ ಲಕ್ಷ ರೂ. ವೆಚ್ಚದದಲ್ಲಿ ೨೦ ಅಡಿ ಎತ್ತರದ ಗಾಳಿ ಶುದ್ಧೀಕರಣ ಗೋಪುರವನ್ನು ಸ್ಥಾಪಿಸಲಾಯಿತು.
ಲಜಪತ್ ನಗರವು ಜನನಿಬಿಡ ಪ್ರದೇಶವಾಗಿದ್ದು, ಪ್ರತಿನಿತ್ಯ ೧೫ ಸಾವಿರ ಮಂದಿ ಇಲ್ಲಿ ಸಂಚರಿಸುತ್ತಾರೆ. ಲಜಪತ್ ನಗರದ ವರ್ತಕರ ಸಂಘವು ಸಂಸತ್ ಸದಸ್ಯ ಗೌತಮ್ ಗಂಭೀರ್ ಸಹಕಾರದೊಂದಿಗೆ ಗೋಪುರವನ್ನು ಅಳವಡಿಸಿದೆ.

ಗಾಳಿ ಶುದ್ಧೀಕರಿಸುವ ಗೋಪುರದ ನಿರ್ವಹಣೆಗೆ ವಾರ್ಷಿಕ ೩೦ ಸಾವಿರ ರೂ. ವೆಚ್ಚವಾಗಲಿದ್ದು ವರ್ತಕರ ಸಂಘವು ವೆಚ್ಚವನ್ನು ಭರಿಸಲಿದೆ.

ಗಾಳಿ ಗುಣಮಟ್ಟ ಸೂಚ್ಯಂಕ ಪ್ರಕಾರ, ಪ್ರದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ವಿಪರೀತವಾಗಿತ್ತು.

ಚೀನಾದ ಕ್ಷಿಯಾನ್ ನಗರದಲ್ಲಿ ೨೦೧೬ರಿಂದೀಚೆಗೆ ಅಳವಡಿಸಿ ಪರೀಕ್ಷಿಸಲಾಗುತ್ತಿರುವ ಗಾಳಿ ಶುದ್ಧೀಕರಣ ಗೋಪುರದಲ್ಲಿ ಮಾಲಿನ್ಯಭರಿತ ಬಿಸಿ ಗಾಳಿಯನ್ನು ಗೋಪುರದ ತಳಭಾಗಕ್ಕೆ ಆಕರ್ಷಿಸುವ ವ್ಯವಸ್ಥೆಯಿದೆ. ಮಾಲಿನ್ಯಭರಿತ ಗಾಳಿಯು ಗೋಪುರದ ಒಳಗೆ ಸೌರವ್ಯವಸ್ಥೆಯ ಮೂಲಕ ಬಿಸಿಯಾಗಿ ಮೇಲಕ್ಕೆ ಏರುತ್ತಾ ಗಾಳಿ ಶುದ್ದೀಕರಣ ವ್ಯವಸ್ಥೆಗಳ (ಏರ್ ಪ್ಯೂರಿಫೈಯರ್ಸ್) ಮೂಲಕ ಸಾಗಿ, ಗೋಪುರದ ತುದಿ ತಲುಪುವ ವೇಳೆಗೆ ಶುದ್ದೀಕರಣಗೊಂಡು ಪುನಃ ವಾತಾವರಣವನ್ನು ಸೇರುತ್ತದೆ

ದೆಹಲಿಯಲ್ಲಿ
ಸ್ಥಾಪಿಸಲಾಗಿರುವ ಗಾಳಿ ಶುದ್ದೀಕರಣ ಗೋಪುರ ಕೂಡಾ ಇದೇ ಮಾದರಿಯಲ್ಲಿ ಕಾರ್ ನಿರ್ವಹಿಸುವುದು ಎಂದು ಹೇಳಲಾಗಿದ್ದುಶೇ.೮೦ರಷ್ಟು ವಾಯುಮಾಲಿನ್ಯ ನಿವಾರಿಸಲಿದೆ.

ಇದರ
ಸುತ್ತಲಿನ ೫೦೦-೭೫೦ ಮೀಟರ್ ವ್ಯಾಪ್ತಿಯವರೆಗೆ ವಾಯು ಮಾಲಿನ್ಯ ನಿಯಂತ್ರಿಸುವ ಸಾಮರ್ಥ್ಯ ಗೋಪುರಕ್ಕೆ ಇದೆ. ಪ್ರತಿದಿನ .೫೦ ಲಕ್ಷದಿಂದ ಲಕ್ಷ ಕ್ಯೂಬಿಕ್ ಗಾಳಿಯನ್ನು ಶುದ್ಧೀಕರಿಸಲಿದೆ ಎಂದು ಹೇಳಲಾಗಿದೆ.

ಗೋಪುರ
ನಿರ್ಮಾಣ ವೆಚ್ಚ- ಲಕ್ಷ ರೂ.ಪಾಯಿಗಳಾಗಿದ್ದು, ದಿನಕ್ಕೆ .೫೦ ಲಕ್ಷದಿಂದ ಲಕ್ಷ ಕ್ಯೂಬಿಕ್ ಗಾಳಿಯನ್ನು ಶುದ್ಧೀಕರಿಸುತ್ತದೆಗೋಪುರದ ಎತ್ತರ ೨೦ ಅಡಿಗಳಾಗಿದ್ದು (ನೆಲ ಮಟ್ಟದಿಂದ ೨೪ ಅಡಿ), ನಿರ್ವಹಣೆ ವೆಚ್ಚ ವಾರ್ಷಿಕ ೩೦ ಸಾವಿರ ರೂ. ರೂಪಾಯಿ ಎಂದು ತಿಳಿಸಲಾಗಿದೆ. ಗೋಪುರದ ಗಾಳಿ ಶುದ್ದೀಕರಣ ವ್ಯಾಪ್ತಿ ೫೦೦ರಿಂದ ೭೫೦ ಮೀಟರ್ ಎಂದು ತಿಳಿಸಲಾಗಿದೆ.

No comments:

Advertisement