Thursday, January 9, 2020

ಇರಾನ್ ನೆಲದಲ್ಲಿ ಉಕ್ರೇನ್ ವಿಮಾನ ಪತನ: ೧೭೬ ಸಾವು

ಇರಾನ್ ನೆಲದಲ್ಲಿ ಉಕ್ರೇನ್ ವಿಮಾನ ಪತನ: ೧೭೬ ಸಾವು
ಟೆಹರಾನ್: ಟೆಹರಾನ್ ಹೊರವಲಯದಲ್ಲಿ ಉಕ್ರೇನಿ ಬೋಯಿಂಗ್ ೭೩೭ ವಿಮಾನವು 2020 ಜನವರಿ 08 ಬುಧವಾರ ಪತನಗೊಂಡಿದ್ದು  ಮಂದಿ ಸಿಬ್ಬಂ.ದಿ ಮತ್ತು ೧೬೭ ಪ್ರಯಾಣಿಕರು ಸೇರಿ ಎಲ್ಲ ೧೭೬ ಮಂದಿ ಕೂಡಾ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿದವು

 ಇರಾನಿನ ಟೆಹರಾನ್ ವಿಮಾನ ನಿಲ್ದಾಣದಿಂದ ಬಾನಿಗೇರಿದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನಗೊಂಡಿದೆ. ಆಕಾಶದಲ್ಲಿಯೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಅದು ಪತನಗೊಂಡಿತು ಎಂದು ವರದಿಗಳು ತಿಳಿಸಿದೆ. ವಿಮಾನ ದುರಂತಕ್ಕೆ ತಾಂತ್ರಿಕ ತೊಂದರೆ ಕಾರಣವಾಗಿರಬಹುದು ಎಂದು ಭಾವಿಸಲಾಯಿತು.  ಆದರೆ, ೨೦೧೬ ರಲ್ಲಿ ನಿರ್ಮಿಸಲಾದ ಬೋಯಿಂಗ್ ೭೩೭ ವಿಮಾವನ್ನು ದುರಂತಕ್ಕೆ ಕೇವಲ ಎರಡು ದಿನಗಳ ಮುನ್ನ ಪರಿಶೀಲಿಸಲಾಗಿತ್ತು ಎಂದು ಎಂದು ಕಂಪೆನಿ ತಿಳಿಸಿದೆ.

" ವಿಮಾನವನ್ನು ೨೦೧೬ ರಲ್ಲಿ ನಿರ್ಮಿಸಲಾಯಿತು, ಇದನ್ನು ವಿಮಾನಯಾನ ಸಂಸ್ಥೆಯು ನೇರವಾಗಿ (ಬೋಯಿಂಗ್) ಕಾರ್ಖಾನೆಯಿಂದ ಸ್ವೀಕರಿಸಿದೆ. ೨೦೨೦ ಜನವರಿ ರಂದು ವಿಮಾನವು ತನ್ನ ಕೊನೆಯ ಯೋಜಿತ ತಾಂತ್ರಿಕ ಪರಿಶೀಶೀಲನೆಗೆ ಒಳಗಾಗಿತ್ತುಎಂದು ಉಕ್ರೇನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿತು.
ಬೋಯಿಂಗ್
೭೩೭ ಉಕ್ರೇನಿಯನ್ ರಾಜಧಾನಿ ಕೀವ್ಗೆ ತೆರಳುವ ಮುನ್ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ ಎಂದು ಅರೆ-ಅಧಿಕೃತ ಸುದ್ದಿ ಸಂಸ್ಥೆ ತಿಳಿಸಿದೆ. ಇದು ವಿಮಾನ ನಿಲ್ದಾಣದಿಂದ ವಾಯವ್ಯಕ್ಕೆ ೪೫ ಕಿಲೋಮೀಟರ್ (೩೦ ಮೈಲಿ) ದೂರದಲ್ಲಿರುವ ಶಹರಿಯಾರ್ ಕೌಂಟಿಯ ಖಲಾಜ್ ಅಬಾದ್ನಲ್ಲಿನ ಕೃಷಿಭೂಮಿಗೆ ಅಪ್ಪಳಿಸಿತು ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಪಿಎಸ್
-೭೫೨ ವಿಮಾನದಲ್ಲಿ "ಪ್ರಯಾಣಿಕರು ಜೀವಂತವಾಗಿರುವುದು ಅಸಾಧ್ಯ" ಎಂದು ರೆಡ್ ಕ್ರೆಸೆಂಟ್ ಮುಖ್ಯಸ್ಥ ಮೊರ್ಟೆಜಾ ಸಲೀಮಿ ಅರೆ-ಅಧಿಕೃತ ಸುದ್ದಿ ಸಂಸ್ಥೆಗೆ ತಿಳಿಸಿದರು.

"
ಸಾವನ್ನಪ್ಪಿದ ೧೭೬ ಜನರಲ್ಲಿ ಒಂಬತ್ತು ಮಂದಿ ವಿಮಾನ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು" ಎಂದು ಟೆಹ್ರಾನ್ ಪ್ರಾಂತ್ಯದ ಉಪ ಗವರ್ನರ್ ಮೊಹಮ್ಮದ್ ತಘಿಜಾದೆ ತಿಳಿಸಿದರು.

ಮೃತರಲ್ಲಿ ಎಪ್ಪತ್ತು ಮಂದಿ ಪುರುಷರು, ೮೧ ಮಂದಿ ಮಹಿಳೆಯರು ಮತ್ತು ೧೫ ಮಕ್ಕಳು ಎಂದು ಅವರು ಹೇಳಿದರು. ಮೃತರ ಶವಗಳನ್ನು ಸಂಗ್ರಹಿಸುವ ಕಾರ್ಯಾಚರಣೆ ನಡೆದಿದ್ದು ೫೦೦ ವೈದ್ಯಕೀಯ ಘಟಕಗಳು ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ ಎಂದು  ಅವರು ಹೇಳಿದರು.

ಮೃತರಲ್ಲಿ
ಹೆಚ್ಚಿನವರು ಇರಾನಿನ ಪ್ರಜೆಗಳು ಎಂದು ತುರ್ತು ಸೇವೆಗಳ ವಕ್ತಾರ ಮೊಜತಾಬಾ ಖಲೀದಿ ಹೇಳಿದರು. ಬಿಕ್ಕಟ್ಟಿನ ತಂಡವನ್ನು ನೋಡಿಕೊಳ್ಳುತ್ತಿರುವ ಉಕ್ರೇನ್ ರಾಷ್ಟ್ರೀಯ ಭದ್ರತಾ ಮಂಡಳಿಯ ಪ್ರಕಾರ ಕೇವಲ ಇಬ್ಬರು ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿ ಮಾತ್ರ ಉಕ್ರೇನಿ ಪ್ರಜೆಗಳಾಗಿದ್ದರು.

ಉಕ್ರೇನ್
ಅಧ್ಯಕ್ಷ ವೊಲೊಡಿಮೈರ್ ಜೆಲೆನ್ಸ್ಕ್ಕಿ ಅವರು ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ದೃಢ ಪಡಿಸಿದರು. "ಪ್ರಾಥಮಿಕ ಮಾಹಿತಿಯ ಪ್ರಕಾರ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರು ಸತ್ತಿದ್ದಾರೆ" ಎಂದು ಅವರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

ಛಿದ್ರಗೊಂಡಿರುವ
ಮೃತದೇಹಗಳನ್ನು ಸಂಗ್ರಹಿಸುವ ಪ್ರಯತ್ನದಲ್ಲಿ ಸೈನಿಕರು ಮತ್ತು ಅಗ್ನಿಶಾಮಕ ದಳದ ತಂಡಗಳಿಗೆ ಸಹಾಯ ಮಾಡಲಾಗುತ್ತಿದೆ ಎಂದು ರೆಡ್ ಕ್ರೆಸೆಂಟ್ ತಿಳಿಸಿದೆ.

"
ಬುಧವಾರ ಬೆಳಿಗ್ಗೆ ಆರು ಗಂಟೆಯ ನಂತರ (೦೨೩೦ ಜಿಎಂಟಿ) ಪ್ರಯಾಣಿಕರ ವಿಮಾನವು ಶಹರಿಯಾರ್ ಸುತ್ತಮುತ್ತಲ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ನಮಗೆ ಮಾಹಿತಿ ನೀಡಲಾಯಿತು" ಎಂದು ಅದರ ಶೋಧ ಮತ್ತು ರಕ್ಷಣಾ  ಘಟಕದ ಮುಖ್ಯಸ್ಥ ಶಾಹಿನ್ ಫಾತಿ ಹೇಳಿದರು. "ಎಲ್ಲಾ ಕಾರ್ಯಾಚರಣಾ ತಂಡಗಳನ್ನು ಪ್ರದೇಶಕ್ಕೆ ರವಾನಿಸಲಾಗಿದೆ" ಎಂದು ಅವರು ಸರ್ಕಾರಿ ಟಿವಿಗೆ ತಿಳಿಸಿದರು. "ದುರದೃಷ್ಟವಶಾತ್ ... ನಾವು ಯಾರನ್ನೂ ಜೀವಂತವಾಗಿ ಕಂಡಿಲ್ಲಎಂದು ಅವರು ನುಡಿದರು.

ಊಹಾಪೋಹದ
ಬಗ್ಗೆ ಉಕ್ರೇನ್ ಎಚ್ಚರಿಕೆ:  "ತಾಂತ್ರಿಕ ತೊಂದರೆಗಳಿಂದ" ದುರಂತ ಸಂಭವಿಸಿರಬಹುದು ಎಂದು ಇಮಾಮ್ ಖೊಮೇನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ಅಲಿ ಖಶಾನಿ ಅವರನ್ನು ಉಲ್ಲೇಖಿಸಿ ದೂರದರ್ಶನ ಮಾಧ್ಯಮ ಒಂದು ವರದಿ ಮಾಡಿದೆ.

"
ವಿಮಾನ ಅಪಘಾತಕ್ಕೀಡಾದ ನಂತರ ಬೆಂಕಿ ಕಾಣಿಸಿಕೊಂಡಿದೆ" ಎಂದು ಸರ್ಕಾರಿ ಟಿವಿ ವಾಹಿನಿಯ ಸುದ್ದಿ ಪ್ರಸಾರಕರು ತಿಳಿಸಿದರು.

ರಾತ್ರಿಯ
ವೇಳೆ ಆಕಾಶದಿಂದ ಬೀಳುತ್ತಿದ್ದಾಗಲೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದುದನ್ನು ಸರ್ಕಾರಿ ಪ್ರಸಾರಕರು ಪ್ರಸಾರ ಮಾಡಿರುವ ವಿಡಿಯೋ ತೋರಿಸಿದೆ ಎಂದು  ಅಮೆರಿಕದ ವಿಮಾನಯಾನ ತಯಾರಕ ಬೋಯಿಂಗ್ ಸಂಸ್ಥೆ ಟ್ವೀಟ್ ಮಾಡಿದೆ.

"
ಇರಾನಿನಿಂದ ಬಂದಿರುವ ಮಾಧ್ಯಮ ವರದಿಗಳ ಬಗ್ಗೆ ನಮಗೆ ಅರಿವಿದೆ. ನಾವು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದೇವೆಎಂದು ಬೋಯಿಂಗ್ ಕಂಪೆನಿ ಟ್ವೀಟ್ ಮಾಡಿತು.

ಅಪಘಾತದ ಕಾರಣಗಳ ಬಗ್ಗೆ ಮಾಡಲಾಗುತ್ತಿರುವ ಊಹಾಪೋಹಗಳ ವಿರುದ್ಧ ಉಕ್ರೇನಿಯನ್ ಅಧ್ಯಕ್ಷರು ಎಚ್ಚರಿಕೆ ನೀಡಿದರು. "ಅಪಘಾತದ ಬಗ್ಗೆ ಊಹಾಪೋಹ ಮತ್ತು ದೃಢೀಕರಿಸದ ಸಿದ್ಧಾಂತಗಳನ್ನು ಮುಂದಿಡದಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆಎಂದು ವೊಲೊಡಿಮೈರ್ ಜೆಲೆನ್ಸ್ಕ್ಕಿ ಅವರು ಒಮಾನ್ ತಮ್ಮ ರಜಾದಿನವನ್ನು ಕಡಿತಗೊಳಿಸಿ ಉಕ್ರೇನ್ ಗೆ ವಾಪಸಾಗುವ ಮುನ್ನ ಫೇಸ್ ಬುಕ್ ಸಂದೇಶದಲ್ಲಿ ಬರೆದರು.

ಮಧ್ಯೆ, ವಿಮಾನಯಾನ ತಜ್ಞ ಸ್ಟೀಫನ್ ರೈಟ್ ಅವರು ಇರಾನಿನ ಕ್ಷಿಪಣಿಯಿಂದ ವಿಮಾನವನ್ನು ಉರುಳಿಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಸಾಕ್ಷ್ಯಗಳು "ಭಾರೀ ಅನಾಹುತಸಂಭವಿಸಿದ್ದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ತತ್ ಕ್ಷಣಕ್ಕೆ ಅದನ್ನು ಹೊಡೆದುರುಳಿಸಿರಬಹುದು ಎಂಬ ಊಹಾಪೋಹಗಳಿವೆ. ಆದರೆ ಅದು ನಿಜವಾಗಿರಲಾರದು ಎಂದು ನಾನು ಭಾವಿಸುತ್ತೇನೆಎಂದು ಅವರು ನುಡಿದರು. ’ದುರಂತ ಸಂಭವಿಸಿದ ವೇಳೆಯಲ್ಲಿ ವಿಮಾನ ಮೇಲಕ್ಕೆ ಏರುತ್ತಿತ್ತು. ತನ್ನ ದಿಕ್ಕಿನತ್ತ ತಿರುಗಿತ್ತು. ಅಷ್ಟರಲ್ಲಿ ಏನೋ ಭಾರೀ ಅನಾಹುತ ಸಂಭವಿಸಿದೆ. ಅದು ಬಾಂಬ್ ಆಗಿರಬಹುದು ಅಥವಾ ವಿಮಾನದೊಳಗೆಯೇ ಸಂಭವಿಸಿದ ಏನೋ ದುರ್ಘಟನೆ ಆಗಿರಬಹುದುಎಂದು ಫಿನ್ಲೆಂಡಿನ ಟ್ಯಾಂಪೆರೆ ವಿಶ್ವವಿದ್ಯಾಲಯದ ವಿಮಾನ ವ್ಯವಸ್ಥೆಗಳ ಪ್ರಾಧ್ಯಾಪಕ ರೈಟ್ ಹೇಳಿದರು.

ವಿಮಾನವು ಹೊಚ್ಚ ಹೊಸದಾಗಿತ್ತು ಮತ್ತು ಇತ್ತೀಚಿನ ಎರಡು ಅಪಘಾತಗಳೊಂದಿಗೆ ಸಂಬಂಧ ಹೊಂದಿದ್ದ ಆಂಟಿ-ಸ್ಟಾಲ್ ವ್ಯವಸ್ಥೆಗಳೊಂದಿಗೆ ಅಳವಡಿಸಲಾಗಿರುವ ಮ್ಯಾಕ್ಸ್ ಮಾದರಿಗಳಲ್ಲಿ ಒಂದು ಆಗಿರಲಿಲ್ಲ ಎಂದು ಅವರು ನುಡಿದರು.

ಅಮೆರಿಕ
-ಇರಾನ್ ಉದ್ವಿಗ್ನತೆ:  ಅಮೆರಿಕವು ಇತ್ತೀಚೆಗೆ ನಡೆಸಿದ ಡ್ರೋಣ್ ದಾಳಿಯಲ್ಲಿ ಇಸ್ಲಾಮಿಕ್ ಗಣರಾಜ್ಯದ ಉನ್ನತ ಮಿಲಿಟರಿ ಕಮಾಂಡರ್ಗಳಲ್ಲಿ ಒಬ್ಬರಾದ ಸೊಲೈಮಾನಿ ಹತ್ಯೆ ಮಾಡಿದ್ದಕ್ಕೆ ಪ್ರ್ರತೀಕಾರವಾಗಿ ಅಮೆರಿಕದ ಇರಾಕ್ ನೆಲೆಗಳ  ಕ್ಷಿಪಣಿಗಳನ್ನು ಹಾರಿಸಿರುವುದಾಗಿ ಇರಾನ್ ಪ್ರಕಟಿಸಿದ ಸ್ವಲ್ಪ ಸಮಯದ ನಂತರ ವಿಮಾನ ದುರಂತ ಸಂಭವಿಸಿದೆ.

ಕ್ಷಿಪಣಿ
ದಾಳಿಯ ನಂತರ, ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಇರಾಕಿನಲ್ಲಿ ಅಮೆರಿಕ ನೋಂದಾಯಿತ ವಿಮಾನಗಳನ್ನು ಇರಾಕ್, ಇರಾನ್ ಮತ್ತು ಕೊಲ್ಲಿಯ ಮೇಲೆ ಆಕಾಶ ಮಾರ್ಗವಾಗಿ ಹಾರಿಸುವುದನ್ನು ನಿಷೇಧಿಸಿರುವುದಾಗಿ ಹೇಳಿದೆ.

"ಇರಾಕ್, ಇರಾನ್ ಮತ್ತು ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ನೀರಿನಲ್ಲಿ ಅಮೆರಿಕದ ನಾಗರಿಕ ವಿಮಾನಯಾನ ನಿರ್ವಾಹಕರು ವಾಯುಪ್ರದೇಶದಲ್ಲಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಿ, ವೈಮಾನಿಕ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಎಫ್ಎಎ ಹೇಳಿಕೆ ತಿಳಿಸಿದೆ.

ಮಧ್ಯಪ್ರಾಚ್ಯದಲ್ಲಿ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಎಫ್ಎಎ ಮುಂದುವರೆಸುತ್ತದೆಎಂದೂ ಹೇಳಿಕೆ ತಿಳಿಸಿದೆ.

ಅಮೆರಿಕವು
ಡ್ರೋಣ್  ದಾಳಿಯ ಮೂಲಕ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ ಖಡ್ಸ್ ಪಡೆಗಳ   ಮುಖ್ಯಸ್ಥ  ಖಾಸಿಂ ಸೊಲೈಮಾನಿ ಅವರನ್ನು ಕೊಂದ ನಂತರ ಇರಾನ್ ಇರಾಕಿನ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿತು. ಇಸ್ಲಾಮಿಕ್ ಗಣರಾಜ್ಯವನ್ನು ಬೆಚ್ಚಿ ಬೀಳಿಸಿದ ಹತ್ಯೆಯ ನಂತರ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖೊಮೇನಿ ಅವರುಸೊಲೈಮಾನಿ ಹತ್ಯೆಗೆ "ಅತ್ಯುಗ್ರ ಪ್ರತೀಕಾರದಶಪಥ ಕೈಗೊಂಡಿದ್ದರು.

ಸೊಲೈಮಾನಿಯ ಹತ್ಯೆಯು ಇರಾನ್ ಮತ್ತು ಅಮೆರಿಕ ನಡುವಣ ವಾಗ್ಯುದ್ಧಕ್ಕೆ ಮೂಲವಾಗಿದ್ದು, ಇರಾನಿ ಪ್ರತೀಕಾರದ ಶಪಥಕ್ಕೆ ಉತ್ತರ ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಅಮೆರಿಕದ ಆಸ್ತಿ ಸಿಬ್ಬಂದಿ ಮೇಲೆ ದಾಳಿ ನಡೆದರೆ, ಇರಾನಿನ ೫೨ ಸಾಂಸ್ಕೃತಿಕ ಕೇಂದ್ರಗಳನ್ನು ಅತ್ಯಾಧುನಿಕ ಶಸ್ತ್ರದ ಮೂಲಕ ಹೊಸಕಿ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು.

ಟೆಹರಾನಿನಲ್ಲಿ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರುಇರಾನಿಗೆ ಎಂದೂ ಬೆದರಿಕೆ ಹಾಕಬೇಡಿಎಂದು ಸೋಮವಾರ ಎಚ್ಚರಿಸಿದ್ದರು.

No comments:

Advertisement