My Blog List

Thursday, January 16, 2020

ನಿರ್ಭಯಾ ಪ್ರಕರಣ: ಮರಣದಂಡನೆ ತೂಗುಯ್ಯಾಲೆ

ನಿರ್ಭಯಾ ಪ್ರಕರಣ: ಮರಣದಂಡನೆ ತೂಗುಯ್ಯಾಲೆ
ನವದೆಹಲಿ: ಮರಣದಂಡನೆಗೆ ಗುರಿಯಾದ ಅಪರಾಧಿಯ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾದ ೧೪ ದಿನಗಳ ಬಳಿಕ ಮಾತ್ರವೇ ಮರಣದ ಜಾರಿ ಸಾಧ್ಯ ಎಂಬ ನಿಯಮಾವಳಿ ಹಿನ್ನೆಲೆಯಲ್ಲಿ ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜನವರಿ ೨೨ರಂದು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ  2020 ಜನವರಿ 16ರ ಗುರುವಾರ ತೀರ್ಪು ನೀಡಿತು.

ಮಧ್ಯೆ ಅಪರಾಧಿಗಳ ಗಲ್ಲು ಜಾರಿ ವಿಳಂಬಕ್ಕೆ ದೆಹಲಿಯ ಆಪ್ ಸರ್ಕಾರವೇ ಹೊಣೆ ಎಂಬುದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಟೀಕಿಸಿತು.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಈಗಾಗಲೇ ನಿಗದಿಯಾಗಿರುವಂತೆ ಜನವರಿ ೨೨ರಂದು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ದೆಹಲಿಯ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಗುರುವಾರ ಆದೇಶ ನೀಡಿದರು. ಇದೇ ವೇಳೆಗೆ ತಿಹಾರ್ ಸೆರೆಮನೆ ಅಧಿಕಾರಿಗಳು ಕೂಡಾ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಉಲ್ಲೇಖಿಸಿ ಗಲ್ಲು ಜಾರಿಯನ್ನು ಮುಂದೂಡುವಂತೆ ಮತ್ತು ನೂತನ ದಿನಾಂಕ ನಿಗದಿ ಪಡಿಸುವಂತೆ ದೆಹಲಿ ಸರ್ಕಾರವನ್ನು ಕೋರಿತು.

ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ತಾನು ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನ್ನು ತಿಳಿಸಿ ಸಲ್ಲಿಸಿದ ಅರ್ಜಿಯನ್ನು ಉಲ್ಲೇಖಿಸಿ ಆದೇಶ ನೀಡಿದ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರು ನಿಗದಿತ ಮರಣದಂಡನೆ ಕುರಿತ ವಸ್ತುಸ್ಥಿತಿ ವರದಿಯನ್ನು ಶುಕ್ರವಾರದ ಒಳಗಾಗಿ ಸಲ್ಲಿಸುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಷಯದ ಬಗ್ಗೆ ದೆಹಲಿ ಸರ್ಕಾರಕ್ಕೆ ತಾವು ಪತ್ರ ಬರೆದಿರುವುದಾಗಿ ಸೆರೆಮನೆ ಅಧಿಕಾರಿಗಳು ತಿಳಿಸಿದ ಬಳಿಕ ನ್ಯಾಯಾಧೀಶರು ನಿರ್ದೇಶನ ನೀಡಿದರು.

ಅಪರಾಧಿ ಪರ ವಕೀಲರು ಸುಮಾರು ಒಂದು ಗಂಟೆ ಕಾಲ ವಾದ ಮಂಡಿಸಿದ ಬಳಿಕ ನ್ಯಾಯಾಧೀಶರುಮರಣದಂಡನೆಗೆ ಗುರಿಯಾಗಿರುವ ಅಪರಾಧಿಯ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾದ ಬಳಿಕ ಆತನನ್ನು ಗಲ್ಲಿಗೇ ಏರಿಸಲು ೧೪ ದಿನಗಳ ಅಂತರ ಇರಬೇಕು ಎಂಬುದಾಗಿ ಕಾನೂನು ಸ್ಪಷ್ಟವಾಗಿ ಹೇಳಿದೆಎಂದು ಹೇಳಿ ವಿಚಾರಣೆಯನ್ನು ಮುಂದೂಡಿದರು.

ಜನವರಿ ೨೨ರಂದು ಬೆಳಗ್ಗೆ ಗಂಟೆಗೆ ತನ್ನನ್ನು ಗಲ್ಲಿಗೆ ಏರಿಸುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ಆದೇಶ ನೀಡಿದ್ದ ವಿಚಾರಣಾ ನ್ಯಾಯಾಲಯಕ್ಕೆ ಮುಖೇಶ್ ಸಿಂಗ್ ಸದರಿ ಆದೇಶಕ್ಕೆ ತಡೆ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದ.

ಮುಖೇಶ್ ಸಿಂಗ್ನನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ ವಕೀಲರಾದ ವೃಂದಾ ಗ್ರೋವರ್ ಅವರುಕ್ಷಮಾದಾನ ಕೋರಿಕೆ ಅರ್ಜಿ ಬಂದಿರುವುದನ್ನು ಮರಣದಂಡನೆ ವಿಧಿಸಿರುವ ನ್ಯಾಯಾಲಯಕ್ಕೆ ವರದಿ ಮಾಡದೇ ಇರುವ ಮೂಲಕ ತಿಹಾರ್ ಸೆರೆಮನೆ ಅಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿದ್ದಾರೆಎಂದು ನ್ಯಾಯಾಧೀಶರಿಗೆ ತಿಳಿಸಿದರು.

ತಿಹಾರ್ ಸೆರೆಮನೆ ಅಧಿಕಾರಿಗಳು ತಮಗೆ ಬೇಕಾಗಿದ್ದ ಕೆಲವು ನಿರ್ದಿಷ್ಟ ದಾಖಲೆಗಳನ್ನು ನೋಡಲೂ ಅವಕಾಶ ನೀಡಿಲ್ಲ. ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಲು ದಾಖಲೆಗಳ ಅಗತ್ಯವಿತ್ತು. ಸೆರೆಮನೆ ಅಧಿಕಾರಿಗಳು ತನ್ನ ಕೋರಿಕೆಗೆ ಸ್ಪಂದಿಸಲಿಲ್ಲ ಜೊತೆಗೆ ದಾಖಲೆಗಳು ಇಲ್ಲದ ನೆಪದಲ್ಲಿ ತನ್ನ ಅರ್ಜಿಗೆ ಸಹಿ ಹಾಕಲೂ ಒಪ್ಪಲಿಲ್ಲಎಂದು ಗ್ರೋವರ್ ನುಡಿದರು.

ನಾಡಿನ ಕಾನೂನಿನ ಬಗ್ಗೆ ಗೌರವವೇ ಇಲ್ಲದ ತೋಳಗಳ ಮಧ್ಯೆ ಸಿಲುಕಿಕೊಂಡ ಪರಿಸ್ಥಿತಿ ನನ್ನದಾಗಿತ್ತುಎಂದು ವೃಂದಾ ಹೇಳಿದರು.

ಜಾವಡೇಕರ್ ಟೀಕೆ: ಮಧ್ಯೆ, ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ೨೦೧೦೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿ ವಿಳಂಬಗೊಳ್ಳಲು ದೆಹಲಿಯ ಆಮ್ ಆದ್ಮಿ ಪಕ್ಷದ (ಆಪ್) ಸರ್ಕಾರವೇ ಕಾರಣ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು  ಆಪಾದಿಸಿದರು.

ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ಇದೀಗ ವಿಳಂಬವಾಗುತ್ತಿರುವುದಕ್ಕೆ ದೆಹಲಿ ಸರ್ಕಾರದ ಬೇಜವಾಬ್ದಾರಿತನ ಕಾರಣ. ನ್ಯಾಯದ ವಿಳಂಬಕ್ಕೆ ಆಮ್ ಆದ್ಮಿ ಪಕ್ಷವೇ ಹೊಣೆ. ಕಳೆದ ಎರಡೂವರೆ ವರ್ಷಗಳ ಕಾಲ ದೆಹಲಿ ಸರ್ಕಾರ ಅಪರಾಧಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಯಾಕೆ ನೋಟಿಸ್ ನೀಡಿಲ್ಲ ಎಂದು ಜಾವಡೇಕರ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

೨೦೧೭ರಲ್ಲಿ ತಮಗೆ ವಿಧಿಸಲಾದ ಮರಣದಂಡನೆ ವಿರುದ್ಧ ಅಪರಾಧಿಗಳು ಸಲ್ಲಿಸಿದ್ದ ಮೇಲನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಬಳಿಕ ಅವರಿಗೆ ಉಳಿದಿರುವ ಕಾನೂನುಬದ್ಧ ಪರಿಹಾರ ಬಳಸಿಕೊಳ್ಳುವಂತೆ ನೋಟಿಸ್ ಜಾರಿ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಡಳಿತವು ಬರೋಬ್ಬರಿ ಎರಡೂವರೆ ವರ್ಷಗಳಿಗಿಂತಲೂ ಹೆಚ್ಚು ಕಾಲ ತೆಗೆದುಕೊಂಡಿತು ಎಂದು ಜಾವಡೇಕರ್ ಟೀಕಿಸಿದರು.

ಸುಪ್ರೀಂಕೋರ್ಟ್ ಆದೇಶ ಹೊರಬಿದ್ದ ವಾರದ ಒಳಗಾಗಿ ಆಪ್ ಸರ್ಕಾರವು ತಪ್ಪಿತಸ್ಥರಿಗೆ ನೋಟಿಸ್ಗಳನ್ನು ಜಾರಿ ಮಾಡಿದ್ದಿದ್ದರೆ ಅವರನ್ನು ಈವೇಳೆಗೆ ಗಲ್ಲಿಗೆ ಏರಿಸಿ ಆಗುತ್ತಿತ್ತು ಮತ್ತು ರಾಷ್ಟ್ರಕ್ಕೆ ನ್ಯಾಯ ಸಿಗುತ್ತಿತ್ತು ಎಂದು ಹಿರಿಯ ಬಿಜೆಪಿ ನಾಯಕ ನುಡಿದರು.

ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ಸಲ್ಲಿಸಿದ ಕ್ಷಮಾದಾನ ಆರ್ಜಿಯನ್ನು ತಿರಸ್ಕರಿಸುವಂತೆ ದೆಹಲಿ ಸರ್ಕಾರವು ಬುಧವಾರ ಶಿಫಾರಸು ಮಾಡಿ, ಕಡತವನ್ನು ಲೆಫ್ಟಿನೆಂಟ್ ಗವರ್ನರ್ಗೆಮಿಂಚಿನ ವೇಗದಲ್ಲಿ ಕಳುಹಿಸಿದೆ ಎಂದು ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಬುಧವಾರ ಹೇಳಿದ್ದರು.

ಇದೇ ವೇಳೆಗೆ ಮುಖೇಶ್ ಸಿಂಗ್ ಸಲ್ಲಿಸಿದ ಕ್ಷಮಾದಾನ ಕೋರಿಕೆ ಅರ್ಜಿ ಇತ್ಯರ್ಥವಾಗದ ವಿನಃ ಜನವರಿ ೨೨ಕ್ಕೆ ನಿಗದಿಯಾಗಿರುವ ಶಿಕ್ಷಿತರ ಮರಣದಂಡನೆಯನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಎಂದೂ ದೆಹಲಿ ಸರ್ಕಾರ ಬುಧವಾರ ವಿಚಾರಣೆ ವೇಳೆಯಲ್ಲಿ ದೆಹಲಿ ಹೈಕೋರ್ಟಿಗೆ ತಿಳಿಸಿತ್ತು.

ನಾಲ್ವರು ಅಪರಾಧಿಗಳನ್ನು ಜನವರಿ ೨೨ರ ಬೆಳಗ್ಗೆ ೭ಗಂಟೆಗೆ ಗಲ್ಲಿಗೇರಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಒಬ್ಬ ಅಪರಾಧಿ ಈಗ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿರುವುದು. ಬಗ್ಗೆ ದೆಹಲಿ ಸರ್ಕಾರವೇ ಬುಧವಾರ ಹೈಕೋರ್ಟಿಗೆ ತಿಳಿಸಿದೆ. ಆದರೆ ಹೈಕೋರ್ಟ್ ಡೆತ್ ವಾರಂಟ್ ಗೆ ತಡೆ ನೀಡಲು ನಿರಾಕರಿಸಿದ್ದು, ವಿಚಾರಣಾ ಕೋರ್ಟ್ ಮುಂದೆ ಹಾಜರಾಗಲು ತಿಳಿಸಿದೆ ಎಂದು ಜಾವಡೇಕರ್ ಹೇಳಿದರು.

ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಕಳೆದ ವಾರ ಪ್ರಕರಣದ ಅಪರಾಧಿಗಳಾದ ವಿನಯ್ ಶರ್ಮಾ, ಮುಕೇಶ್ ಕುಮಾರ್, ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಗುಪ್ತ ಅವರನ್ನು ೨೦೨೦ ಜನವರಿ ೨೨ರ ಬೆಳಗ್ಗೆ ೭ಗಂಟೆಗೆ ಗಲ್ಲಿಗೇರಿಸುವಂತೆ ಜನವರಿ ೦೭ರಂದು ಡೆತ್ ವಾರಂಟ್ ಹೊರಡಿಸಿತ್ತು.

No comments:

Advertisement