Saturday, January 18, 2020

’ಡಾ. ಬಾಂಬ್’ ಅನ್ಸಾರಿ ಉ.ಪ್ರ.ದಲ್ಲಿ ಬಂಧನ

'ಡಾ. ಬಾಂಬ್ಅನ್ಸಾರಿ .ಪ್ರ.ದಲ್ಲಿ ಬಂಧನ
ಲಕ್ನೋ: ಪರೋಲ್ ಮೇಲೆ ಹೊರಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ೧೯೯೩ರ ಮುಂಬೈ ಸರಣಿ ಬಾಂಬ್ ಸ್ಫೋಟ  ಪ್ರಕರಣದ ಅಪರಾಧಿ ಜಲೀಸ್ ಅನ್ಸಾರಿ ಅಲಿಯಾಸ್ಬಾಂಬ್ ಡಾಕ್ಟರ್ನನ್ನು 2020 ಜನವರಿ  17ರ ಶುಕ್ರವಾರ  ಕಾನ್ಪುರದಲ್ಲಿ ಬಂಧಿಸಲಾಯಿತು.
ಡಾಕ್ಟರ್ ಬಾಂಬ್ಕುಖ್ಯಾತಿಯ ಅನ್ಸಾರಿ ಮಸೀದಿಯಿಂದ ಹೊರಟು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವೇಳೆ ಉತ್ತರಪ್ರದೇಶದ ವಿಶೇಷ ಪೊಲೀಸ್ ತಂಡವು ಬಂಧಿಸಿರುವುದಾಗಿ ವರದಿ ತಿಳಿಸಿತು.

ವೈದ್ಯನಾಗಿದ್ದ ಜಲೀಸ್ ಅನ್ಸಾರಿ ಬಾಂಬ್ ತಯಾರಿಕಾ ತಜ್ಞನಾಗಿದ್ದ. ಹಿನ್ನೆಲೆಯಲ್ಲಿ ಅನ್ಸಾರಿಡಾ. ಬಾಂಬ್ಎಂದೇ ಕುಖ್ಯಾತಿ ಪಡೆದಿದ್ದ. ೨೧ ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಅನ್ಸಾರಿ ಮುಂಬೈಯ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ.

ಏತನ್ಮಧ್ಯೆ  2020 ಜನವರಿ  16ರ ಗುರುವಾರ ಬೆಳಗ್ಗೆಯಿಂದ ಅನ್ಸಾರಿ ಮನೆಯಿಂದ ನಿಗೂಢವಾಗಿ ಕಣ್ಮರೆಯಾಗಿರುವುದಾಗಿ ಕುಟುಂಬದ ಸದಸ್ಯರು ಮುಂಬೈನ ಅಗ್ರಿಪಾಡಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಜಲೀಸ್ ಅನ್ಸಾರಿ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ದೇಶಾದ್ಯಂತ ಸಂಭವಿಸಿದ ೫೦ ಬಾಂಬ್ ಸ್ಫೋಟದ ಪ್ರಕರಣಗಳು ಅನ್ಸಾರಿ ವಿರುದ್ಧ ದಾಖಲಾಗಿದ್ದವು ಎಂದು ವರದಿ ವಿವರಿಸಿತ್ತು.

ಅನ್ಸಾರಿಯನ್ನು ಕಾನ್ಪುರದಲ್ಲಿ ಬಂಧಿಸಿರುವುದನ್ನು ದೃಢ ಪಡಿಸಿದ ಡೆಪ್ಯುಟಿ ಕಮೀಷನರ್ ಆಫ್ ಪೊಲೀಸ್ (ಎಟಿಎಸ್) ವಿನಯ್ ರಾಥೋಡ್,. ಶೀಘ್ರದಲ್ಲೇ ಆತನನ್ನು ಮುಂಬೈಗೆ ಕರೆತರಲಾಗುವುದು ಎಂದು ಹೇಳಿದರು.

2020 ಜನವರಿ 17ರ ಶುಕ್ರವಾರ ಮಧ್ಯಾಹ್ನ ಗಂಟೆ ಸುಮಾರಿಗೆ ಕಾನ್ಪುರದಲ್ಲಿನ ಫೆಯಿತ್ಫುಲ್ ಗಂಜ್ ಮಸೀದಿಯಿಂದ ಹೊರ ಬರುತ್ತಿದ್ದಾಗ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ ಪಡೆಯ ನೆರವಿನೊಂದಿಗೆ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ತಂಡವು ಅನ್ಸಾರಿಯನ್ನು ಬಂಧಿಸಿತು ಎಂದು ಅಧಿಕಾರಿಗಳು ಹೇಳಿದರು.

ತಂಡವು ಅನ್ಸಾರಿಯಿಂದ ೪೭,೭೮೦ ರೂಪಾಯಿ ನಗದು ಹಣ, ಆತನ ಪಾನ್ ಮತ್ತು ಅಧಾರ್ ಕಾರ್ಡುಗಳನ್ನೂ ವಶಪಡಿಸಿಕೊಂಡಿದೆ. ಆತ ನೇಪಾಳಕ್ಕೆ ಪರಾರಿಯಾಗುವ ಹಂಚಿಕೆ ಹೂಡಿದ್ದ ಎಂದು ಅಧಿಕಾರಿಗಳು ತಿಳಿಸಿದರು.

No comments:

Advertisement