My Blog List

Friday, January 24, 2020

ಪಾಕಿಸ್ತಾನದ ಇಬ್ಬಗೆ ನೀತಿ ಜಗತ್ತಿಗೇ ಗೊತ್ತಿದೆ: ಇಮ್ರಾನ್ ಖಾನ್‌ಗೆ ಭಾರತದ ಎದಿರೇಟು

ಪಾಕಿಸ್ತಾನದ ಇಬ್ಬಗೆ ನೀತಿ ಜಗತ್ತಿಗೇ ಗೊತ್ತಿದೆ:  ಇಮ್ರಾನ್ ಖಾನ್ಗೆ ಭಾರತದ ಎದಿರೇಟು
ನವದೆಹಲಿ: ಕಾಶ್ಮೀರದಲ್ಲಿ ಭಯಭೀತ ಸ್ಥಿತಿ ನಿರ್ಮಿಸಲು ಯತ್ನಿಸುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಭಾರತವು 2020 ಜನವರಿ 23ರ ಗುರುವಾರ ಮತ್ತೊಮ್ಮೆ ಕಟುವಾಗಿ ಟೀಕಿಸಿಪಾಕಿಸ್ತಾನದ ಇಬ್ಬಗೆ ನೀತಿ ಇಡೀ ಜಗತ್ತಿಗೇ ಗೊತ್ತಿದೆಎಂದು ಹೇಳಿತು.

ಕಾಶ್ಮೀರದಲ್ಲಿ ಭಯಭೀತ ಸ್ಥಿತಿ ನಿರ್ಮಿಸಲು ಪಾಕಿಸ್ತಾನ ನಡೆಸಿದ ಯತ್ನ ವಿಫಲಗೊಂಡಿದೆ. ಅದರ ಇಬ್ಬಗೆ ನೀತಿಯನ್ನು ಜಾಗತಿಕ ಸಮುದಾಯ ಅರ್ಥ ಮಾಡಿಕೊಂಡಿದೆಎಂದು ವಿದೇಶಾಂಗ ವ್ಯವಹಾರಗಳ (ಎಂಇಎ) ವಕ್ತಾರ ರವೀಶ್ ಕುಮಾರ್ ಇಲ್ಲಿ ಹೇಳಿದರು.

ಅಣ್ವಸ್ತ್ರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ನಡುವಣ ಬಲಾಬಲ ಪರೀಕ್ಷೆಯನ್ನು ತಡೆಯಲು ಜಾಗತಿಕ ಹಸ್ತಕ್ಷೇಪದ ಅಗತ್ಯವಿದೆ ಎಂಬ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಕರೆಯನ್ನು ತಳ್ಳಿಹಾಕಿದ ಕುಮಾರ್ತನ್ನ ನೆಲದಲ್ಲಿನ ಭಯೋತ್ಪಾದಕ ಗುಂಪುಗಳ ವಿರುದ್ಧ ಪರಿಶೀಲನಾಯೋಗ್ಯ ಕ್ರಮ ಕೈಗೊಳ್ಳುವುದಕ್ಕೆ ಬದಲಾಗಿ ಪಾಕಿಸ್ತಾನವು ಜಾಗತಿಕ ಸಮುದಾಯದ ಗಮನವನ್ನು  ಬೇರೆಡೆಗೆ ಸೆಳೆಯುವ ಯತ್ನ ಮಾಡುತ್ತಿದೆ ಎಂದು ಟೀಕಿಸಿದರು.
ಸ್ವಿಜರ್ಲೆಂಡಿನ ದಾವೋಸ್ ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಇಕನಾಮಿಕ್ ಫೋರಂ) ಸಮಾವೇಶದಲ್ಲಿ ಇಮ್ರಾನ್ ಖಾನ್ ಹೇಳಿದ್ದರಲ್ಲಿ ಹೊಸದೇನೂ ಇಲ್ಲ. ಅವರ ಹೇಳಿಕೆಯು ಅವರು ಭ್ರಮನಿರಸನಗೊಂಡಿದ್ದಾರೆ ಮತ್ತು ತ್ವರಿತವಾಗಿ ಭರವಸೆ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಜಾಗತಿಕ ಸಮುದಾಯವು ಈಗ ಅವರ ಇಬ್ಬಗೆ ನೀತಿಯನ್ನು ಸ್ಪಷ್ಟವಾಗಿ ನೋಡಬಹುದು. ತಾವು ಭಯೋತ್ಪಾದನೆಯ ಬಲಿಪಶುಗಳು ಎಂಬುದಾಗಿ ಒಂದಡೆಯಲ್ಲಿ ನಟಿಸುವ ಅವರು ಇನ್ನೊಂದೆಡೆಯಲ್ಲಿ ಭಾರತ ಮತ್ತು ಇತರ ರಾಷ್ಟ್ರಗಳಲ್ಲಿ ಭಯೋತ್ಪಾದನೆ ಹರಡುವ ಉಗ್ರಗಾಮಿಗಳನ್ನು ಹುಟ್ಟು ಹಾಕುತ್ತಿದ್ದಾರೆಎಂದು ರವೀಶ್ ಕುಮಾರ್  ಹೇಳಿದರು.        
                      
ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಕೊಡುಗೆಬಗ್ಗೆ ಪ್ರಸ್ತಾಪಿಸಿದ ಕುಮಾರ್, ’ಕಾಶ್ಮೀರ ವಿಷಯದಲ್ಲಿ ಮೂರನೇ ವ್ಯಕ್ತಿಗಳ ಮಧ್ಯಸ್ಥಿಕೆ ವಿಚಾರದಲ್ಲಿ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಯೂ ಇಲ್ಲ. ವಿಷಯದಲ್ಲಿ ಮೂರನೇ ವ್ಯಕ್ತಿಗೆ ಯಾವುದೇ ಪಾತ್ರವೂ ಇಲ್ಲ ಎಂಬುದನ್ನು ನಾನು ಪುನರುಚ್ಚರಿಸುತ್ತೇನೆಎಂದು ಹೇಳಿದರು.

ಆದರೆ ಉಭಯ ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಮಾತುಕತೆಗಳಿಗೆ ಸೂಕ್ತವಾದ ಪರಿಸರ ಸೃಷ್ಟಿಸುವ ಹೊಣೆಗಾರಿಕೆ ಪಾಕಿಸ್ತಾನದ ಮೇಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸ್ಪಷ್ಟ ಪಡಿಸಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ವಿಷಯಗಳಿದ್ದರೆ ಅವುಗಳನ್ನು ಚರ್ಚಿಸಬೇಕಾದ ಅಗತ್ಯವಿದೆ. ಅದು ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಯ ವಿಧಿಗಳ ಅಡಿಯಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ನಡೆಯಬೇಕು. ಆದರೆ ದ್ವಿಪಕ್ಷೀಯ ಮಾತುಕತೆಗೆ ಸೂಕ್ತವಾದ ಭಯೋತ್ಪಾದನೆ, ದ್ವೇಷ ಮತ್ತು ಹಿಂಸಾಚಾರ ಮುಕ್ತವಾದ ಪರಿಸರ ಸೃಷ್ಟಿಸುವ ಹೊಣೆಗಾರಿಕೆ ಪಾಕಿಸ್ತಾನದ ಮೇಲಿದೆಎಂದು ರವೀಶ್ ಕುಮಾರ್ ನುಡಿದರು.

ಇದಕ್ಕೆ ಮುನ್ನ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ವಿಷಯವನ್ನು ಎತ್ತುತ್ತಿರುವುದಕ್ಕಾಗಿ ವಿಶ್ವಸಂಸ್ಥೆಯಲ್ಲಿನ ಭಾರತದ ಉಪ ಕಾಯಂ ಪ್ರತಿನಿಧಿ ನಾಗರಾಜ ನಾಯ್ಡು ಅವರು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದರು.

ಮೀನು ಮತ್ತೆ ಮತ್ತೆ ನೀರಿಗೆ ಜಿಗಿಯುವಂತೆ,  ಒಬ್ಬ ಪ್ರತಿನಿಧಿ ಮತ್ತೆ ದ್ವೇಷ ಭಾಷಣಕ್ಕೆ ಇಳಿದಿದ್ದಾರೆ. ಪ್ರತಿಬಾರಿಯೂ ಪ್ರತಿನಿಧಿ ಮಾತನಾಡುತ್ತಾರೆ, ವಿಷ ಮತ್ತು ತಪ್ಪು ಕಲ್ಪನೆಗಳನ್ನು ಅವರ ಮಾತುಗಳು ಹರಡುತ್ತವೆಎಂದು ನಾಯ್ಡು ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿಸಂಸ್ಥೆಯ ಕಾರ್ಯದ ಬಗ್ಗೆ ಮಹಾಕಾರ್ಯದರ್ಶಿಗೆ ವರದಿಕುರಿತ ಭಾಷಣ ಮಾಡುತ್ತಾ ಹೇಳಿದ್ದರು.
ಹಿಂಸಾತ್ಮಕ ಟೀಕೆಗಳಿಗೆ ಕೊನೆ ಹಾಡುವ ಬದಲಿಗೆ ಪ್ರತಿನಿಧಿ ಅಂತಾರಾಷ್ಟ್ರೀಯ ಸಮುದಾಯವನ್ನು ಸತ್ಯಕ್ಕೆ ದೂರವಾದ ಸುಳ್ಳುಗಳ ಲೋಕಕ್ಕೆ ಒಯ್ಯುವ ಕೆಲಸ ಮಾಡುತ್ತಾರೆಎಂದು ನಾಯ್ಡು ಚಾಟಿ ಬೀಸಿದ್ದರು.

ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನಿ ಮಿಷನ್ ಕೌನ್ಸೆಲರ್ ಸಾದ್ ಅಹ್ಮದ್ ವಾರಿಚ್ ಅರು ವಿಶ್ವಸಂಸ್ಥೆ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ, ದಶಕಗಳಷ್ಟು ಹಳೆಯದಾದ ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ತನ್ನ ಹೊಣೆಗಾರಿಕೆ ನಿಭಾಯಿಸಲು ವಿಶ್ವಸಂಸ್ಥೆ ವಿಫಲವಾಗಿರುವುದನ್ನು ಇಲ್ಲಿನ ಪರಿಸ್ಥಿತಿ ಬಿಂಬಿಸಿದೆ ಎಂದು ಹೇಳಿದ ಬಳಿಕ ನಾಗರಾಜ ನಾಯ್ಡು ಟೀಕೆ ಮಾಡಿದ್ದರು.

No comments:

Advertisement