Friday, January 24, 2020

ಸೌದಿ ಅರೇಬಿಯಾ: ಕೇರಳ ದಾದಿಗೆ ಕೊರೋನಾವೈರಸ್

ಸೌದಿ ಅರೇಬಿಯಾ: ಕೇರಳ ದಾದಿಗೆ ಕೊರೋನಾವೈರಸ್
ರಾಜ್ಯದ ಇತರ ೩೦ ದಾದಿಯರಿಗೆ  ’ಐಸೋಲೇಷನ್
ತಿರುವಂತಪುರಂ: ಚೀನಾದಲ್ಲಿ ೧೭ ಮಂದಿಯನ್ನು ಬಲಿತೆಗೆದುಕೊಂಡಿರುವಚೀನಾ ವೈರಸ್ಎಂದು ಕರೆಯಲಾಗುತ್ತಿರುವ  ನೂತನ  ’ಕೊರೋನಾವೈರಸ್ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಕೇರಳದ ದಾದಿಯೊಬ್ಬರಿಗೆ ತಗುಲಿರುವುದಾಗಿ ವರದಿಗಳು ತಿಳಿಸಿದ್ದು, ದಾದಿಗೆ ತಜ್ಞ ಚಿಕಿತ್ಸೆ ಒದಗಿಸುವ ಬಗ್ಗೆ ಕೊಲ್ಲಿ ರಾಷ್ಟ್ರವನ್ನು ಸಂಪರ್ಕಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು  2020 ಜನವರಿ 23ರ ಬುಧವಾರ ಒತ್ತಾಯಿಸಿದರು.

ಜೈಶಂಕರ್ ಅವರಿಗೆ ಬರೆಯಲಾಗಿರುವ ಪತ್ರದಲ್ಲಿ ವಿಜಯನ್ ಅವರು ಮನವಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಹೇಳಿಕೆ ತಿಳಿಸಿತು.

ಸೌದಿ ಅರೇಬಿಯಾದ ಅಲ್ ಹಯಾತ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಕೊಟ್ಟಾಯಂ ಜಿಲ್ಲೆಯ ಎತ್ತುಮನ್ನೂರಿನ ದಾದಿಯೊಬ್ಬರಿಗೆ ಕೊರೋನಾವೈರಸ್ ತಗುಲಿರುವುದು ಪರೀಕ್ಷೆಗಳಿಂದ ದೃಢ ಪಟ್ಟಿದೆ ಎಂಬುದಾಗಿ ವರದಿಗಳು ತಿಳಿಸಿದವು.  ಫಿಲಿಪ್ಪೀನ್ಸ್  ದಾದಿಯೊಬ್ಬರಿಗೆ ವೈರಸ್ ತಗುಲಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಕನಿಷ್ಠ ೩೦ ದಾದಿಯರನ್ನು ಪ್ರತ್ಯೇಕಿಸಿಐಸೋಲೇಷನ್ನಲ್ಲಿ ಇರಿಸಲಾಗಿದೆ ಎಂದೂ ವರದಿ ತಿಳಿಸಿತು.

ಕೇಂದ್ರ ಸರ್ಕಾರವು ಸೌದಿ ಅರೇಬಿಯಾ ಸರ್ಕಾರದ ಜೊತೆಗೆ ಸಂಪರ್ಕ ಇಟ್ಟುಕೊಂಡು ತಜ್ಞ ಚಿಕಿತ್ಸೆ ಒದಗಿಸುವುದರ ಜೊತೆಗೆ ವೈರಸ್ನಿಂದ ರಕ್ಷಣೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕುಎಂದು ವಿಜಯನ್ ಅವರು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದರು.

ಮಧ್ಯೆ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು ತಾವು ಸೌದಿ ಅರೇಬಿಯಾದಲ್ಲಿನ ಭಾರತದ ಕಾನ್ಸುಲೇಟ್ ಜನರಲ್ ಜೊತೆಗೆ ಮಾತನಾಡಿ ದಾದಿಯರಿಗೆ ಅಗತ್ಯ ಬೆಂಬಲ ಒದಗಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.

ಬಹುತೇಕ  ಕೇರಳೀಯರೇ ಆಗಿರುವ ಸುಮಾರು ೧೦೦ ಮಂದಿ ಭಾರತೀಯ ದಾದಿಯರು ಅಲ್ ಹಯಾತ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕು ತಗುಲಿದ ದಾದಿಗೆ ಅಸೀರ್ ನ್ಯಾಷನಲ್ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಚೇತರಿಸುತ್ತಿದ್ದಾರೆಎಂದು ಮುರಳೀಧರನ್ ಟ್ವೀಟ್ ಮಾಡಿದರು. 

ಆದಾಗ್ಯೂ, ಆರೋಗ್ಯ ಇಲಾಖೆಯ ಮೂಲಗಳು ರಾಜ್ಯದ ಯಾರೇ ದಾದಿಗೆ ಸೋಂಕು ತಗಲಿರುವ ಮಾಹಿತಿ ತಮಗೆ ಬಂದಿಲ್ಲ  ಎಂದು ತಿಳಿಸಿವೆ. ಚೀನಾದಲ್ಲಿ ನೂತನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಇಲಾಖೆ ಸೂಚನೆ ನೀಡಿದೆ.   

ಚೀನಾದಿಂದ ವಾಪಸಾದವರು ಜಿಲ್ಲಾ ವೈದ್ಯಕೀಯ ಅಧಿಕಾರಿಗಳಿಗೆ ತಿಳಿಸಬೇಕು ಮತ್ತು ಅಧಿಕಾರಿಗಳು ತಿರುವನಂತಪುರಂ, ಕೋಚಿ, ಕೋಯಿಕ್ಕೋಡ್ ಮತ್ತು ಕಣ್ಣೂರು ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆಕೆ ಶೈಲಜಾ ಹೇಳಿದರು.

೧೨,೦೦೦ಕ್ಕೂ ಹೆಚ್ಚು ಪ್ರಯಾಣಿಕರ ತಪಾಸಣೆ: ಮಧ್ಯೆ, ಜನವರಿ ೨೨ರಂದು ಚೀನಾದಲ್ಲಿ ನೂತನ ಕೊರೋನಾವೈರಸ್ ಬೆಳಕಿಗೆ ಬಂದ ಬಳಿಕ ರಾಷ್ಟ್ರದಲ್ಲಿ ಈವರೆಗೆ  ೬೦ ವಿಮಾನಗಳ ಸುಮಾರು ೧೨,೮೨೮ ಪ್ರಯಾಣಿಕರನ್ನು ಸೋಂಕು ಪತ್ತೆ ಸಲುವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಯಾರಿಗೂ ಸೋಂಕು ತಗುಲಿದ್ದು ದೃಢ ಪಟ್ಟಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು.
ಪರಿಸ್ಥಿತಿ ಬಗ್ಗೆ ಗಮನಿಸಿಲಾಗುತ್ತಿದೆ ಮತ್ತು ಇಲಾಖೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುಡನ್ ಹೇಳಿದರು.  

No comments:

Advertisement