Thursday, January 9, 2020

ಭಾರತ ಬಂದ್: ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ, ಉಳಿದೆಡೆ ಶಾಂತ

ಭಾರತ ಬಂದ್: ಪಶ್ಚಿಮ ಬಂಗಾಳದಲ್ಲಿ ಹಿಂಸೆ, ಉಳಿದೆಡೆ ಶಾಂತ
ಸಹಸ್ರಾರು ಸಂಖ್ಯೆಯಲ್ಲಿ ಬೀದಿಗಿಳಿದ ಕಾರ್ಮಿಕರು
ನವದೆಹಲಿ: ಭಾರತೀಯ ಮಜ್ದೂರ್ ಸಂಘವನ್ನು ಹೊರತು ಪಡಿಸಿ, ಕೇಂದ್ರೀಯ ಕಾರ್ಮಿಕ ಸಂಘಟನೆಗಳಿಗೆ ಸೇರಿದ ೧೦ ಕಾರ್ಮಿಕ ಸಂಘಗಳು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಲು ಕರೆ ನೀಡಿದ್ದಭಾರತ ಬಂದ್’ 2020 ಜನವರಿ 08 ಬುಧವಾರ ಪಶ್ಮಿಮ ಬಂಗಾಳದಲ್ಲಿ ಹಿಂಸೆಗೆ ತಿರುಗಿದ್ದು, ಉಳಿದೆಲ್ಲ ಕಡೆ ಬಹುತೇಕ ಶಾಂತವಾಗಿತ್ತು. ಕೋಲ್ಕತ್ತದಲ್ಲಿ ಪೊಲೀಸರು ೫೫ ಮಂದಿಯನ್ನು ಬಂಧಿಸಿದರು.
ಎಡಪಕ್ಷಗಳಭಾರತ ಬಂದ್ನ್ನು ಅಗ್ಗದ ರಾಜಕೀಯ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದರು. ಆದರೆ ಎಡಪಕ್ಷಗಳು ಎತ್ತಿರುವ ವಿಷಯವನ್ನು ಬೆಂಬಲಿಸುವುದಾಗಿ ಹೇಳಿದರು.

ಸಹಸ್ರಾರು
ಮಂದಿ ಕಾರ್ಮಿಕರು ಕೆಂಪುಧ್ವಜಗಳೊಂದಿಗೆ ದೇಶದ ವಿವಿಧೆಡೆಗಳಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದು, ಬಹುತೇಕ ಬ್ಯಾಂಕ್ ವಹಿವಾಟು ಸ್ತಬ್ಧಗೊಂಡಿತ್ತು. ಪಶ್ಚಿಮ ಬಂಗಾಳದ ಹಲವಡೆಗಳಲ್ಲಿ ಘರ್ಷಣೆ, ಬೆಂಕಿ ಹಚ್ಚುವಿಕ ಮತ್ತು ಸರ್ಕಾರಿ ಆಸ್ತಿ ಹಾನಿಯ ಘಟನೆಗಳು ಘಟಿಸಿದ ಬಗ್ಗೆ ವರದಿಗಳು ಬಂದವು. ಪಶ್ಚಿಮ ಬಂಗಾಳದ ಬರ್ಸಾತ್, ಜಾಧವಪುರ, ಬೆಹಲಾ, ಹೌರಾ ಮತ್ತು ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಬಂದ್ ಬೆಂಬಲಗರು ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸಿ, ಖಾಸಗಿ ಮತ್ತು ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸಿದರು.

ಮಾಲ್ಡಾ ಜಿಲ್ಲೆಯ ಸುಜಾಪುರ ಪ್ರದೇಶದಲ್ಲಿ ಪ್ರತಿಭಟನಕಾರರು ರಸ್ತೆಯಲ್ಲಿ ಪಿಕೆಟಿಂಗ್ ನಡೆಸಿ ಟೈರುಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಸರ್ಕಾರಿ ಬಸ್ಸುಗಳು ಮತ್ತು ಪೊಲೀಸ್ ವಾಹನಗಳೂ ಸೇರಿದಂತೆ ಇತರ ವಾಹನಗಳಿಗೆ ಬೆಂಕಿ ಹಚ್ಚಿದರು.  ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದಾಗ ಪ್ರತಿಭಟನಕಾರರು ಕಲ್ಲು ತೂರಾಟ ಮತ್ತು ಕಚ್ಚಾ ಬಾಂಬ್ ಎಸೆದರು. ಅವರನ್ನು ನಿಯಂತ್ರಿಸಲು ಮೊದಲು ಲಾಠಿ ಪ್ರಹಾರ ನಡೆಸಿದ ಪೊಲೀಸರು ಬಳಿಕ ಆಶ್ರುವಾಯು ಶೆಲ್ ಮತ್ತು ರಬ್ಬರ್ ಬುಲ್ಲೆಟ್ಗಳನ್ನು ಪ್ರಯೋಗಿಸಿದರು ಎಂದು ಅಧಿಕಾರಿಗಳು ಹೇಳಿದರು.

ಸರ್ಕಾರಿ
ಬಸ್ಸುಗಳನ್ನು ತಡೆಯಲು ಹಾಗೂ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದ್ದಕ್ಕಾಗಿ ಕೋಲ್ಕತ್ತ ನಗರದ ವಿವಿಧ ಕಡೆಗಳಲ್ಲಿ ೫೫ ಮಂದಿಯನ್ನು ಪೊಲೀಸರು ಬಂಧಿಸಿದರು.

ಹಿಂಸಾಚಾರವನ್ನು
ಅನುಸರಿಸಿ, ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರೆ, ಸಿಪಿಐ (ಎಂ) ಶಾಸಕಾಂಗ ಪಕ್ಷದ ನಾಯಕ ಸುಜನ್ ಚಕ್ರಬೊರ್ತಿ ಸೇರಿದಂತೆ ಹಲವರನ್ನು ಜಾಧವಪುರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.

ತೃಣಮೂಲ
ಕಾಂಗ್ರೆಸ್ (ಟಿಎಂಸಿ) ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್) ಕಾರ್ಯಕರ್ತರು ಬರ್ದ್ವಾನ್ನಲ್ಲಿ ಪರಸ್ಪರ ಘರ್ಷಿಸಿದರು ಎಂದು ವರದಿ ತಿಳಿಸಿದೆ.

ಕೇಂದ್ರೀಯ ಕಾರ್ಮಿಕ ಸಂಘಗಳಿಗೆ (ಸಿಟಿಯು) ಸೇರಿದ ಇಂಟಕ್, ಐಟಕ್, ಎಚ್ಎಂಎಸ್, ಸಿಐಟಿಯು, ಎಐಟಿಯುಸಿ, ಟಿಯುಸಿಸಿ, ಎಸ್ ಇಡಬ್ಲ್ಯೂಎ, ಎಐಸಿಸಿಟಿಯು, ಎಲ್ಪಿಎಫ್, ಯುಟಿಯುಸಿ ಸಂಘಟನೆಗಳು ಇತರ ಕೆಲವು ಸಂಘಟನೆಗಳ ಜೊತೆಗೆ ಕೇಂದ್ರದಲ್ಲಿನ  ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲು ಭಾರತ ಬಂದ್ ಗೆ ಕರೆ ಕೊಟ್ಟಿದ್ದವು.

ಕರ್ನಾಟಕ
,  ರಾಜಸ್ಥಾನ, ಪಂಜಾಬ್, ತೆಲಂಗಾಣ, ಹರಿಯಾಣದಲ್ಲಿ ಬ್ಯಾಂಕ್ ಚಟುವಟಿಕೆಗಳು ಸ್ಥಗಿತಗೊಂಡರೆ, ಕೇರಳದಲ್ಲಿ ಬಂದ್ ಜನಜೀವನದ ಮೇಲೆ ಪರಿಣಾಮ ಬೀರಿತು.
ಕೊಯಮತ್ತೂರಿನಲ್ಲಿ
ಎಡಪಕ್ಷಗಳ ಇಬ್ಬರು ಸಂಸದರು ಸೇರಿದಂತೆ ೮೦೦ಕ್ಕೂ ಹೆಚ್ಚು ಕಾರ್ಮಿಕರನ್ನು ಬಂಧಿಸಲಾಯಿತು. ಮುಂಬೈಯಲ್ಲಿ ಕಾರ್ಮಿಕರು ಆಜಾದ್ ಮೈದಾನಕ್ಕೆ ಬೃಹತ್ ಮೆರವಣಿಗೆ ನಡೆಸಿದರು. ಜನಜೀವನ ಮಾಮೂಲಿಯಾಗಿತ್ತು.

No comments:

Advertisement