ಗ್ರಾಹಕರ ಸುಖ-ದುಃಖ

My Blog List

Wednesday, January 8, 2020

ಗಲ್ಲಿಗೇರಿಸಲು ಮೀರತ್‌ನಿಂದ ವಧಕಾರರು; ಬಿಹಾರದಿಂದ ಹಗ್ಗ

ಗಲ್ಲಿಗೇರಿಸಲು ಮೀರತ್ನಿಂದ ವಧಕಾರರು; ಬಿಹಾರದಿಂದ ಹಗ್ಗ
ನವದೆಹಲಿ: ೨೦೧೨ರನಿರ್ಭಯಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ನ್ಯಾಯಾಲಯ 2020 ಜನವರಿ 07ರ ಮಂಗಳವಾರ  ಬ್ಲ್ಯಾಕ್ ವಾರಂಟ್ ಜಾರಿಗೊಳಿಸುತ್ತಿದ್ದಂತೆಯೇ ನಗರದ ತಿಹಾರ್ ಸೆರೆಮನೆಯಲ್ಲಿ ತೀರ್ಪು ಜಾರಿಗೆ ಸಕಲ ಸಿದ್ಧತೆಗಳು ಆರಂಭವಾಗದವು.

 ಜನವರಿ ೨೨ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ನಾವು ಮೀರತ್ನಿಂದ ವಧಕಾರರ (ಗಲ್ಲಿಗೇರಿಸುವವರ) ಸೇವೆಯನ್ನು ಕೋರಲಿದ್ದೇವೆ. ನಾಲ್ಕೂ ಮಂದಿ ಅಪರಾಧಿಗಳನ್ನು ಒಟ್ಟಿಗೇ ಗಲ್ಲಿಗೇರಿಸಲು ಸೆರೆಮನೆಯಲ್ಲಿ ನಾವು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆಎಂದು ಹೆಸರು ಹೇಳಲು ಇಚ್ಛಿಸದ ಸೆರೆಮನೆ ಅಧಿಕಾರಿಯೊಬ್ಬರು ತಿಳಿಸಿದರು.

ಕುಣಿಕೆಗಾಗಿ
ಬಿಹಾರದ ಬಕ್ಸರ್ ಸೆರೆಮನೆಯಿಂದ ವಿಶೇಷ ಹಗ್ಗಗಳನ್ನು ತರಲಾಗುವುದು. ೨೦೧೩ರಲ್ಲಿ ಸಂಸತ್ ಮೇಲಿನ ದಾಳಿ ಅಪರಾಧಿ ಅಫ್ಜಲ್ ಗುರುವಿಗೆ ಮರಣದಂಡನೆ ವಿಧಿಸಲು ಕೂಡಾ ಬಿಹಾರಿನ ಬಕ್ಸರ್ ಸೆರೆಮನೆಯಿದಲೇ ವಿಶೇಷ ಹಗ್ಗವನ್ನು ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಏಷ್ಯಾದ
ಅತ್ಯಂತ ದೊಡ್ಡ ಸೆರೆಮನೆಯಾಗಿರುವ ತಿಹಾರ್ ಸೆರೆಮನೆಯಲ್ಲಿ ಗಲ್ಲುಗಂಭದ ಸುಸ್ಥಿತಿ ಬಗ್ಗೆ ಪರೀಕ್ಷೆಗಾಗಿ ಗಲ್ಲಿಗೇರಿಸುವ ಡಮ್ಮಿ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಅವರು ನುಡಿದರು.

ಅಪರಾಧಿಗಳನ್ನು
ಬೇರೆ ಬೇರೆ ಸೆಲ್ಗಳಲ್ಲಿ ಇರಿಸಲಾಗಿದ್ದು ಅವರ ಮೇಲೆ ಸಿಸಿಟಿವಿ ಮೂಲಕ ನಿಗಾ ಇಡಲಾಗಿದೆ. ಮರಣದಂಡನೆಗಳನ್ನು ಜಾರಿಗೊಳಿಸುವ ಸೆರೆಮನೆ ನಂಬರ್ ೩ರಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

ಸೆರೆಮನೆಯಲ್ಲೇ
ಕುಸಿದ ಅಪರಾಧಿಗಳು: ದೆಹಲಿಯ ನ್ಯಾಯಾಲಯವು ಮರಣದಂಡನೆ ಜಾರಿಗೆ ದಿನ ನಿಗದಿಪಡಿಸಿಡೆತ್ ವಾರಂಟ್ಜಾರಿಗೊಳಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ತಿಹಾರ್ ಸೆರೆಮನೆಯಲ್ಲಿ ಅಪರಾಧಿಗಳು ಕುಸಿದು ಕುಳಿತರು ಎಂದು ಸೆರೆಮನೆ ಮೂಲಗಳು ತಿಳಿಸಿವೆ.

ಕುಣಿಕೆಯಿಂದ
ಪಾರಾಗುವ ಕೊನೆಯ ಯತ್ನವಾಗಿ ಅವರು ಸುಪ್ರೀಂಕೋರ್ಟಿಗೆ ಕ್ಯುರೇಟಿವ್ ಅರ್ಜಿ ಸಲ್ಲಿಕೆಯ ಅವಕಾಶವನ್ನು ಬಳಸಬಹುದು ಎನ್ನಲಾಗಿದೆ.

No comments:

Advertisement