ಗ್ರಾಹಕರ ಸುಖ-ದುಃಖ

My Blog List

Saturday, February 1, 2020

ನಿರ್ಭಯಾ ಪ್ರಕರಣ: ಅಪರಾಧಿ ವಿನಯ್ ಕ್ಷಮೆ ಕೋರಿಕೆ ಅರ್ಜಿ ತಿರಸ್ಕೃತ

ನಿರ್ಭಯಾ ಪ್ರಕರಣ: ಅಪರಾಧಿ ವಿನಯ್ ಕ್ಷಮೆ ಕೋರಿಕೆ ಅರ್ಜಿ ತಿರಸ್ಕೃತ
ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಓರ್ವನಾದ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2020 ಜನವರಿ 01ರ ಶನಿವಾರ ತಿರಸ್ಕರಿಸಿದರು.

ರಾಷ್ಟ್ರಪತಿಯವರು  ಈದಿನ ಬೆಳಿಗ್ಗೆ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು.

ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಶನಿವಾರ ಮುಂಜಾನೆ ಗಲ್ಲು ಶಿಕ್ಷೆ ಜಾರಿಗೊಳಿಸಲು  ’ಡೆತ್ ವಾರಂಟ್’ ಹೊರಡಿಸಲಾಗಿತ್ತು. ಆದರೆ ಪಾಟಿಯಾಲ ಹೌಸ್ ಕೋರ್ಟ್ ಶುಕ್ರವಾರ ಸಂಜೆ ಅದಕ್ಕೆ ತಡೆಯಾಜ್ಷೆ ನೀಡಿತ್ತು.

೨೦೧೨ರ ಡಿಸೆಂಬರ್ ೧೬ರಂದು ದೆಹಲಿಯ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ೬ ಮಂದಿ ಚಲಿಸುತ್ತಿದ್ದ ಬಸ್ಸಿನಲ್ಲಿ ಅತ್ಯಾಚಾರ ಮಾಡಿದ್ದರು.

No comments:

Advertisement