Monday, February 3, 2020

ಕೊರೊನಾವೈರಸ್: ಭಾರತದಿಂದ ಚೀನಾದ ನಾಗರಿಕರ ಇ-ವೀಸಾ ಸೌಲಭ್ಯ ತಾತ್ಕಾಲಿಕ ಸ್ಥಗಿತ

ಕೊರೊನಾವೈರಸ್: ಭಾರತದಿಂದ ಚೀನಾದ ನಾಗರಿಕರ -ವೀಸಾ ಸೌಲಭ್ಯ ತಾತ್ಕಾಲಿಕ ಸ್ಥಗಿತ
ಬೀಜಿಂಗ್:  ಚೀನಾದಲ್ಲಿ ಮಾರಕ ಕೊರೋನಾವೈರಸ್ ೩೦೦ ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡು, ಇತರ ೧೪,೫೬೨ ಮಂದಿಯನ್ನು ವ್ಯಾಧಿಗ್ರಸ್ತರನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಚೀನೀ  ಪ್ರಯಾಣಿಕರು ಮತ್ತು ಚೀನಾದಲ್ಲಿ ವಾಸವಾಗಿರುವ ವಿದೇಶಿಯರಿಗೆ -ವೀಸಾ ಸೌಲಭ್ಯವನ್ನು ಭಾರತ  2020 ಫೆಬ್ರುವರಿ 02ರ ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.

ಭಾರತ, ಅಮೆರಿಕ ಹಾಗೂ ಇಂಗ್ಲೆಂಡ್ ಸೇರಿದಂತೆ ೨೫ ದೇಶಗಳಿಗೂ ಸೋಂಕು ಹರಡಿರುವುದನ್ನು ಅನುಸರಿಸಿ  -ವೀಸಾಗ ಮೂಲಕ ಭಾರತಕ್ಕೆ ಪ್ರಯಾಣ ಮಾಡುವುದನ್ನು ತಾತ್ಕಾಲಿಕವಾಗಿ vತ್ ಕ್ಷಣದಿಂದ ಜಾರಿಯಾಗುವಂತೆ ಸ್ಥಗಿತಗೊಳಿಸಲಾಗಿದೆಎಂದು ಭಾರತೀಯ ರಾಯಭಾರ ಕಚೇರಿ ಇಲ್ಲಿ ಪ್ರಕಟಿಸಿತು.

ಇದು ಚೀನಾದ ಪಾಸ್ಪೋರ್ಟ್ಗಳನ್ನು ಹೊಂದಿರುವವರಿಗೆ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ ವಾಸಿಸುವ ಇತರ ರಾಷ್ಟ್ರೀಯತೆಗಳ ಅರ್ಜಿದಾರರಿಗೆ ಅನ್ವಯಿಸುತ್ತದೆ. ಈಗಾಗಲೇ ನೀಡಲಾದ -ವೀಸಾಗಳನ್ನು ಹೊಂದಿರುವವರು ಇವುಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂಬುದನ್ನು ಮೂಲಕ ಗಮನಿಸಬೇಕುಎಂದು ಪ್ರಕಟಣೆ ತಿಳಿಸಿತು.

"ಭಾರತಕ್ಕೆ ಭೇಟಿ ನೀಡಲು ಬಲವಾದ ಕಾರಣವಿರುವ ವ್ಯಕ್ತಿಗಳು ಬೀಜಿಂಗ್ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಅಥವಾ ಶಾಂಘೈ ಇಲ್ಲವೇ ಗುವಾಂಗ್ಜೊವುನಲ್ಲಿರುವ ಭಾರತೀಯ ದೂತಾವಾಸಗಳನ್ನು ಮತ್ತು ನಗರಗಳಲ್ಲಿನ ಭಾರತೀಯ ವೀಸಾ ಅರ್ಜಿ ಕೇಂದ್ರಗಳನ್ನು ಸಂಪರ್ಕಿಸಬಹುದು" ಎಂದು ಪ್ರಕಟಣೆ ಹೇಳಿತು.

ಚೀನಾದ ಕೊರೋನವೈರಸ್ ಪೀಡಿತ ವುಹಾನ್ ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದ ೩೨೩ ಭಾರತೀಯರು ಮತ್ತು  ಏಳು ಮಂದಿ ಮಾಲ್ದೀವ್ ನಾಗರಿಕರನ್ನು ಭಾರತವು ವಿಮಾನದ ಮೂಲಕ ಸ್ಥಳಾಂತರಿಸಿತು. ಇದರೊಂದಿಗೆ  ಒಟ್ಟು ೬೫೪ ಜನರನ್ನು ತೆರವುಗೊಳಿಸಿದಂತಾಗಿದೆ.

ಏರ್ ಇಂಡಿಯಾದ ಜಂಬೊ ಬಿ ೭೪೭ ಕೊರೋನಾವೈರಸ್ ಕೇಂದ್ರವಾಗಿರುವ ವುಹಾನ್ ನಗರಕ್ಕೆ ಎರಡು ವಿಮಾನಗಳನ್ನು ಕಳುಹಿಸಿದ್ದು ಶನಿವಾರದ ಮೊದಲ ಹಾರಾಟದಲ್ಲಿ ೩೨೪ ಭಾರತೀಯರನ್ನು ಸ್ಥಳಾಂತರಿಸಲಾಯಿತು ಮತ್ತು ಭಾನುವಾರ ೩೨೩ ಭಾರತೀಯರು ಮತ್ತು ಏಳು ಮಾಲ್ದೀವ್ಸ್ ನಾಗರಿಕರನ್ನು ವುಹಾನ್ ನಿಂದ ತೆರವುಗೊಳಿಸಲಾಯಿತು.

ಕೇರಳದಲ್ಲಿ ೨ನೇ ಪ್ರಕರಣ: ಚೀನಾದಲ್ಲಿ ಕೊರೊನಾವೈರಸ್ ಸಾವಿನ ಸಂಖ್ಯೆ ೩೦೪ ಕ್ಕೆ ಏರಿಕೆಯಾಗುವುದರ ಜೊತೆಗೆ ೧೪,೦೦೦ ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲುತ್ತಿದ್ದಂತೆಯೇ , ಭಾರತದ ಕೇರಳದಲ್ಲಿ ಭಾನುವಾರ ಎರಡನೇ ಕೊರೋನಾವೈರಸ್ ದೃಢ ಪಟ್ಟಿತು. 
ಕೇರಳದ ಎರಡನೇ ರೋಗಿಯು ಚೀನಾ ಪ್ರಯಾಣದ ಇತಿಹಾಸವನ್ನು ಹೊಂದಿದ್ದು, ಅವರನ್ನು ಏಕಾಂಗಿವಾಸಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕೇರಳ ಸರ್ಕಾರದ ಮೂಲಗಳು ತಿಳಿಸಿದವು.

ಜೈಪುರದಲ್ಲಿ ಜನರಿಗೆ ಸೋಂಕು ಶಂಕೆ: ಏತನ್ಮಧ್ಯೆ, ಕೊರೋನವೈರಸ್ ರೋಗಲಕ್ಷಣಗಳಿವೆ ಎಂದು ಶಂಕಿಸಲಾಗಿರುವ ಮೂವರನ್ನು ಜೈಪುರದ ಎಸ್ಎಂಎಸ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಭಾನುವಾರ ಸಂಜೆ ವೇಳೆಗೆ ವರದಿ ಬರುವ ನಿರೀಕ್ಷೆಯಿದೆ ಎಂದು ಎಸ್ಎಂಎಸ್ ಆಸ್ಪತ್ರೆಯ ಅಧೀಕ್ಷಕರಾದ ಡಾ.ಡಿ.ಎಸ್. ಮೀನಾ ತಿಳಿಸಿದರು.

ಭಾನುವಾರ ಬಿಡುಗಡೆಯಾಗಿರುವ  ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಅಂಕಿಅಂಶಗಳು ಸಾವಿನ ಸಂಖ್ಯೆಗೆ ಇನ್ನೂ ೪೫ ಮಂದಿ ಸೇರ್ಪಡೆಯಾಗಿರುವುದು ಮತ್ತು ,೫೯೦ ಹೊಸಬರಿಗೆ ಸೋಂಕು ತಗಲುವುದರೊಂದಿಗೆ ಒಟ್ಟು ಸೋಂಕು ತಗುಲಿದವರ ಸಂಖ್ಯೆ ಒಟ್ಟು ೧೪,೩೮೦ಕ್ಕೆ ಏರಿದೆ.

ಅಂಕಿಸಂಖ್ಯೆಗಳು ೨೦೦೨-೦೩ರಲ್ಲಿ ಏಕಾಏಕಿ ತೀವ್ರ ಉಸಿರಾಟದ ತೊಂದರೆಯನ್ನು ಉಂಟು ಮಾಡಿದ್ದ ಸಾರ್ಸ್  ಸೋಂಕಿಗೆ ಒಳಗಾದವರ ಸಂಖ್ಯೆಯನ್ನು ಮೀರಿಸಿದೆ.ಗಿಂತ ಹೆಚ್ಚಾಗಿದೆ. ಸಾರ್ಸ್ ಕೂಡಾ  ವಿಶ್ವಾದ್ಯಂತ ಹರಡುವ ಮೊದಲು ದಕಿಣ ಚೀನಾದಲ್ಲೇ ಭುಗಿಲೆದ್ದಿತ್ತು.

ನಡುವೆ ಹುಬೈ ಪ್ರಾಂತ್ಯದ ವುಹಾನ್ ನಗರಕ್ಕೆ ಸಮೀಪವಿರುವ ಹುವಾಂಗ್ಗ್ಯಾಂಗ್ ನಗರದ ಆರು ಅಧಿಕಾರಿಗಳನ್ನು ಕಳಪೆ ನಿರ್ವಹಣೆಗಾಗಿ  ವಜಾ ಮಾಡಲಾಗಿದೆ ಎಂದು ಚೀನೀ ಸುದ್ದಿ ಸಂಸ್ಥೆ ವರದಿ ಮಾಡಿತು.

ರೋಗಿಗಳಿಗೆ ಚಿಕಿತ್ಸೆ ನೀಡುವ ನಗರದ ಸಾಮರ್ಥ್ಯ ಕಳಪೆಯಾಗಿದೆ. ರಕ್ಷಣಾತ್ಮಕ ಉಡುಪುಗಳು ಮತ್ತು ವೈದ್ಯಕೀಯ ಮುಖವಾಡಗಳಂತಹ ವೈದ್ಯಕೀಯ ಅಗತ್ಯಗಳ ಸರಬರಾಜಿನಲ್ಲಿ ತೀವ್ರ ಕೊರತೆಯಿದೆ ಎಂದು ಮೇಯರ್ ಅವರನ್ನು ಉಲ್ಲೇಖಿಸಿದ ವರದಿ ತಿಳಿಸಿತು.

ತಾನು ಸ್ವತಃ ದೇಶದಲ್ಲಿ ಪ್ರಯಾಣದ ನಿರ್ಬಂಧಗಳನ್ನು ವಿಧಿಸಿದ್ದರೂ, ಕಳೆದ ಎರಡು ವಾರಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ಇತರರಿಗೆ ಪ್ರವೇಶ ನಿಷೇಧಿಸುವ ವಾಷಿಂಗ್ಟನ್ ಆದೇಶ ಸೇರಿದಂತೆ ಇತರ ದೇಶಗಳ ಇದೇ ಮಾದರಿಯ ಕ್ರಮಗಳನ್ನು ಚೀನಾ ಟೀಕಿಸಿದೆ.

ಜಪಾನ್ ಮತ್ತು ಸಿಂಗಾಪುರವನ್ನು ಅನುಸರಿಸಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶನಿವಾರ ಇದೇ ರೀತಿಯ ಪ್ರಯಾಣಿಕರ ನಿರ್ಬಂಧದ ಕ್ರಮಗಳನ್ನು ಪ್ರಕಟಿಸಿವೆ.

ದಕ್ಷಿಣ ಕೊರಿಯಾ ಮತ್ತು ಭಾರತ ತಮ್ಮ ನೂರಾರು ನಾಗರಿಕರನ್ನು ವುಹಾನ್ನಿಂದ ಹೊರಕ್ಕೆ ಸ್ಥಳಾಂತರಿಸಿವೆ. ವ್ಯಾಧಿಯ ಕೇಂದ್ರವಾಗಿರುವ ವುಹಾನ್ ನಗರದ ಸುಮಾರು ೫೦ ದಶಲಕ್ಷ ಜನರನ್ನು ವೈರಸ್ ಇತರ ಕಡೆಗಳಿಗೆ ಹರಡದಂತೆ ತಡೆಯುವ ಸಲುವಾಗಿ ಹೊರಕ್ಕೆ ಪಯಣಿಸದಂತೆ ನಿಷೇಧಿಸಲಾಗಿದೆ
ಇಂಡೋನೇಷ್ಯಾ ಕೂಡ ತನ್ನ ನಾಗರಿಕರ ಸ್ಥಳಾಂತರ ಸಲುವಾಗಿ ವಿಶೇಷ ವಿಮಾನವನ್ನು ಕಳುಹಿಸಿದೆ.
ಎರಡು ತಿಂಗಳಲ್ಲಿ ವೈರಸ್ ಶೀಘವಾಗಿ ಹರಡಿದ್ದರ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಗುರುವಾರ  ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಘೋಷಿಸಲು ಗುರುವಾರ ಪ್ರೇರೇಪಿಸಿತ್ತು.

ವೈರಸ್ ಹರಡುವ ಸಾಧ್ಯತೆಯನ್ನು ತಡೆಗಟ್ಟಲು ಮುಂಜಾಗರೂಕತೆಯ ಪರಸ್ವರ ಸಮನ್ವಯದ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ ಎಂದು ಬೀಜಿಂಗ್ನಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಗೌಡೆನ್ ಗಲಿಯಾ ಹೇಳಿದರು. ಇಲ್ಲಿಯವರೆಗೆ ವರದಿಯಾದ ಹೆಚ್ಚಿನ ಪ್ರಕರಣಗಳು ಚೀನಾಕ್ಕೆ ಭೇಟಿ ನೀಡಿದ ಜನರು ಅಥವಾ ಅವರ ಕುಟುಂಬ ಸದಸ್ಯರಲ್ಲಿ ಕಂಡು ಬಂದವುಗಳು ಎಂದು ಅವರು ನುಡಿದರು.

ವ್ಯಾಧಿಯನ್ನು ಎದುರಿಸಲು ಸಜ್ಜಾಗಿರವ ಬಡ ದೇಶಗಳ ಬಗ್ಗೆ ಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ ಎಂದು ಗಲಿಯಾ ಹೇಳಿದರು.

ವಿದೇಶದಲ್ಲಿ ಕೆಲವು ಪ್ರಕರಣಗಳಲ್ಲಿ ವ್ಯಾಧಿಯು ಮನುಷ್ಯನಿಂದ ಮನುಷ್ಯನಿಗೆ ಹರಡಿದ ಪ್ರಕರನಗಳೂ ಸೇರಿವೆ ಎಂದು ವಿಶ್ವ ಆರೋಗ್ಯ  ಸಂಸ್ಥೆ  ತಿಳಿಸಿದೆ.

ಅಮೆರಿಕದಲ್ಲಿ ಆರೋಗ್ಯ ತುರ್ತು ಸ್ಥಿತಿ: ಮಧ್ಯೆ, ಅಮೆರಿಕವು ಶುಕ್ರವಾರ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ೧೪ ದಿನಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ವಿದೇಶಿ ಪ್ರಜೆಗಳಿಗೆ ಪ್ರವೇಶವನ್ನು ನಿಷೇಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ.
ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕ ಮತ್ತು ವಿಯೆಟ್ನಾಂ ದೇಶಗಳು ಶನಿವಾರ ಹೊಸ ಪ್ರಕರಣಗಳನ್ನು ವರದಿ ಮಾಡಿವೆ. ಸ್ಪೇನ್ ತನ್ನ ಮೊದಲ ಪ್ರಕರಣವನ್ನು ದೃಢ ಪಡಿಸಿತು. ಜರ್ಮನಿಯ ವ್ಯಕ್ತಿಯೊಬ್ಬರು ಜರ್ಮನಿಯಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಮತ್ತು ನಂತರ ಸ್ನೇಹಿತರೊಂದಿಗೆ ಕ್ಯಾನರಿ ದ್ವೀಪಗಳಿಗೆ ಪ್ರಯಾಣಿಸಿದರು. ಅವರೊಂದಿಗೆ ಆಸ್ಪತ್ರೆಗೆ ದಾಖಲಾದ ನಾಲ್ಕು ಸ್ನೇಹಿತರು ರೋಗಲಕ್ಷಣಗಳನ್ನು ತೋರಿಸಿಲ್ಲ ಎಂದು ಸ್ಪೇನ್ ತಿಳಿಸಿತು.

ಹೊಸ ವೈರಸ್ ಮತ್ತು ಎಸ್ಎಆರ್ಎಸ್ ಎರಡೂ ಕೊರೋನವೈರಸ್ ಕುಟುಂಬದಿಂದ ಬಂzವುಗಳಾಗಿದ್ದು, ಎಲ್ಲವುಗಳಲ್ಲೂ ನೆಗಡಿ ಸಾಮಾನ್ಯವಾಗಿದೆ.

ಚೀನಾದಲ್ಲಿ ಸಾವಿನ ಪ್ರಮಾಣ ಕುಸಿಯುತ್ತಿದೆ, ಆದರೆ ರೋಗ ಸೋಂಕು ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಏಕೆಂದರೆ ಶಂಕಿತ ಪ್ರಕರಣಗಳ ಸಹಸ್ರಾರು ಮಂದಿಯ ಮಾದರಿಗಳನ್ನು ಇನ್ನೂ ಪರೀಕ್ಷಿಲಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಗಲಿಯಾ ಹೇಳಿದರು.

No comments:

Advertisement