My Blog List

Thursday, February 6, 2020

ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ: ಕನ್ನಡ ಸಮ್ಮೆಳನಾಧ್ಯಕ್ಷ ಎಚ್ ಎಸ್ ವಿ ಕರೆ

ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ: ಕನ್ನಡ ಸಮ್ಮೆಳನಾಧ್ಯಕ್ಷ
  
ಎಚ್ ಎಸ್ ವಿ  ಕರೆ
ಕಲಬುರಗಿ: ಬೇರೆ ರಾಜ್ಯಗಳಿಂದ ಬರುವ ವಲಸಿಗರಿರಲಿ ಅಥವಾ ಈ ನೆಲದಲ್ಲಿ ವಾಸವಾಗಿರುವವರೇ ಇರಲಿ  ಕರ್ನಾಟಕದಲ್ಲಿ ಎಲ್ಲರಿಗೂ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೆ ಆಗಬೇಕು ಎಂದು ಹಿರಿಯ ಕವಿ, ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ ಅವರು 2020 ಫೆಬ್ರುವರಿ 05ರ ಬುಧವಾರ  ಇಲ್ಲಿ ಆಗ್ರಹಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿನ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಆರಂಭಗೊಂಡ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, ‘ಕನ್ನಡವನ್ನು ಸಂವಹನ ಮತ್ತು ವ್ಯವಹಾರದ ಭಾಷೆಯಾಗಿ ಮಾತ್ರವೇ ಅಲ್ಲ, ಅನ್ನದ ಭಾಷೆಯಾಗಿ ರೂಪಿಸಬೇಕು, ಕನ್ನಡಿಗರಿಗೆ ಗರಿಷ್ಠ ಉದ್ಯೋಗ ಮೀಸಲಿಡಬೇಕಾದದ್ದು ಇಂದಿನ ತುರ್ತು ಅಗತ್ಯ ಎಂದು ಹೇಳಿದರು.
ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ನಾನು ಬದುಕಲು ಸಾಧ್ಯ ಎಂದು ತಿಳಿಯುವುದು ಬರೀ ಭ್ರಮೆ. ಐನ್‌ಸ್ಟೀನ್ ಅಂತವರಿಗೆ ಇಂಗ್ಲಿಷ್ ಕೇವಲ ಸಂವಹನದ ಭಾಷೆಯಾಗಿತು ಎಂದು ನುಡಿದ ಅವರು, ಮಕ್ಕಳ ಮತ್ತು ಪಾಲಕರ ಬೇಡಿಕೆಯನ್ನು ಮುಂದಿಟ್ಟುಕೊಂಡು ಇಂಗ್ಲಿಷ್ ಮಾಧ್ಯಮ ಕಲಿಕೆಗೆ ಒತ್ತಾಯಿಸುವುದು ಸರಿಯಲ್ಲ ಎಂದು ಹೇಳಿದರು.

‘ಪ್ರಾಥಮಿಕ ಶಿಕ್ಷಣದ ಕಲಿಕೆಯು ಕನ್ನಡ ಮಾಧ್ಯಮದಲ್ಲಿಯೇ ಆಗಬೇಕು ಎಂಬುದಕ್ಕೆ ಕಾನೂನು ತೊಡಕುಗಳನ್ನು ಮುಂದೊಡ್ಡುವುದು ಕೂಡಾ ಸರಿಯಲ್ಲ ಎಂದೂ ಅವರು ನುಡಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿದರೆ ಮಕ್ಕಳು ತಮ್ಮ ಗ್ರಹಿಕಾ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಲೇ ಸಾಗಿದೆ. ದಿನೇದಿನೇ ಮಕ್ಕಳ ನಾಲಿಗೆಯಿಂದ ಕನ್ನಡ ಭಾಷೆಯ ಬೀಜಗಳು ಮಾಯವಾಗುತ್ತಿವೆ ಎಂದು ಅವರು ಸಮ್ಮೆಳನಾಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.

No comments:

Advertisement