Friday, February 21, 2020

'ಹೌಡಿ ಮೋದಿ’ ಮಾದರಿಯಲ್ಲೇ ‘ನಮಸ್ತೆ ಟ್ರಂಪ್ ಕಾರ್ಯಕ್ರಮ

'ಹೌಡಿ ಮೋದಿಮಾದರಿಯಲ್ಲೇ  ‘ನಮಸ್ತೆ  ಟ್ರಂಪ್  ಕಾರ್ಯಕ್ರಮ
ಬೃಹತ್ ರೋಡ್ ಶೋ, ಭಾರತೀಯ ಸಂಸ್ಕೃತಿಯ ಅನಾವರಣ
ನವದೆಹಲಿ: ಗುಜರಾತಿನ ಅಹ್ಮದಾಬಾದಿನಲ್ಲಿ ಫೆಬ್ರುವರಿ ೨೪ರಂದು ನಡೆಯಲಿರುವನಮಸ್ತೆ ಟ್ರಂಪ್ಕಾರ್ಯಕ್ರಮಕ್ಕೂ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಹ್ಯೂಸ್ಟನ್ನಲ್ಲಿ ನಡೆದಹೌಡಿ ಮೋದಿಕಾರ್ಯಕ್ರಮಕ್ಕೂ ಹಲವಾರು ಸಾಮ್ಯತೆಗಳಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು  2020 ಫೆಬ್ರುವರಿ 20ರ  ಗುರುವಾರ ಇಲ್ಲಿ ವಿವರಿಸಿದರು.

ನಾವು ಅತ್ಯಂತ ಕಾತರದಿಂದ ಅಧ್ಯಕ್ಷ ಡೊನಾಡ್ ಟ್ರಂಪ್ ಭೇಟಿಗಾಗಿ ಕಾದಿದ್ದೇವೆ. ಅದು ನಮ್ಮ ಜಾಗತಿಕ ಆಯಕಟ್ಟಿನ ಬಾಂಧ್ಯವ್ಯಗಳನ್ನು ಬಲ ಪಡಿಸಲಿದೆಎಂದು ರವೀಶ್ ಕುಮಾರ್ ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಮೆಲೆನಿಯಾ ಟ್ರಂಪ್ ಅವರು ಎರಡು ದಿನಗಳ ಭೇಟಿ ಸಲುವಾಗಿ ಫೆಬ್ರುವರಿ ೨೪ರಂದು ಭಾರತಕ್ಕೆ ಬರುತ್ತಿದ್ದಾರೆ. ಟ್ರಂಪ್ ದಂಪತಿಯ ಪ್ರಪ್ರಥಮ ಭಾರತ ಭೇಟಿ ಇದಾಗಿದ್ದು, ಭಾರತ- ಅಮೆರಿಕ ಬಾಂಧವ್ಯಕ್ಕೆ ಇದರಿಂದ ಭಾರೀ ಒತ್ತು ಸಿಗಲಿದೆ ಎಂದು ಪರಿಗಣಿಸಲಾಗಿದೆ.

ಟ್ರಂಪ್ ದಂಪತಿ ಗುಜರಾತಿನ ಅಹ್ಮದಾಬಾದ್ ಭೇಟಿಯೊಂದಿಗೆ ತಮ್ಮ ಭಾರತ ಪ್ರವಾಸವನ್ನು ಆರಂಭಿಸಲಿದ್ದಾರೆ. ಮೊದಲ ದಿನ ಅವರು ಅಹ್ಮದಾಬಾದ್ ಮತ್ತು ಉತ್ತರ ಪ್ರದೇಶದ ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಸಂಜೆ ದೆಹಲಿಗೆ ತೆರಳುವ ಅವರು ಔಪಚಾರಿಕ ಸ್ವಾಗತವನ್ನು ಪಡೆಯಲಿದ್ದಾರೆ ಮತ್ತು ದ್ವಿಪಕ್ಷೀಯ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೆಲೆನಾ ಅವರು ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ, ೨೦೧೮ರ ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಅಳವಡಿಸಲಾದ ಮತ್ತು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿರುವಸಂತಸ ಪಠ್ಯ (ಹ್ಯಾಪಿನೆಸ್ ಕರಿಕುಲಂ) ವೀಕ್ಷಿಸುವ ಸಾಧ್ಯತೆಗಳಿವೆ.

ನವದೆಹಲಿಯ ಚಾಣಕ್ಯಪುರಿಯ ಐಟಿಸಿ ಮೌರ್ ಹೋಟೆಲ್ನಲ್ಲಿ ಟ್ರಂಪ್ ದಂಪತಿ ವಾಸ್ತವ್ಯ ಹೂಡುವರು ಎಂದು ಭಾವಿಸಲಾಗಿದ್ದು, ಅವರ ಆಹಾರದ ಮೆನುವಿಗೆ ಬೇಯಿಸಿದ ವೈವಿಧ್ಯಮಯ ಸಿಹಿ ತಿನಸುಗಳನ್ನು ಸೇರ್ಪಡೆ ಮಾಡಲಾಗಿದೆ.

ಹೋಟೆಲಿನ ಭಾರತೀಯ ರೆಸ್ಟೋರೆಂಟ್ಬುಖಾರದಲ್ಲಿ ಅಧ್ಯಕ್ಷೀಯ ದಂಪತಿ ಭೋಜನ ಸವಿಯುವ ನಿರೀಕ್ಷೆಯಿದೆ. ಬುಖಾರ ರೆಸ್ಟೋರೆಂಟ್ ಐಕಾನಿಕ್ ದಾಲ್ ಬುಖಾರ ಮತ್ತು ಮಾಂಸಾಹಾರಿ ಖಾದ್ಯಗಳಿಗಾಗಿ ಹೆಸರುವಾಸಿಯಾಗಿದೆ.  ಟ್ರಂಪ್ ಊಟದ ತಟ್ಟೆಯವಿವರಗಳನ್ನು ಶೆಫ್ ಅವರು ಬಹಿರಂಗ ಪಡಿಸದೆ ಇದ್ದರೂ ಅಮೆರಿಕದ ಅಧ್ಯಕ್ಷರ ಸಿಹಿ ಪ್ರೇಮದ ಹಿನ್ನೆಲೆಯಲ್ಲಿ ಅದು ಸಾಂಪ್ರದಾಯಿಕ ಭಾರತೀಯ ಸಿಹಿ ಅಥವಾ ಮಿಠಾಯಿಯನ್ನು ಒಳಗೊಳ್ಳಲಿದೆ ಎಂದು ಹೇಳಲಾಗಿದೆ.

ಫೆಬ್ರುವರಿ ೨೫ರಂದು ಬೆಳಗ್ಗೆ ಅಧ್ಯಕ್ಷೀಯ ದಂಪತಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಮುಕ್ತ ಪತ್ರಿಕಾ ಭೇಟಿ ಕಾರ್ಯಕ್ರಮವೂ ಸೇರಿದೆ. ಬಳಿಕ ರಾಜಘಾಟ್ಗೆ ಭೇಟಿ, ಹೈದರಾಬಾದ್ ಭವನದಲ್ಲಿ ಪ್ರಧಾನಿ ಮೋದಿ ಅವರ ಜೊತೆಗೆ ಮಧ್ಯಾಹ್ನದ ಭೋಜನಕೂಟ ಸಭೆ ಮತ್ತು ಸಾಯಂಕಾಲ ರಾಜ್ಯ ಬ್ಯಾಂಕ್ವೆಟ್ ಹಾಲ್ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರ ಆತಿಥ್ಯದ ಕಾರ್ಯಕ್ರಮ ನಡೆಯಲಿದೆ.
ಒಟ್ಟಿನಲ್ಲಿ ಟ್ರಂಪ್ ದಂಪತಿ ಭೇಟಿ ಸಂಕ್ಷಿಪ್ತ ಹಾಗೂ ತುರುಸಿನ ಭೇಟಿ ಕಾರ್ಯಕ್ರಮವಾಗಿರಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ನುಡಿದರು.

ನಮಸ್ತೆ ಟ್ರಂಪ್ ವಿಶೇಷತೆ: ಫೆಬ್ರುವರಿ ೨೪ರ ಅಹ್ಮದಾಬಾದಿನನಮಸ್ತೆ ಟ್ರಂಪ್ಕಾರ್ಯಕ್ರಮವು ಟ್ರಂಪ್ ದಂಪತಿಗೆ ಬೇರೆಲ್ಲೂ ಇಲ್ಲದಭಾರತದ ಸಮೃದ್ಧ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನುಪರಿಚಯಿಸಲಿದೆ.  ಮಧ್ಯಾಹ್ನ ಅಹ್ಮದಾಬಾದಿನಲ್ಲಿ ಬಂದಿಳಿಯುವ ಟ್ರಂಪ್ ಅಲ್ಲಿಂದ ಸೀದಾನಮಸ್ತೆ ಟ್ರಂಪ್ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೊಟೇರಾ ಕ್ರೀಡಾಂಗಣಕ್ಕೆ ತೆರಳುವರು. ಭಾರೀ ಸಂಖ್ಯೆಯ ಮಂದಿ ಟ್ರಂಪ್ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಸುಮಾರು ಮಿಲಿಯನ್ (೭೦ ಲಕ್ಷ) ಮಂದಿ ಪಾಲ್ಗೊಳ್ಳುವ ನೀರೀಕ್ಷೆದೆ ಎಂದು ರವೀಶ್ ಕುಮಾರ್ ಹೇಳಿರು.

ಟ್ರಂಪ್ ಅವರು ಕ್ರೀಡಾಂಗಣಕ್ಕೆ ಸಾಗುವ ದಾರಿಯ ಇಕ್ಕೆಲಗಳಲ್ಲೂ ಭಾರೀ ಸಂಖ್ಯೆಯಲ್ಲಿ ಜನರು ಸಾಲುಗಟ್ಟಿ ನಿಲ್ಲುವ ನಿರೀಕ್ಷೆ ಇದೆ. ದೇಶದ ವಿವಿಧ ಭಾಗಗಳಿಂದ ಬರುವ ಕಲಾವಿದರಿಗಾಗಿ ಮಾರ್ಗದುದ್ದಕ್ಕೂ ತಮ್ಮ ಪ್ರತಿಭೆ ಪ್ರದರ್ಶನಕ್ಕಾಗಿ ೨೮ ವೇದಿಕೆಗಳನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ ಎಂದು ರವೀಶ್ ಕುಮಾರ್ ನುಡಿದರು.

ರೋಡ್ ಶೋದಲ್ಲಿ ಮಹಾತ್ಮ ಗಾಂಧಿಯವರ ಬದುಕಿನ ಚಿತ್ರ ಅನಾವರಣಗೊಳ್ಳಲಿದೆ. ಅಲ್ಲದೆ ಕ್ರೀಡಾಂಗಣ ಹೊರಭಾಗಲ್ಲೂ ಭಾರೀ ಸಂಖ್ಯೆಯ ಜನರು ಟ್ರಂಪ್ ಅವರನ್ನು ಅಭಿನಂದಿಲು ಜಮಾಯಿಸುವ ನಿರೀಕ್ಷೆ ಇದೆ ಎಂದು ಕುಮಾರ್ ವಿವರಿಸಿದರು.

ಹ್ಯೂಸ್ಟನ್ನಲ್ಲಿ ನಡೆದ ಪ್ರಧಾನಿ ಮೋದಿ ಅವರಹೌಡಿ ಮೋದಿಕಾರ್ಯಕ್ರಮದಲ್ಲಿ ಅಧ್ಯಕ್ಷ ಟ್ರಂಪ್ ಅವರು ವೇದಿಕೆ ಹಂಚಿಕೊಂಡಿದ್ದರು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಭಾರತೀಯರು ಕಾರ್ಯಕ್ರಮದಲಿ ಪಾಲ್ಗೊಂಡಿದರು.

ಆಗ್ರಾದಲ್ಲಿ ಟ್ರಂಪ್ ಭೇಟಿ ಸಲುವಾಗಿ ತಾಜ್ ಮಹಲ್ ಈಗಾಗಲೇ ಸಿಂಗಾರಗೊಳ್ಳುತ್ತಿದೆ. ದೆಹಲಿಯಲ್ಲಿ ನಿಯೋಗ ಮಟ್ಟದ ಸಭೆಗಳು ಭೇಟಿ ಟ್ರಂಪ್ ಅವರ ಮೂರನೇ ಹಂತದ ಕಾರ್ಯಕ್ರಮವಾಗಿರುತ್ತದೆ ಎಂದು ಕುಮಾರ್ ಹೇಳಿದರು.

ಅಧ್ಯಕ್ಷ ಟ್ರಂಪ್ ಅವರಿಗೆ ಇದು ಭಾರತದ ಚೊಚ್ಚಲ ಭೇಟಿ. ತಿಂಗಳ ಅವಧಿಯಲ್ಲಿ ಟ್ರಂಪ್ ಅವರು ಪ್ರಧಾನಿ ಮೋದಿ ಜೊತೆಗಿನ ನಡೆಸಿದ ೫ನೇ ಭೇಟಿ ಇದಾಗಲಿದೆ ಎಂದೂ ವಿದೇಶಾಂಗ ವಕ್ತಾರರು ತಿಳಿಸಿದರು.

No comments:

Advertisement