ಗ್ರಾಹಕರ ಸುಖ-ದುಃಖ

My Blog List

Friday, February 21, 2020

ಮೋದಿ-ಶಾ ಜೋಡಿಯಿಂದ ಮಾತ್ರವೇ ಗೆಲುವು ಅಸಾಧ್ಯ: ಆರ್‌ಎಸ್‌ಎಸ್

ಮೋದಿ-ಶಾ ಜೋಡಿಯಿಂದ ಮಾತ್ರವೇ  ಗೆಲುವು ಅಸಾಧ್ಯ
ದೆಹಲಿಯಲ್ಲಿ ಬಿಜೆಪಿಯನ್ನು ಬಲಪಡಿಸಿ: ಆರ್ಎಸ್ಎಸ್
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಂದ ಮಾತ್ರವೇ ಎಲ್ಲ ರಾಜ್ಯ ಚುನಾವಣೆಗಳಲ್ಲೂ ಗೆಲುವು ಸಾಧಿಸಲು ಸಾಧ್ಯವಿಲ್ಲ, ಆದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಕ್ಷವನ್ನು ಬುಡಮಟ್ಟದಿಂದಲೇ ಬಲಪಡಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) 2020 ಫೆಬ್ರುವರಿ 20ರ ಗುರುವಾರ ಸಲಹೆ ಮಾಡಿತು.

ಆರ್ಎಸ್ಎಸ್ ಮುಖವಾಣಿಯಾಗಿರುವಆರ್ಗನೈಜರ್ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವಂತೆ ಬಿಜೆಪಿಗೆ ಸೂಚಿಸಿತು..

ದೆಹಲಿಯ ವಿಭಿನ್ನ ಆದೇಶಶೀರ್ಷಿಕೆಯ ಸಂಪಾದಕೀಯದಲ್ಲಿ ಸಂಪಾದಕ ಪ್ರಫುಲ್ಲ ಕೇತ್ಕರ್ ಅವರು ವಿಧಾನಸಭಾ ಚುನಾವಣೆಗಳಲ್ಲಿ ಅಮಿತ್ ಶಾ ಮತ್ತು ನರೇಂದ್ರ ಮೋದಿ ಎಲ್ಲಾ ಸಂದರ್ಭಗಳಲ್ಲೂ ಸಹಾಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ದೆಹಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಬಿಟ್ಟು ಬೇರೆ ದಾರಿಯಿಲ್ಲ, ಮತದಾರರು ಕುರಿತು ಸ್ಪಷ್ಟ ತೀರ್ಪು ನೀಡಿದ್ದಾರೆಎಂದು ಬರೆದರು.

ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸರ್ಕಾರದ ವಿರುದ್ಧ ಯಾವುದೇ ಅಧಿಕಾರ ವಿರೋಧಿ ಅಲೆ ಗೋಚರಿಸಲಿಲ್ಲ. ನಗರವಾಸಿಗಳಿಗೆ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಕಡಿತಗೊಳಿಸಿದ್ದ ಕ್ರಮ ಆಮ್ ಆದ್ಮಿ ಪಕ್ಷಕ್ಕೆ ನೆರವಾಯಿತು. ೨೦೧೫ ನಂತರ ಸಾಂಸ್ಥಿಕ ರಚನೆಯನ್ನು ತಳಮಟ್ಟದಲ್ಲಿ ಪುನರುಜ್ಜೀವನಗೊಳಿಸುವಲ್ಲಿ ಬಿಜೆಪಿ ವಿಫಲವಾಗಿದೆ, ಇದು ಚುನಾವಣಾ ಸೋಲಿಗೆ ಪ್ರಮುಖ ಕಾರಣವಾಗಿದೆಎಂದು ಪತ್ರಿಕೆಯ ಸಂಪಾದಕೀಯ ಅಭಿಪ್ರಾಯಪಟ್ಟಿತು.

ಫೆಬ್ರುವರಿ ರಂದು ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಎಎಪಿ-ಆಪ್) ೭೦ ಸ್ಥಾನಗಳಲ್ಲಿ ೬೨ ಸ್ಥಾನಗಳನ್ನು ಗಳಿಸುವ ಮೂಲಕ ಮತ್ತೊಂದು ಅವಧಿಗೆ ದೆಹಲಿ ಗದ್ದುಗೆಗೆ ಏರಿತ್ತು.  ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿ ಕೇವಲ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು.

No comments:

Advertisement