My Blog List

Wednesday, February 5, 2020

ಹೇಸರಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳ ಅನಾವರಣ

ಹೇಸರಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕೆ

ಮೇಳ ಅನಾವರಣ

ಬೆಂಗಳೂರು: ದೇಶದ ತೋಟಗಾರಿಕಾ ಕ್ಷೇತ್ರದಲ್ಲಿ  ನಡೆದಿರುವ ಆವಿಷ್ಕಾರ, ಸಂಶೋಧನೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ರೈತರು ಹಾಗೂ ಸಾರ್ವಜನಿಕರಿಗೆ ಪರಿಚಯಿಸಲು ಬೆಂಗಳೂರಿನ ಹೇಸರಘಟ್ಟದಲ್ಲಿರುವ   ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ(ಐಐಎಚ್ಆರ್‌) ಆವರಣದಲ್ಲಿ  ಹಮ್ಮಿಕೊಳ್ಳಲಾಗಿರುವ ನಾಲ್ಕು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳ  2020ಫೆಬ್ರುವರಿ 05ರ ಬುಧವಾರ ಅನಾವರಣಗೊಂಡಿದೆ.

ಫೆಬ್ರುವರಿ 5ರಿಂದ 8 ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ತೋಟಗಾರಿಕೆ ಕ್ಷೇತ್ರದ ಒಳ ಹೊರಗನ್ನು ತಿಳಿಸುವ ಮಾಹಿತಿಯು ಒಂದೇ  ಕಡೆಯಲ್ಲಿ ಸಿಗಲಿದೆ. 'ಕೃಷಿಯನ್ನು ಉದ್ದಿಮೆಯಾಗಿಸಲು ತೋಟಗಾರಿಕೆ' ಎಂಬುದು ಈ ಬಾರಿಯ ಮೇಳದ  ಘೋಷ ವಾಕ್ಯವಾಗಿದೆ.

 ಕಾರ್ಯಕ್ರಮದ ಉದ್ಘಾಟನೆ ಮಧ್ಯಾಹ್ನ 1ಕ್ಕೆ ನಿಗದಿಯಾಗಿದ್ದುಐಸಿಎಆರ್‌ ಡೈರೆಕ್ಟರ್‌ ಜನರಲ್‌ ಡಾ.ತ್ರಿಲೋಚನ್‌ ಮಹಾಪಾತ್ರ ನೆರವೇರಿಸಲಿದ್ದಾರೆಸಂಸದ ಬಿ.ಎನ್‌.ಬಚ್ಚೇಗೌಡಶಾಸಕ ಎಸ್‌.ಆರ್‌.ವಿಶ್ವನಾಥ್‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಐಐಎಚ್ಆರ್‌ ನಿರ್ದೇಶಕ ಡಾ.ಎಂ.ಆರ್‌.ದಿನೇಶ್‌ ಉದ್ಘಾಟನೆ ವೇದಿಕೆಯಲ್ಲಿಎಂಟು ಮಂದಿ ಸಾಧಕ ರೈತರನ್ನು ಸನ್ಮಾನಿಸಲಿದ್ದಾರೆ.
ಮೇಳದ ವಿಶೇಷತೆ:
ಮೇಳದಲ್ಲಿರೈತರು ಹಾಗೂ ನಾಗರಿಕರಿಗೆ ಭರಪೂರ ಮಾಹಿತಿ ಲಭ್ಯವಾಗಲಿದೆಇದಕ್ಕಾಗಿ ಐಐಎಚ್ಆರ್‌ ವಿಜ್ಞಾನಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

  
ಹಣ್ಣುತರಕಾರಿಅಣಬೆಪ್ಲಾಂಟೇಷನ್‌ ಹಾಗೂ ಸಾಂಬಾರ್‌ ಬೆಳೆಗಳ ಉತ್ಪಾದನೆಸಸ್ಯ ಸಂರಕ್ಷಣಾ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಗುತ್ತದೆಸಂರಕ್ಷಿತ ಬೇಸಾಯ ಪದ್ಧತಿಗಳುತೋಟಗಾರಿಕೆ ಆಧಾರಿತ ಮಿಶ್ರ ಬೇಸಾಯ ಪದ್ಧತಿಗಳುನರ್ಸರಿ ಹಾಗೂ ಸಸ್ಯ ಪರಿಕರಗಳ ಕುರಿತು ಮಳಿಗೆಗಳಲ್ಲಿವಿವರವಾದ ಮಾಹಿತಿ ಸಿಗಲಿದೆ
ಸರ್ಕಾರೇತರ
 ಸಂಘ- ಸಂಸ್ಥೆಗಳುಸ್ವ ಸಹಾಯ ಸಂಘಗಳುಪ್ರಗತಿಪರ ರೈತರು ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಾಧನೆ ಕುರಿತು ನಾಗರಿಕರಿಗೆ ಮಾಹಿತಿ ಲಭ್ಯವಿರಲಿದೆ ಎಂದು ಐಐಎಚ್ಆರ್‌ ನಿರ್ದೇಶಕ ಡಾ.ಎಂ.ಆರ್‌.ದಿನೇಶ್‌  ಹೇಳಿದ್ದಾರೆ.  

250 ಮಳಿಗೆಗಳು
ಮೇಳದಲ್ಲಿತೋಟಗಾರಿಕೆಗೆ ಸಂಬಂಧಪಟ್ಟ 250 ಮಳಿಗೆಗಳನ್ನು ತೆರೆಯಲಾಗಿದೆಇಲ್ಲಿಜೈವಿಕ ಗೊಬ್ಬರವಿಶೇಷ ತಳಿಯ ಹಣ್ಣಿನ ಗಿಡಗಳುಬಿತ್ತನೆ ಬೀಜಗಳುಜೈವಿಕ ಗೊಬ್ಬರಕೃಷಿ ಯಂತ್ರೋಪಕರಣಗಳ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ.  150ಕ್ಕೂ ಹೆಚ್ಚಿನ ತೋಟಗಾರಿಕೆ ಬೆಳಗಳ ಕುರಿತು ಪ್ರಾತ್ಯಕ್ಷಿಕೆ ವ್ಯವಸ್ಥೆ ಇದೆ.ರೈತರು ವಿಜ್ಞಾನಿಗಳ ಜೊತೆ ನೇರ ಸಂವಾದ ಮಾಡಲು ಅವಕಾಶವಿದೆ.
  
ಅಣಬೆ ಬೇಸಾಯ ಪ್ರಾತ್ಯಕ್ಷಿಕೆ
ಮೇಳದ ಮತ್ತೊಂದು ವಿಶೇಷ ಆಕಷರ್ಷಣೆ- ಅಣಬೆ ಬೇಸಾಯ ಕುರಿತ ಪ್ರಾತ್ಯಕ್ಷಿಕೆ.  ಮನೆಯಲ್ಲೇ ಯಾವ ಮಾದರಿಯ ಅಣಬೆ ಬೆಳೆಸಬಹುದುಇದನ್ನು ಉದ್ಯೋಗವಾಗಿಉಪಕಸುಬಾಗಿ ಮಾಡಿಕೊಳ್ಳಲು ಏನೇನು ಅವಕಾಶಗಳು ಇವೆ ಎಂಬ ಬಗ್ಗೆ ತೋಟಗಾರಿಕೆ ವಿಜ್ಞಾನಿಗಳು ತಿಳಿಸಿಕೊಡುವರು.

ಜೊತೆಗೆ 
 ನಗರ ತೋಟಗಾರಿಕೆ ಕಾರ್ಯಾಗಾರ ಆಯೋಜಿಸಲಾಗಿದೆಇದಕ್ಕೆ 1500 ರೂಪಾವತಿಸಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶ.
ಮೇಳ   ನಡೆಯುವುದು ಎಲ್ಲಿ?
ಸ್ಥಳ:  ಐಐಎಚ್ಆರ್‌ ಆವರಣಹೇಸರಘಟ್ಟ.
ಯಾವಾಗ?:  ಫೆ.5ರಿಂದ 8 ವರೆಗೆ
ಸಮಯಬೆಳಗ್ಗೆ 9.30ರಿಂದ ಸಂ.5.30 ವರೆಗೆ
ಪ್ರವೇಶಸಾರ್ವಜನಿಕರಿಗೆ ಉಚಿತ ಪ್ರವೇಶ
ಮೇಳಕ್ಕೆ ದಾರಿ ಯಾವುದು?
ಹೇಸರಘಟ್ಟ ತಲುಪಲು ಕೆ.ಆರ್‌.ಮಾರುಕಟ್ಟೆಯಶವಂತಪುರ ಹಾಗೂ ಮೆಜೆಸ್ಟಿಕ್ನಿಂದ ಬಿಎಂಟಿಸಿ ಬಸ್‌ ಸೌಲಭ್ಯವಿದೆಮೇಳದ ಹಿನ್ನೆಲೆಯಲ್ಲಿಬಿಎಂಟಿಸಿ ಹೆಚ್ಚುವರಿ ಬಸ್ಗಳನ್ನು ಓಡಿಸಲಿದೆಜತೆಗೆ ನಾಗಸಂದ್ರ ಮೆಟ್ರೊ ನಿಲ್ದಾಣದಲ್ಲಿಇಳಿದು ಇಲ್ಲಿಂದ ಹೆಸರಘಟ್ಟ ರಸ್ತೆ ಮೂಲಕ ಬಸ್‌ ಅಥವಾ ಆಟೋದಲ್ಲಿತೆರಳಬಹುದುನಗರದಿಂದ ಸ್ವಂತ ವಾಹನದಲ್ಲಿಆಗಮಿಸುವವರು ತುಮಕೂರು ರಸ್ತೆಯಲ್ಲಿಸಾಗಿ 8ನೇ ಮೈಲಿ ಬಳಿಯ ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಹೆಸರಘಟ್ಟಕ್ಕೆ ನೇರವಾಗಿ ತಲುಪಬಹುದು.

ಪಾರ್ಕಿಂಗ್
‌ ವ್ಯವಸ್ಥೆ
ಮೇಳ ನಡೆಯುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಆವರಣದಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್‌) ವ್ಯವಸ್ಥೆ ಮಾಡಲಾಗಿದೆಮೇಳದಲ್ಲಿನಾನಾ ಮಾದರಿಯ ತಿಂಡಿ ತಿನಿಸುಗಳ ಮಳಿಗೆಗಳು ಲಭ್ಯವಿದೆ.

ಮೇಳದ ಬಗ್ಗೆ ಐಐಎಚ್ ಆರ್ ನಿರ್ದೇಶಕ ಎಂ.ಆರ್. ದಿನೇಶ್ ಮಾತನಾಡುತ್ತಾರೆ:



IIHR Dirctor M.R. Dinesh speaks on National Horticultural Fair:


 ಮೇಳದ ವಿಶೇಷ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿರಿ:






No comments:

Advertisement