Saturday, February 29, 2020

ಭಾರತದ ಜಿಡಿಪಿ ಅಲ್ಪ ಚೇತರಿಕೆ, ಶೇಕಡಾ ೪.೭ಕ್ಕೆ ಏರಿಕೆ

ಭಾರತದ ಜಿಡಿಪಿ ಅಲ್ಪ ಚೇತರಿಕೆ, ಶೇಕಡಾ .೭ಕ್ಕೆ ಏರಿಕೆ
ನವದೆಹಲಿ: ಆರು ವರ್ಷಗಳ ಅವಧಿಯಲ್ಲಿಯೇ ಹಿಂದಿನ ತ್ರೈಮಾಸಿಕದಲ್ಲಿ ಅತ್ಯಂತ ಕಡಿಮೆ ಅಂದರೆ ಶೇಕಡಾ .೫ಕ್ಕೆ ಇಳಿದಿದ್ದ ಭಾರತದ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಮೂರನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡಿದ್ದು, ಶೇಕಡಾ .೭ಕ್ಕೆ ಏರುವ ಮೂಲಕ ಅಲ್ಪ ಪ್ರಗತಿಯನ್ನು ದಾಖಲಿಸಿದೆ.

2020 ಫೆಬ್ರುವರಿ 28ರ ಶುಕ್ರವಾರ ಬಿಡುಗಡೆ ಮಾಡಲಾಗಿರುವ ಅಧಿಕೃತ ಅಂಕಿಅಂಶಗಳು ಭಾರತದ ಒಟ್ಟು ದೇಶೀಯ ಉತ್ಪಾದನೆಯಲ್ಲಿ (ಜಿಡಿಪಿ) ಅಲ್ಪ ಪ್ರಗತಿ ಆಗಿರುವುದನ್ನು ತೋರಿಸಿವೆ.
ಆದಾಗ್ಯೂ, ೨೦೧೮-೧೯ರ ಸಾಲಿನ ಇದೇ ಅವಧಿಯಲ್ಲಿ ದಾಖಲಾಗಿದ್ದ ಶೇಕಡಾ . ಜಿಡಿಪಿಗೆ ಹೋಲಿಸಿದರೆ, ಪ್ರಸ್ತುತ ಜಿಡಿಪಿ ಕಡಿಮೆಯೇ. ರಾಷ್ಟ್ರೀಯ ಅಂಕಿಸಂಖ್ಯಾ ಕಚೇರಿ (ಎನ್ ಎಸ್ ) ದೇಶೀಯ ಒಟ್ಟು ಉತ್ಪಾದನೆಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿತು..

ಶುಕ್ರವಾರ ಬಿಡುಗಡೆ ಮಾಡಲಾಗಿರುವ ಒಟ್ಟು ದೇಶೀಯ ಉತ್ಪನ್ನದ ಮಾಹಿತಿಯು ಕಳೆದ ವರ್ಷದ ಕೊನೆಯಲ್ಲಿ ಕೊರೋನಾವೈರಸ್ ಸೋಂಕು ಚೀನಾವನ್ನು ದಿಗಿಲುಗೊಳಿಸಿದ್ದಕ್ಕಿಂತ ಮುಂಚಿನ ಮಾಹಿತಿಯಾಗಿದೆ.

ಸೆಪ್ಟೆಂಬರಿನಲ್ಲಿ ಮುಕ್ತಾಯವಾಗುವ ತ್ರೈಮಾಸಿಕದವರೆಗೆ ಕಳೆದ ಆರು ವರ್ಷಗಳಲ್ಲಿ ತೀವ್ರ ದುರ್ಬಲಗೊಳ್ಳುತ್ತಾ ಸಾಗಿದ್ದ ಭಾರತದ ಆರ್ಥಿಕತೆ ಕೊರೋನಾವೈರಸ್ ಜಾಗತಿಕವಾಗಿ ಹಬ್ಬುವುದಕ್ಕೆ ಮುನ್ನ ಡಿಸೆಂಬರಿನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಚೇತರಿಸಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ.

ಮಾಸದ ಆದಿಯಲ್ಲಿ ಮಂಡಿಸಲಾದ ತನ್ನ ವಾರ್ಷಿಕ ಮುಂಗಡಪತ್ರದಲ್ಲಿ (ಬಜೆಟ್) ಸರ್ಕಾರವು ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳುವ ಹಾಲಿ ವಿತ್ತ ವರ್ಷದಲ್ಲಿ ಶೇಕಡಾ ೫ರಷ್ಟು ಆರ್ಥಿಕ ಪ್ರಗತಿಯಾಗುವುದಾಗಿ ಅಂದಾಜು ಮಾಡಿತ್ತು. ಇದು ಕಳೆದ ೧೧ ವರ್ಷಗಳಲ್ಲಿಯೇ ಅತ್ಯಂತ ಕೆಳಮಟ್ಟದ ಆರ್ಥಿಕ ಪ್ರಗತಿಯಾಗಿದೆ.

೨೦೨೦-೨೧ರ ವಿತ್ತ ವರ್ಷದಲ್ಲಿ ಸ್ಥಿತಿಗತಿಯಲ್ಲಿ ಸ್ವಲ್ಪ ಚೇತರಿಕೆಯಾಗಿ ಶೇಕಡಾ ೬ರಷ್ಟು ಆರ್ಥಿಕ ಪ್ರಗತಿ ಸಾಧಿಸುವ ಗುರಿಯನ್ನು ಸರ್ಕಾರ ಪ್ರಕಟಿಸಿತ್ತು. ಪ್ರತಿತಿಂಗಳೂ ಕಾರ್ಮಿಕ ಮಾರುಕಟ್ಟೆಯನ್ನು ಪ್ರವೇಶಿಸುವ ಲಕ್ಷಾಂತರ ಮಂದಿ ಯುವ ಭಾರತೀಯರಿಗೆ ಬೇಕಾದ ಉದ್ಯೋಗ ಸೃಷ್ಟಿಗೆ ಅಂದಾಜು ಕೂಡಾ ಕಡಿಮೆಯೇ ಆಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು.

೨೦೧೯ರ ಏಪ್ರಿಲ್- ಡಿಸೆಂಬರ್ ನಡುವಣ ಒಂಬತ್ತು ತಿಂಗಳ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇಕಡಾ .೧ರಷ್ಟು ಬೆಳವಣಿಗೆಯಾಗಿತ್ತು. ಇದು ಕಳೆದ ಸಾಲಿನ ಇದೇ ಅವಧಿಯ ಶೇಕಡಾ . ಬೆಳವಣಿಗೆಗಿಂತ ಕಡಿಮೆಯಾಗಿತ್ತು. ೨೦೧೯-೨೦ರ ಸಾಲಿನ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರವನ್ನು ಪರಿಷ್ಕರಿಸಿ ಶೇಕಡಾ .೬ಕ್ಕೆ ಮತ್ತು ಎರಡನೇ ತ್ರೈಮಾಸಿಕಕ್ಕೆ ಶೇಕಡಾ .೧ಕ್ಕೆ ನಿಗದಿ ಪಡಿಸಲಾಗಿತ್ತು.

ರಾಷ್ಟ್ರೀಯ ಅಂಕಿಸಂಖ್ಯಾ ಕಚೇರಿಯು (ಎನ್ ಎಸ್ ) ತನ್ನ ಎರಡನೇ ಮುಂಗಡ ಅಂದಾಜಿನಲ್ಲಿ ೨೦೧೯-೨೦ರ ಸಾಲಿನಲ್ಲಿ ಶೇಕಡಾ ೫ರಷ್ಟು ಆರ್ಥಿಕ ಬೆಳವಣಿಗೆಯನ್ನು ಅಂದರೆ ಕಳೆದ ತಿಂಗಳಿನ ಅಂದಾಜಿನಷ್ಟೇ ಆರ್ಥಿಕ ಬೆಳವಣಿಗೆಯನ್ನು ನಿರೀಕ್ಷಿಸಿದೆ.

ಒಟ್ಟು ತೆರಿಗೆ Pಳೆದ ಜಿಡಿಪಿಯಾಗಿರುವ ಒಟ್ಟು ಮೌಲ್ಯ ವರ್ಧನೆಯು (ಗ್ರಾಸ್ ವ್ಯಾಲ್ಯೂ ಆಡೆಡ್- ಜಿವಿಎ) ೨೦೧೯-೨೦ರಲ್ಲಿ ಶೇಕಡಾ .೯ರಷ್ಟು ಬೆಳವಣಿಗೆಯಾಗುವುದು ಎಂದು ಸರ್ಕಾರವು ಅಂದಾಜು ಮಾಡಿದೆ. ಎರಡನೇ ತ್ರೈಮಾಸಿಕದಲಿ ಇದು ಶೇಕಡಾ .೩ರಷ್ಟಾಗಿತ್ತು. ಹಣಕಾಸು ವರ್ಷ ೨೦ರಲ್ಲಿ ಸಾಮಾನ್ಯ ಜಿಡಿಪಿ ಅಂದಾಜಿನಲ್ಲಿ ಯಾವುದೇ ಬದಲಾವಣೆ ಮಾಡದೆ ಶೇಕಡಾ .೫ರಷ್ಟು ಬೆಳವಣಿಗೆಯನ್ನು ಅಂದಾಜು ಮಾಡಲಾಗಿದೆ.

No comments:

Advertisement