ಗ್ರಾಹಕರ ಸುಖ-ದುಃಖ

My Blog List

Wednesday, February 12, 2020

ವಿಜಯಕ್ಕೆ ಬೀಗುವುದಿಲ್ಲ, ಸೋಲಿಗೆ ಕುಗ್ಗುವುದಿಲ್ಲ..!

ವಿಜಯಕ್ಕೆ ಬೀಗುವುದಿಲ್ಲ, ಸೋಲಿಗೆ  ಕುಗ್ಗುವುದಿಲ್ಲ..!
ಬಿಜೆಪಿ ದೆಹಲಿ ಕಚೇರಿಯಲ್ಲಿ ನಿಗೂಢ ಪೋಸ್ಟರ್
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಮುಂದುವರೆಯುತ್ತಿದ್ದಂತೆಯೇ ಭಾರತೀಯ ಜನತಾ ಪಕ್ಷವು 2020 ಫೆಬ್ರುವರಿ 11ರ ಮಂಗಳವಾರ ತನ್ನ ದೆಹಲಿ ಕಚೇರಿಯ ಮುಂದೆ ನಿಗೂಢ ಸಂದೇಶವನ್ನು ಹೊತ್ತ ಭಿತ್ತಿ ಚಿತ್ರವನ್ನು ಪ್ರದರ್ಶಿಸಿತು.

ವಿಜಯದಿಂದ ಅಹಂಕಾರಿಗಳಾಗಿ ಬೀಗುವುದಿಲ್ಲ, ಸೋಲಿನಿಂದ ಭ್ರಮನಿರಸನಗೊಂಡು ಕುಗ್ಗುವುದಿಲ್ಲಎಂಬ ಒಕ್ಕಣೆ ಇರುವ ಹಿಂದಿ ಭಾಷೆಯ ಭಿತ್ತಿ ಚಿತ್ರವನ್ನು ಪಕ್ಷವು ಪ್ರದರ್ಶಿಸಿತು.

ಚಿತ್ರದಲ್ಲಿ
ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಬಿಜೆಪಿ ಪ್ರಚಾರದ ನೇತೃತ್ವ ವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಪ್ರಕಟಿಸಲಾಯಿತು.

ಕನಿಷ್ಠ ಐದು ಮತಗಟ್ಟೆ ಸಮೀಕ್ಷೆಗಳು ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ-ಆಪ್) ದೆಹಲಿಯಲಿ ಸುಲಭ ಜಯದ ಭವಿಷ್ಯ ನುಡಿದಿದ್ದವು. ಮತ್ತು ಮಂಗಳವಾರ ಮತಗಳ ಎಣಿಕೆಯಲ್ಲಿ ಪ್ರಗತಿಯಾಗುತ್ತಿದ್ದಂತೆಯೇ ಭವಿಷ್ಯ ನಿಜವಾಗುವ ಮುನ್ಸೂಚನೆ ಲಭಿಸಿತು.

ಆಮ್ ಆದ್ಮಿ ಪಕ್ಷವು ೬೦ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪ್ರಚಂಡ ಮುನ್ನಡೆಯತ್ತ ದಾಪುಗಾಲು ಹಾಕಿದರೆ, ಬಿಜೆಪಿಯು ಎರಡಂಕಿಗಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲುವ ಸೂಚನೆ ನೀಡಿತು. ಕಾಂಗ್ರೆಸ್ ಬಾರಿಯೂ ಶೂನ್ಯ ಸಾಧನೆಯ ಸ್ಪಷ್ಟ ಸುಳಿವು ನೀಡಿತು.

ಮತಗಟ್ಟೆ ಸಮೀಕ್ಷೆಗಳ ಭವಿಷ್ಯವನ್ನು ಬಿಜೆಪಿ ತಿರಸ್ಕರಿಸಿತ್ತು. ’ನಮಗೆ ದೆಹಲಿಯಲ್ಲಿ ಸರ್ಕಾರ ರಚಿಸುವ ವಿಶ್ವಾಸವಿದೆ. ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಲಾಭ ಪಡೆದು ಬಹುಮತ ಗಳಿಸುವ ಭರವಸೆ ಇದೆಎಂದು ಬಿಜೆಪಿ ಹೇಳಿತ್ತು.

ದೆಹಲಿ ವಿಧಾನಸಭೆ ಚುನಾವಣೆಗಾಗಿ ನಡೆದ ಅತ್ಯಂತ ಬಿರುಸಿನ ಪ್ರಚಾರದಲ್ಲಿ ಬಿಜೆಪಿಯ ಉನ್ನತ ನಾಯಕರೆಲ್ಲರೂ ಕಣಕ್ಕಿಳಿದು ಮತದಾರರನ್ನು ಸೆಳೆಯಲು ಯತ್ನಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಇತರ ಕೇಂದ್ರ ಸಚಿವರು ಕಳೆದ ೨೦ ವರ್ಷಗಳಿಂದ ದೆಹಲಿಯಲ್ಲಿ ಅಧಿಕಾರ ವಂಚಿತವಾಗಿರುವ ಬಿಜೆಪಿಗಾಗಿ ಮತ ಯಾಚಿಸಿದ್ದರು.

೨೦೧೫ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ೬೭ ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಖಾತೆ ತೆರೆಯುವಲ್ಲಿ ವಿಫಲವಾಗಿತ್ತು.

No comments:

Advertisement