Saturday, February 29, 2020

ಐಬಿ ಅಧಿಕಾರಿ ಅಂಕಿತ್ ಶರ್ಮ ಕ್ರೂರ ಹತ್ಯೆ: ಶವ ಪರೀಕ್ಷೆ ವರದಿಯಿಂದ ಬಹಿರಂಗ

ಐಬಿ ಅಧಿಕಾರಿ ಅಂಕಿತ್ ಶರ್ಮ ಕ್ರೂರ ಹತ್ಯೆ: ಶವ ಪರೀಕ್ಷೆ ವರದಿಯಿಂದ ಬಹಿರಂಗ
ನವದೆಹಲಿ: ಈಶಾನ್ಯ ದೆಹಲಿಯ ಚಾಂದ್ ಬಾಗ್  ಚರಂಡಿಯಿಂದ ಹೊರತೆಗೆಯಲಾದ ಗುಪ್ತಚರ (ಐಭಿ) ಅಧಿಕಾರಿ ಅಂಕಿತ್ ಶರ್ಮ ಅವರನ್ನು ಕ್ರೂರವಾಗಿ ಇರಿದು ಕೊಂದಿರುವುದು ಶವ ಪರೀಕ್ಷೆ ವರದಿಯಿಂದ 2020 ಫೆಬ್ರುವರಿ 28ರ ಶುಕ್ರವಾರ ಬಹಿರಂಗಗೊಂಡಿತು..

ಶರ್ಮ ಅವರ ದೇದಲ್ಲಿ ಹರಿತವಾದ ವಸ್ತುವಿನಿಂದ ಮಾಡಲಾದ ಆಳವಾದ ಹಲವಾರು ಇರಿತ ಮತ್ತು ಉಜ್ಜುಗಾಯಗಳು ಕಂಡು ಬಂದಿವೆ ಎಂದು ಶವ ಪರೀಕ್ಷಾ ವರದಿ ಹೇಳಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.. ಶವ ಪರೀಕ್ಷೆ ನಡೆಸಿದ ವೈದ್ಯರು ೨೬ರ ಹರೆಯದ ಅಧಿಕಾರಿಯನ್ನು ಹಲವಾರು ಬಾರಿ ಇರಿಯಲಾಗಿದೆ ಎಂದು ಹೇಳಿದ್ದಾರೆ ಎಂದು ಇನ್ನೊಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು.

ಶರ್ಮ ಅವರು ಗುಪ್ತಚರ ಇಲಾಖೆಯಲ್ಲಿ ಭದ್ರತಾ ಸಹಾಯಕರಾಗಿ ೨೦೧೭ರಿಂದ ಸೇವೆ ಸಲ್ಲಿಸುತ್ತಿದ್ದರು. ಅವರು ಈಶಾನ್ಯ ದೆಹಲಿಯ ಚಾಂದ್ ಬಾಗ್ನಲ್ಲಿ ವಾಸವಾಗಿದ್ದರು.  ತೀವ್ರ ಹಿಂಸಾಚಾರ ಸಂಭವಿಸಿದ ಮಂಗಳವಾರ ತಮ್ಮ ಬಡಾವಣೆಯಲ್ಲಿ ಏನು ಗದ್ದಲವಾಗುತ್ತಿದೆ ಎಂದು ನೋಡಲು ಹೊರಕ್ಕೆ ಹೋಗಿದ್ದ ಅವರು ಮರಳಿ ಮನೆಗೆ ಬರಲಿಲ್ಲ. ಶರ್ಮ ಅವರು ಕುಟುಂಬ ಸದಸ್ಯರು ಅವರಿಗಾಗಿ ಎಂಟು ಗಂಟೆಗಳ ಕಾಲ ತೀವ್ರ ಹುಡುಕಾಟ ನಡೆಸಿದರು. ಅಂತಿಮವಾಗಿ ಮರುದಿನ ಬೆಳಗ್ಗೆ ಅವರ ಶವ ಚರಂಡಿಯಲ್ಲಿ ಲಭಿಸಿತ್ತು.

ಗುಂಪೊಂದು ಅಂಕಿತ್ ಅವರನ್ನು ಹಿಡಿದು ಆಮ್ ಆದ್ಮಿ ಪಕ್ಷದ (ಎಎಪಿ-ಆಪ್) ಕೌನ್ಸಿಲರ್ ತಾಹಿರ್ ಹುಸೇನ್ ಅವರಿಗೆ ಸೇರಿದ ಕಟ್ಟಡ ಒಂದರ ಒಳಕ್ಕೆ ಎಳೆದೊಯ್ದಿದ್ದರು ಮತ್ತು ಗುಂಪಿನಿಂದ ಅವರು ಹತರಾಗಿದ್ದಾರೆ ಎಂದು ಎಂದು ಶರ್ಮ ಅವರ ಸಹೋದರ ಅಂಕುರ್ ಮತ್ತು ಕುಟುಂಬ ಸದಸ್ಯರು ನೀಡಿದ ಹೇಳಿಕೆಯನ್ನು ಅನುಸರಿಸಿ ತಾಹೀರ್ ಹುಸೇನ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಾಗಿದೆ. ಸ್ಥಳೀಯರು ಕೂಡಾ ಶರ್ಮ ಅವರನ್ನು ಕೊಲ್ಲುವಂತೆ ಗುಂಪಿಗೆ ಪ್ರಚೋದನೆ ನೀಡುವಲ್ಲಿ ಹುಸೇನ್ ಅವರು ಹೊಣೆಗಾgರಾಗಿದ್ದಾರೆ ಎಂದು ಆಪಾದಿಸಿದ್ದರು.

ದುಪ್ಪಟ್ಟು ಶಿಕ್ಷೆ ಅಂದರೆ ತಾಹಿರ್ ಮತ್ತು ಅವರ ನಾಯಕನನ್ನು ಕಠಿಣವಾಗಿ ಶಿಕ್ಷಿಸಬೇಕು.. ಪ್ರಕರಣದ ಆರೋಪಿಗಳು ಮತ್ತು ಸಂಚುಕೋರgನ್ನು ಕಾಲ ಮಿತಿಯೊಳಗೆ ಗಲ್ಲಿಗೇರಿಸಬೇಕು.. ಗುಪ್ತಚರ ಅಧಿಕಾರಿಯನ್ನು ಚೂರಿಯಿಂದ ೪೦೦ ಬಾರಿ ಇರಿಯಲಾಗಿದೆಯೇ? ಧಾರ್ಮಿಕ ಅಸಹನೆಯು ನಿಮ್ಮನ್ನು ಇಷ್ಟೊಂದು ಕೆಳಮಟ್ಟಕ್ಕಿಳಿಯುವಂತೆ ಮಾಡಿತೇ? ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರು ಶುಕ್ರವಾರ ಆಮ್ ಆದ್ಮಿ ಪಕ್ಷವನ್ನು ಗುರಿಮಾಡಿ ಹಿಂದಿಯಲ್ಲಿ ಟ್ವೀಟ್ ಮಾಡಿದರು.

ಆಮ್ ಆದ್ಮಿ ಪಕ್ಷವು ತನಿಖೆಯು ಪೂರ್ಣಗೊಳ್ಳುವವರೆಗೆ ತಾಹಿರ್ ಹುಸೇನ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಆದಾಗ್ಯೂ, ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಂಕಿತ್ ಲಾಲ್ ಮತ್ತು ಓಖ್ಲಾ ಶಾಸಕ ಅಮಾನತುಲ್ಲಾ ಖಾನ್ ಅವರು ತಾಹೀರ್ ಹುಸೇನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಘಟನೆ ನಡೆದ ಹೊತ್ತಿನಲ್ಲಿ ಹುಸೇನ್ ಮನೆಯಲ್ಲಿ ಇರಲಿಲ್ಲ ಎಂದು ಅಂಕಿತ್ ಲಾಲ್ ಹೇಳಿದರೆ, ಇದು ಆಮ್ ಆದ್ಮಿ ಪಕ್ಷಕ್ಕೆ ಮಸಿ ಬಳಿಕಯಲು ಬಿಜೆಪಿ ನಡೆಸಿರುವ ಸಂಚು ಎಂದು ಅಮಾನತುಲ್ಲಾ ಖಾನ್ ಟ್ವೀಟ್ ಮಾಡಿ ಆಪಾದಿಸಿದರು.

ಚಾಂದ್ ಬಾಗ್ನಲ್ಲಿ ಇರುವ ಹುಸೇನ್ ಮನೆಯ ಛಾವಣಿಯಲ್ಲಿ ಮತ್ತು ಒಳಗೆ ಈಗಲೂ ಹಲವಾರು ಪೆಟ್ರೋಲ್ ಬಾಂಬ್ ಬಾಟಲಿಗಳು, ಅಸಿಡ್ ಪೌಚ್ಗಳು ಮತ್ತು ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದವು.

ಹುಸೇನ್ ಮನೆಯಿಂದ ಸೋಮವಾರ ಮತ್ತು ಮಂಗಳವಾರ ಮಧ್ಯಾಹ್ನ ಸುಮಾರು ೧೦೦ರಿಂದ ೧೫೦ಕ್ಕೂ ಹೆಚ್ಚು ಮಂದಿ ಕಲ್ಲುಗಳು, ಪೆಟ್ರೋಲ್ ಬಾಂಬ್ಗಳು ಮತ್ತು ಅಸಿಡ್ ಎಸೆಯುತ್ತಿದ್ದುದು ಹಲವಾರು ವಿಡಿಯೋಗಳಲ್ಲಿ ದಾಖಲಾಗಿದ್ದು ಅವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಶರ್ಮ ಅವರ ಅಂತ್ಯಕ್ರಿಯೆಯನ್ನು ಪಶ್ಚಿಮ ಉತ್ತರ ಪ್ರದೇಶದ ಮುಜಾಫ್ಫರ್ ನಗರದಲ್ಲಿ ಗುರುವಾರ ನೆರವೇರಿಸಲಾಯಿತು. ತಮ್ಮ ಗ್ರಾಮದ ಅಧಿಕಾರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಹಸ್ರಾರು ಮಂದಿ ಜಮಾಯಿಸಿದ್ದರು.

ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ಯಾವುದೇ ಪಕ್ಷದವರಾಗಿದ್ದರೂ ಯಾರನ್ನು ಕೂಡಾ ರಕ್ಷಿಸಲಾಗುವುದಿಲ್ಲ ಎಂದು ಅಂಕಿತ್ ಶರ್ಮ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಹೇಳಿದರು.

ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಕನಿಷ್ಠ ೪೨ ಮಂದಿ ಭಾನುವಾರ ಮತ್ತು ಸೋಮವಾರ ತೀವ್ರಗೊಂಡಿದ್ದ ದೆಹಲಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದು, ೩೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪೌರತ್ವ ತಿದ್ದು ಪಡಿ ಕಾಯ್ದೆ (ಸಿಎಎ) ಪರ ಮತ್ತು ವಿರೋಧಿ ಬಣಗಳ ನಡುವಣ ಘರ್ಷಣೆಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಗೊಂಡಿದೆ.

No comments:

Advertisement